ಪೊಲೀಸ್ ಇಲಾಖೆ ನೇಮಕಾತಿ: 545 ಸಬ್ ಇನ್ಸ್ ಪೆಕ್ಟರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

February 10, 2021

 


ಸಾಂದರ್ಭಿಕ ಚಿತ್ರ

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್ಸ್ (ಸಿವಿಲ್) ಒಟ್ಟು 545 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಖಾಲಿ ಹುದ್ದೆಗಳ ವರ್ಗೀಕರಣ ಹಾಗೂ ಅರ್ಹತಾ ಷರತ್ತುಗಳಿಗೆ ಅಧಿಕೃತ ವೆಬ್‍ಸೈಟ್ www.recruitment.ksp.gov.in ನಲ್ಲಿನ ಅಧಿಸೂಚನೆಯನ್ನು ಗಮನಿಸಬೇಕು.

ಪುರುಷರು 168 ಸೆಂಟಿಮೀಟರ್ ಎತ್ತರ ಮತ್ತು 81-86 ಸೆಂ.ಮೀ. ಎದೆಯ ಸುತ್ತಲತೆಯನ್ನು ಹೊಂದಿರಬೇಕು. ಮಹಿಳೆಯರು 157 ಸೆಂ.ಮೀ. ಎತ್ತರ ಮತ್ತು 45 ಕೆಜಿ ತೂಕ ಹೊಂದಿರಬೇಕು. 2ಬಿ ಮತ್ತು ಹೈದರಾಬಾದ್ ಕರ್ನಾಟಕ ಪ್ರಮಾಣಪತ್ರ ಹೊಂದಿರುವವರು ಅರ್ಜಿಯೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಫೆ. 22 ಕೊನೆಯ ದಿನವಾಗಿದ್ದು, 500 ರೂ. ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು.

ಹೆಚ್ಚಿನ ಮಾಹಿತಿ ಹಾಗು ಮಾರ್ಗದರ್ಶನಕ್ಕಾಗಿ ಮೊ. 8618756586 ಸಂಪರ್ಕಿಸಲು ಎನ್.ಸಿ.ಆರ್.ಡಿ. ಅಧ್ಯಕ್ಷ ಹಾಗು ಮಾಜಿ ಐಪಿಎಸ್ ಅಧಿಕಾರಿ ಯು.ನಿಸಾರ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Related Articles

Advertisement
Previous
Next Post »