ಏರಿಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕೆಲ್ಸಾ ಖಾಲಿ ಇವೆ, 10 ಲಕ್ಷ ರೂ. ವೇತನ

February 10, 2021
Wednesday, February 10, 2021

 


ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ‌ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇಮಕಾತಿ-2021ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಇದೇ ತಿಂಗಳು ಫೆಬ್ರವರಿ ೨೧ ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.

ಒಟ್ಟು ಎರಡು ಹುದ್ದೆಗಲಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇಮಕಾತಿ ಮಾಡಿಕೊಳ್ಳುತ್ತಿದೆ. ಡೆಪ್ಯುಟಿ ಮ್ಯಾನೇಜರ್ ಏರ್‌ಪೋರ್ಟ್ ಸರ್ವೀಸ್-ಸಿಸ್ಟಮ್ಸ್ ಅಡ್ಮಿನ್ ಹಾಗೂ ಮ್ಯಾನೇಜರ್-ಕಾರ್ಗೊ ಸೇಲ್ಸ್ & ಮಾರ್ಕೆಟಿಂಗ್ ಖಾಲಿ ಇರುವ ತಲಾ ಒಂದೊಂದು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಫೈನಲ್ ಇಯರ್ ಡಿಗ್ರಿಯಲ್ಲಿದ್ದಾಗಲೇ 30 ಲಕ್ಷ ರೂಪಾಯಿ ವೇತನದ ನೌಕರಿ

ಡೆಪ್ಯುಟಿ ಮ್ಯಾನೇಜರ್ ಏರ್‌ಪೋರ್ಟ್ ಸರ್ವೀಸ್-ಸಿಸ್ಟಮ್ಸ್ ಅಡ್ಮಿನ್(ಡಿಸಿಎಸ್) ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.

ಏರ್‌ಲೈನ್ ಇಂಡಸ್ಟ್ರಿ/ ಗ್ರೌಂಡ್ ಹ್ಯಾಂಡಲಿಂಗ್‌ನಲ್ಲಿ ಕನಿಷ್ಟ ೧೦ ವರ್ಷದ ಅನುಭವ ಹಾಗೂ ಏರ್‌ಲೈನ್ ಸಾಫ್ಟ್‌ವೇರ್ ಪರಿಹಾರಗಳಿಗೆ ಸಂಬಂಧಿಸಿದ ಐಟಿ ಸೇವೆಗಳಲ್ಲಿ ಕನಿಷ್ಟ 5 ವರ್ಷ ಅನುಭವ ಹೊಂದಿರಬೇಕು. ಇದಲ್ಲದೇ ಏರ್‌ಲೈನ್ ಡಿಸಿಎಸ್ ಯೋಜನೆಗಳೊಂದಿಗೆ ಸಂಬಂಧ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಇನ್ನು ಮ್ಯಾನೇಜರ್-ಕಾರ್ಗೊ ಸೇಲ್ಸ್ & ಮಾರ್ಕೆಟಿಂಗ್ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಯಾವುದೇ ಹೆಸರಾಂತ ವಿಮಾನಯಾನ / ಸರಕು ಸಾಗಣೆ ಸೇವೆಗಳ ಅಂತಾರಾಷ್ಟ್ರೀಯ ವಿಮಾನಯಾನ ಅಥವಾ ಕಾರ್ಗೋ ಸಿಎಸ್‌ಎನಲ್ಲಿ ಕಾರ್ಗೋ ಸೇಲ್ಸ್ ಮತ್ತು ಮಾರ್ಕೆಟಿಂಗ್‌ನಲ್ಲಿ ಕನಿಷ್ಟ 15 ವರ್ಷ ಅನುಭವ ಹೊಂದಿರಬೇಕು. ನೆಟ್‌ವರ್ಕ್‌ನಾದ್ಯಂತ ವಿವಿಧ ಕೇಂದ್ರಗಳ ನಿರ್ವಹಣೆಯನ್ನು ಸ್ವತಂತ್ರವಾಗಿ ನಿಭಾಯಿಸಿದ ಅನುಭವವಿರಬೇಕು. ಒಟ್ಟು ಕೆಲಸದ ಅನುಭವವು ವ್ಯವಸ್ಥಾಪಕರ ಮಟ್ಟದಲ್ಲಿ ಕನಿಷ್ಠ ಐದು ವರ್ಷಗಳನ್ನು ಹೊಂದಿರಬೇಕು ಮತ್ತು ನೆಟ್‌ವರ್ಕ್‌ನಾದ್ಯಂತ ಸರಕು ಮಾರಾಟ ಅಧಿಕಾರಿಗಳ ತಂಡವನ್ನು ಮುನ್ನಡೆಸಬೇಕು.

