1.5 ಲಕ್ಷ ರೂ. ಬಂಡವಾಳದಲ್ಲಿ ಉದ್ಯಮ ಶುರು ಮಾಡಿ ದಿನಕ್ಕೆ ಗಳಿಸಿ ಸಾವಿರಾರು ರೂಪಾಯಿ.!

February 08, 2021

 


ಒಂದೇ ನೌಕರಿ ಮಾಡಿ ಬೇಸತ್ತವರು ಉದ್ಯಮದತ್ತ ಒಲವು ತೋರಿಸುತ್ತಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡುವ ಬದಲು ನೆಮ್ಮದಿಯಾಗಿ ಗಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸ್ತಿದ್ದಾರೆ. ಸಣ್ಣ ಬಂಡವಾಳ, ಕಡಿಮೆ ಜಾಗ, ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಗಳಿಸುವ ಉದ್ಯಮ ಶುರುಮಾಡುವ ಪ್ಲಾನ್ ಮಾಡಿದ್ದರೆ ಇಲ್ಲಿದೆ ನಿಮಗೊಂದು ಖುಷಿ ಸುದ್ದಿ.

ಈ ಉದ್ಯಮದಲ್ಲಿ ನೀವು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು. ದಿನಕ್ಕೆ 1000 ರೂಪಾಯಿ ವಹಿವಾಟಾದ್ರೆ ಅದ್ರಲ್ಲಿ 500 ರೂಪಾಯಿ ಲಾಭವಾಗುತ್ತದೆ. ಈ ಉದ್ಯಮವನ್ನು ಒಂದೇ ಕಡೆ ಕುಳಿತು ಶುರು ಮಾಡಬಹುದು. ಶೇಕಡಾ 50ರಷ್ಟು ಆದಾಯವಿರುವ ಈ ಉದ್ಯಮ ಮತ್ಯಾವದೂ ಅಲ್ಲ ಸೋಡಾ ಮಾರಾಟ.

ಸೋಡಾ ಯಂತ್ರ ಮೂರು ರೀತಿಯಲ್ಲಿರುತ್ತದೆ.

6 + 2, 8+2, 10+2. ಅಂದ್ರೆ 6 + 2 ಯಂತ್ರದಲ್ಲಿ 6 ಸೋಡಾ ಯಂತ್ರವಾಗಿದ್ದರೆ 2 ಜ್ಯೂಸ್ ಯಂತ್ರವಾಗಿರುತ್ತದೆ. 8+2ನಲ್ಲಿ 8 ಸೋಡಾ ಫ್ಲೇವರ್ ಆಗಿದ್ದರೆ 2 ಜ್ಯೂಸ್. 10+2ನಲ್ಲಿ ಕೂಡ 10 ಸೋಡಾ ಆಗಿದ್ದರೆ 2 ಜ್ಯೂಸ್ ಆಗಿರುತ್ತದೆ.

ನಿಮ್ಮ ಬಳಿ ಎಷ್ಟು ಜಾಗವಿದೆ ಎಂಬುದನ್ನು ನೋಡಿ ನೀವು ಯಾವ ಮಶಿನ್ ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. 50 ಸಾವಿರದಿಂದ 2 ಲಕ್ಷದವರೆಗಿನ ಮಿಶನ್ ಮಾರುಕಟ್ಟೆಯಲ್ಲಿದೆ. ಗ್ಯಾರಂಟಿ ಹಾಗೂ ವಾರಂಟಿ ನೋಡಿ ಮಶಿನ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಂತ್ರ, ನೀರಿನ ಟ್ಯಾಂಕ್, ಸೋಡಾ, ಅನಿಲ ಸಿಲಿಂಡರ್, ಫ್ಲೇವರ್, ಸಕ್ಕರೆ, ಕಾಗದದ ಕಪ್ ಸೇರಿದಂತೆ ಕೆಲ ವಸ್ತುಗಳ ಅಗತ್ಯತೆಯಿರುತ್ತದೆ.


Related Articles

Advertisement
Previous
Next Post »