ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ!

February 09, 2021
Tuesday, February 9, 2021

 


ಲಖನೌ: ಶ್ರೀಮಂತರ ಮನೆಯಲ್ಲಿ ಹುಟ್ಟಿ, ದುಡ್ಡನ್ನು ನೀರಿನಂತೆ ಖರ್ಚು ಮಾಡುವವರನ್ನು ನೋಡಿರುತ್ತೀರಿ. ಆದರೆ ಈ ಚಳಿಗಾಲದಲ್ಲಿ ಚಳಿಯಾಯಿತೆಂದು ನೋಟನ್ನೇ ಸುಟ್ಟು ಮೈ ಕಾಸಿಕೊಳ್ಳುತ್ತಾರೆ ಅಂದರೆ ನಂಬುತ್ತೀರಾ? ಆಶ್ಚರ್ಯವಾದರೂ ಇದು ಸತ್ಯ. ಈ ರೀತಿಯ ವಿಚಿತ್ರ ವ್ಯಕ್ತಿಯೊಬ್ಬ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ.

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಈ ರೀತಿ ಮಾಡಿದ್ದಾನೆ. ಇರೋದಕ್ಕೆ ಒಂದು ಸೂರು ಕೂಡ ಇಲ್ಲದ ವ್ಯಕ್ತಿ ಚಳಿಯಾದಾಗ ಲಕ್ಷಾಂತರ ರೂಪಾಯಿ ಒಡೆಯನಾಗಿದ್ದಾನೆ. ಬೆಂಕಿಯಿಂದ ಮೈ ಬೆಚ್ಚಗೆ ಮಾಡಿಕೊಂಡು ಮಲಗುವಷ್ಟರಲ್ಲಿ ಅಷ್ಟು ಹಣವನ್ನು ಸುಟ್ಟು ಕರಕಲು ಮಾಡಿದ್ದಾನೆ.

ಈ ರೀತಿ ದುಡ್ಡಿಗೆ ಬೆಂಕಿ ಹಚ್ಚಿರುವ ಮಾನಸಿಕ ಅಸ್ವಸ್ಥ ವ್ಯಕ್ತಿ ಯಾವಾಗಲೂ ನಗರದ ಕಸದ ರಾಶಿಯ ಬಳಿ ಮಲಗಿರುತ್ತಿದ್ದನಂತೆ.

ಇತ್ತೀಚೆಗೆ ಒಂದು ದಿನ ಆತ ರಾತ್ರಿ ವೇಳೆ 500 ರೂಪಾಯಿ ಮುಖಬೆಲೆಯ ನೂರಾರು ನೋಟುಗಳನ್ನು ಒಟ್ಟಾಕಿ ಬೆಂಕಿ ಇಟ್ಟಿದ್ದಾನೆ. ಚಳಿ ತಣಿದ ನಂತರ ಕಸದ ರಾಶಿಯ ಮೇಲೆ ನೆಮ್ಮದಿಯಿಂದ ನಿದ್ರೆಗೆ ಜಾರಿದ್ದಾನೆ. ಬೆಳಗ್ಗೆ ಅಲ್ಲಿ ಓಡಾಡಿದ ಜನರಿಗೆ 500 ರೂಪಾಯಿಯ ಅರ್ಧಬರ್ಧಂ ಸುಟ್ಟ ನೋಟುಗಳು ಕಾಣಿಸಿಕೊಂಡಿವೆ. ರಾತ್ರಿ ಅವನಿಂದ ಸ್ವಲ್ಪ ದೂರದಲ್ಲಿದ್ದ ಸ್ವಚ್ಛತಾ ಕಾರ್ಮಿಕರಿಗೆ ಆಗ ಒಂದು ವಿಚಾರ ಅರಿವಿಗೆ ಬಂದಿದೆ. ರಾತ್ರಿ ಈ ಅಸ್ವಸ್ಥ ವ್ಯಕ್ತಿ ನೋಟಿಗೇ ಬೆಂಕಿ ಹಚ್ಚಿದ್ದೆಂದು ತಿಳಿದು, ತಾವು ಅದೆಂತಾ ಅವಕಾಶವನ್ನು ಮಿಸ್​ ಮಾಡಿಕೊಂಡೆವು ಎಂದು ಪಶ್ಚಾತಾಪ ಪಟ್ಟಿದ್ದಾರೆ. ಮೊದಲೇ ಆತನ ಬಳಿ ಹೋಗಿದ್ದರೆ ಬೆಂಕಿಯಲ್ಲಿ ಸುಟ್ಟ ನೋಟನ್ನು ತಮ್ಮದಾಗಿಸಿಕೊಳ್ಳಬಹುದಿತ್ತು ಎಂದು ಮಿಂಚಿ ಹೋದ ಕಾಲದ ಬಗ್ಗೆ ಚಿಂತಿಸಿದ್ದಾರೆ.

ಈ ವಿಚಾರವಾಗಿ ಪೊಲೀಸರಿಗೂ ಮಾಹಿತಿ ಸಿಕ್ಕಿದ್ದು, ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮಾನಸಿಕ ಅಸ್ವಸ್ಥ ವ್ಯಕ್ತಿ ಮಲಗುತ್ತಿದ್ದ ಜಾಗದಲ್ಲಿ ಒಂದಷ್ಟು ಚಿನ್ನ ಮತ್ತು ನೋಟುಗಳು ಸಿಕ್ಕಿರುವುದಾಗಿ ಹೇಳಲಾಗಿದೆ. ಏನೂ ಇಲ್ಲದ ವ್ಯಕ್ತಿಯ ಬಳಿ ಇಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವುದನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. 


Thanks for reading ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ!

Post a Comment