ವಿಶೇಷ ಎಂದರೆ, ಈ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಶೇಷ ಅಭ್ಯರ್ಥಿಗಳಿಗೆ ಆದ್ಯತೆ ಇದೆ. ಏನೆಂದರೆ, ಭಾರತ-ಮಧ್ಯಪ್ರಾಚ್ಯ ಮಾರುಕಟ್ಟೆಯಲ್ಲಿ ವಿಮಾನಯಾನ ಕಾರ್ಯಾಚರಣೆಯೊಂದಿಗೆ ಸಂಬಂಧ ಹೊಂದಿರುವ ಮತ್ತು ಈ ವಲಯಗಳಲ್ಲಿನ ಕಾರ್ಗೋ ಮಾರ್ಕೆಟಿಂಗ್ ಪರಿಚಿತವಾಗಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಹಾಗೆಯೇ, ಆಧುನಿಕ ಕಾರ್ಗೊ ನಿರ್ವಹಣಾ ವ್ಯವಸ್ಥೆಯ ಕಟೌವರ್ ಪ್ರಕ್ರಿಯೆ ಅಭಿವೃದ್ಧಿಪಡಿಸುವ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ.

ಈ ಅಕ್ಕ-ತಂಗಿ ಎಲ್ಲರಂತಲ್ಲ, ಗಣಿತ ಎಂದರೆ ಇವರಿಗೆ ಲೆಕ್ಕವೇ ಅಲ್ಲ

ಡೆಪ್ಯುಟಿ ಮ್ಯಾನೇಜರ್ ಏರ್‌ಪೋರ್ಟ್ ಸರ್ವೀಸ್-ಸಿಸ್ಟಮ್ಸ್ ಅಡ್ಮಿನ್, ಡಿಸಿಎಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ವಾರ್ಷಿಕ 7 ಲಕ್ಷ ದಿಂದ 7.5 ಲಕ್ಷ ರೂಪಾಯಿ ಸಂಬಳ ದೊರೆಯಲಿದೆ. ಅದೇ ರೀತಿ, ಮ್ಯಾನೇಜರ್-ಕಾರ್ಗೊ ಸೇಲ್ಸ್ & ಮಾರ್ಕೆಟಿಂಗ್ ಹುದ್ದೆಗೆ ನೇಮಕವಾದವರಿಗೆ ವಾರ್ಷಿಕ 9.5 ಲಕ್ಷ ದಿಂದ 10 ಲಕ್ಷ ರೂಪಾಯಿ ಸಿಗಲಿದೆ.

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು airindiaexpress.in/en ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಬಳಿಕ ಕೆರಿಯರ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಪೋಸ್ಟ್ ಅನ್ನು ಆಯ್ಕೆ ಮಾಡಿ. ಅಪ್ಲೈ ಮೇಲೆ ಕ್ಲಿಕ್ ಮಾಡಿ. ನೀಡಿರುವ ಸ್ವರೂಪದಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಇಷ್ಟಾದ ಬಳಿಕ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಬಳಿಕ ಸಬ್‌ಮಿಟ್ ಕ್ಲಿಕ್ ಮಾಡಿದ್ರೆ ಆಯ್ತು.

ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ಪ್ರಮಾಣಪತ್ರಗಳು. ಅನ್ವಯವಾಗುವ ದಾಖಲೆಗಳಾದ ಜಾತಿ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ, ಸರ್ಕಾರಿ / ಪಿಎಸ್‌ಯು ಉದ್ಯೋಗಿಗಳಿಗೆ ಎನ್‌ಒಸಿ, ಮಾಜಿ ಸೇವೆಗಾಗಿ ಡಿಸ್ಚಾರ್ಜ್ ಪ್ರಮಾಣಪತ್ರ ಇತ್ಯಾದಿಗಳನ್ನು ರೆಸ್ಯೂಮ್ ಜೊತೆಗೆ ಲಗತ್ತಿಸಬೇಕು.

SSLC ಪರೀಕ್ಷೆ ಬರೆಯಲು 11 ವರ್ಷದ ವಿದ್ಯಾರ್ಥಿ ರೆಡಿ

Thanks for reading ಏರಿಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕೆಲ್ಸಾ ಖಾಲಿ ಇವೆ, 10 ಲಕ್ಷ ರೂ. ವೇತನ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಏರಿಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಕೆಲ್ಸಾ ಖಾಲಿ ಇವೆ, 10 ಲಕ್ಷ ರೂ. ವೇತನ

Post a Comment