ಮೊಟ್ಟೆಯ ಬಿಳಿಗಿಂತ ಹಳದಿ ಹೆಚ್ಚು ಆರೋಗ್ಯಕರವೇ..?ಇಲ್ಲಿದೆ ಉತ್ತರ

February 28, 2021

 


ಮೊಟ್ಟೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಎಲ್ಲರಿಗೂ ಗೊತ್ತು. ಆದರೆ ಕೆಲವರು ಅದರ ಹಳದಿ ತಿನ್ನುವುದು ಒಳ್ಳೆಯದಲ್ಲ, ಇದರಿಂದ ಕೊಬ್ಬಿನಂಶ, ಕೊಲೆಸ್ಟ್ರಾಲ್ ಅಧಿಕವಾಗುವುದು ಎಂದು ಹಳದಿಯನ್ನು ಬಿಸಾಡಿ, ಪ್ರೊಟೀನ್ ಅಂಶವಿರುವ ಬರೀ ಬಿಳಿಯನ್ನಷ್ಟೇ ತಿನ್ನುತ್ತಾರೆ. ಇನ್ನು ಕೆಲವರು ಮೊಟ್ಟೆಯ ಹಳದಿಯಲ್ಲಿ ಪ್ರೊಟೀನ್,

ಒಳ್ಳೆಯ ಕೊಬ್ಬಿನಂಶ ಹಾಗೂ ಪೋಷಕಾಂಶಗಳು ಇರುವುದರಿಂದ ಮೊಟ್ಟೆಯನ್ನು ಹಳದಿ ಸಹಿತ ಸೇವಿಸಬೇಕು ಎಂದು ಹೇಳುತ್ತಾರೆ. ಹೀಗೆ ಮೊಟ್ಟೆಯ ವಿಷಯದಲ್ಲಿ ಚರ್ಚೆ ಇದ್ದಿದ್ದೇ. ನಾವಿಲ್ಲಿ ಮೊಟ್ಟೆಯ ಬಿಳಿ ಹಾಗೂ ಹಳದಿ ಸಹಿತ ಮೊಟ್ಟೆ ತಿನ್ನುವುದು ಇವುದರಲ್ಲಿ ಯಾವುದು ತುಂಬಾ ಆರೋಗ್ಯಕರ, ಇದರ ಕುರಿತು ವೈಜ್ಞಾನಿಕವಾಗಿ ಸಾಬೀತವಾದ ಅಂಶವೇನು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ಮೊಟ್ಟೆಯ ಬಿಳಿ ಅಥವಾ ಸಂಪೂರ್ಣ ಮೊಟ್ಟೆ: ಇದರಲ್ಲಿ ಯಾವುದರಲ್ಲಿ ಕ್ಯಾಲೋರಿ ಅಂಶ ಅಧಿಕ ಕ್ಯಾಲೋರಿ ಬಗ್ಗೆ ನೋಡುವುದಾದರೆ 100 ಗ್ರಾಂ ಬೇಯಿಸಿದ ಮೊಟ್ಟೆಯಲ್ಲಿ 52 ಕ್ಯಾಲೋರಿ ಅದೇ, ಸಂಪೂರ್ಣ ಮೊಟ್ಟೆಯಲ್ಲಿ 155 ಕ್ಯಾಲೋರಿ ಇರುತ್ತದೆ.

ಹಾಗಾಗಿ ಕ್ಯಾಲೋರಿ ದೃಷ್ಟಿಯಿಂದ ನೋಡುವುದಾದರೆ ಮೊಟ್ಟೆಯ ಬಿಳಿ ಒಳ್ಳೆಯದು.

ಮೊಟ್ಟೆಯ ಹಳದಿ ಅನಾರೋಗ್ಯಕರವೇ? ಖಂಡಿತ ಅಅಲ್ಲವೇ ಅಲ್ಲ, ಆದರೆ ಮೊಟ್ಟೆಯ ಹಳದಿ ಆರೋಗ್ಯಕರವಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಬರೀ ಮೊಟ್ಟೆಯ ಬಿಳಿ ತಿನ್ನುವುದಕ್ಕಿಂತ ಸಂಪೂರ್ಣ ಮೊಟ್ಟೆ ತಿನ್ನುವುದು ತುಂಬಾ ಆರೋಗ್ಯಕರ. ಇನ್ನು ಮಧುಮೇಹಿಗಳು ಕೂಡ ವಾರದಲ್ಲಿ 3-4 ಮೊಟ್ಟೆ ತಿನ್ನಬಹುದಾಗಿದೆ. ಅಮೆರಿಕನ್ ಜರ್ನಲ್ ಆಫ್‌ ಕ್ಲಿನಿಕಲ್ ನ್ಯೂಟ್ರಿಷಿಯನ್ ಸಂಶೋಧನೆ ವರದಿ ಪ್ರಕಾರ ಮಸಲ್ ಬಿಲ್ಡ್ ಮಾಡುವುದರಲ್ಲಿ ಎರಡರ ಪರಿಣಾಮ ಒಂದೇ. ಇನ್ನು ಮತ್ತೊಂದು ಅಧ್ಯಯನ ಪ್ರಕಾರ ಮೊಟ್ಟೆಯ ಹಳದಿ ಹಾನಿಗೊಳಗಾದ ಸ್ನಾಯುಗಳನ್ನು ಸರಿಪಡಿಸುವುದರಲ್ಲಿ ಸಹಕಾರಿ. ನಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬಿನಂಶ ಕೂಡ ಬೇಕಾಗಿದೆ. ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಅಂಶ ಅಧಿಕವಿದ್ದರೂ ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ ಹಾಗೂ ಮೆದುಳಿಗೆ ನರಗಳು ಸಂದೇಶ ರವಾನೆಗೆ ಚುರುಕುಗಾಗಿರುವಂತೆ ನೋಡಿಕೊಳ್ಳುತ್ತದೆ.

ಮೊಟ್ಟೆಯ ಬಿಳಿಗಿಂತ ಸಂಪೂರ್ಣ ಮೊಟ್ಟೆ ಆರೋಗ್ಯಕರ ಮೊಟ್ಟೆಯ ಬಿಳಿಯಲ್ಲಿ ಪ್ರೊಟೀನ್ ಮಾತ್ರ ಇರುತ್ತದೆ, ಅದೇ ಸಂಪೂರ್ಣ ಮೊಟ್ಟೆಯಲ್ಲಿ ಇತರ ಪೋಷಕಾಂಶಗಳು ಕೂಡ ಇರುತ್ದೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಸಂಪೂರ್ಣ ಮೊಟ್ಟೆ ತಿನ್ನುವುದು ಒಳ್ಳೆಯದು. ಇದನ್ನು ಬ್ರೇಕ್‌ಫಾಸ್ಟ್‌ಗೆ ಸೇವಿಸಿದರೆ ಆ ದಿನಕ್ಕೆ ಬೇಕಾಗುವ ಶಕ್ತಿ ದೊರೆಯುವುದು.

ಮೊಟ್ಟೆಯ ಬಿಳಿ ಹಾಗೂ ಹಳದಿಯಲ್ಲಿರುವ ಪೋಷಕಾಂಶಗಳು ಮೊಟ್ಟೆಯ ಹಳದಿಯಲ್ಲಿ ಕೊಲೆಸ್ಟ್ರಾಲ್ ಅಥವಾ ಸ್ಯಾಚುರೇಟಡ್ ಕೊಬ್ಬಿನಂಶವಿದೆ, ಆದರೂ ಇದು ಸೂಪರ್‌ ಹೆಲ್ತಿ ಆಗಿದೆ, ಅದಕ್ಕೆ ಕಾರಣ ಹಳದಿಯಲ್ಲಿ ಚೊಲೈನ್, ಇನ್ನು ಮೆದುಳಿಗೆ ಅವಶ್ಯಕವಾದ ಪೋಷಕಾಂಶವಾದ ಅಸೆಟೈಲ್ಕೋಲಿನ್, ವಿಟಮಿನ್‌ಗಳಾದ ಎ, ಡಿ, ಇ ಮತ್ತು ಕೆ, ಇದರ ಜೊತೆಗೆ ಒಮೆಗಾ 3 ಕೊಬ್ಬಿನಂಶವಿದೆ, ಅಲ್ಲದೆ ಫೋಲೆಟ್, ವಿಟಮಿನ್ ಬಿ12 ಮೊಟ್ಟೆಯ ಬಿಳಿಯಲ್ಲಿರುವುದಕ್ಕಿಂತಲೂ ಅಧಿಕವಿದೆ. ಅಲ್ಲದೆ ಮೊಟ್ಟೆಯ ಹಳದಿಯಲ್ಲಿ ಆಯಂಟಿಆಕ್ಸಿಡೆಂಟ್ ಅಂಶ ಕೂಡ ಇದೆ.

ಇನ್ನು ಮೊಟ್ಟೆಯ ಬಿಳಿಯಲ್ಲಿ ಪ್ರೊಟೀನ್, ಕಡಿಮೆ ಪ್ರಮಾಣದ ಕ್ಯಾಲೋರಿ ಇದೆ. ಮೊಟ್ಟೆಯ ಸಂಪೂರ್ಣ ಆರೋಗ್ಯಕರ ಗುಣಗಳು ಸಿಗಬೇಕೆಂದರೆ ಸಂಪೂರ್ಣ ಮೊಟ್ಟೆ ತಿನ್ನುವುದು ಒಳ್ಳೆಯದು. ದಿನದಲ್ಲಿ ಎಷ್ಟು ಮೊಟ್ಟೆ ತಿನ್ನಬಹುದು? ದಿನದಲ್ಲಿ 3 ಮೊಟ್ಟೆ ತಿನ್ನಬಹುದು ಎಂದು ವಿಜ್ಞಾನ ಹೇಳಿದೆ. ಇದಕ್ಕಿಂತ ಅಧಿಕ ತಿನ್ನುವುದು ಆರೋಗ್ಯಕರವಲ್ಲ. ಆದ್ದರಿಂದ ದಿನದಲ್ಲಿ ಒಂದು ಮೊಟ್ಟೆ ನೀವು ತಿನ್ನುತ್ತಿದ್ದರೆ ತಲೆಕೆಡಿಸಿಕೊಳ್ಳದೆ ತಿನ್ನಿ, ಇದರಿಂದ ಆರೋಗ್ಯಕ್ಕೆ ಒಳ್ಳೆಯದೇ ಹೊರತು, ಹಾನಿಯಿಲ್ಲ.


ಜೈಲಿನಿಂದ ತಪ್ಪಿಸಿಕೊಂಡ 400 ಕೈದಿಗಳು :25 ಜನರ ಮಾರಣ ಹೋಮ!

February 28, 2021

 


ಹೈಟಿ ಇಲ್ಲಿನ ಜೈಲಿನಿಂದ 400ಕ್ಕೂ ಅಧಿಕ ಕೈದಿಗಳು ತಪ್ಪಿಸಿಕೊಂಡಿದ್ದು, ಜೈಲಾಧಿಕಾರಿ ಸೇರಿದಂತೆ 25 ಜನರು ಸಾವನ್ನಪ್ಪಿದ್ದಾರೆ ಎಂದು ಹೈಟಿ ಅಧಿಕಾರಿಗಳು ಪ್ರಕಟಿಸಿದ್ದಾರೆ. ಕ್ರೊಯಿಕ್ಸ್-ಡೇಸ್-ಬಾಕಿಟ್ಸ್ ಜೈಲಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅತ್ಯಾಚಾರ, ಅಪಹರಣ ಮತ್ತು ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿ ಬಂಧಿತನಾಗಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್ ಲೀಡರ್ ಅರ್ನೆಲ್ ಜೋಸೆಫ್​ನನ್ನು ಮುಕ್ತಗೊಳಿಸಲು ಈ ರೀತಿ ಮಾಡಲಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ.

60 ಕೈದಿಗಳನ್ನು ಮತ್ತೆ ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕೃತ್ಯ ನಡೆಸಲು ಯಾರು ಕೈದಿಗಳನ್ನು ಸಂಘಟಿಸಿದರು ಮತ್ತು ಏಕೆ ಎಂದು ತನಿಖೆ ನಡೆಸಲು ಅಧಿಕಾರಿಗಳು ಹಲವಾರು ಆಯೋಗಗಳನ್ನು ರಚಿಸಿದ್ದಾರೆ.

ಮೃತ ಜೈಲು ನಿರ್ದೇಶಕನನ್ನು ಪಾಲ್ ಜೋಸೆಫ್ ಹೆಕ್ಟರ್ ಎಂದು ಗುರುತಿಸಲಾಗಿದೆ.

2014ರಲ್ಲಿಯೂ ಇದೇ ಜೈಲಿನಲ್ಲಿದ್ದ 899 ಕೈದಿಗಳ ಪೈಕಿ 300ಕ್ಕೂ ಹೆಚ್ಚು ಕೈದಿಗಳು ತಪ್ಪಿಸಿಕೊಂಡಿದ್ದರು. ಗುರುವಾರ ನಡೆದ ದುರ್ಘಟನೆಯ ಸಂದರ್ಭದಲ್ಲಿ ಜೈಲಿನಲ್ಲಿ 1,542 ಕೈದಿಗಳಿದ್ದರು ಎಂದು ತಿಳಿದುಬಂದಿದೆ.


ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಖಾಲಿ ಹುದ್ದೆ ಶೀಘ್ರ ಭರ್ತಿ: ಸುರೇಶ್‍ ಕುಮಾರ್

February 28, 2021

 


ಬೆಂಗಳೂರು, ಫೆ. 28: ರಾಜ್ಯದಲ್ಲಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಸಂಸ್ಢೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಶಿಕ್ಷಣ ಇಲಾಖೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪಗೆ ಧನ್ಯವಾದ ಅರ್ಪಿಸಿರುವ ಅವರು, ಅನುದಾನಿತ ಶಾಲೆಗಳಲ್ಲಿ ಈಗಾಗಲೇ ಸರಕಾರದಿಂದ ಅನುಮೋದನೆಗೊಂಡು ನೇಮಕಾತಿ ಪ್ರಕ್ರಿಯೆಯು ಇಲಾಖೆ ಹಂತದಲ್ಲಿ ಬಾಕಿಯಿರುವ 173 ಬೋಧಕ ಹುದ್ದೆಗಳು ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದ 257ಬೋಧಕ ಹುದ್ದೆಗಳಿಗೆ ನೇಮಕಾತಿ ಆದೇಶವನ್ನು 2021-22ನೇ ಶೈಕ್ಷಣಿಕ ವರ್ಷ ಪ್ರಾರಂಭಗೊಂಡ ನಂತರ ನೀಡಲು ಆರ್ಥಿಕ ಇಲಾಖೆ ಅನುಮತಿ ನಿಡಿದೆ ಎಂದು ತಿಳಿಸಿದ್ದಾರೆ.


