ಭಾರತೀಯ ವಾಯುಪಡೆ ಸೇರಲು ಅವಕಾಶ; ತಿಂಗಳಿಗೆ ಕನಿಷ್ಠ 18 ಸಾವಿರ ವೇತನ

February 14, 2021

 


ಸೌತ್ ವೆಸ್ಟರ್ನ್ ಏರ್ ಕಮಾಂಡ್ ಆಫ್ ಏರ್ ಫೋರ್ಸ್‌ನಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ (ಎಂಟಿಎಸ್), ಹೌಸ್ ಕೀಪಿಂಗ್ ಸಿಬ್ಬಂದಿ, ಮೆಸ್ ಸ್ಟಾಫ್, ಎಲ್‌ಡಿಸಿ, ಹಿಂದಿ ಟೈಪಿಸ್ಟ್ ಗುಮಾಸ್ತ, ಸ್ಟೆನೊಗ್ರಾಫರ್ ಗ್ರೇಡ್ -2, ಸ್ಟೋರ್, ಸ್ಟೋರ್ ಕೀಪರ್, ಲಾಂಡ್ರಿಮನ್, ಕಾರ್ಪೆಂಟರ್, ಪೇಂಟರ್ ಸೇರಿ ಒಟ್ಟು 255 ಹುದ್ದೆಗಳು ಖಾಲಿ ಇವೆ.

ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದ್ಕಕಾಗಿ ಐಎಎಫ್ ಗ್ರೂಪ್ ಸಿ ನೇಮಕಾತಿಯನ್ನು ಆರಂಭಿಸಿದೆ. ಈ ಸಂಬಂಧ ಈಗಾಗಲೇ ಐಎಎಫ್ ಗ್ರೂಪ್ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿದೆ. ಐಎಎಫ್‌ನಲ್ಲಿ ಕೆಲಸ ಮಾಡಲು ಆಸಕ್ತ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 13 ಕೊನೆಯ ದಿನಾಂಕವಾಗಿದೆ ಮತ್ತು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಮೊಮ್ಮಗಳ ಕನಸು ಈಡೇರಿಸಲು ಮನೆ ಮಾರಿ ಆಟೋದಲ್ಲಿ ಜೀವನ ನಡೆಸುತ್ತಿರುವ ಅಜ್ಜ!

ಐಎಎಫ್‌ನಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅಭ್ಯರ್ಥಿಗಳು 12ರಿಂದ ಅರ್ಜಿ ಸಲ್ಲಿಸಬಹುದು. ಅಂದರೆ, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 13 ಆಗಿದೆ ಎಂಬುದನ್ನು ಅಭ್ಯರ್ಥಿಗಳು ಗಮನದಲ್ಲಿ ಇಟ್ಟುಕೊಳ್ಳಬೇಕು.

ಶೈಕ್ಷಣಿಕ ಅರ್ಹತೆ: ಮೆಟ್ರಿಕ್ಯುಲೇಷನ್, 12 ನೇ ತರಗತಿ ಪಾಸ್ ಆದವರು, ಪದವಿ ಪ್ರಮಾಣಪತ್ರ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಶೈಕ್ಷಣಿಕ ಅರ್ಹತೆಗಳಿಗಾಗಿ ಅಧಿಸೂಚನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿಕೊಳ್ಳಬೇಕು.

ಎಲ್ಲಾ ಅರ್ಜಿಗಳನ್ನು ವಯಸ್ಸಿನ ಮಿತಿ, ಕನಿಷ್ಠ ಅರ್ಹತೆ, ದಾಖಲೆಗಳು ಮತ್ತು ಪ್ರಮಾಣಪತ್ರಗಳ ಪ್ರಕಾರ ಪರಿಶೀಲಿಸಲಾಗುತ್ತದೆ. ನಂತರ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಕರೆ ಪತ್ರ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಲಿಖಿತ ಪರೀಕ್ಷೆಯು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿರುತ್ತದೆ.

