ಶಾಕಿಂಗ್ : ಮಂಗಳೂರಿನಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು

February 10, 2021

 


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಜಿಲ್ಲೆಗೆ ಸಮೀಪದ ಕೇರಳದಿಂದ ‌ವ್ಯಾಸಂಗಕ್ಕೆಂದು ಬಂದಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ರೂಪಾಂತರಿ ಕೊರೊನಾ ಇದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಲು ಅವರ ಗಂಟಲ ದ್ರವ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಲಾಗಿದೆ.

ಇತ್ತೀಚೆಗೆ ಬ್ರಿಟನ್‌ನಿಂದ ಕೇರಳಕ್ಕೆ ಆಗಮಿಸಿದ್ದವರಿಗೂ ರೂಪಾಂತರಿ ಕೊರೊನಾ ವೈರಸ್‌ ಲಕ್ಷಣಗಳು ಕಂಡು ಬಂದಿದ್ದವು.

ಈ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಕೇರಳದಿಂದ ದ.ಕ. ಜಿಲ್ಲೆಗೆ ಬಂದು, ಕೊರೊನಾ ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್​​ಗೆ ಕಳುಹಿಸಲಾಗುತ್ತಿದೆ.


Related Articles

Advertisement
Previous
Next Post »