ಶಾಲೆಯ ಮೇಲೆ ಬಂದೂಕುಧಾರಿಗಳಿಂದ ದಾಳಿ- 40 ಮಂದಿ ಶಿಕ್ಷಕರು, ವಿದ್ಯಾರ್ಥಿಗಳ ಅಪಹರಣ!

February 17, 2021
Wednesday, February 17, 2021

 


ನೈಜೀರಿಯಾ: ನೈಜೀರಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ಹಲವು ವರ್ಷಗಳಿಂದ ಗುಂಡಿನ ಸುರಿಮಳೆಗೈದು ಅಸಂಖ್ಯ ಜನರ ರಕ್ತ ಹರಿಸಿರುವ ಈ ಉಗ್ರರ ಹಾವಳಿ ಮಿತಿಮೀರಿದ್ದು, ಇದೀಗ ಶಾಲೆಯನ್ನು ಟಾರ್ಗೆಟ್‌ ಮಾಡಿ ದಾಳಿ ಮಾಡಿದ್ದಾರೆ.

ಸೆಂಟ್ರಲ್ ನೈಜೀರಿಯಾದಲ್ಲಿ ಇರುವ ಶಾಲೆಯೊಂದರ ಮೇಲೆ ಗುಂಡಿನ ದಾಳಿ ನಡೆಸಿರುವ ಈ ಬಂದೂಕುಧಾರಿಗಳು 40 ಮಂದಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಇವರ ಗುಂಡಿನ ದಾಳಿಗೆ ಒಬ್ಬ ವಿದ್ಯಾರ್ಥಿ ಬಲಿಯಾಗಿದ್ದಾನೆ.

ಶಾಲೆಯ ಸಮೀಪ ಇರುವ ಹಾಸ್ಟೆಲ್‌ನ ಗೋಡೆ ಒಡೆದು ಒಳನುಗ್ಗಿದ ಈ ಉಗ್ರರು ಅಲ್ಲಿಂದ ಶಾಲೆಯ ಕೊಠಡಿಗೆ ಹೋಗಿದ್ದಾರೆ. ಬಂದೂಕುಧಾರಿಗಳು ಒಳನುಗ್ಗುತ್ತಿದ್ದಂತೆಯೇ ಭಯಭೀತರಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಲ್ಲಿಂದ ಓಡಿಹೋಗಲು ನೋಡಿದ್ದಾರೆ.

ಆ ಸಮಯದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ ಉಗ್ರರು. ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿ ಅಲ್ಲಿಯೇ ಮೃತಪಟ್ಟಿದ್ದಾನೆ. ಉಳಿದವರು ಓಡಿಹೋಗದಂತೆ ಭಯಹುಟ್ಟಿಸಿದ ಉಗ್ರರು ಎಲ್ಲರನ್ನೂ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಅಪಹರಿಸಿಕೊಂಡು ಹೋಗಿದ್ದಾರೆ.

ಇವರೆಲ್ಲರೂ ಮಿಲಿಟರಿ ಸಿಬ್ಬಂದಿ ಬಳಸುವ ಕ್ಯಾಮಪ್ಲೋಜ್ ಯೂನಿಫಾರ್ಮ್ ಧರಿಸಿ ಒಳನುಗ್ಗಿ ಈ ದುಷ್ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.


Thanks for reading ಶಾಲೆಯ ಮೇಲೆ ಬಂದೂಕುಧಾರಿಗಳಿಂದ ದಾಳಿ- 40 ಮಂದಿ ಶಿಕ್ಷಕರು, ವಿದ್ಯಾರ್ಥಿಗಳ ಅಪಹರಣ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಶಾಲೆಯ ಮೇಲೆ ಬಂದೂಕುಧಾರಿಗಳಿಂದ ದಾಳಿ- 40 ಮಂದಿ ಶಿಕ್ಷಕರು, ವಿದ್ಯಾರ್ಥಿಗಳ ಅಪಹರಣ!

Post a Comment