ಬಿಟೆಕ್, ಡಿಪ್ಲೋಮಾ ಬಾಕಿ ಶುಲ್ಕ ಪಾವತಿಗೆ ನರೇಗಾದಲ್ಲಿ ಬೆವರು ಹರಿಸುತ್ತಿರುವ ಸೋದರಿಯರು

ಪ್ರಶ್ನೆ ಮತ್ತು ಉತ್ತರ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ಅಗತ್ಯ ಸಂಖ್ಯೆಯ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ ಮತ್ತು ಲಿಖಿತ ಪರೀಕ್ಷೆಯಲ್ಲಿ ಅರ್ಹತೆ / ವರ್ಗದ ಆಧಾರದ ಮೇಲೆ ಅನ್ವಯವಾಗುವಲ್ಲೆಲ್ಲಾ ಕೌಶಲ್ಯ / ಪ್ರಾಯೋಗಿಕ / ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ.

ಪರೀಕ್ಷೆಯು ಸಾಮಾನ್ಯ ಬುದ್ಧಿವಂತಿಕೆ ಮತ್ತು ತಾರ್ಕಿಕತೆ, ಸಂಖ್ಯಾತ್ಮಕ ಆಪ್ಟಿಟ್ಯೂಡ್, ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ ವಿಷಯಗಳನ್ನು ಒಳಗೊಂಡಿರುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮೂಲ ಪ್ರಮಾಣಪತ್ರಗಳನ್ನು ತರಬೇಕು, ಅದರ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಫೈನಲ್ ಇಯರ್ ಡಿಗ್ರಿಯಲ್ಲಿದ್ದಾಗಲೇ 30 ಲಕ್ಷ ರೂಪಾಯಿ ವೇತನದ ನೌಕರಿ

ವೇತನ ಶ್ರೇಣಿ: ಅಭ್ಯರ್ಥಿಗಳಿಗೆ ಕನಿಷ್ಠ 18,000 ರೂ. (ಹಂತ-1) ವೇತನ ಸಿಗಲಿದೆ. ವೇತನ ಶ್ರೇಣಿ ಪ್ರಮಾಣದ ವಿವರಗಳಿಗಾಗಿ, ದಯವಿಟ್ಟು ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?: ಖಾಲಿ ಹುದ್ದೆಗಳು ಮತ್ತು ಅರ್ಹತೆಗೆ ಅನುಗುಣವಾಗಿ ಅಭ್ಯರ್ಥಿಗಳು ತಮ್ಮ ಆಯ್ಕೆಯ ಹುದ್ದೆಗೆ ಯಾವುದೇ ಏರ್ಫೋರ್ಸ್ ಸ್ಟೇಷನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ ಜೊತೆಗೆ ಇಂಗ್ಲಿಷ್ / ಹಿಂದಿಯಲ್ಲಿ ಸ್ವಯಂ ಟೈಪ್ ಮಾಡಿದ ಅರ್ಜಿಯನ್ನು ಲಗತ್ತಿಸಿರಬೇಕು. ಅರ್ಜಿದಾರರು ಲಕೋಟೆಯಲ್ಲಿ ಹುದ್ದೆಯ ಹೆಸರು ಮತ್ತು ವರ್ಗವನ್ನು ಸ್ಪಷ್ಟವಾಗಿ ನಮೂದಿಸಬೇಕು. ಅಪ್ಲಿಕೇಷನ್ ಫಾರ್ ದಿ ಪೋಸ್ಟ್ ಆಪ್ ಆಂಡ್ ಕೆಟಗರಿ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿಯೊಂದಿಗೆ ಸ್ವಯಂ ವಿಳಾಸದ ಲಕೋಟೆಯೊಂದಿಗೆ ರೂ. 10 ಅಂಚೆ ಚೀಟಿಯನ್ನು ಸರಿಯಾಗಿ ಅಂಟಿಸಬೇಕು. ಈ ಸಂಬಂಧ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಇಂಡಿಯನ್ ಏರ್ಫೋರ್ಸ್ನ ಅಧಿಕೃತ ವೆಬ್ಸೈಟ್ www.indianairforce.nic.in ಗೆ ಭೇಟಿ ಕೊಡಿ.

Related Articles

Advertisement
Previous
Next Post »