ನಾಲ್ಕು ದಿನದ ಹಿಂದೆ ಮನೆಬಿಟ್ಟು ಓಡಿಹೋದ ಪ್ರೇಮಿಗಳಿಬ್ಬರ ಮೃತದೇಹ ಕಾಡಿನಲ್ಲಿ ಪತ್ತೆ!

February 28, 2021

 


ಹಾವೇರಿ: ಕಾಡಿನಲ್ಲಿ ಪ್ರೇಮಿಗಳಿಬ್ಬರ ಮೃತ ದೇಹ ಪತ್ತೆಯಾಗಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿಯ ವಾಟರ್ ಟ್ಯಾಂಕ್ ಹತ್ತಿರ ಘಟನೆ ನಡೆದಿದ್ದು, ಮೃತ ದೇಹಗಳ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ನೇತ್ರಾ ಬಾಳಿಕಾಯಿ (17) ಹಾಗೂ ಪ್ರವೀಣ ಬಾಗಿಲದ (24) ಮೃತಪಟ್ಟ ಪ್ರೇಮಿಗಳು. ಇದು ಕೊಲೆಯೊ, ಆತ್ಮಹತ್ಯೆಯೊ ಎನ್ನುವುದು ಪೋಲಿಸರ ತನಿಖೆಯಿಂದಲೇ ಪತ್ತೆಯಾಗಬೇಕಿದೆ.

ಮೃತ ಪ್ರೇಮಿಗಳು ಐದಾರು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ಕಳೆದ ನಾಲ್ಕೈದು ದಿನಗಳ ಹಿಂದೆ ಮನೆಯಿಂದ ಓಡಿ ಹೋಗಿದ್ದರು.

ಎರಡು ಮೂರು ದಿನಗಳ ಹಿಂದೆ ವಿಷ ಕುಡಿದು ಮೃತಟ್ಟಿರುವ ಶಂಕೆ ಇದ್ದು, ಸ್ಥಳಕ್ಕೆ ಪೊಲೀಸರ ಭೇಟಿ ಪರೀಶೀಲನೆ ನಡೆಸಿದ್ದಾರೆ.

ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


ಶುಭ ಸುದ್ದಿ: ವರನಿಗೆ 5, ವಧುವಿಗೆ 10 ಸಾವಿರ ರೂ. ಜೊತೆಗೆ ಚಿನ್ನದ ತಾಳಿ - 'ಸಪ್ತಪದಿ' ಯೋಜನೆಯಡಿ ಅರ್ಜಿ ಅಹ್ವಾನ

February 28, 2021

 


ಬಳ್ಳಾರಿ: ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಆಸಕ್ತ ವಧು-ವರರು ಸಾಮೂಹಿಕ ವಿವಾಹ ನಡೆಯುವ ಆಯಾ ದೇವಸ್ಥಾನದ ಕಾರ್ಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ವರನಿಗೆ ಪ್ರೋತ್ಸಾಹಧನ(ಹೂವಿನ ಹಾರ,ಪಂಚೆ,ಶರ್ಟ್ ಮತ್ತು ಶಲ್ಯಗೆ)ವರನ ಉಳಿತಾಯ ಖಾತೆಗೆ 5 ಸಾವಿರ ರೂ. ಜಮಾ ಮಾಡಿಸಲಾಗುವುದು, ವಧುವಿಗೆ ಪ್ರೋತ್ಸಾಹಧನ(ಹೂವಿನ ಹಾರ,ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ)ವಧುವಿನ ಬ್ಯಾಂಕ್ ಉಳಿತಾಯ ಖಾತೆಗೆ 10 ಸಾವಿರ ರೂ. ಜಮಾ ಮಾಡಿಸಲಾಗುವುದು, ವಧುವಿಗೆ ಚಿನ್ನದ ತಾಳಿ, ಎರಡು ಗುಂಡು(ಅಂದಾಜು 8 ಗ್ರಾಂ ತೂಕ) ದೇವಸ್ಥಾನದ ವತಿಯಿಂದ (40 ಸಾವಿರ ರೂ.ಮೌಲ್ಯ) ಖರೀದಿಸಿ ನೀಡಲಾಗುವುದು.

ವಿವಾಹವಾದ ಜೋಡಿಗಳಿಗೆ ದೇವಸ್ಥಾನದ ವತಿಯಿಂದ ವಧು-ವರರಿಗೆ 55 ಸಾವಿರದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಆಸಕ್ತರು ಆಯಾ ದೇವಸ್ಥಾನದಲ್ಲಿ ವಿವಾಹ ನಡೆಯುವ 30 ದಿನಗಳ ಮುಂಚಿತವಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಸಾಮೂಹಿಕ ವಿವಾಹಗಳು ನಡೆಯುವ ದೇವಸ್ಥಾನಗಳ ವಿವರ:

ಹೂವಿನಹಡಗಲಿ ತಾಲೂಕಿನ ಶ್ರೀ ಮೈಲಾರ ಲಿಂಗಸ್ವಾಮಿ ದೇವಸ್ಥಾನ, ಕೊಟ್ಟೂರು ತಾಲೂಕಿನ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ, ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಶ್ರೀ ಉತ್ಸವಾಂಬ ದೇವಸ್ಥಾನದಲ್ಲಿ ಏ.29, ಮೇ 30, ಜೂ.27, ಜುಲೈ 4 ರಂದು ಸಾಮೂಹಿಕ ವಿವಾಹ ನಡೆಯಲಿದೆ.

ಕುರುವತ್ತಿ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏ.25, ಮೇ 21, ಜೂ.17, ಜುಲೈ 1 ರಂದು ಸಾಮೂಹಿಕ ವಿವಾಹ ನಡೆಯಲಿದೆ. ಕುರುಗೋಡು ತಾಲೂಕಿನ ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏ.22, ಮೇ 13, ಜೂ.13, ಜುಲೈ 7 ರಂದು ಸಾಮೂಹಿಕ ವಿವಾಹ ನಡೆಯಲಿದೆ.

ಹೊಸಪೇಟೆ ತಾಲೂಕಿನ ಶ್ರೀ ವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಹಂಪಿದಲ್ಲಿ ಏ.19, ಮೇ 09, ಜೂ.27, ಜುಲೈ 7 ರಂದು ಸಾಮೂಹಿಕ ವಿವಾಹ ನಡೆಯಲಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಈ ಮಹತ್ವಾಕಾಂಕ್ಷಿ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಹೇಳಲಾಗಿದೆ.


ತಂದೆಯ ಎಡವಟ್ಟಿಗೆ ಮಗ ಬಲಿ: ಸೆವೆನ್​ ಅಪ್​ ಎಂದು ತಿಳಿದು ವಿಷ ಕುಡಿದ ಯುವಕ ದುರಂತ ಸಾವು!

February 27, 2021

 


ಹಾವೇರಿ: ಸೆವೆನ್​ ಅಪ್​ ಅಂತ ತಿಳಿದು ವಿಷ ಕುಡಿದ ಯುವಕನೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಸವಣೂರು ತಾಲೂಕಿನ ಚಿಕ್ಕ ಮರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹನುಮಂತ ಲಮಾಣಿ ಮೃತ ದುರ್ದೈವಿ. ಎರಡು ದಿನಗಳ ಹಿಂದೆ ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಲಸಂದೆ ಮತ್ತು ಮೆಕ್ಕೆಜೋಳ ಬೆಳೆಗಳನ್ನು ಕಾಡುವ ಕೀಟಗಳಿಗಾಗಿ ಹನುಮಂತ ತಂದೆ ಕ್ರೀಮಿನಾಶಕ ತಂದಿದ್ದರು. ಬಳಿಕ ಅದನ್ನು ಸೆವನ್ ಅಪ್​ ಬಾಟಲ್​ನಲ್ಲಿ ಶೇಖರಿಸಿ ಇಟ್ಟಿದ್ದರು.

ಸೆವೆನ್ ಅಪ್ ಕುಡಿಯುವುದಕ್ಕೆ ತಂದಿದ್ದಾರೆಂದು ಭಾವಿಸಿ, ಹನುಮಂತ ಕ್ರಿಮಿನಾಶಕವನ್ನು ಧಾವಂತದಲ್ಲಿ ಕುಡಿದಿದ್ದ.

ಆನಂತರವೇ ಅದು ವಿಷ ಎಂದು ಆತನಿಗೆ ತಿಳಿದಿದೆ. ತಕ್ಷಣ ಆತನನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಹನುಮಂತ ಅಸುನೀಗಿದ್ದಾನೆ.

ಅನ್ಯಾಯವಾಗಿ ಪ್ರಾಣ ಕಳೆದುಕೊಂಡ ಹನುಮಂತನನ್ನು ನೆನೆದು ಸಂಬಂಧಿಕರು ರೋಧಿಸುತ್ತಿದ್ದಾರೆ. ಇನ್ನು ಹನುಮಂತು ಎರಡು ತಿಂಗಳ ಹಿಂದಷ್ಟೇ ತಂದೆಯಾಗಿದ್ದ. ಇದೊಂದು ಆಕಸ್ಮಿಕ ಘಟನೆ ಎಂದು ತಂದೆ ಪೋಲಿಸರಿಗೆ ಹೇಳಿಕೆ ನೀಡಿದ್ದು, ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)


ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕರೊನಾ ಸೋಂಕಿನ ಸಂಖ್ಯೆ ಏರಿಕೆ! ಇಂದು ಸೋಂಕಿಗೆ ತುತ್ತಾದವರೆಷ್ಟು?

February 27, 2021

 


ಬೆಂಗಳೂರು: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕರೊನಾ ಸೋಂಕಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣಲಾರಂಭಿಸಿದೆ. ಹಲವು ವಾರಗಳ ನಂತರ ಇದೀಗ ಸತತ ಎರಡನೇ ದಿನ 500ಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿವೆ.

ಶನಿವಾರದಂದು ಕರ್ನಾಟಕದಲ್ಲಿ 523 ಕರೊನಾ ಪ್ರಕರಣಗಳು ದೃಢವಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 9,50,730ಕ್ಕೆ ಏರಿಕಯಾಗಿದೆ. ಇದರಲ್ಲಿ 9,32,747 ಮಂದಿ ಗುಣಮುಖರಾಗಿದ್ದು, 5,638 ಸಕ್ರಿಯ ಪ್ರಕರಣಗಳ ಬಾಕಿಯುಳಿದಿವೆ. ಇಂದು ಒಂದೇ ದಿನ 380 ಜನರು ಗುಣಮುಖರಾಗಿರುವ ವರದಿ ಬಂದಿದೆ. ಸದ್ಯ ಸಕ್ರಿಯವಿರುವ ಪ್ರಕರಣಗಳಲ್ಲಿ 121 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಆರು ಮಂದಿ ಕರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಈ ಮೂಲದ ರಾಜ್ಯಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ 12,326ಕ್ಕೆ ಏರಿಕೆಯಾಗಿದೆ.

ಇಂದು ದೃಢವಾದ ಪ್ರಕರಣಗಳಲ್ಲಿ ಅತಿ ಹೆಚ್ಚು (329) ಪ್ರಕರಣಗಳು ಬೆಂಗಳೂರಿನದ್ದಾಗಿದೆ. ಉಳಿದಂತೆ ಮೈಸೂರಿನಲ್ಲಿ 31, ದಕ್ಷಿಣ ಕನ್ನಡದಲ್ಲಿ 21, ಉಡುಪಿಯಲ್ಲಿ 18, ಕಲಬುರಗಿಯಲ್ಲಿ 17, ಬೆಳಗಾವಿಯಲ್ಲಿ 13 ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್​)ಪಿಸ್ತೂಲು ಹೇಗೆ ವರ್ಕ್​ ಆಗುತ್ತದೆಯೆಂದು ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್

February 27, 2021

 


ಲಖನೌ: ಕೆಲವು ವಸ್ತುಗಳೊಂದಿಗೆ ಹುಡುಗಾಟ ಸಲ್ಲ ಎಂದು ಹೇಳುತ್ತಾರೆ. ಆದರೆ ಆ ಮಾತನ್ನು ಪರಿಗಣಿಸದೆಯೇ ಪಿಸ್ತೂಲಿನೊಂದಿಗೆ ಹುಡುಗಾಟ ಮಾಡಲು ಹೋದ ವ್ಯಕ್ತಿಯೊಬ್ಬ ತನ್ನ ಸೋದರ ಅಳಿಯನಿಗೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ.

ಎರಡು ಮೂರು ಜನರು ಗದ್ದೆ ಭಾಗದಲ್ಲಿ ಕುಳಿತುಕೊಂಡು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಅವರ ಬಳಿ ಇದ್ದ ಕಂಟ್ರಿ ಮೇಡ್ ಪಿಸ್ತೂಲನ್ನೂ ಹೊರತೆಗೆದಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಒಬ್ಬ ತನ್ನ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಪಿಸ್ತೂಲು ಹೊರತೆಗೆದ ವ್ಯಕ್ತಿ ಅದಕ್ಕೆ ಬುಲೆಟ್​ ಹಾಕಿ ಅದನ್ನು ವಿಡಿಯೋ ಮಾಡುತ್ತಿದ್ದವನತ್ತ ಗುರಿ ಮಾಡಿ ತಕ್ಷಣ ಶೂಟ್​ ಮಾಡಿಬಿಟ್ಟಿದ್ದಾನೆ. ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಅಲ್ಲೇ ಕುಸಿದುಬಿದ್ದಿದ್ದಾನೆ.

