80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?

February 24, 2021
Wednesday, February 24, 2021

 


ಮುಂಬೈ : 80 ಕೋಟಿ ರೂ. ವಿದ್ಯುತ್ ಬಿಲ್ ಪಡೆದ ಮನೆಯ ಯಜಮಾನನ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿದ ಘಟನೆ ಫೆ. 22 ರಂದು ಮಹಾರಾಷ್ಟ್ರದ ನಲಸೊಪಾರಾ ಗ್ರಾಮದಲ್ಲಿ ನಡೆದಿದೆ.

80 ವರ್ಷದ ವೃದ್ಧ ಗಂಪತ್ ನಾಯ್ಕ್, 80 ಕೋಟಿ ರೂ. ವಿದ್ಯುತ್ ಬಿಲ್ ನೋಡಿ ಶಾಕ್ ಆಗಿದ್ದಾರೆ. ಅವರ ಬಿಪಿ ಹೆಚ್ಚಿದ್ದರಿಂದ ಮನೆಯವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಪತಿ ನಾಯ್ಕ್ ಅವರದು ಮಧ್ಯಮವರ್ಗದ ಕುಟುಂಬ. ಅವರ ಮನೆಗೆ 80 ಕೋಟಿ ರೂ. ವಿದ್ಯುತ್ ಬಿಲ್ ಬಂದಿರುವುದು ತಾಂತ್ರಿಕ ದೋಷದಿಂದ.

 

ಘಟನೆ ಕುರಿತು ಮಾತಾಡಿರುವ ಗಂಪತ್ ನಾಯ್ಕ್ ಅವರ ಮೊಮ್ಮಗ ನೀರಜ್, ಮೊದಲು ಇಡೀ ಗ್ರಾಮದ ಕರೆಂಟ್ ಬಿಲ್ ಇರಬಹುದು ಎಂದುಕೊಂಡಿದ್ದೇವು. ಆದರೆ, ಕ್ರಾಸ್ ಚೆಕ್ ಮಾಡಿದ ಮೇಲೆ ಅದು ಕೇವಲ ನಮ್ಮ ಮನೆಯ ಬಿಲ್ ಎಂದು ಗೊತ್ತಾಗಿ ಆಘಾತವಾಯಿತು. ಕೂಡಲೇ ಅಧಿಕಾರಿಗಳ ಗಮನಕ್ಕೆ ತರಲಾಯಿತು ಎಂದರು.

ಇನ್ನು ತಮ್ಮ ತಪ್ಪು ಒಪ್ಪಿಕೊಂಡಿರುವ ಮಹಾರಾಷ್ಟ್ರ ವಿದ್ಯುತ್ ಸರಬರಾಜು ಕಂಪನಿ (MSEDCL), ತಾಂತ್ರಿಕ ದೋಷದಿಂದ ಈ ಪ್ರಮಾದ ಜರುಗಿದೆ. ಈಗಾಗಲೇ ಅವರಿಗೆ ಸರಿಯಾದ ಬಿಲ್ ವಿತರಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸುತ್ತೇವೆ ಎಂದಿದೆ.


ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ರೌಡಿ ಶೀಟರ್ಸ್​ಗಳ ಮಾರಾಮಾರಿ
ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೋದರೂ ರೌಡಿ ಶೀಟರ್ಸ್​ಗಳಿಗೆ ಭಯ ಇಲ್ಲದಂತಾಗಿದೆ. ಜೈಲಿನ ಒಳಗಿದ್ದರೂ ಅವರ ಆಟಾಟೋಪಗಳು ಮಾತ್ರ ಕಡಿಮೆಯಾಗಿಲ್ಲ. ಜೈಲಿನ ಒಳಗೆ ಕುಳಿತುಕೊಂಡೇ ಮತ್ತೊಬ್ಬರ ಹತ್ಯೆಗೆ ಸುಪಾರಿ ಕೊಡುವ ಹಂತಕ್ಕೆ ಬಂದಿದೆ. ಇದಲ್ಲದೆ ರೌಡಿಗಳು ಹೇಳಿದಂತೆ ಸಾಮಾನ್ಯ ಕೈದಿಗಳಿಂದ ಕೆಲಸ ಮಾಡುವುದು ಸಹ ಬೆಳಕಿಗೆ ಬಂದಿತ್ತು. ಇದೀಗ ರೌಡಿಶೀಟರ್ಸ್​ಗಳು ಜೈಲಿನ ಆವರಣದಲ್ಲಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.

