ಹಿಟ್ಲರ್​ ಬಳಸಿದ್ದ ಟಾಯ್ಲೆಟ್​ ಸೀಟು ಹರಾಜು! 65 ವರ್ಷ ಹಳೆಯ ಟಾಯ್ಲೆಟ್​ ಸೀಟಿಗೆ 13 ಲಕ್ಷ ರೂಪಾಯಿ!

February 10, 2021
Wednesday, February 10, 2021

 


ವಾಷಿಂಗ್ಟನ್​: ಹಿಟ್ಲರ್​ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಜರ್ಮನ್​ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದ ಆತನ ಮನೆಯಿಂದ ಅಮೆರಿಕದ ಯೋಧನೊಬ್ಬ ಲೂಟಿ ಮಾಡಿದ್ದ ವಸ್ತುಗಳನ್ನು ಇದೀಗ ಹರಾಜಿಗೆ ಇಡಲಾಗಿದೆ. ವಿಶೇಷವೆಂದರೆ ಹಿಟ್ಲರ್​ ಬಳಸುತ್ತಿದ್ದ ಟಾಯ್ಲೆಟ್​ ಸೀಟೊಂದಕ್ಕೇ ಬರೋಬ್ಬರಿ 13 ಲಕ್ಷ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ.

ಅಂದ ಹಾಗೆ ಈ ಟಾಯ್ಲೆಟ್​ ಸೀಟಿಗೆ 3.5 ಲಕ್ಷ ರೂಪಾಯಿಂದ ಹರಾಜು ಕೂಗಲಾಗಿದೆ. ಹರಾಜಿನ ಕೊನೆಯಲ್ಲಿ ಅದರ ಬೆಲೆ 13 ಲಕ್ಷ ರೂಪಾಯಿಯವರೆಗೂ ಹೋಗಲಿದೆಯಂತೆ. ಎರಡನೇ ಮಹಾಯುದ್ಧದ ಕೊನೆಯಲ್ಲಿ ಹಿಟ್ಲರ್​ ಸಾವನ್ನಪ್ಪಿದ ನಂತರ ಅಮೆರಿಕದ ಸೈನ್ಯವು ಬರ್ಕ್ಟೆಸ್ಗಾಡೆನ್ ತಲುಪಿತು. ಅಲ್ಲಿ ಹಿಟ್ಲರ್​ ಆಗಾಗ ಬಂದು ಹೋಗುತ್ತಿದ್ದ ಮನೆಯಿದ್ದು, ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯಿಂದಾಗಿ ಮನೆಯು ಅಳಿವಿನಂಚಿಗೆ ಬಂದಿತ್ತು.

ಈ ಸಮಯದಲ್ಲಿ ಅಮೆರಿಕದ ಯೋಧ ರಾಗ್ನ್ವಾಲ್ಡ್ ಬೋರ್ಚ್ ಆ ಮನೆಯೊಳಗೆ ನುಗ್ಗಿದ್ದಾನೆ. ಅಲ್ಲಿದ್ದ ಎಲ್ಲ ವಸ್ತುಗಳನ್ನು ಲೂಟಿ ಮಾಡಿಕೊಂಡು ಬಂದಿದ್ದಾನೆ.

45 ಇಂಚು ಅಗಲವಿರುವ ಬಿಳಿ ಬಣ್ಣದ ಟಾಯ್ಲೆಟ್​ ಸೀಟನ್ನು ರಾಗ್ನ್ವಾಲ್ಡ್ ಮೊದಲು ಅಮೆರಿಕಕ್ಕೆ ತಂದನು. ನ್ಯೂಜೆರ್ಸಿಯಲ್ಲಿದ್ದ ತನ್ನ ಮನೆಯ ನೆಲಮಾಳಿಗೆಯಲ್ಲಿ ಇರಿಸಿದನು. ಫೆಬ್ರವರಿ 8 ರಂದು ಕುಟುಂಬವು ಆ ಸೀಟನ್ನು ಹರಾಜಿಗೆ ಹಾಕಿದೆ.


Thanks for reading ಹಿಟ್ಲರ್​ ಬಳಸಿದ್ದ ಟಾಯ್ಲೆಟ್​ ಸೀಟು ಹರಾಜು! 65 ವರ್ಷ ಹಳೆಯ ಟಾಯ್ಲೆಟ್​ ಸೀಟಿಗೆ 13 ಲಕ್ಷ ರೂಪಾಯಿ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹಿಟ್ಲರ್​ ಬಳಸಿದ್ದ ಟಾಯ್ಲೆಟ್​ ಸೀಟು ಹರಾಜು! 65 ವರ್ಷ ಹಳೆಯ ಟಾಯ್ಲೆಟ್​ ಸೀಟಿಗೆ 13 ಲಕ್ಷ ರೂಪಾಯಿ!

Post a Comment