ಶೂಟ್​ ಮಾಡಿದವ ಮತ್ತು ಮೃತನಾದ ವ್ಯಕ್ತಿ ಸೋದರ ಮಾವ ಅಳಿಯ ಸಂಬಂಧಿಗಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಪ್ರಕರಣದಲ್ಲಿ ಶೂಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಬೇಕೆಂದು ಮಾಡದ ಕೃತ್ಯವೆನ್ನುವುದು ವಿಚಾರಣೆ ವೇಳೆ ಹೊರಬಿದ್ದಿದೆ. (ಏಜೆನ್ಸೀಸ್​)

ವೀಡಿಯೋ ಪೂರ್ತಿ ನೋಡಿ 

https://twitter.com/VVani4U/status/1365607665091584000?ref_src=twsrc%5Etfw%7Ctwcamp%5Etweetembed%7Ctwterm%5E1365607665091584000%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಹಲಸಿನ ಹಣ್ಣಿನಿಂದ ಈ ಹತ್ತು ಲಾಭಗಳನ್ನು ಪಡೆದುಕೊಳ್ಳಿ

February 26, 2021

 


ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ಎಲ್ಲರೂ ಇಷ್ಟ ಪಟ್ಟು ತಿನ್ನುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಆಗುವ ಹಲಸು ಗಾತ್ರದಲ್ಲಿ ಬಹಳ ದೊಡ್ಡದಾಗಿ ಇರುತ್ತದೆ. ಈ ಹಣ್ಣು ಹೇಗೆ ಗಾತ್ರದಲ್ಲಿ ದೊಡ್ಡ ಸ್ಥಾನವನ್ನು ಪಡೆದುಕೋಂಡಿದೆಯೋ ಹಾಗೆ ಆರೋಗ್ಯದ ವಿಷಯದಲ್ಲೂ ಕೂಡ ಬಹು ಮಹತ್ತರದ ಸ್ಥಾನವನ್ನು ಪಡೆದುಕೊಂಡಿದೆ. ಕೆಲವರು ಈ ಹಣ್ಣನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ಉಂಟಾಗತ್ತೆ ಅಂತ ಹೇಳ್ತಾರೆ. ನಿಜ ಯಾವುದನ್ನೇ ಆದರೂ ಮಿತಿ ಮೀರಿ ಅಗತ್ಯಕ್ಕಿಂತ ಹೆಚ್ಚು ತಿಂದರೆ, ತೊಂದರೆಗಳು ಕಾಡುವುದು ಸಹಜ. ಆದರೆ ಮಿತಿಯಲ್ಲಿ ತಿಂದರೆ ಆರೋಗ್ಯಕ್ಕೆ ಅತ್ಯುತ್ತಮ. ಹಲಸಿನ ಹಣ್ಣು ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣು ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಇದು ಹೆಚ್ಚಾಗಿ ಉಷ್ಣ ವಲಯದಲ್ಲಿ ಬೆಳೆಯುತ್ತೆ. ಹಲಸಿನ ಹಣ್ಣು, ಕಾಯಿ, ಬೀಜ ಎಲ್ಲವೂ ಆಹಾರ ಪದಾರ್ಥಗಳ ಬಳಕೆಗೆ ಬರುತ್ತವೆ.

ಇದರಲ್ಲಿ ಸಮೃದ್ಧವಾದ ಸಪೋನಿಯಂ, ಲಿಜ್ಞಾನ್ಸ್, ಐಸೋಪ್ಲ್ಯಾವೇನನ್ ಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್ ಜೀವ ಕೋಶಗಳು ರಾಡಿಕಲ್ ಜೀವಕೋಶಗಳನ್ನು ತೆಗೆಯಲು ಸಹಾಯಕಾರಿ.

ನಿಯಮಿತ ಸೇವನೆಯಿಂದ ಹೊಟ್ಟೆ ಹುಣ್ಣು, ಎಂಡೋಮೆಟ್ರಿಯಲ್ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆಗಳು ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಫೈಬರ್ ಅಂಶ ಹೆಚ್ಚು ಇರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ. ಹಲಸಿನ ಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿದರೆ ಮುಖದ ಹಲವಾರು ಸಮಸ್ಯೆಗಳು ನಿವಾರಣೆ ಆಗುತ್ತವೆ. ಹೀಗೆ ಅದ್ಭುತ ಆರೋಗ್ಯ ಗುಣಗಳನ್ನು ಹೊಂದಿರುವ ಈ ಹಲಸಿನ ಹಣ್ಣು ನಮ್ಮ ಆರೋಗ್ಯವನ್ನು ಹೇಗೆ ಸುಧಾರಿಸತ್ತೆ ಅನ್ನೋದನ್ನ. ನೋಡೋಣ.

ಮೊದಲಿಗೆ ಹಲಸಿನ ಹಣ್ಣು ಮನಮ್ಮ ದೇಹದ ಚರ್ಮವನ್ನು ಆರೋಗ್ಯವಾಗಿ ಕಾಲಾಡುವಲ್ಲಿ ಅತ್ಯುತ್ತಮ ಸಹಾಕಾರವನ್ನು ನೀಡುತ್ತದೆ. ಇದರ ಸೇವನೆಯಿಂದ ಚರ್ಮದ ಸುಕ್ಕನ್ನು ತೆಗೆದು ನೈಸರ್ಗಿಕ ಹೊಳಪನ್ನು ಪಡೆಯಬಹುದು. ಚರ್ಮಕ್ಕೆ ಸಂಭಂಧಿಸಿದ ಅನೇಕ ಸಮಸ್ಯೆಗಳನ್ನು ಇದು ನಿವಾರಣೆ ಮಾಡುತ್ತದೆ. ತಣ್ಣಗಿನ ಹಾಲಿನಲ್ಲಿ ಹಲಸಿನ ಹಣ್ಣಿನ ಸೊಳೆಗಳನ್ನು ನೆನೆಸಿಟ್ಟು ನಂತರ ರುಬ್ಬಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಸುಕ್ಕು ಗಟ್ಟಿದ ಜಾಗಕ್ಕೆ ಹಚ್ಚುವುದರಿಂದ 6 ದಿನಗಳಲ್ಲಿ ಪರಿಣಾಮಕಾರಿ ಅಂಶ ದೊರೆಯುತ್ತದೆ. ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು. ಶುಷ್ಕವಾಗಿರುವ ಹಲಸಿನ ಹಣ್ಣಿನ ಬೀಜವನ್ನು ಜೇನುತುಪ್ಪದಲ್ಲಿ ನೆನೆಸಿಟ್ಟು ನಂತರ ಪೇಸ್ಟ್ ಮಾಡಿ ನಿಯಮಿತವಾಗಿ ಇದನ್ನ ಮುಖಕ್ಕೆ ಲೇಪಿಸುವುದರಿಂದ ವಯಸ್ಸಾದ ಕಲೆಯನ್ನು ಇದು ಹೋಗಲಾಡಿಸುತ್ತದೆ. ಹಲಸಿನ ಹಣ್ಣು ಉತ್ತಮ ಪ್ರೊಟೀನ್ ನ ಮೂಲ. ನಾವು ದಿನ ನಿತ್ಯ ಸೇವಿಸುವ ಫ್ರೂಟ್ ಸಲಾಡ್, ಆಹಾರ ಉಪಹಾರಗಳಲ್ಲಿ ಹಲಸಿನ ಹಣ್ಣನ್ನು ಸೇರಿಸಿ ಸೇವಿಸಿದರೆ ಉತ್ತಮ.

ಇದನ್ನು ಉಷ್ಣ ವಲಯದಲ್ಲಿ ಬೆಳೆಯುವುದರಿಂದ ಅತ್ಯಂತ ಪ್ರೊಟೀನ್ ಗಳನ್ನು ಒಳಗೊಂಡು ಇರತ್ತೆ. ಹಸಿವಾದಾಗ ತಿನ್ನಲು ಅತ್ಯುತ್ತಮ ಆಹಾರ. ನಿಯಮಿತ ಸೇವನೆಯಿಂದ ದೇಹಕ್ಕೆ ಪ್ರೊಟೀನ್ ಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೇ ಕೂದಲಿನ ಆರೋಗ್ಯಕ್ಕೆ, ಕೂದಲ ನೈಸರ್ಗಿಕ ಬೆಳವಣಿಗೆಗೆ, ರಕ್ತ ಪರಿಚಲನೆಗೆ ಅಗತ್ಯವಾಗಿ ಇರತ್ತೆ. ರಕ್ತ ಪರಿಚಲನೆಯನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಹಲಸಿನ ಬೀಜ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತದೆ. ನೈಸರ್ಗಿಕವಾಗಿ ಒಂದಿಷ್ಟು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿತ್ಯವೂ ಒಂದಿಷ್ಟು ಹಲಸಿನ ಸೊಳೆಯನ್ನು ತಿನ್ನುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇದ್ದು, ಕೇಶ ರಾಶಿ ಬೆಳೆಯಲು ಉತ್ತಮ ಸಹಾಯಕಾರಿ. ಹಲಸಿನ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ದ್ವಿಗುಣ ಗೊಳಿಸಿ ಸಾಮಾನ್ಯವಾಗಿ ಕಾಡುವ ಶೀತ, ನೆಗಡಿ, ಜ್ವರ ಕೆಮ್ಮುಗಳನ್ನು ತಡೆದು ದೇಹದ ಸುತ್ತ ವೈರಸ್ ಉಳಿಯದಂತೆ ರಕ್ಷಣೆ ನೀಡುತ್ತದೆ.

ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟ್ ಇರುವುದರಿಂದ ಇದರ ಸೇವನೆಯು ಯಾವುದೇ ರೀತಿಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ. ಅತ್ಯುತ್ತಮ ನೈಸರ್ಗಿಕ ಆಹಾರ ಇದಾಗಿದೆ . ಇನ್ನೂ ಹಲಸಿನ ಹಣ್ಣಿನ ವಿವಿಧ ಆಂಟಿ ಆಕ್ಸಿಡೆಂಟ್ ಗಳು ಚರ್ಮ ಸುಕ್ಕುಗಟ್ಟದಂತೆ ತಡೆದು ವೃದ್ಧಾಪ್ಯವನ್ನು, ಚರ್ಮ ಕಾಂತಿ ಕಳೆದುಕೊಳ್ಳುವುದನ್ನು ತಡೆಯುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ಧ್ರತೆ ಮತ್ತು ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ಮುಖಕ್ಕೆ ಕೋಮಲತೆ ನೀಡುವ ಮೂಲಕ ಬಹಳ ವರ್ಷಗಳವರೆಗೆ ತಾರುಣ್ಯ ಕಾಪಾಡಲು ಸಹಾಯ ಮಾಡುತ್ತದೆ. ರಕ್ತದ ಒತ್ತಡವನ್ನು ಇದು ನಿಯಂತ್ರಿಸುತ್ತದೆ. ಪೊಟ್ಯಾಶಿಯಂ ಅಂಶವು ದೇಹದಲ್ಲಿ ಇರುವ ಸೋಡಿಯಂ ಮಟ್ಟವನ್ನು ಕಡಿಮೆ ಗೊಳಿಸುವುದರಿಂದ ನಮ್ಮ ದೇಹದ ರಕ್ತದ ಒತ್ತಡ ಸಮ ಪ್ರಮಾಣದಲ್ಲಿ ಇರುತ್ತದೆ. ಅಷ್ಟೇ ಅಲ್ಲದೆ ಹೃದಯಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ಸಹ ಇದು ತಡೆಗಟ್ಟುತ್ತದೆ. ಸೂಕ್ತ ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ. ಉತ್ತಮ ನಾರಿನ ಅಂಶ ಹಿಂದಿದ್ದು ಜೀರ್ಣ ಪ್ರಕ್ರಿಯೆಯನ್ನು ಸರಾಗ ಗೊಳಿಸುತ್ತದೆ. ಮಲಬದ್ಧತೆಯನ್ನು ಸಹ ತಡೆಯುತ್ತದೆ. ಸರಿಯಾದ ಚಯಾಪಚಯ ಕ್ರಿಯೆಗೆ ಉತ್ತೇಜಿಸಿ, ಕರುಳಿಗೆ ಸಂಬಂಧಿಸಿದ ಅಪಾಯವನ್ನು ತಡೆಯಲು ಸಹ ಸಹಾಯಕಾರಿ ಆಗಿದೆ. ಅಷ್ಟೇ ಅಲ್ಲದೇ ಹೊಟ್ಟೆಯ ಹುಣ್ಣು ಕೂಡಾ ಉಂಟಾಗದಂತೆಯೇ ಇದು ಕಾಪಾಡುತ್ತದೆ. ಮುಖದ ನೆರಿಗೆಗಳನ್ನ ದೂರ ಮಾಡಲು ಹಲಸಿನ ಹಣ್ಣು ಸಹಾಯ ಮಾಡುತ್ತದೆ. ಹಲಸಿನ ಹಣ್ಣಿನ ಸೊಳೆಯನ್ನು ತೆಗೆದು ಪೇಸ್ಟ್ ಮಾಡಿ ಅದನ್ನ ಹಾಲಿನ ಜೊತೆ ಮಿಕ್ಸ್ ಮಾಡಿ ಹಚ್ಚಿಕೊಳ್ಳುವುದರಿಂದ ಮುಖದಲ್ಲಿನ ನೆರಿಗೆಗಳು ಮಾಯ ಆಗುತ್ತವೆ. ತ್ವಚೆಯ ಮೇಲೆ ಆಗುವ ಗಾಯಗಳನ್ನೂ ಸಹ ಹಲಸಿನ ಹಣ್ಣು ಹೋಗಲಾಡಿಸುತ್ತದೇ. ಹಲಸಿನ ಹಣ್ಣಿನ ಪೇಸ್ಟ್ ಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಗಾಯದ ಮೇಲೆ ಹಚ್ಚುವುದರಿಂದ ಸ್ವಲ್ಪ ಸಮಯದಲ್ಲೇ ಅದರ ಬದಲಾವಣೆ ಕಂಡುಬರುತ್ತದೆ. ಹೀಗೆ ಹಲಸಿನ ಹಣ್ಣಿನಿಂದ ಇನ್ನೂ ಅನೇಕ ಪ್ರಯೋಜನಗಳು ಇವೆ.


ಬಿ ಎಸ್ ಯಡಿಯೂರಪ್ಪ ಅವರ ಸಾಧನೆಯ ಹಾದಿ ಬೂಕನಕೆರೆ ಟು ವಿಧಾನಸೌಧ:ಹುಟ್ಟು ಹಬ್ಬದ ವಿಶೇಷ

February 26, 2021


 ರಾಜ್ಯದ 4ನೇ ಬಾರಿ ಮುಖ್ಯಮಂತ್ರಿಯಾಗಿರುವ ಹೆಮ್ಮೆಯ ರಾಜಕಾರಣಿ ಬಿ,ಎಸ್ ಯಡಿಯೂರಪ್ಪ ನವರ 79 ನೇ ಜನ್ಮದಿನ ಇಂದು. ರಾಜಕೀಯದಲ್ಲಿ ಅತ್ಯಂತ ಪರಿಣಿತಿ ಹೊಂದಿರುವಂತಹ ಬಿ ಎಸ್ ಯಡಿಯೂರಪ್ಪನವರ ಬಾಲ್ಯದ ಜೀವನ ಸ್ಫೂರ್ತಿಯ ಚಿಲುಮೆಯಾಗಿತ್ತು , ಕಷ್ಟಗಳ ನಡುವೆ ಮೂಡಿದ ಅವರ ಬದುಕಿನಲ್ಲಿ , ಶಿಸ್ತು, ಸಮ್ಯಮ , ಶ್ರದ್ಧೆ ಇತ್ತು. ಅವರು ನಡೆದ ಹಾದಿಯಲ್ಲಿ ಹಲವು ಮೈಲಿಗಲ್ಲು , ಸೃಷ್ಟಿಯಾಗಿವೆ . ಪ್ರತೀ ಹೆಜ್ಜೆಯಲ್ಲೂ ರೋಚಕ ತಿರುವುಗಳಿವೆ . ಸವಾಲುಗಳನ್ನು ಹಿಂದಿಕ್ಕಿದ ಪರಿಯಲ್ಲಿ ಕ್ರೀಡ ಮನೋಭಾವವಿದೆ.

