ರಾಜ್ಯದ 'ವಸತಿ ಶಾಲೆ'ಗಳ '6ನೇ ತರಗತಿ' ದಾಖಲಾತಿಗೆ ಪ್ರವೇಶ ಪರೀಕ್ಷೆ 'ಪರಿಷ್ಕೃತ ವೇಳಾಪಟ್ಟಿ' ಪ್ರಕಟ, ಫೆ.24ಕ್ಕೆ ಪರೀಕ್ಷೆ

February 04, 2021
Thursday, February 4, 2021

 - ವಸಂತ ಬಿ ಈಶ್ವರಗೆರೆ

ಬೆಂಗಳೂರು : ಕರ್ನಾಟಕದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಡಾ.ಬಿಆರ್ ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 2020ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು, ರಾಜ್ಯಾಧ್ಯಂತ ಏಕಕಾಲಕ್ಕೆ ಪ್ರವೇಶ ಪರೀಕ್ಷೆಯನ್ನು ದಿನಾಂಕ 06-05-2020ರಂದು ನಿಗದಿ ಪಡಿಸಲಾಗಿತ್ತು. ಇಂತಹ ಪರೀಕ್ಷೆ ಕೊರೋನಾ ಕಾರಣಕ್ಕೆ ಮುಂದೂಡಲಾಗಿತ್ತು. ಇದೀಗ ಈ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ದಿನಾಂಕ 24-02-2021ರಂದು ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ.

ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದ್ದು, ಕೊರೋನಾ ಕಾರಣದಿಂದಾಗಿ ಕರ್ನಾಟಕ ವಸತಿ ಶಾಲೆಗಳ 6ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆ ದಿನಾಂಕ 06-05-2020ರಂದು ನಿಗದಿ ಪಡಿಸಿದ್ದನ್ನು ಮುಂದೂಡಲಾಗಿತ್ತು.

ಇಂತಹ ಪರೀಕ್ಷೆಯನ್ನು ದಿನಾಂಕ 24-02-2021ರಂದು ನಡೆಸಲು ನಿರ್ಧರಿಸಲಾಗಿದೆ. ದಿನಾಂಕ 24-02-2021ರಂದು ಮಧ್ಯಾಹ್ನ 2.30ರಿಂದ 4.30ರವರೆಗೆ ಈ ಕೆಳಗಿನ ಪರಿಷ್ಕೃತ ವೇಳಾಪಟ್ಟಿಯಂತೆ ನಡೆಸಲು ನಿರ್ಧರಿಸಲಾಗಿದೆ ಎಂಬುದಾಗಿ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿ

ದಿನಾಂಕ 24-02-2021ರ ಬುಧವಾರದಂದು ಮಧ್ಯಾಹ್ನ 2.30 ರಿಂದ 4.30ರವರೆಗೆ ನಡೆಯಲಿದೆ. 100 ಅಂಕಗಳ ಪರೀಕ್ಷೆ ಇದಾಗಿದೆ. ಅಂದು ಅಭ್ಯರ್ಥಿಗಳು ಮಧ್ಯಾಹ್ನ 1.30ರೊಳಗಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪುವಂತೆ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತವಾಗಿರುತ್ತದೆ. ದಿನಾಂಕ 15-02-2021ರ ಬೆಳಿಗ್ಗೆ 11 ರಿಂದ ಪ್ರವೇಶ ಪತ್ರವನ್ನು ವಿದ್ಯಾರ್ಥಿಗಳು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿ.

ಅಂದಹಾಗೇ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಅಭ್ಯರ್ಥಿಗಳು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ ಅನ್ನು ಮಾತ್ರ ಉಪಯೋಗಿಸಬೇಕು ಎಂಬುದಾಗಿ ತಿಳಿಸಿದೆ.Thanks for reading ರಾಜ್ಯದ 'ವಸತಿ ಶಾಲೆ'ಗಳ '6ನೇ ತರಗತಿ' ದಾಖಲಾತಿಗೆ ಪ್ರವೇಶ ಪರೀಕ್ಷೆ 'ಪರಿಷ್ಕೃತ ವೇಳಾಪಟ್ಟಿ' ಪ್ರಕಟ, ಫೆ.24ಕ್ಕೆ ಪರೀಕ್ಷೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾಜ್ಯದ 'ವಸತಿ ಶಾಲೆ'ಗಳ '6ನೇ ತರಗತಿ' ದಾಖಲಾತಿಗೆ ಪ್ರವೇಶ ಪರೀಕ್ಷೆ 'ಪರಿಷ್ಕೃತ ವೇಳಾಪಟ್ಟಿ' ಪ್ರಕಟ, ಫೆ.24ಕ್ಕೆ ಪರೀಕ್ಷೆ

Post a Comment