ದೇವರನ್ನು ಮೆಚ್ಚಿಸಲು 6 ವರ್ಷದ ಮಗನನ್ನು ಕೊಲೆ ಮಾಡಿದ ಮದರಸಾ ಶಿಕ್ಷಕಿ

February 07, 2021

 


ಪಾಲಕ್ಕಾಡ್,ಫೆಬ್ರವರಿ 08: ದೇವರನ್ನು ಮೆಚ್ಚಿಸಲು ಮಹಿಳೆಯೊಬ್ಬಳು ತನ್ನ 6 ವರ್ಷದ ಕಂದನನ್ನೇ ಬಲಿಕೊಟ್ಟಿರುವ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.

ಆಘಾತಕಾರಿ ಘಟನೆಯೊಂದರಲ್ಲಿ 30 ವರ್ಷದ ಮದರಸಾ ಶಿಕ್ಷಕಿಯೊಬ್ಬರು ತನ್ನ ಆರು ವರ್ಷದ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದೆ. ಮಹಿಳೆಯ ಮೂವರು ಗಂಡು ಮಕ್ಕಳಲ್ಲಿ ಮೃತ ಮಗು ಕಿರಿಯ ಮಗನಾಗಿದ್ದು ತಾಯಿಯೊಂದಿಗೆ ಮಲಗಿತ್ತು.

ಬೆಳಗ್ಗೆ ಮಗುವನ್ನು ಎಬ್ಬಿಸಿದ ಮಹಿಳೆ ವಾಶ್ ರೂಂಗೆ ಕರೆದೊಯ್ದು ಹೋಗಿ ಕೈಕಾಲುಗಳನ್ನು ಕಟ್ಟಿ ನಂತರ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.ಗಲ್ಫ್ ಹಿಂದಿರುಗಿದ ಪತಿ ಇನ್ನಿಬ್ಬರು ಗಂಡು ಮಕ್ಕಳೊಂದಿಗೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು.

ದೇವರನ್ನು ಮೆಚ್ಚಿಸಲು ಗರ್ಭಿಣಿ ಮಹಿಳೆ ತನ್ನ ಆರು ವರ್ಷದ ಮಗನನ್ನು ಅರ್ಪಣೆ ಮಾಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಭೀಕರ ಕೃತ್ಯದ ನಂತರ, ಮಹಿಳೆ ಸ್ವತಃ ಅಪರಾಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ಘಟನೆ ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಬೆಚ್ಚಿಬೀಳಿಸಿದೆ. ಪ್ರಕರಣ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.


Related Articles

Advertisement
Previous
Next Post »