ಯಡಿಯೂರಪ್ಪನವರ ಕರ್ಮಭೂಮಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಾದರೆ ಅವರ ಜನ್ಮಭೂಮಿ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಭೂಕನಕೆರೆ ಗ್ರಾಮ ಎಂಬುದು ಎಲ್ಲರಿಗೂ ಗೊತ್ತೆ ಇದೆ ಇವರ ತಂದೆ ಸಿದ್ದಲಿಂಗಯ್ಯ ತಾಯಿ ಶ್ರೀಮತಿ ಪುಟ್ಟ ತಾಯಮ್ಮನವರಿಗೆ 1943ರ ಫೆಬ್ರವರಿ 27 ರಂದು ಜನಿಸಿದ ಸುಪುತ್ರ ಯಡಿಯೂರಪ್ಪನವರು ತನ್ನ 4ನೇ ವಯಸ್ಸಿಗೆ ತಾಯಿಯವರನ್ನೂ ಕಳೆದು ಕೊಂಡರು,ನಂತರ ಅವರು ಮಂಡ್ಯ ಪೇಟೆ ಬೀದಿಯಲ್ಲಿ ತಾತ ಅಂದರೆ ತಾಯಿಯ ತಂದೆ ಸಂಗಪ್ಪ ರವರ ಆಶ್ರಯದಲ್ಲಿ ಬೆಳೆದ ಅವರ ರೀತಿ ಸೋಜಿಗವಾಗಿತ್ತು.

ಇವರ ಪ್ರಾಥಮಿಕ ಶಿಕ್ಷಣವನ್ನು ಪೇಟೆ ಬೀದಿಯಲ್ಲಿರುವಂತಹ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿ , ಪ್ರೌಢ ಶಿಕ್ಷಣ ಹಾಗೂ ಪಿಯುಸಿ ಯನ್ನು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮುನ್ಸಿಪಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು . ಶಾಲಾ - ಕಾಲೇಜು ದಿನಗಳಲ್ಲೇ ಅವರು RSS ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು , ಇನ್ನೂ ಯಡಿಯೂರಪ್ಪನವರು ಕಬ್ಬಡ್ಡಿ ಆಟದಲ್ಲಿ ಪ್ರಸಿದ್ಧಿ ಪಡೆದಿದ್ದರು , ಭಾರತ್ ಕಬಡ್ಡಿ ತಂಡದಲ್ಲಿ ಅವರು ಆಡುತ್ತಿದ್ದ ಆಟ ನೋಡಲು ಅಕ್ಕ-ಪಕ್ಕದ ಹಳ್ಳಿಗಳ ಕ್ರೀಡಾಪ್ರೇಮಿಗಳು ಬಂದು ಸೇರುತ್ತಿದ್ದರು .ಇನ್ನೂ 1972 ರಲ್ಲಿ ಶಿಕಾರಿ ಪುರದ ವೀರಭದ್ರ ಶಾಸ್ತ್ರಿ ಶಂಕರ್ ರವರ ಮಗಳಾದ ಮೈತ್ರಾ ದೇವಿಯವರನ್ನು ವಿವಾಹ ವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಮೊದಲ ಬಾರಿಗೆ ಯಡಿಯೂರಪ್ಪ ರಾಜ್ಯದ ಉಪ ಮುಖ್ಯಮಂತ್ರಿಯಾಗಿ , ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿ, ದಶಕಗಳ ಹೋರಾಟದ ನಂತರ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಸಿಹಿ ಉಂಡಿತ್ತು. ನಂತರ 2007.ನ.12 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿ ಅಧಿಕಾರವನ್ನು ತಮ್ಮ ಮುಡಿಗೇರಿಸಿಕೊಂಡರು.

ಹಾಗೆಯೇ ದಕ್ಷಿಣ ಭಾರತದ ಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆದರೆ ಇವರ ಮುಖ್ಯಮಂತ್ರಿ ಸ್ಥಾನವನ್ನು ಕೇವಲ 7 ದಿನಗಳಲ್ಲಿ ಕಳೆದುಕೊಂಡರು ಕಾರಣ,ಸಚಿವರಿಗೆ ಖಾತೆ ಹಂಚಿಕೆ ವೇಳೆ ಮತ್ತೆ ಉಲ್ಭಣಗೊಂಡ ಭಿನ್ನಮತದಿಂದಾಗಿ ಮೈತ್ರಿ ಸರ್ಕಾರ ಅದೇ ವರ್ಷ ಭಿನ್ನಮತ ವಾಗಿದ್ದರಿಂದ .ಆದರೆ ಅಧಿಕಾರ ಕಳೆದು ಕೊಂಡು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿತ್ವ ಯಡಿಯೂರಪ್ಪನವರದಲ್ಲ ಎಂಬುವುದನ್ನು ಇತಿಹಾಸವೇ ಸಾರಿ ಹೇಳುತ್ತದೆ.

ಯಡಿಯೂರಪ್ಪ ಬೆಳೆದು ಬಂದ ಹಾದಿ

1943- ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನನ

1965- ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರವೇಶ. ಶಿಕಾರಿಪುರಕ್ಕೆ ಆಗಮನ

1967 - ವೈವಾಹಿಕ ಜೀವನಕ್ಕೆ ಪದಾರ್ಪಣೆ

1975- ರಾಜಕೀಯ ಪ್ರವೇಶ, ಶಿಕಾರಿಪುರ ಪುರಸಭಾ ಸದಸ್ಯರಾಗಿ ಆಯ್ಕೆ

1975- ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. 45 ದಿನಗಳ ಜೈಲುವಾಸ

1977 - ಶಿಕಾರಿಪುರ ಪುರಸಭಾ ಅಧ್ಯಕ್ಷಗಾದಿ

1980- ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಗಿ ಆಯ್ಕೆ

1981- ಜೀತ ವಿಮುಕ್ತಿ ಹೋರಾಟದ ನಾಯಕತ್ವ, ಪಾದಯಾತ್ರೆ

1983- ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶ

1985- ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ರಾಗಿ ಆಯ್ಕೆ

1988- ಬಿಜೆಪಿಯ ರಾಜ್ಯ ಅಧ್ಯಕ್ಷ

1992- ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆ

1994- ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆ

1999- ವಿಧಾನಸಭಾ ಚುನಾವಣೆಯಲ್ಲಿ ಪರಾಭವ

2000- ವಿಧಾನ ಪರಿಷತ್ಗೆ ಆಯ್ಕೆ

2003- ಬಗರ್ಹುಕುಂ ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ

2004- 5ನೇ ಬಾರಿಗೆ ವಿಧಾನಸಭೆ ಪ್ರವೇಶ, ಪ್ರತಿಪಕ್ಷ ದ ನಾಯಕನಾಗಿ ಆಯ್ಕೆ

2006- ಉಪ ಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಣೆ

2007- ನವೆಂಬರ್- ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ. ಜೆಡಿಎಸ್ ಕೈಕೊಟ್ಟಿದ್ದರಿಂದ ರಾಜೀನಾಮೆ.

2008- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

2011ಧಿ- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

2012- ಬಿಜೆಪಿ ತೊರೆದು ಕೆಜೆಪಿ ಸ್ಥಾಪನೆ

2013- ಕೆಜೆಪಿಗೆ ಸಿಗದ ಜನತೆಯ ಮನ್ನಣೆ, ಮತ್ತೆ ಬಿಜೆಪಿ ಪ್ರವೇಶ

2014- ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ

2014- ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ

2016- ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಾರಿ ಆಯ್ಕೆ

2018- 3ನೇ ಬಾರಿಗೆ ಸಿಎಂ ಆಗಿ ಪ್ರಮಾಣ, ಬಹುಮತ ಸಾಬೀತುಪಡಿಸಲಾಗದೆ ಅಧಿಕಾರ ತ್ಯಾಗ

2019 ಜು.25- ರಾಜ್ಯದ ಮುಖ್ಯಮಂತ್ರಿಯಾಗಿ 4ನೇ ಬಾರಿಗೆ ಅಧಿಕಾರ ಸ್ವೀಕಾರ

ಯಡಿಯೂರಪ್ಪ ಅಧಿಕಾರಾವಧಿಯ ಪ್ರಮುಖ ಯೋಜನೆಗಳು

- ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ 'ವಿಷನ್ - 2020' ಯೋಜನೆ

- ಬಡ ಹೆಣ್ಣು ಮಕ್ಕಳಿಗಾಗಿ ಭಾಗ್ಯ ಲಕ್ಷ್ಮಿ ಬಾಂಡ್

- ಪ್ರೌಢ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ

- ಹಾಲಿಗೆ ಹೆಚ್ಚುವರಿ ಪ್ರೋತ್ಸಾಹ ಧನ

- ಉದ್ಯೋಗ ತರಬೇತಿ ಆಯೋಗ ರಚನೆ

- ಸಂಧ್ಯಾ ಸುರಕ್ಷಾ ಯೋಜನೆ

- ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್

- ಶೇ.1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ

-ಸಾವಯವ ಕೃಷಿ ಮಿಷನ್ ಆರಂಭ

- ಸೆಮಿ ಕಂಡಕ್ಟರ್ ನೀತಿ ಜಾರಿಗೆ ತಂದ ಮೊದಲ ಸಿಎಂ

- ಒಣಭೂಮಿ ಕೃಷಿಗೆ ಭೂಚೇತನ ಯೋಜನೆ

- ರೈತರಿಗೆ ಇಸ್ರೇಲ್ ಹಾಗೂ ಚೀನಾ ಪ್ರವಾಸ

- ಎಲ್ಲ ಜಿಲ್ಲೆಗಳಲ್ಲೂ ಜನಸ್ಪಂದನ ಕಾರ್ಯಕ್ರಮ

ಹೀಗೆ ತನ್ನದೇ ಚಾತುರ್ಯದಿಂದ ರಾಜಕೀಯಕ್ಕೆ ಪ್ರವೇಶಿಸಿದ, ಬಿ ಎಸ್ ಯಡಿಯೂರಪ್ಪ ನವರ ಆಡಳಿತ ಇನ್ನೊಬ್ಬರಿಗೆ ಸ್ಫೂರ್ತಿಯಾಗುವಂತದ್ದು , 4 ನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಹಠವಾದಿ ರಾಜಕಾರಣಿ, ರೈತ ಹೋರಾಟದಿಂದ ಬಂದು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ ಸಾರಥಿ , ಹಂತ-ಹಂತವಾಗಿ ಸೋಲು-ಗೆಲುವು ಎರಡನ್ನು ಕಂಡ ರಣಧೀರ ಮುಖ್ಯಮಂತ್ರಿ ಯಡಿಯೂರಪ್ಪನವರು , ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೇಬೇಕು, ಬಿಜೆಪಿ ಪಕ್ಷ ಆಳ್ವಿಕೆ ಮಾಡಬೇಕು ಅನ್ನುವ ಕನಸು ಹೊಂದಿದಂತಹ ಹಠವಾದಿ, & ತನ್ನ ಕನಸನ್ನು ಈಡೇರಿಸಿಕೊಂಡ ದಿಟ್ಟ ವೀರ ಅಂತ ಹೇಳಿದರೆ ತಪ್ಪಾಗಲಾರದು


ಆಲೂ ಚಿಪ್ಸ್ ಹೆಚ್ಚು ತಿನ್ನುವುದರಿಂದ ಆಗುವ ಅಪಾಯಗಳು ಯಾವುವು ಗೊತ್ತೇ?

February 26, 2021

 


ಫ್ರೆಂಚ್ ಫ್ರೈಸ್ ಅಥವಾ ಆಲೂ ಚಿಪ್ಸ್ ತುಂಬಾ ರುಚಿಕರವಾಗಿರುತ್ತದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಯುವಕರು ,ಮಕ್ಕಳು ಹೆಚ್ಚಾಗಿ ತಿನ್ನುತ್ತಿದ್ದಾರೆ. ಅವು ಎಷ್ಟೇ ರುಚಿಯಾಗಿರಲಿ , ನೀವು ಸ್ವಲ್ಪ ತಿಂದರೆ ಅಡ್ಡಿಯಿಲ್ಲ, ಆದರೆ ಅದನ್ನೇ ಹೆಚ್ಚಾಗಿ ತಿಂದರೆ ವಿವಿಧ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.

ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ 4,500 ಜನರ ಮೇಲೆ ಅಧ್ಯಯನ ಮಾಡಲಾಯಿತು. ಫ್ರೆಂಚ್ ಚಿಪ್ಸ್ ಗಳಂತಹ ಕುರುಕಲು ತಿಂಡಿಗಳಿಗೆ ವಾರಕ್ಕೆ ಎರಡು ಬಾರಿ ಸೇವಿಸಿದವರು ಸಾಯುವ ಅಪಾಯವನ್ನು ಹೊಂದಿರುವುದು ಕಂಡುಬಂದಿದೆ. ಕಾರಣವೆಂದರೆ … ಆಲೂಗಡ್ಡೆ ಬೇಯಿಸಲು ಬಳಸುವ ತೈಲಗಳು ಜೀವಕ್ಕೆ ಅಪಾಯಕಾರಿ ಎಂದು ಕಂಡುಬಂದಿದೆ.

ಆಲೂ ಚಿಪ್ಸ್ ಹೆಚ್ಚು ತಿನ್ನುವುದರಿಂದ ಏನೆಲ್ಲ ಕಾಯಿಲೆಗಳು ಬರುತ್ತವೆ ನೋಡೋಣ ಬನ್ನಿ..

ಹರಿಯಾಣದ ಕರ್ನಲ್ ನಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ: ಓರ್ವ ಸಾವು

ಹೊಟ್ಟೆ ನೋವು: ಕಾರ್ಬ್ಸ್ ಮತ್ತು ಪ್ರೋಟೀನ್‌ಗಳಿಗೆ ಹೋಲಿಸಿದರೆ ಕೊಬ್ಬುಗಳು ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತವೆ. ಕೊಬ್ಬಿನ ಅಂಶ ಇರುವ ಆಲೂಗೆಡ್ಡೆ ಚಿಪ್ಸ್ ತ್ವರಿತವಾಗಿ ಜೀರ್ಣವಾಗುವುದಿಲ್ಲ. ಕರಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ನೋವು ಉಂಟಾಗುತ್ತದೆ.

