'ಬಂಪರ್ ಜಾಕ್ ಪಾಟ್': 100 ರೂ. ಲಾಟರಿ ಟಿಕೆಟ್ ಕೊಂಡು ಕೋಟಿ ಗೆದ್ದ 'ಪಂಜಾಬ್ ಮಹಿಳೆ'

February 25, 2021

 


ಡಿಜಿಟಲ್ ಡೆಸ್ಕ್ : ಕೇವಲ 100 ರೂಗೆ ಲಾಟರಿ ಟಿಕೆಟ್ ಕೊಂಡುಕೊಂಡು ಮಹಿಳೆಯೊಬ್ಬರು ಕೋಟ್ಯಾಧಿಪತಿಯಾದ ಘಟನೆ ಚಂಡೀಘರ್ ನಲ್ಲಿ ನಡೆದಿದೆ.

ರೇಣು ಚೌಹಾನ್ ಎಂಬ ಮಹಿಳೆಯೇ ಲಾಟರಿ ಗೆದ್ದ ಅದೃಷ್ಟವಂತ ಮಹಿಳೆ. ಇವರು ಅಮೃತಸರದಲ್ಲಿ ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದು, ಫೆಬ್ರವರಿ 11 ರಂದು ಲಾಟರಿ ಗೆದ್ದಿದ್ದಾರೆ. ಈ ಬಗ್ಗೆ ಪಂಜಾಬ್ ರಾಜ್ಯ ಲಾಟರಿ ಇಲಾಖೆಯ ಅಧಿಕೃತ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೌಹಾನ್ ಭಗವಂತನ ಆಶೀರ್ವಾದದಿಂದ ಲಾಟರಿ ಗೆದ್ದಿದ್ದೇನೆ, ಮಧ್ಯಮ ವರ್ಗದ ಕುಟುಂಬಕ್ಕೆ ಬಹಳ ಸಹಾಯಕಾರಿಯಾಗಿದೆ ಎಂದಿದ್ದಾರೆ.


ದುಬೈ:12 ಭಾರತೀಯರ ಸಾವಿಗೆ ಕಾರಣನಾದ ಚಾಲಕನ ಜೈಲು ಶಿಕ್ಷೆ ಕಡಿತ

 ದುಬೈ,ಫೆಬ್ರವರಿ 25: ಅಪಘಾತದಲ್ಲಿ 12 ಮಂದಿ ಭಾರತೀಯರ ಹತ್ಯೆಗೆ ಕಾರಣನಾಗಿದ್ದ ಓಮಾನಿ ಬಸ್‌ ಚಾಲಕನಿಗೆ ವಿಧಿಸಿದ ಜೈಲುಶಿಕ್ಷೆಯನ್ನು ದುಬೈ ಕೋರ್ಟ್ ಕಡಿತಗೊಳಿಸಿದೆ.

2019ರಲ್ಲಿ ನಡೆದ ಅಪಘಾತದಲ್ಲಿ 12 ಮಂದಿ ಭಾರತೀಯರು ಸೇರಿ ಒಟ್ಟು 17 ಮಂದಿ ಮೃತಪಟ್ಟಿದ್ದರು,ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದೀಗ ಶಿಕ್ಷೆಯನ್ನು ಒಂದು ವರ್ಷಕ್ಕೆ ಕಡಿತಗೊಳಿಸಲಾಗಿದೆ.

 

ದುಬೈ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು, ಬಳಿಕ ನ್ಯಾಯಾಲಯವು 55 ವರ್ಷದ ಚಾಲಕನ ಶಿಕ್ಷೆಯನ್ನು ಒಂದು ವರ್ಷ ಕಡಿತಗೊಳಿಸಿದ್ದಷ್ಟೇ ಅಲ್ಲದೆ ಗಡಿಪಾರು ಆದೇಶವನ್ನು ಹಿಂತೆಗೆದುಕೊಂಡಿದೆ ಎಂದು ಗಲ್ಫ್‌ ನ್ಯೂಸ್ ವರದಿ ಮಾಡಿದೆ.

ಚಾಲಕ ಮೃತರ ಕುಟುಂಬಕ್ಕೆ ಇನ್ನೂ 13,612 ಯುಎಸ್ ಡಾಲರ್ ಹಾಗೂ 925,660 ಯುಎಸ್‌ಎಸ್‌ಡಿ ಪಾವತಿಸಬೇಕಿದೆ.2019ರ ಜುಲೈನಲ್ಲಿ ಚಾಲಕನಿಗೆ ದುಬೈ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು. ಚಾಲಕನನ್ನು ಗಡಿಪಾರು ಮಾಡುವಂತೆ ಆದೇಶಿಸಿತ್ತು. ಅವರ ಚಾಲನಾ ಪರವಾನಗಿಯನ್ನು ಒಂದು ವರ್ಷ ರದ್ದುಗೊಳಿಸಿತ್ತು.


ಈದ್ ರಜಾ ಸಂದರ್ಭದಲ್ಲಿ ಪ್ರವಾಸಿಗರು ಬಸ್ ಓಮನ್ ರಾಜಧಾನಿ ಮಸ್ಕತ್‌ನಿಂದ ದುಬೈಗೆ ತೆರಳುತ್ತಿತ್ತು. ಬಸ್ ಆಯ ತಪ್ಪಿ ಲೋಹದ ತಡೆಗೋಡೆಗೆ ಗುದ್ದಿತ್ತು. ಅದರಲ್ಲಿ 12 ಮಂದಿ ಭಾರತೀಯರು, ಪಾಕಿಸ್ತಾನಿ,ಐರಿಶ್,ಓಮಾನಿ, ಫಿಲಿಪಿನಾ ಪ್ರಜೆಗಳಿದ್ದರು. ಇನ್ನೂ ಹಲವು ಮಂದಿ ಗಾಯಗೊಂಡಿದ್ದರು.


ಬಸ್‌ನಲ್ಲಿದ್ದ 31 ಜನರಲ್ಲಿ ಬಾಂಗ್ಲಾದೇಶ,ಜರ್ಮನಿ,ಫಿಲಿಪೈನ್ಸ್‌ನ ನಾಗರಿಕರೂ ಇದ್ದರು.ಚಾಲಕ ತನ್ನ ತಪ್ಪಿನಿಂದಲೇ ಅಪಘಾತವಾಗಿದ್ದು ಎಂದು ತಪ್ಪೊಪ್ಪಿಕೊಂಡಿದ್ದ.


Related Articles

Advertisement
Previous
Next Post »