ಸದ್ದಿಲ್ಲದೇ ಜೈಲಿನೊಳಕ್ಕೆ ಸಿಗರೇಟು ,ಮದ್ಯ ಸರಬರಾಜು ಆಗುತ್ತಿರುವ ಬಗ್ಗೆಯೂ ಆರೋಗಳು ಕೇಳಿ ಬಂದಿತ್ತು. ಈ ನಡುವೆ ಇವತ್ತು ಜೈಲಿನಲ್ಲಿರುವ ರೌಡಿಶೀಟರ್​ಗಳ ನಡುವೆ ಮತ್ತೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಕುಖ್ಯಾತ ರೌಡಿಶೀಟರ್ ಬಾಂಬೆ ಸಲೀಂ ತಮ್ಮನಿಂದ ರೋಹಿತ್ ಗೌಡ ಎಂಬುವನ‌ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಸಲೀಂ ಸಹೋದರನನ್ನು ಇಂದು ನ್ಯಾಯಾಲಯಕ್ಕೆ ಕರೆದೊಯ್ಯಲು ಜೈಲು ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ‌ ಬೇರೆ ಪಕ್ಕದ ಬ್ಯಾರಕ್ ನಲ್ಲಿದ್ದ ರೋಹಿತ್ ಗೌಡ ಎಂಬಾತ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಸಿಬ್ಬಂದಿ ಜೊತೆಯಲ್ಲೇ ರೌಡಿಗಳು ತಳ್ಳಾಡಿ ಬಡಿದಾಡಿಕೊಂಡಿದ್ದಾರೆ. ಈ ಮಧ್ಯೆ ಸಿಬ್ಬಂದಿ ಎರಡೂ ಟೀಂ ನಿಯಂತ್ರಿಸಲು ಪರದಾಡಿದ್ದು,ಜೈಲಾಧಿಕಾರಿಗಳು ಎಂಟ್ರಿ ಆಗಿದ್ದಾರೆ.

ಕೊಲೆ ಕೇಸ್ ಆರೋಪದಡಿ ಬಾಂಬೆ ಸಲೀಂ ಹಾಗೂ ಸಹೋದರ ಸೇರಿದಂತೆ ಆರು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ರೌಡಿ ಶೀಟರ್ ಬಾಂಬೆ ಸಲೀಂ ತಮ್ಮನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಎಲ್ಲಾ ರೌಡಿ ಶೀಟರ್ಸ್ ಗಳನ್ನು ಕರೆಸಿದ ಜೈಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಘಟನೆ ರಿಪೀಟ್ ಆದ್ರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಬ್ಯಾರಕ್ ಗಳಲ್ಲಿ ಮೊದಲಿದ್ದ ರೌಡಿ ಶೀಟರ್ಸ್ ಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಭಯ ಮತ್ತು ಬೆದರಿಕೆ ಇರುವ ಬಗ್ಗೆ ಯಾರಾದರೂ ಹೇಳಿದರೆ ಅಂತವರನ್ನು ಸ್ಥಳಾಂತರ ಮಾಡಲಾಗುತ್ತೆ ಎಂದಿದ್ದಾರೆ. ಇನ್ನು ರೌಡಿ ಶೀಟರ್ಸ್ ಗಳ ಹಾವಳಿ ಜಾಸ್ತಿ ಇರುವ ಬ್ಯಾರಕ್​ಗಳಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಲಾಗಿದೆ.

ಬಾಂಬೆ ಸಲೀಂ‌ ಯಾರು?

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ನಲ್ಲಿ ಸಲೀಂನನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ವೇಳೆ ಪತ್ನಿ ಜೊತೆ ಪೀಣ್ಯದ ಪೃಥ್ವಿರಾಜ್ ಚಾಟಿಂಗ್ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡು ಜಾಮೀನು ಪಡೆದು ಹೊರಬಂದು ಕಳೆದ ವರ್ಷ ಚಿಕ್ಕಬಳ್ಳಾಪುರ ಬಾಗೇಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ಸಲೀಂ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು‌. ಬಳಿಕ ಆರು ತಿಂಗಳ ಬಳಿಕ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದರು. ಸಲೀಂ ವಿರುದ್ದ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿ ಇದ್ದುಕೊಂಡೇ ಮನೆಗಳ್ಳತನ ಮಾಡಿಸುವುದು, ಮನೆಗಳ್ಳರ ಗ್ಯಾಂಗ್‌ ಕಟ್ಟುವುದರಲ್ಲಿ ಪಳಗಿರುವ ಈತನ ವಿರುದ್ಧ ಹೈದರಾಬಾದ್‌, ಮುಂಬಯಿ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲೂ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

Thanks for reading 80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?

Post a Comment