ಹೃದಯದ ಅಪಾಯ: ನಮ್ಮ ದೇಹದಲ್ಲಿ ಪ್ರಮುಖ ಅಂಗ ಹೃದಯ. ಈ ಚಿಪ್‌ಗಳಲ್ಲಿನ ಹೆಚ್ಚು ಕೊಬ್ಬು ಇದೆ. ಇದರಿಂದ ಹೃದಯಕ್ಕೆ ರಕ್ತ ಪೂರೈಕೆ ಸರಿಯಾಗಿ ಹರಿಯುವುದಿಲ್ಲ.ಹೃದಯಾಘಾತದ ಅಪಾಯವೂ ಉಂಟಾಗುತ್ತದೆ. ತಮ್ಮ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಟ್ರಾನ್ಸ್ ಕೊಬ್ಬನ್ನು ಹೊಂದಿರುವ ಜನರು ಆಲ್ಝೈಮರ್ ಅಥವಾ ಬುದ್ಧಿಮಾಂದ್ಯತೆಯಂತಹ ಕಾಯಿಲೆಗಳನ್ನು ತುತ್ತಾಗಬಹುದು.

ರೋಗನಿರೋಧಕ ಶಕ್ತಿ: ಕರೋನಾ ಬಂದಾಗ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾವೆಲ್ಲರೂ ಶ್ರಮಿಸುತ್ತೇವೆ. ಇಂತಹ ಚಿಪ್ಸ್ ಅನ್ನು ನಾವು ಹೆಚ್ಚಾಗಿ ತಿನ್ನುತ್ತಿದ್ದರೆ … ಹೆಚ್ಚಿದ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತದೆ. ದೇಹದಲ್ಲಿನ ಕೊಬ್ಬು ಕೆಟ್ಟ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಪರಿಣಾಮವಾಗಿ ನಾವು ವಿವಿಧ ರೋಗಗಳಿಗೆ ತುತ್ತಾಗುತ್ತೇವೆ.

ಅಧಿಕ ತೂಕದ ಸಮಸ್ಯೆ: ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತಿದ್ದರೆ ತೂಕ ಹೆಚ್ಚಾಗುತ್ತದೆ. ನಂತರ ತೂಕ ಇಳಿಸಿಕೊಳ್ಳುವುದು ಕಷ್ಟವಾಗುತ್ತದೆ. ದಿ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನ ಅಧ್ಯಯನದ ಪ್ರಕಾರ, ಕರಿದ ಆಹಾರವನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವ ಅಪಾಯ ಹೆಚ್ಚಾಗುತ್ತದೆ.


ಶೀತ, ಕೆಮ್ಮು ಮಾತ್ರವಲ್ಲ ಸ್ನಾಯು ನೋವು, ನಿಶ್ಯಕ್ತಿ, ತಲೆಸುತ್ತಿವಿಕೆಯೂ ಕೊರೋನಾದ ಲಕ್ಷಣವಾಗಿದೆ ಎಚ್ಚರ : ಸಂಶೋಧನೆ

February 25, 2021


 ಸ್ಪೆಷಲ್ ಡೆಸ್ಕ್ : ಹೊಸ COVID ರೂಪಾಂತರ ವೈರಸ್ ಬಗ್ಗೆ ಪ್ರಶ್ನೆಗಳು ಸಾರ್ವಜನಿಕರನ್ನು ಮತ್ತು ವೈದ್ಯಕೀಯ ತಜ್ಞರನ್ನು ತಬ್ಬಿಬ್ಬುಗೊಳಿಸಿದೆ. ಹೊಸ ಹೊಸ ಕೊರೋನಾ ವೈರಸ್ ತಳಿಗಳಿಂದ ಜನರೂ ಸಹ ಭಯಭೀತರಾಗಿದ್ದಾರೆ. ಈ ವೈರಸ್ ಕುರಿತು ನಡೆಯುತ್ತಿರುವ ಹೊಸ ಸಂಶೋಧನೆಗಳಿಂದ ಹೊಸ ಕೊರೋನಾ ಲಕ್ಷಣಗಳ ಬಗ್ಗೆ ತಿಳಿದು ಬಂದಿದೆ.

ಅಧ್ಯಯನದ ಸಂಶೋಧನೆಗಳು
ಯುಕೆ ಮತ್ತು ಯುರೋಪ್ ನ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಕಂಡುಬಂದಿರುವ ಸಮುದಾಯ ಪ್ರಕರಣಗಳ ವಿಶ್ಲೇಷಣೆಯ ಪ್ರಕಾರ, COVID-19 ರೋಗಿಗಳು, ಹೊಸ ರೂಪಾಂತರದೊಂದಿಗೆ ಬೇರೆ ಬೇರೆ ರೋಗ ಲಕ್ಷಣಗಳನ್ನು ಹೊಂದಿದ್ದಾರೆ . ಸಾಮಾನ್ಯ ಶೀತ ಮತ್ತು ಫ್ಲೂ ಚಿಹ್ನೆಗಳಿಗೆ ಹೋಲಿಸಿದರೆ ಸೋಂಕಿನ 'ಕಡಿಮೆ ವಿಶಿಷ್ಟ' ಚಿಹ್ನೆಗಳನ್ನು ತೋರಿಸುತ್ತಾರೆ.

ಸಂಶೋಧಕರು ಈಗ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಅವರು ಏನನ್ನೋ ಅನುಮಾನಿಸಿದ ತಕ್ಷಣ ಪರೀಕ್ಷಿಸಬೇಕು, ಅಥವಾ ಸಾಂಕ್ರಾಮಿಕಕ್ಕೆ ಒಡ್ಡಿಕೊಂಡಾಗ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಹೊಸ COVID ತಳಿ ಎಷ್ಟು ಅಪಾಯಕಾರಿ?
ಇದು ಇನ್ನೂ ಹೊಸ ವೈರಸ್ ಆಗಿದ್ದು, ಅದನ್ನು ಎದುರಿಸಲು ನಾವು ಕಲಿಯುತ್ತಿದ್ದೇವೆ. ಅದೇ ಸಮಯದಲ್ಲಿ, ಅದರ ಪರಿಣಾಮಕಾರಿತ್ವ ಮತ್ತು ಹರಡುವಿಕೆಯ ಬಗ್ಗೆ ಇನ್ನೂ ಸಾಕಷ್ಟು ಮಾಹಿತಿಗಳು ಇನ್ನೂ ಇವೆ. ಇನ್ನೂ ಮಾರಣಾಂತಿಕವೆಂದು ಪರಿಗಣಿಸಲಾದ ಈ ವೈರಸ್ ನ ಕೆಂಟ್ ರೂಪಾಂತರವು ಸುಮಾರು 70 ಪಟ್ಟು ಹೆಚ್ಚು ಸೋಂಕು ತಗುಲುವ ಸಾಧ್ಯತೆ ಇದೆ ಮತ್ತು ಸುಲಭವಾಗಿ ಹರಡಬಹುದು ಎಂದು ಸಂಶೋಧಕರು ಸಾಬೀತುಪಡಿಸಿದ್ದಾರೆ. ವೈರಸ್ ನಿಂದ ಸಾವಿನ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.

ರೋಗಲಕ್ಷಣಗಳ ಬಗ್ಗೆ ತಿಳಿಯಿರಿ
ಈ ಹೊಸ ಕರೋನವೈರಸ್ ಫ್ಲೂ ನಂತಹ ಹಲವಾರು ಚಿಹ್ನೆಗಳನ್ನು ಹೊಂದಿದೆ ಮತ್ತು ಅಸಾಮಾನ್ಯ, ಕಡಿಮೆ-ವಿಶಿಷ್ಟವಾಗಿ ಗುರುತಿಸಲ್ಪಟ್ಟ ಚಿಹ್ನೆಗಳನ್ನು ಸಹ ಹೊಂದಿದೆ. ಎಂದು ಹೇಳಲಾಗುತ್ತದೆ. ಈ ವೈರಸ್ ಬಹುತೇಕ ಜನರಲ್ಲಿ ಉಸಿರಾಟದ ಸೋಂಕು ಆಗಿ ಪ್ರಾರಂಭವಾಗಿರುವುದರಿಂದ, ಶೀತ, ಜ್ವರ, ಕೆಮ್ಮು ಅಥವಾ ವಾಸನೆಯನ್ನು ಕಳೆದುಕೊಳ್ಳುವ ಸಮಸ್ಯೆ ಕೂಡ ಹೊಂದಿದೆ.

ಊಹಿಸಲಾಗದ ಕೆಲವೊಂದು ರೋಗ ಲಕ್ಷಣಗಳು ಯಾವುದೆಂದು ತಿಳಿಯಿರಿ…
ಆಲಸ್ಯ ಮತ್ತು ಆಯಾಸ
ಕೆಮ್ಮು ಮತ್ತು ಗಂಟಲು ನೋವು ಹೊರತುಪಡಿಸಿ, ಅನೇಕ COVID ರೋಗಿಗಳು ಈಗ ಆಲಸ್ಯ ಮತ್ತು ಆಯಾಸ ಸೋಂಕಿನ ಆರಂಭಿಕ ಚಿಹ್ನೆಗಳಲ್ಲಿ ಒಂದೆಂದು ವರದಿ ಮಾಡಿದ್ದಾರೆ ಎಂದು ಯುಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ವೈರಲ್ ಸೋಂಕಿನೊಂದಿಗೆ ಆಯಾಸವು ಒಂದು ಸಾಮಾನ್ಯ ಚಿಹ್ನೆಯಾಗಿದ್ದರೂ, COVID ಪ್ರಕರಣಗಳಲ್ಲಿ, ಅದನ್ನು ನಿಭಾಯಿಸುವುದು ತುಂಬಾ ಕಠಿಣವಾಗಿರುತ್ತದೆ

ತಲೆಸುತ್ತುವಿಕೆ ಮತ್ತು ಆಯಾಸಕ್ಕೆ ಪ್ರಮುಖ ಕಾರಣವೆಂದರೆ ಸೈಟೋಕೈನ್ ಗಳ ಉಪಸ್ಥಿತಿ, ಇದು ದೇಹದಲ್ಲಿರುವ ಯಾವುದೇ ಸೋಂಕಿಗೆ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಪ್ರತಿಕ್ರಿಯೆಯಾಗಿ ಉತ್ಪತ್ತಿಯಾಗುತ್ತದೆ. ಇದರ ಪರಿಣಾಮದಿಂದ ರೋಗಕಾರಕದ ವಿರುದ್ಧ ಹೋರಾಡುವುದರಿಂದ ನಿಮ್ಮ ದೇಹ ವು ಖಾಲಿ ಮತ್ತು ದಣಿವಿನ ಅನುಭವಕ್ಕೆ ಬರುತ್ತದೆ.

ತಲೆಸುತ್ತು ಮತ್ತು ನಿಶ್ಯಕ್ತಿ
ಅನೇಕ ಸಂದರ್ಭಗಳಲ್ಲಿ, ಸೋಂಕಿನ ನರವೈಜ್ಞಾನಿಕ ರೋಗಲಕ್ಷಣಗಳಾದ ತಲೆಸುತ್ತುವಿಕೆ, ಆಯಾಸ, ಮತ್ತು ವಾಕರಿಕೆಯಂತಹ ರೋಗಲಕ್ಷಣಗಳನ್ನು ಸಹ ಕಂಡುಬರಬಹುದು. .

ಈ ರೋಗಲಕ್ಷಣವು ತುಂಬಾ ಗೊಂದಲಮಯವಾಗಿದೆ, ನಿಮ್ಮ ಆಯಾಸವು COVID-19 ಅಥವಾ ಇನ್ನಾವುದೇ ಕಾರಣದಿಂದ ಆಗಿದೆಯೇ ಎಂಬುದನ್ನು ಕಂಡುಕೊಳ್ಳುವುದು ಕಷ್ಟವಾಗಬಹುದು. ತಲೆಸುತ್ತುವಿಕೆಯು COVID-19 ನ ಚಿಹ್ನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಹೇಗೆ ವ್ಯತ್ಯಾಸ ಮಾಡಬಹುದು ಎಂಬುದನ್ನು ಇಲ್ಲಿ ನಾವು ನೋಡಿ.

ನಿಮ್ಮ ಆಯಾಸ ಮತ್ತು ದೌರ್ಬಲ್ಯವನ್ನು ನಿಭಾಯಿಸಲು ಇರುವ ಏಕೈಕ ಮಾರ್ಗವೆಂದರೆ ದೇಹಕ್ಕೆ ಅಗತ್ಯವಿರುವ ಸೂಕ್ತ ಆರೈಕೆ ಮತ್ತು ವಿಶ್ರಾಂತಿಯನ್ನು ನೀಡುವುದು. ಅತಿಯಾದ ವ್ಯಾಯಾಮ, ಅತಿಯಾದ ಆಯಾಸ, ಒಟ್ಟಾರೆ, ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳಲು ಪ್ರಯತ್ನಿಸಿ.

ಸ್ನಾಯು ಮತ್ತು ದೇಹದ ನೋವುಗಳು
ಹೊಸ COVID ರೂಪಾಂತರದೊಂದಿಗೆ ಕಂಡುಬರುವ ಇನ್ನೊಂದು ಸಾಮಾನ್ಯ ಚಿಹ್ನೆಯೆಂದರೆ ಸ್ನಾಯು ನೋವುಗಳು ಮತ್ತು ನೋವುಗಳು. ತೀವ್ರ ನೋವಿನ ಲಕ್ಷಣಗಳನ್ನು ಪ್ರಸ್ತುತಪಡಿಸುವ ಪ್ರಕರಣಗಳ ಸಂಖ್ಯೆ ಬಹುಪಟ್ಟು ಹೆಚ್ಚಾಗುತ್ತಿದೆ.

ಸ್ನಾಯು ನೋವುಗಳು ಮತ್ತು ದೇಹನೋವುಗಳು ಪ್ರಸ್ತುತಪಡಿಸಲು ಪ್ರಮುಖ ಕಾರಣವೆಂದರೆ ಮೈಯಲ್ಜಿಯಾ, ಇದು ಪ್ರಮುಖ ಸ್ನಾಯು ತಂತುಗಳು ಮತ್ತು ಅಂಗಾಂಶದ ಲೈನಿಂಗ್ ಗಳ ಮೇಲೆ ದಾಳಿ ಮಾಡುವ ವೈರಸ್ ನ ಪರಿಣಾಮವಾಗಿದೆ. ವ್ಯಾಪಕ ಉರಿಯೂತವು ಸೋಂಕಿನ ಸಮಯದಲ್ಲಿ ಕೀಲುನೋವು, ನಿಶ್ಯಕ್ತಿ ಮತ್ತು ದೇಹ ನೋವಿಗೆ ಕಾರಣವಾಗಬಹುದು.

