ಕರೊನಾ 2ನೇ ಅಲೆ ಭೀತಿ: ಲಾಕ್​ಡೌನ್​ ಕುರಿತು ಸಚಿವ ಸುಧಾಕರ್​ ಕೊಟ್ಟ ಎಚ್ಚರಿಕೆ ಹೀಗಿದೆ..

February 22, 2021
Monday, February 22, 2021


 ಬೆಂಗಳೂರು: 'ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ' ಎಂಬ ಮಾತಿನಂತೆ ಇನ್ನೇನು ಕರೊನಾ ಮುಕ್ತವಾಗುತ್ತಿದೆಯೆಲ್ಲಾ ಎಂಬ ಆಸೆಯಲ್ಲಿದ್ದ ಜನರಿಗೆ ಮತ್ತೆ ಕರೊನಾ ಸಂಖ್ಯೆ ಹೆಚ್ಚುತ್ತಿರುವುದು ಮತ್ತಷ್ಟು ಆತಂಕಕ್ಕೇ ದೂಡಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮತ್ತೆ ಕರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಎರಡು ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ರಾಜ್ಯಕ್ಕೆ ಹೊಸ ತಲೆನೋವು ಎದುರಾಗಿದೆ.

ಕಠಿಣ ಕ್ರಮಕೈಗೊಳ್ಳಲು ಜನರೇ ಅನುವು ಮಾಡಿಕೊಟ್ಟಂತಾಗಲಿದೆ
ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್​, ಸಮಾರಂಭಗಳು ಹಾಗೂ ಜಾತ್ರೆಯಿಂದ ಜನಸಂದಣಿ ಹೆಚ್ಚು ಸೇರುತ್ತಿದೆ ಇದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಆಶಯಕ್ಕೆ ವಿರುದ್ಧವಾಗಿದೆ.

ಈ ಬಗ್ಗೆ ಪದೇಪದೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಜನರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಕಠಿಣ ಕ್ರಮಕೈಗೊಳ್ಳಲು ಜನರೇ ಅನುವು ಮಾಡಿಕೊಟ್ಟಂತಾಗಲಿದೆ. ಆದರೆ, ಅದಕ್ಕೆ ಅವಕಾಶ ಕೊಡಬೇಡಿ ಎಂದು ಅಸಮಾಧಾನದ ಜತೆಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

ಜನರು ಗಂಭೀರವಾಗಿ ತೆಗೆದುಕೊಳ್ಳಬೇಕು
ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್​ ಹೋಗಿದ್ದಾರೆ. ಇದೇ ಪರಿಸ್ಥಿತಿ ನಮ್ಮಲ್ಲಿ ಬರಬಹುದು. ಹೀಗಾಗಿ ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಲಸಿಕೆ ಕೊಡುವುದರಲ್ಲಿ ಹಿಂದೆ ಇದೆ. ಈಗಾಗಲೇ ಆಯುಕ್ತರಿಗೆ ಹೇಳಿದ್ದೇವೆ. ಬೆಂಗಳೂರು, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಆಗುತ್ತಿದೆ. ನಿಗದಿತ ಗುರಿ ತಲುಪಬೇಕಿದೆ. ಕೆಲ ಜಿಲ್ಲೆಗಳಲ್ಲಿ ಪಾಸಿಟಿವ್ ಹೆಚ್ಚಾಗಿದೆ. ಕಲಬುರಗಿ ಶೇ. 1.37, ಬೆಂಗಳೂರು ಶೇ. 1.2 ಮತ್ತು ದಕ್ಷಿಣ ಕನ್ನಡ 1.1 ರಷ್ಟು ಪಾಸಿಟಿವ್​ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ವ್ಯಾಕ್ಸಿನೇಷನ್‌ ಹಾಕಲು ಹೆಚ್ಚು ಆದ್ಯತೆ ನೀಡಬೇಕು ಎಂದರು.

