Big Breaking: ಕೇಂದ್ರ ಬಜೆಟ್‌ ಎಫೆಕ್ಟ್‌ : ಮದ್ಯ, ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ಭಾರಿ ಹೆಚ್ಚಳ,ಇಂದು ಮದ್ಯರಾತ್ರಿಯಿಂದಲೇ ಜಾರಿ

February 01, 2021

 


ನವದೆಹಲಿ: ದೇಶದಲ್ಲಿ ಪ್ರಪ್ರಥಮ ಬಾರಿಗೆ ಪೆಪರ್‌ ಲೆಸ್‌ ಕೇಂದ್ರ ಬಜೆಟ್ ಮಂಡನೆಯಾಗ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ಬಜೆಟ್ ಮಂಡಿಸುತ್ತಿದ್ದಾರೆ. ಇದೇ ವೇಳೆ ಅವರು ಹಲವಾರು ಮಾಹಿತಿಗಳನ್ನು ಮಂಡನೆ ಮಾಡಿದ್ದಾರೆ.

ಈ ನಡುವೆ ಇಂದು ಮಂಡಿಸಿದ ಬಜೆಟ್‌ನಲ್ಲಿ ಕೃಷಿ ಮೂಲಸೌಕರ್ಯ ಸೆಸ್‌ದರದಲ್ಲಿ ಹೆಚ್ಚಳ ಹಿನ್ನಲೆಯಲ್ಲಿ ಪೆಟ್ರೋಲ್‌, ಡಿಸೇಲ್‌ ದರದಲ್ಲಿ ಮತ್ತೆ ಏರಿಕೆ ಕಾಣಲಿದೆ ಅಂತ ಅಂದಾಜಿಸಲಾಗಿದ್ದು, ಇದರ ನೇರ ಪರಿಣಾಮ ಜನಸಾಮಾನ್ಯನ ಕಿಸೆ ಮೇಲೆ ಬೀಳಲಿದೆ. ಡಿಸೇಲ್‌ಗೆ ಪ್ರತಿ ಲೀಟರ್‌ 4 ರೂ ಹೆಚ್ಚಳವಾದ್ರೆ, 2.5ರೂ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ ಹೆಚ್ಚಳವಾಗಲಿದೆ ಎನ್ನಲಾಗಿದೆ. ಇನ್ನೂ ನೂತನ ದರಗಳು ಇಂದು ಮದ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಇನ್ನೂ ಎಣ್ಣೆ ಪ್ರಿಯರಿಗೂ ಕೂಡ ಶಾಕಿಂಗ್‌ ನ್ಯೂಸ್‌ ಅನ್ನು ಬಜೆಟ್‌ ನಲ್ಲಿ ನೀಡಲಾಗಿದ್ದು, ಆಲ್ಕೋಹಾಲ್‌ ಮೇಲಿನ ತೆರಿಗೆಯನ್ನು ಶೇ 100ಕ್ಕೆ ಹೆಚ್ಚಳ ಮಾಡಲಾಗಿದೆ.


Related Articles

Advertisement
Previous
Next Post »