ಈಗ COVID ಪರೀಕ್ಷೆಯನ್ನು ಬೇರೆ ಯಾವ ಚಿಹ್ನೆಗಳು ಬೇಡುತ್ತವೆ?
ಇದು ತುಲನಾತ್ಮಕವಾಗಿ ಹೊಸ ವೈರಸ್ ಆಗಿರುವುದರಿಂದ ಮತ್ತು ಹೊಸ ರೂಪಾಂತರಗಳನ್ನು ಕಂಡುಹಿಡಿಯುತ್ತಿರುವುದರಿಂದ, ನೀವು ಸೋಂಕನ್ನು ಲಘುವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ.

ನೀವು ಅಸಾಮಾನ್ಯ ಆಯಾಸ, ತಲೆಸುತ್ತುವಿಕೆ, ಸ್ನಾಯು ನೋವು, ನಿಶ್ಯಕ್ತಿ, ಆಲಸ್ಯ, ದೇಹನೋವು, ಅತಿಸಾರದಂತಹ ಚಿಹ್ನೆಗಳು ಮತ್ತು ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದರೆ, ಅದು ನಿಮಗೆ COVID ಪರೀಕ್ಷೆಯ ಅಗತ್ಯವಿರುವ ಸಂಕೇತವಾಗಿರಬಹುದು. ಈ ಚಿಹ್ನೆಗಳು ಯಾವುದೇ ಕ್ರಮದಲ್ಲಿ ಬರಬಹುದು, ಶಾಸ್ತ್ರೀಯ ಚಿಹ್ನೆಗಳೊಂದಿಗೆ (ಗಂಟಲು ನೋವು, ಜ್ವರ, ಕೆಮ್ಮು) ಅಥವಾ ಇಲ್ಲದೆ ಇರಬಹುದು. ಆದರೂ, ಪರೀಕ್ಷೆ ಮಾಡಿಸಿ.


ಹಾವೇರಿಯಲ್ಲಿ ಭೀಕರ ಅಪಘಾತ : ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರ ದುರ್ಮರಣ

February 25, 2021


 ಹಾವೇರಿ : ಟಿಪ್ಪರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಸಿದ್ದಪ್ಪ ನಾಗೇನಹಳ್ಳಿ, ಅನುಸೂಯಮ್ಮ, ವಿನೋದ, ವನಿತಾ ಎಂದು ಗುರುತಿಸಲಾಗಿದೆ.

ಮುದೆನೂರು ಗ್ರಾಮದಿಂದ ಇಟಗಿ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

ಸಾಯುವ ಹಂತದಲ್ಲಿದ್ದ ಕಾಡು ಕುರಿಯ ರಕ್ಷಣೆ: ಕತ್ತರಿಸಿದ ತುಪ್ಪಟದ ತೂಕ ಕೇಳಿದ್ರೆ ಅಚ್ಚರಿ ಪಡ್ತೀರಾ!

ಮೆಲ್ಬೋರ್ನ್​: ವಿಚಿತ್ರ ಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಕಾಡುಗಳಲ್ಲಿ ಅಲೆದಾಡುತ್ತಿದ್ದ ಕಾಡು ಕುರಿಯನ್ನು ರಕ್ಷಿಸಿ, ಅದರ ಮೈಯಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಸುಮಾರು 35 ಕೆ.ಜಿ. ತೂಕದ ತುಪ್ಪಟವನ್ನು ತೆಗೆದು ಹಾಕುವ ಮೂಲಕ ಮುಂದೆ ಸಂಭವಿಸುತ್ತಿದ್ದ ಅನಾಹುತದಿಂದ ಕುರಿಯನ್ನು ಬಚಾವ್​ ಮಾಡಲಾಗಿದೆ.

ಸುಮಾರು 5 ವರ್ಷಗಳ ಅನಿಯಂತ್ರಿತ ಬೆಳವಣಿಗೆಯ ಪರಿಣಾಮ ಇಷ್ಟೊಂದು ತುಪ್ಪಟ ಕರಿಯಲ್ಲಿ ಬೆಳೆದಿದೆ ಎನ್ನಲಾಗಿದೆ. ವರ್ಷಗಳ ಕಾಲ ಮಣ್ಣು ಮತ್ತು ಗೋಜಲಿನ ಅವಶೇಷಗಳಿಂದ ಕೂಡಿದ ಹೊಲಸು ಉಣ್ಣೆಯ ಜತೆಯಲ್ಲಿ ಹೋರಾಟ ಮಾಡಿದ್ದ ಕುರಿ ಆಸ್ಟ್ರೇಲಿಯಾದ ವಿಕ್ಟೋರಿಯನ್​ ಸ್ಟೇಟ್​ ಅರಣ್ಯದಲ್ಲಿ ಪತ್ತೆಯಾಗಿದ್ದು, ಅದನ್ನು ಮೆಲ್ಬೋರ್ನ್​ನಲ್ಲಿರುವ ಪ್ರಾಣಿ ಪಾರುಗಾಣಿಕಾ ಅಭಯಾರಣ್ಯಕ್ಕೆ ಕರೆತರಲಾಯಿತು.

 

ಅಷ್ಟೊಂದು ತುಪ್ಪಟ ಬೆಳೆದಿದ್ದರೂ ಕುರಿಯು ಇನ್ನು ಜೀವಂತವಾಗಿದೆ ಅಂದರೆ ನನ್ನಿಂದ ನಂಬಲು ಆಗುತ್ತಿಲ್ಲ ಎಂದು ಎಡ್ಗರ್ ಅವರ ಮಿಷನ್ ಫಾರ್ಮ್ ಅಭಯಾರಣ್ಯದ ಸಂಸ್ಥಾಪಕ ಪಾಮ್​ ಅಹೆರ್ನ್​ ತಿಳಿಸಿದ್ದಾರೆ. ಸುಮಾರು 5 ವರ್ಷಗಳವರೆಗೆ ತುಪ್ಪಟ ಅನಿಯಂತ್ರಿತವಾಗಿ ಬೆಳೆದಿದೆ ಎಂದು ಪಾಮ್​ ಅಂದಾಜಿಸಿದ್ದಾರೆ.


ಭಾರಿ ತುಪ್ಪಟದಿಂದಾಗಿ ಕುರಿ ನಡೆದಾಡಲು ಸಾಕಷ್ಟು ಶ್ರಮಪಟ್ಟಿದೆ. ವರ್ಷಕೊಮ್ಮೆಯಾದರೂ ಕ್ಷೌರವಿಲ್ಲದೆ ಪ್ರಾಣಿಗಳು ಕಾಡಿನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯಾದ ಕಠಿಣ ಮತ್ತು ಶುಷ್ಕ ಬೇಸಿಗೆಯಲ್ಲಿ ಇದು ಸಾಧ್ಯವೇ ಇಲ್ಲ ಎಂದಿದ್ದಾರೆ. ಸದ್ಯ ಕಾಡು ಕುರಿ ರಕ್ಷಿಸಲಾಗಿದ್ದು, ಭಾರದ ತುಪ್ಪಟವನ್ನು ಕಳೆದುಕೊಳ್ಳುವ ಮೂಲಕ ತನ್ನ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಂಡಿದೆ. (ಏಜೆನ್ಸೀಸ್​)

'ಬಂಪರ್ ಜಾಕ್ ಪಾಟ್': 100 ರೂ. ಲಾಟರಿ ಟಿಕೆಟ್ ಕೊಂಡು ಕೋಟಿ ಗೆದ್ದ 'ಪಂಜಾಬ್ ಮಹಿಳೆ'

February 25, 2021

 


ಡಿಜಿಟಲ್ ಡೆಸ್ಕ್ : ಕೇವಲ 100 ರೂಗೆ ಲಾಟರಿ ಟಿಕೆಟ್ ಕೊಂಡುಕೊಂಡು ಮಹಿಳೆಯೊಬ್ಬರು ಕೋಟ್ಯಾಧಿಪತಿಯಾದ ಘಟನೆ ಚಂಡೀಘರ್ ನಲ್ಲಿ ನಡೆದಿದೆ.

ರೇಣು ಚೌಹಾನ್ ಎಂಬ ಮಹಿಳೆಯೇ ಲಾಟರಿ ಗೆದ್ದ ಅದೃಷ್ಟವಂತ ಮಹಿಳೆ. ಇವರು ಅಮೃತಸರದಲ್ಲಿ ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದು, ಫೆಬ್ರವರಿ 11 ರಂದು ಲಾಟರಿ ಗೆದ್ದಿದ್ದಾರೆ. ಈ ಬಗ್ಗೆ ಪಂಜಾಬ್ ರಾಜ್ಯ ಲಾಟರಿ ಇಲಾಖೆಯ ಅಧಿಕೃತ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೌಹಾನ್ ಭಗವಂತನ ಆಶೀರ್ವಾದದಿಂದ ಲಾಟರಿ ಗೆದ್ದಿದ್ದೇನೆ, ಮಧ್ಯಮ ವರ್ಗದ ಕುಟುಂಬಕ್ಕೆ ಬಹಳ ಸಹಾಯಕಾರಿಯಾಗಿದೆ ಎಂದಿದ್ದಾರೆ.


ದುಬೈ:12 ಭಾರತೀಯರ ಸಾವಿಗೆ ಕಾರಣನಾದ ಚಾಲಕನ ಜೈಲು ಶಿಕ್ಷೆ ಕಡಿತ

 ದುಬೈ,ಫೆಬ್ರವರಿ 25: ಅಪಘಾತದಲ್ಲಿ 12 ಮಂದಿ ಭಾರತೀಯರ ಹತ್ಯೆಗೆ ಕಾರಣನಾಗಿದ್ದ ಓಮಾನಿ ಬಸ್‌ ಚಾಲಕನಿಗೆ ವಿಧಿಸಿದ ಜೈಲುಶಿಕ್ಷೆಯನ್ನು ದುಬೈ ಕೋರ್ಟ್ ಕಡಿತಗೊಳಿಸಿದೆ.

2019ರಲ್ಲಿ ನಡೆದ ಅಪಘಾತದಲ್ಲಿ 12 ಮಂದಿ ಭಾರತೀಯರು ಸೇರಿ ಒಟ್ಟು 17 ಮಂದಿ ಮೃತಪಟ್ಟಿದ್ದರು,ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದೀಗ ಶಿಕ್ಷೆಯನ್ನು ಒಂದು ವರ್ಷಕ್ಕೆ ಕಡಿತಗೊಳಿಸಲಾಗಿದೆ.

 

ದುಬೈ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು, ಬಳಿಕ ನ್ಯಾಯಾಲಯವು 55 ವರ್ಷದ ಚಾಲಕನ ಶಿಕ್ಷೆಯನ್ನು ಒಂದು ವರ್ಷ ಕಡಿತಗೊಳಿಸಿದ್ದಷ್ಟೇ ಅಲ್ಲದೆ ಗಡಿಪಾರು ಆದೇಶವನ್ನು ಹಿಂತೆಗೆದುಕೊಂಡಿದೆ ಎಂದು ಗಲ್ಫ್‌ ನ್ಯೂಸ್ ವರದಿ ಮಾಡಿದೆ.

ಚಾಲಕ ಮೃತರ ಕುಟುಂಬಕ್ಕೆ ಇನ್ನೂ 13,612 ಯುಎಸ್ ಡಾಲರ್ ಹಾಗೂ 925,660 ಯುಎಸ್‌ಎಸ್‌ಡಿ ಪಾವತಿಸಬೇಕಿದೆ.2019ರ ಜುಲೈನಲ್ಲಿ ಚಾಲಕನಿಗೆ ದುಬೈ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು. ಚಾಲಕನನ್ನು ಗಡಿಪಾರು ಮಾಡುವಂತೆ ಆದೇಶಿಸಿತ್ತು. ಅವರ ಚಾಲನಾ ಪರವಾನಗಿಯನ್ನು ಒಂದು ವರ್ಷ ರದ್ದುಗೊಳಿಸಿತ್ತು.


ಈದ್ ರಜಾ ಸಂದರ್ಭದಲ್ಲಿ ಪ್ರವಾಸಿಗರು ಬಸ್ ಓಮನ್ ರಾಜಧಾನಿ ಮಸ್ಕತ್‌ನಿಂದ ದುಬೈಗೆ ತೆರಳುತ್ತಿತ್ತು. ಬಸ್ ಆಯ ತಪ್ಪಿ ಲೋಹದ ತಡೆಗೋಡೆಗೆ ಗುದ್ದಿತ್ತು. ಅದರಲ್ಲಿ 12 ಮಂದಿ ಭಾರತೀಯರು, ಪಾಕಿಸ್ತಾನಿ,ಐರಿಶ್,ಓಮಾನಿ, ಫಿಲಿಪಿನಾ ಪ್ರಜೆಗಳಿದ್ದರು. ಇನ್ನೂ ಹಲವು ಮಂದಿ ಗಾಯಗೊಂಡಿದ್ದರು.


ಬಸ್‌ನಲ್ಲಿದ್ದ 31 ಜನರಲ್ಲಿ ಬಾಂಗ್ಲಾದೇಶ,ಜರ್ಮನಿ,ಫಿಲಿಪೈನ್ಸ್‌ನ ನಾಗರಿಕರೂ ಇದ್ದರು.ಚಾಲಕ ತನ್ನ ತಪ್ಪಿನಿಂದಲೇ ಅಪಘಾತವಾಗಿದ್ದು ಎಂದು ತಪ್ಪೊಪ್ಪಿಕೊಂಡಿದ್ದ.


ಮೂತ್ರಪಿಂಡದಲ್ಲಿ ಕಲ್ಲು (ಕಿಡ್ನಿ ಸ್ಟೋನ್ )ಗಳ ರಚನೆಗೆ ಕಾರಣವಾಗುವ ಕೆಲವು ತರಕಾರಿಗಳು

February 25, 2021

 


ಮೂತ್ರಪಿಂಡದಲ್ಲಿ ಕಲ್ಲು (ಕಿಡ್ನಿ ಸ್ಟೋನ್ )ಗಳ ರಚನೆಗೆ ಕಾರಣವಾಗುವ ಕೆಲವು ತರಕಾರಿಗಳು Saakshatv healthtips stone formation

ನಮ್ಮ ದೇಹವು ವಿವಿಧ ಕಾರಣಗಳಿಂದ ವಿವಿಧ ರೀತಿಯ ಉರಿಯೂತ ಮತ್ತು ನೋವನ್ನು ಅನುಭವಿಸುತ್ತದೆ. ನಮ್ಮ ಮೂತ್ರಪಿಂಡದಲ್ಲಿ ಕಂಡುಬರುವ ಕಿಡ್ನಿ ಸ್ಟೋನ್ ಸಮಸ್ಯೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. Saakshatv healthtips stone formation

ಮೂತ್ರಪಿಂಡದ ಕಲ್ಲುಗಳ ರಚನೆಯು ಆನುವಂಶಿಕ ತೊಂದರೆಗಳು, ಆಹಾರ ಪದ್ಧತಿ ಅಥವಾ ಜೀವನಶೈಲಿಯ ಸಮಸ್ಯೆಗಳಿಂದ ಉಂಟಾಗಬಹುದು. ಇದಕ್ಕಾಗಿ ನೀವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ. ಮೂತ್ರಪಿಂಡದಲ್ಲಿ ಕಲ್ಲಿನ ರಚನೆಗೆ ಕಾರಣವಾಗುವ ಆಹಾರಗಳನ್ನು ತಪ್ಪಿಸುವುದರ ಮೂಲಕ ಸಮಸ್ಯೆ ಉಲ್ಬಣಗೊಳಿಸುವುದನ್ನು ತಪ್ಪಿಸಬಹುದು.

