ಶಾಲಾ ಶುಲ್ಕವನ್ನು ಶೇ.30 ರಷ್ಡು ಕಡಿತ ; ಪರಿಶೀಲಿಸಲು ಆಗ್ರಹಿಸಿ ಫೆಬ್ರವರಿ 23 ರಂದು ಬೆಂಗಳೂರಲ್ಲಿ ಪ್ರತಿಭಟನೆ

February 11, 2021


ಬಳ್ಳಾರಿ, ಫೆ. 11(ಹಿ.ಸ) : ಶಾಲಾ ಶುಲ್ಕವನ್ನು ಶೇ.30 ರಷ್ಡು ಕಡಿತ ಮಾಡುವ ಆದೇಶವನ್ನು ಸರ್ಕಾರ ಪುನರ್ ಪರಿಶೀಲಿಸಲು ಆಗ್ರಹಿಸಿ ಫೆಬ್ರವರಿ 23 ರಂದು ಬೆಂಗಳೂರಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬಳ್ಳಾರಿ ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ತಿಳಿಸಿದೆ.

ಪತ್ರಿಕಾ ಭವನದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎನ್. ಮರಿಸ್ವಾಮಿ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಸರೆಡ್ಡಿ ಹಾಗೂ ಪದಾಧಿಕಾರಿಗಳು ಮಾತನಾಡಿ, ನಾವೆಲ್ಲ ಕ್ಯಾಮ್ಸ್ ಕರ್ನಾಟಕದ ನಿರ್ಧಾರ, ನಿದರ್ಶನಗಳಿಗೆ ಬದ್ಧರಾಗಿದ್ದೇವೆ. ಸರ್ಕಾರ ನಿಗಧಿ ಮಾಡಿರುವಂತೆ ವಿದ್ಯಾರ್ಥಿಗಳ ಭೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಇಳಿಕೆ ಮಾಡಲು ವಿರೋಧಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ನವೀಕರಣ ಮಾಡುವ ಪ್ರಕ್ರಿಯೆಯನ್ನು ಸರಳೀಕರಣ ಮಾಡಬೇಕು.

`ಕೋವಿಡ್-19'ರ ಪ್ರಭಾವದಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟದಿAದ ಹೊರಬರಲು ಸರ್ಕಾರ ಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

1995 ರಿಂದ 2016 ರ ಅವಧಿಯಲ್ಲಿ ಪ್ರಾರಂಭ ಆಗಿರುವ ಎಲ್ಲಾ ಶಾಲೆಗಳಿಗೆ (ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮ) ವೇತನಾನುದಾನ ನೀಡಬೇಕು. 1 ರಿಂದ 5ನೇ ತರಗತಿ ವರೆಗಿನ ತರಗತಿಗಳನ್ನು ನಡೆಸಲು ಸರ್ಕಾರ ಆದೇಶ ನೀಡಬೇಕು ಎಂದರು.

ಸಂಘದ ಸದಸ್ಯರಾದ ಶ್ರೀನಿವಾಸ ರೆಡ್ಡಿ, ಚಕ್ರವರ್ತಿ, ಎಂ. ಪ್ರಭಂಜನ್ ಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Related Articles

Advertisement
Previous
Next Post »