ಎರಡನೇ ಹಂತದ ಕೊರೊನಾ ಅಲೆ ತಪ್ಪಿಸಲು ಕ್ರಮ
ಎರಡನೇ ಹಂತದ ಕೊರೊನಾ ಅಲೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಐವತ್ತು ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸುವ ಘೋಷಣೆ ಸಾಧ್ಯತೆಯಿದೆ. ಆದಷ್ಟು ಬೇಗ ಅಂದರೆ ಮಾರ್ಚ್​ನಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ಘೋಷಣೆಯಾಗಲಿದೆ. ಹೀಗಾಗಿ 35 ಸಾವಿರ ಕೋಟಿ ರೂ. ಅನ್ನು ಕೋವಿಡ್ ಲಸಿಕೆಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಇಷ್ಟೊಂದು ಉದಾಸೀನ ಒಳ್ಳೆಯದಲ್ಲ
ಸದ್ಯ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಕೆಲವರು ಮಾಸ್ಕ್ ಸಹ ಧರಿಸುತ್ತಿಲ್ಲ. ಜನಸಾಮಾನ್ಯರು, ವಿಐಪಿ ಹಾಗೂ ವಿವಿಐಪಿಗಳು ಕೂಡ ನಿಯಮಗಳನ್ನು ಪಾಲಿಸುತ್ತಿಲ್ಲ. ಇಷ್ಟೊಂದು ಉದಾಸೀನ ಒಳ್ಳೆಯದಲ್ಲ. ಮದುವೆ ಸಮಾರಂಭದಲ್ಲಿ ಒಬ್ಬೊಬ್ಬ ಮಾರ್ಷಲ್​​ಗಳನ್ನು ಹಾಕಲು ತೀರ್ಮಾನಿಸಲಾಗಿದೆ. ಐನೂರಕ್ಕಿಂತ ಹೆಚ್ಚು ಜನ ಸೇರಬಾರದು. ಮಾಸ್ಕ್, ಅಂತರದ ನಿಯಮ ಪಾಲಿಸಲು ಮಾರ್ಷಲ್ ಹಾಕಲು ನಿರ್ಧರಿಸಲಾಗಿದೆ ಎಂದರು.

ರಾಜ್ಯದಲ್ಲಿ ಲಾಕ್ ಡೌನ್ ಪರಿಸ್ಥಿತಿ ಇಲ್ಲ
ಶಾಲೆ ಆರಂಭವಾಗಿದ್ದರೂ ಕಡ್ಡಾಯ ಏನಿಲ್ಲ. ರಾಜ್ಯದಲ್ಲಿ ಲಾಕ್ ಡೌನ್ ಪರಿಸ್ಥಿತಿ ಇಲ್ಲ. ಆ ರೀತಿಯ ಪರಿಸ್ಥಿತಿಗೆ ಅವಕಾಶ ಕೊಡುವುದಿಲ್ಲ. ಆದರೆ, ಒಂದೇ ಸ್ಥಳದಲ್ಲಿ ಐದು ಮಂದಿಗೆ ಸೋಂಕು ತಗುಲಿದರೆ ಆ ಪ್ರದೇಶವನ್ನ ಮತ್ತೆ ಕಂಟೋನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗುತ್ತದೆ. ಗಡಿಯಲ್ಲಿ ಮತ್ತಷ್ಟು ನಿಗಾವಹಿಸಿದ್ದೇವೆ. ಅಂತಾರಾಜ್ಯ ಪಯಣಕ್ಕೆ ನಾವು ನಿರ್ಬಂಧ ಹಾಕಿಲ್ಲ. ಕೇರಳ, ಮಹಾರಾಷ್ಟ್ರ ಆರೋಗ್ಯ ಮಂತ್ರಿಗಳನ್ನ ಭೇಟಿ ಮಾಡುತ್ತೇವೆ. ಅಲ್ಲಿಂದ ಬರುವ ಜನರಿಗೆ ಮಾರ್ಗಸೂಚಿ ಪ್ರಕಟ ಮಾಡಿ ಎಂದು ಮನವಿ ಮಾಡುತ್ತೇವೆಂದು ಹೇಳಿದರು.

ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಅವಕಾಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ತಿಂಗಳ ಅಂತ್ಯದಲ್ಲಿ ಸಭೆ ನಡೆಸಿ ನಿರ್ಧಾರ ಮಾಡಲಾಗುವುದು. ಈ ಹಿಂದೆ ನಡೆದ ಚಿತ್ರರಂಗದ ಪ್ರತಿನಿಧಿಗಳ ಸಭೆಯಲ್ಲೇ ಈ ವಿಚಾರವನ್ನು ತಿಳಿಸಲಾಗಿದೆ ಎಂದರು.


Thanks for reading ಕರೊನಾ 2ನೇ ಅಲೆ ಭೀತಿ: ಲಾಕ್​ಡೌನ್​ ಕುರಿತು ಸಚಿವ ಸುಧಾಕರ್​ ಕೊಟ್ಟ ಎಚ್ಚರಿಕೆ ಹೀಗಿದೆ.. | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕರೊನಾ 2ನೇ ಅಲೆ ಭೀತಿ: ಲಾಕ್​ಡೌನ್​ ಕುರಿತು ಸಚಿವ ಸುಧಾಕರ್​ ಕೊಟ್ಟ ಎಚ್ಚರಿಕೆ ಹೀಗಿದೆ..

Post a Comment