ಮೂತ್ರಪಿಂಡದಲ್ಲಿ ಕಲ್ಲಿನ ರಚನೆಗೆ ಕಾರಣವಾಗುವ ಕೆಲವು ಆಹಾರಗಳು

ಆಲೂಗಡ್ಡೆ - ಇದು ಹೆಚ್ಚಿನವರ ಅತ್ಯಂತ ನೆಚ್ಚಿನ ತರಕಾರಿ ಮತ್ತು ಹೃದಯದ ಸಮಸ್ಯೆಗಳನ್ನು ತಡೆಯುವ ಪೊಟ್ಯಾಸಿಯಮ್ ಮೂಲ. ಆದರೆ ದೇಹವು ಹೆಚ್ಚಿನ ಮಟ್ಟದ ಪೊಟ್ಯಾಸಿಯಮ್ ಅನ್ನು ಸ್ವೀಕರಿಸುವುದಿಲ್ಲ. ಅದು ಕಲ್ಲಿನ ರಚನೆಗೆ ಕಾರಣವಾಗಬಹುದು. ನೀವು ಈಗಾಗಲೇ ಮೂತ್ರಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಿದ್ದರೆ ಈ ತರಕಾರಿ ತಿನ್ನುವುದು ನಿಮಗೆ ಅಪಾಯವನ್ನುಂಟು ಮಾಡುತ್ತದೆ.

ಕೆಸುವಿನ ಸೊಪ್ಪು - ಕೆಸುವಿನ ಸೊಪ್ಪಿನಲ್ಲಿ ಪೌಷ್ಠಿಕಾಂಶದ ಮೌಲ್ಯ ಹೆಚ್ಚಿದ್ದು ಅದು ಕ್ಯಾನ್ಸರ್, ಹೃದಯ ಮತ್ತು ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳನ್ನು ತಡೆಯುತ್ತದೆ. ಆದರೆ ಮೂತ್ರ ವಿಸರ್ಜನೆಯನ್ನು ತಡೆಯುವ ಮೂಲಕ ಮೂತ್ರಪಿಂಡದಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕ ವಿರೋಧಿ ಆಕ್ಸಲೇಟ್‌ಗಳಿಗೆ ಸಹ ಕಾರಣವಾಗುತ್ತದೆ.

ಪಾಲಕ್ - ಪಾಲಕ್ ಸೊಪ್ಪು ವಿವಿಧ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಸೋಒ ವಿರುದ್ಧ ಹೋರಾಡಲು ಅಗತ್ಯವಾದ ರೋಗನಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ. ಆದರೆ ಈ ತರಕಾರಿ ಆಕ್ಸಲಿಕ್ ಆಮ್ಲವನ್ನು ಉತ್ಪಾದಿಸುವುದರಿಂದ ಪಾಲಕ್ ಸೊಪ್ಪು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಕಡಿಮೆ ಮಾಡಲು ಪಾಲಕ್ ಸೊಪ್ಪನ್ನು ಮಿತವಾಗಿ ಸೇವಿಸಿ.

ಬೀಟ್‌ರೂಟ್ ಗಡ್ಡೆಗಳು - ಇದು ಸಾಕಷ್ಟು ಕಬ್ಬಿಣ, ಪ್ರೋಟೀನ್ಗಳು, ಪೊಟ್ಯಾಸಿಯಮ್ ಇತ್ಯಾದಿಗಳನ್ನು ಪೂರೈಸಬಲ್ಲ ತರಕಾರಿ. ಆದರೆ ಈ ತರಕಾರಿಯಲ್ಲಿ ನಿಮ್ಮ ಮೂತ್ರಪಿಂಡಗಳಿಗೆ ಸಾಕಷ್ಟು ಅಪಾಯಕಾರಿಯಾದ ಆಕ್ಸಲೇಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬೀಟ್‌ರೂಟ್ ಸೇವನೆಯಿಂದ ಕಿಡ್ನಿ ಕಲ್ಲು ರಚನೆಯ ಅಪಾಯ ಹೆಚ್ಚು.

ಬೆಂಡೆಕಾಯಿ - ‌ ಬೆಂಡೆಕಾಯಿ ಇತರ ಯಾವುದೇ ತರಕಾರಿಗಿಂತ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ‌ಹೊಂದಿದೆ. ಇದು ಚಯಾಪಚಯ ಕ್ರಿಯೆಯ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಾದ ಸಾಕಷ್ಟು ಪೋಷಕಾಂಶಗಳನ್ನು ಪೂರೈಸುತ್ತದೆ. ಆಕ್ಸಲೇಟ್ ಅಧಿಕವಾಗಿರುವುದರಿಂದ ಬೆಂಡೆಕಾಯಿ ಕಲ್ಲಿನ ರಚನೆಯನ್ನು ತಡೆಯುತ್ತದೆ. ಮೂತ್ರಪಿಂಡ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ತರಕಾರಿಯನ್ನು ತಪ್ಪಿಸುವುದು ಉತ್ತಮ.

ಹಸಿರು ಸೊಪ್ಪು- ಹಸಿರು ಸೊಪ್ಪಿನಲ್ಲಿ ಆಕ್ಸಲೇಟ್ ಅಧಿಕವಾಗಿದೆ ಮತ್ತು ಮೂತ್ರಪಿಂಡದ ಕಲ್ಲು ಪೀಡಿತರಿಗೆ ಇದು ಉತ್ತಮ ಆಹಾರವಲ್ಲ. ಹಸಿರು ಸೊಪ್ಪು ಮೂತ್ರಪಿಂಡದಲ್ಲಿ ಕಲ್ಲಿನ ರಚನೆಯನ್ನು ಉಲ್ಬಣಗೊಳಿಸುತ್ತದೆ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.

ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.

ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/wr30jYeISz


ಸಾರ್ವಜನಿಕ ಸ್ಥಳದಲ್ಲೇ ಮೈಮರೆತ ಜೋಡಿ :ಬಸ್ ನಿಲ್ದಾಣದಲ್ಲೇ ಲಿಪ್ ಲಾಕ್

February 25, 2021

 


ರಾಯಚೂರು: ಯುವ ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಚುಂಬನ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಬಸ್​ಗಾಗಿ ಕಾಯುತ್ತಿದ್ದಾರೆ. ಆದರೆ ಯುವಕ, ಯುವತಿ ಒಬ್ಬರನೊಬ್ಬರು ಪರಸ್ಪರ ತಬ್ಬಿಕೊಂಡು, ಸಾರ್ವಜನಿಕವಾಗಿ ಲಿಪ್​ ಲಾಕ್​ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ.

ಈ ಜೋಡಿಯ ಚುಂಬನದ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇನ್ನು ಮಂಡ್ಯದ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಪ್ರೇಮಿಗಳ ದಿನದಂದು ಪ್ರೇಮಿಗಳಿಬ್ಬರು ಕಿಸ್​ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದರ ಬೆನ್ನಲೇ ಇದೀಗ ಮತ್ತೊಂದು ಚುಂಬನದ ವಿಡಿಯೋ ವೈರಲ್ ಆಗಿದೆ.


ಖಾಸಗಿ ಶಾಲೆ ಆಡಳಿತ ಮಂಡಳಿ ಬಿಕ್ಕಟ್ಟು ಇತ್ಯರ್ಥಕ್ಕೆ ಸಿದ್ದರಾಮಯ್ಯ ಆಗ್ರಹ

February 24, 2021

 


ಬೆಂಗಳೂರು: ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರು ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪೋಷಕರ ಸಭೆ ಕರೆದು ಈಗಿನ ಬಿಕ್ಕಟ್ಟು ಶೀಘ್ರವಾಗಿ ಇತ್ಯರ್ಥಗೊಳಿಸಿ ವಿದ್ಯಾರ್ಥಿಗಳನ್ನು ಈಗಿನ ಅತಂತ್ರ ಸ್ಥಿತಿಯಿಂದ ಮುಕ್ತಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಕೊರೊನಾ ಕಾಲದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ರಾಜ್ಯ ಸರ್ಕಾರದ ಅನಿಶ್ಚಿತ ನಿಲುವುಗಳು ಮತ್ತು ಹೊಂದಾಣಿಕೆಯ ರಾಜಕೀಯಕ್ಕೆ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಶುಲ್ಕ ಕಡಿತದ ಸರ್ಕಾರಿ ಆದೇಶವನ್ನು ಧಿಕ್ಕರಿಸಿರುವ ಖಾಸಗಿ ಶಾಲೆಗಳ ನಿಲುವಿನ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದು ಅವರ ಅಸಾಮರ್ಥ್ಯವನ್ನಷ್ಟೇ ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಕೊರೊನಾ ಹಾವಳಿಯಿಂದ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಕಷ್ಟ-ನಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಡು-ಕೊಳ್ಳುವಿಕೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿಯವರು, ಶಿಕ್ಷಣ ಸಚಿವರು ಒಂದು ವರ್ಗದ ಹಿತೈಷಿಯಂತೆ ವರ್ತಿಸಬಾರದು ಎಂದು ಕಿವಿಮಾತು ಹೇಳಿದ್ದಾರೆ.


Morning Breaking : ನಾಳೆ 'ಭಾರತ್‌ ಬಂದ್'‌, ನಿಮಗೆ ಗೊತ್ತಿರಬೇಕಾದ ಎಲ್ಲಾ ಮಾಹಿತಿಗಳು ಹೀಗಿದೆ

February 24, 2021

 


ನವದೆಹಲಿ: ದೇಶಾದ್ಯಂತ ನಾಳೆ ರಾಷ್ಟ್ರವ್ಯಾಪಿ ಮುಷ್ಕರ ದ ಕರೆಯಿಂದಾಗಿ ಅಂಗಡಿ ಮುಂಗಟ್ಟುಗಳು ಮತ್ತು ವ್ಯಾಪಾರ ಸಂಸ್ಥೆಗಳು ಬಂದ್ ಆಗಲಿವೆ. ಫೆಬ್ರವರಿ 26ರಂದು ಭಾರತ್ ಬಂದ್ ಆಚರಿಸಲಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವರ್ತಕರು ಹಾಗೂ ಸಾರಿಗೆ ಸಂಸ್ಥೆ ಗಳೂ ಬಂದ್ ಆಚರಿಸಲು ನಿರ್ಧಾರಿಸಿದ್ದಾವೆ.

ರಾಷ್ಟ್ರವ್ಯಾಪಿ ಮುಷ್ಕರದ ಬಗ್ಗೆ ಪ್ರಮುಖ ಅಂಶಗಳು ಇಲ್ಲಿವೆ:

  • ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ನಿಯಮವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) 'ಭಾರತ್ ಬಂದ್' ಗೆ ಕರೆ ನೀಡಿದೆ.
  • ಅಖಿಲ ಭಾರತ ಟ್ರಾನ್ಸ್ ಪೋರ್ಟರ್ಸ್ ವೆಲ್ ಫೇರ್ ಅಸೋಸಿಯೇಷನ್ (AITWA) ಸಹ ಸಿಎಐಟಿ ನೀಡಿರುವ ಬಂದ್ ಕರೆಗೆ ಬೆಂಬಲ ನೀಡಿದೆ.
  • ಹೊಸ ಇ-ವೇ ಬಿಲ್ ರದ್ದು ಪಡಿಸಬೇಕು ಎಂದು ಸಾರಿಗೆ ದಾರರ ಸಂಘ ಒತ್ತಾಯಿಸಿದೆ.
  • ಇ-ಇನ್ ವಾಯ್ಸ್ ಗೆ ಫಾಸ್ಟ್ ಟ್ಯಾಗ್ ಸಂಪರ್ಕಬಳಸಿ ವಾಹನಗಳನ್ನು ಟ್ರ್ಯಾಕ್ ಮಾಡಲು ನಿಯಮಗಳನ್ನು ತೆಗೆದುಹಾಕಲು ಸಹ ಸಾರಿಗೆದಾರರು ಬಯಸುತ್ತಾರೆ
  • ದೇಶದ ಎಂಟು ಕೋಟಿ ವರ್ತಕರನ್ನು ಪ್ರತಿನಿಧಿಸುವ ಸುಮಾರು 40 ಸಾವಿರ ವಾಣಿಜ್ಯ ಸಂಘಟನೆಗಳು ಸಿಎಐಟಿ ನೀಡಿರುವ ಭಾರತ್ ಬಂದ್ ಕರೆಗೆ ಬೆಂಬಲ ನೀಡಿವೆ.
  • ಎಲ್ಲಕ್ಕಿಂತ ಮುಖ್ಯವಾಗಿ ದೇಶಾದ್ಯಂತ ಡೀಸೆಲ್ ದರಗಳಲ್ಲಿ ಏಕರೂಪತೆ ಕಾಣಬೇಕೆಂದು ವರ್ತಕರ ಮತ್ತು ಸಾಗಣೆದಾರರ ಸಂಘಗಳು ಮನವಿ ಮಾಡಿದೆ.

ಮತ್ತೆ ಲಾಕ್‌ಡೌನ್‌ ಭಯ: ವಲಸೆ ಕಾರ್ಮಿಕರಲ್ಲಿ ತಳಮಳ

February 24, 2021

 


ಬೀದರ್‌: ಜಿಲ್ಲೆಯ ಮೂರು ಚೆಕ್‌ಪೋಸ್ಟ್‌ಗಳ ಮೂಲಕ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುತ್ತಿರುವ ವ್ಯಕ್ತಿಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಕೋವಿಡ್‌ ನೆಗೆಟಿವ್‌ ವರದಿ ಇಲ್ಲದೇ ಬಂದವರನ್ನು ಯಾವುದೇ ಮುಲಾಜಿಲ್ಲದೇ ಮರಳಿ ಕಳಿಸಲಾಗುತ್ತಿದೆ.

ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಲಾತೂರ್ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರ ಸರ್ಕಾರ ಲಾತೂರ್‌ ಜಿಲ್ಲಾಡಳಿತದಿಂದ ಮಾಹಿತಿ ಕೇಳಿದೆ. ಫೆಬ್ರುವರಿ 28ರಿಂದ ಲಾತೂರ್‌ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಾದರೆ ಅಚ್ಚರಿ ಇಲ್ಲ ಎಂದು ಉದಗಿರ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

ಮುಂಬೈ, ಪುಣೆ, ಸೋಲಾಪುರ ಹಾಗೂ ಲಾತೂರ್‌ ಮಹಾನಗರಗಳಿಗೆ ವಲಸೆ ಹೋಗಿರುವ ಕಾರ್ಮಿಕರಲ್ಲಿ ಮತ್ತೆ ಸುದೀರ್ಘ ಲಾಕ್‌ಡೌನ್‌ ಶುರುವಾಗಲಿದೆ ಎನ್ನುವ ತಳಮಳ ಶುರುವಾಗಿದೆ.

ಕಳೆದ ವರ್ಷ ಲಾಕ್‌ಡೌನ್‌ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡು ಅಲ್ಲಿ ಉಳಿಯಲಾಗದೆ, ಇಲ್ಲಿಯೂ ಬರಲಾಗದೆ ಸಂಕಷ್ಟ ಅನುಭವಿಸಿದ್ದರು. ಮತ್ತೆ ಎದ್ದಿರುವ ಕೋವಿಡ್‌ ಅಲೆ ಆತಂಕ ಸೃಷ್ಟಿಸಿದೆ.

ಮಹಾರಾಷ್ಟ್ರದಲ್ಲಿ ಜಾತ್ರೆ, ಸಮಾವೇಶಗಳನ್ನು ನಿಷೇಧಿಸಲಾಗಿದೆ. ಮದುವೆ ಮುಂಚಿವೆಗಳಿಗೂ ಕೆಲವೊಂದು ನಿರ್ಬಂಧ ಹೇರಲಾಗಿದೆ. ಗಡಿಯಾಚೆ ಕೌಟುಂಬಿಕ ಸಂಬಂಧಗಳನ್ನು ಹೊಂದಿರುವ ಜನರು ಗಡಿಯಾಚೆಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದಾರೆ.

'ಸಂಬಂಧಿಗಳ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದಲ್ಲಿರುವ ಹಳ್ಳಿಗೆ ಹೋದರೂ ಮರಳಿ ಬರುವಾಗ ದಾಖಲೆಗಳನ್ನು ತೋರಿಸಬೇಕಾಗಿದೆ. ಹೀಗಾಗಿ ಮಹಾರಾಷ್ಟ್ರಕ್ಕೆ ಹೋಗಲು ಸಹ ಜನ ಹಿಂಜರಿಯುತ್ತಿದ್ದಾರೆ. ಆದರೆ ಕೂಲಿ ಕಾರ್ಮಿಕರು ಮರಳಿ ಮನೆಗೆ ಬರುವಂಥ ಸನ್ನಿವೇಶ ಸೃಷ್ಟಿಯಾಗಿಲ್ಲ' ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ತಿಳಿಸಿದ್ದಾರೆ.

'ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ 1,800 ಜನರ ತಪಾಸಣೆ ನಡೆಸಿ ಕೋವಿಡ್‌ ನೆಗೆಟಿವ್‌ ವರದಿ ಇಲ್ಲದ 100 ಜನರನ್ನು ಮರಳಿ ಕಳಿಸಲಾಗಿದೆ. ಬುಧವಾರ ಸಂಜೆ ವರೆಗೆ 1,500 ಜನರ ತಪಾಸಣೆ ನಡೆಸಲಾಗಿದೆ. ಕೆಲವರನ್ನು ವಾಪಸ್‌ ಕಳಿಸಲಾಗಿದೆ' ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

'ಅಗತ್ಯ ಸಂದರ್ಭದಲ್ಲಿ ಮಾತ್ರ ಗಡಿಯಾಚೆಗೆ ಹೋಗಬೇಕು. ವೈಯಕ್ತಿಕ ಹಾಗೂ ಸಮುದಾಯದ ಆರೋಗ್ಯ ದೃಷ್ಟಿಯಿಂದ ಮನೆಯಲ್ಲೇ ಇರುವುದು ಹೆಚ್ಚು ಸುರಕ್ಷಿತ' ಎಂದು ಹೇಳಿದ್ದಾರೆ.

ತೆಲಂಗಾಣ ಗಡಿಯಲ್ಲಿ ಇಲ್ಲ ನಿರ್ಬಂಧ

ತೆಲಂಗಾಣ ಗಡಿಯಲ್ಲಿ ಜಿಲ್ಲಾಡಳಿತ ಚೆಕ್‌ಪೋಸ್ಟ್ ಸ್ಥಾಪಿಸಿಲ್ಲ. ತೆಲಂಗಾಣಕ್ಕೆ ಹೋಗಿ ಬರುವವರ ಮೇಲೆ ಯಾವುದೇ ರೀತಿಯ ನಿರ್ಬಂಧವನ್ನೂ ಹೇರಿಲ್ಲ. ಸರ್ಕಾರದ ಆದೇಶ ಬಂದರೆ ಮಾತ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ತಿಳಿಸಿದ್ದಾರೆ.

ಬೀದರ್‌ ತಾಲ್ಲೂಕಿನ ಭಂಗೂರ್‌ ಹಾಗೂ ಶಹಾಪುರ ಗೇಟ್‌ ಬಳಿ ಕರ್ನಾಟಕ ಹಾಗೂ ತೆಲಂಗಾಣದ ವಾಹನಗಳು ಮುಕ್ತವಾಗಿ ಸಂಚರಿಸುತ್ತಿವೆ. ಸಾರಿಗೆ ಸಂಚಾರವೂ ಸುಗಮವಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ..........

ಮಹಾರಾಷ್ಟ್ರ ಬಸ್‌ ವಾಪಸ್

ಬೀದರ್‌: ಲಾತೂರ್ ಜಿಲ್ಲೆಯ ಹಣೆಗಾಂವ್‍ನಿಂದ ಔರಾದ್‍ಗೆ ಬಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌ಅನ್ನು ವಾಪಸ್‌ ಕಳಿಸಲಾಗಿದೆ.

ಬಸ್‌ ಚಾಲಕ ಹಾಗೂ ನಿರ್ವಾಹಕರ ಬಳಿ ಕೋವಿಡ್‌ ನೆಗೆಟಿವ್‌ ವರದಿ ಇಲ್ಲದ ಕಾರಣ ಬಸ್‌ ವಾಪಸ್‌ ಕಳಿಸಲಾಗಿದೆ. ಪ್ರಸ್ತುತ ಗಡಿಯಲ್ಲಿ ರಾಜ್ಯದ ಬಸ್‌ಗಳು ಹೆಚ್ಚು ಸಂಚರಿಸುತ್ತಿವೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.


80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?

February 24, 2021

 


ಮುಂಬೈ : 80 ಕೋಟಿ ರೂ. ವಿದ್ಯುತ್ ಬಿಲ್ ಪಡೆದ ಮನೆಯ ಯಜಮಾನನ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿದ ಘಟನೆ ಫೆ. 22 ರಂದು ಮಹಾರಾಷ್ಟ್ರದ ನಲಸೊಪಾರಾ ಗ್ರಾಮದಲ್ಲಿ ನಡೆದಿದೆ.

80 ವರ್ಷದ ವೃದ್ಧ ಗಂಪತ್ ನಾಯ್ಕ್, 80 ಕೋಟಿ ರೂ. ವಿದ್ಯುತ್ ಬಿಲ್ ನೋಡಿ ಶಾಕ್ ಆಗಿದ್ದಾರೆ. ಅವರ ಬಿಪಿ ಹೆಚ್ಚಿದ್ದರಿಂದ ಮನೆಯವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಪತಿ ನಾಯ್ಕ್ ಅವರದು ಮಧ್ಯಮವರ್ಗದ ಕುಟುಂಬ. ಅವರ ಮನೆಗೆ 80 ಕೋಟಿ ರೂ. ವಿದ್ಯುತ್ ಬಿಲ್ ಬಂದಿರುವುದು ತಾಂತ್ರಿಕ ದೋಷದಿಂದ.

 

ಘಟನೆ ಕುರಿತು ಮಾತಾಡಿರುವ ಗಂಪತ್ ನಾಯ್ಕ್ ಅವರ ಮೊಮ್ಮಗ ನೀರಜ್, ಮೊದಲು ಇಡೀ ಗ್ರಾಮದ ಕರೆಂಟ್ ಬಿಲ್ ಇರಬಹುದು ಎಂದುಕೊಂಡಿದ್ದೇವು. ಆದರೆ, ಕ್ರಾಸ್ ಚೆಕ್ ಮಾಡಿದ ಮೇಲೆ ಅದು ಕೇವಲ ನಮ್ಮ ಮನೆಯ ಬಿಲ್ ಎಂದು ಗೊತ್ತಾಗಿ ಆಘಾತವಾಯಿತು. ಕೂಡಲೇ ಅಧಿಕಾರಿಗಳ ಗಮನಕ್ಕೆ ತರಲಾಯಿತು ಎಂದರು.

ಇನ್ನು ತಮ್ಮ ತಪ್ಪು ಒಪ್ಪಿಕೊಂಡಿರುವ ಮಹಾರಾಷ್ಟ್ರ ವಿದ್ಯುತ್ ಸರಬರಾಜು ಕಂಪನಿ (MSEDCL), ತಾಂತ್ರಿಕ ದೋಷದಿಂದ ಈ ಪ್ರಮಾದ ಜರುಗಿದೆ. ಈಗಾಗಲೇ ಅವರಿಗೆ ಸರಿಯಾದ ಬಿಲ್ ವಿತರಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸುತ್ತೇವೆ ಎಂದಿದೆ.


ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ರೌಡಿ ಶೀಟರ್ಸ್​ಗಳ ಮಾರಾಮಾರಿ
ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೋದರೂ ರೌಡಿ ಶೀಟರ್ಸ್​ಗಳಿಗೆ ಭಯ ಇಲ್ಲದಂತಾಗಿದೆ. ಜೈಲಿನ ಒಳಗಿದ್ದರೂ ಅವರ ಆಟಾಟೋಪಗಳು ಮಾತ್ರ ಕಡಿಮೆಯಾಗಿಲ್ಲ. ಜೈಲಿನ ಒಳಗೆ ಕುಳಿತುಕೊಂಡೇ ಮತ್ತೊಬ್ಬರ ಹತ್ಯೆಗೆ ಸುಪಾರಿ ಕೊಡುವ ಹಂತಕ್ಕೆ ಬಂದಿದೆ. ಇದಲ್ಲದೆ ರೌಡಿಗಳು ಹೇಳಿದಂತೆ ಸಾಮಾನ್ಯ ಕೈದಿಗಳಿಂದ ಕೆಲಸ ಮಾಡುವುದು ಸಹ ಬೆಳಕಿಗೆ ಬಂದಿತ್ತು. ಇದೀಗ ರೌಡಿಶೀಟರ್ಸ್​ಗಳು ಜೈಲಿನ ಆವರಣದಲ್ಲಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.

ಸದ್ದಿಲ್ಲದೇ ಜೈಲಿನೊಳಕ್ಕೆ ಸಿಗರೇಟು ,ಮದ್ಯ ಸರಬರಾಜು ಆಗುತ್ತಿರುವ ಬಗ್ಗೆಯೂ ಆರೋಗಳು ಕೇಳಿ ಬಂದಿತ್ತು. ಈ ನಡುವೆ ಇವತ್ತು ಜೈಲಿನಲ್ಲಿರುವ ರೌಡಿಶೀಟರ್​ಗಳ ನಡುವೆ ಮತ್ತೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಕುಖ್ಯಾತ ರೌಡಿಶೀಟರ್ ಬಾಂಬೆ ಸಲೀಂ ತಮ್ಮನಿಂದ ರೋಹಿತ್ ಗೌಡ ಎಂಬುವನ‌ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಸಲೀಂ ಸಹೋದರನನ್ನು ಇಂದು ನ್ಯಾಯಾಲಯಕ್ಕೆ ಕರೆದೊಯ್ಯಲು ಜೈಲು ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ‌ ಬೇರೆ ಪಕ್ಕದ ಬ್ಯಾರಕ್ ನಲ್ಲಿದ್ದ ರೋಹಿತ್ ಗೌಡ ಎಂಬಾತ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಸಿಬ್ಬಂದಿ ಜೊತೆಯಲ್ಲೇ ರೌಡಿಗಳು ತಳ್ಳಾಡಿ ಬಡಿದಾಡಿಕೊಂಡಿದ್ದಾರೆ. ಈ ಮಧ್ಯೆ ಸಿಬ್ಬಂದಿ ಎರಡೂ ಟೀಂ ನಿಯಂತ್ರಿಸಲು ಪರದಾಡಿದ್ದು,ಜೈಲಾಧಿಕಾರಿಗಳು ಎಂಟ್ರಿ ಆಗಿದ್ದಾರೆ.

ಕೊಲೆ ಕೇಸ್ ಆರೋಪದಡಿ ಬಾಂಬೆ ಸಲೀಂ ಹಾಗೂ ಸಹೋದರ ಸೇರಿದಂತೆ ಆರು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ರೌಡಿ ಶೀಟರ್ ಬಾಂಬೆ ಸಲೀಂ ತಮ್ಮನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಎಲ್ಲಾ ರೌಡಿ ಶೀಟರ್ಸ್ ಗಳನ್ನು ಕರೆಸಿದ ಜೈಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಘಟನೆ ರಿಪೀಟ್ ಆದ್ರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಬ್ಯಾರಕ್ ಗಳಲ್ಲಿ ಮೊದಲಿದ್ದ ರೌಡಿ ಶೀಟರ್ಸ್ ಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಭಯ ಮತ್ತು ಬೆದರಿಕೆ ಇರುವ ಬಗ್ಗೆ ಯಾರಾದರೂ ಹೇಳಿದರೆ ಅಂತವರನ್ನು ಸ್ಥಳಾಂತರ ಮಾಡಲಾಗುತ್ತೆ ಎಂದಿದ್ದಾರೆ. ಇನ್ನು ರೌಡಿ ಶೀಟರ್ಸ್ ಗಳ ಹಾವಳಿ ಜಾಸ್ತಿ ಇರುವ ಬ್ಯಾರಕ್​ಗಳಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಲಾಗಿದೆ.

ಬಾಂಬೆ ಸಲೀಂ‌ ಯಾರು?

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ನಲ್ಲಿ ಸಲೀಂನನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ವೇಳೆ ಪತ್ನಿ ಜೊತೆ ಪೀಣ್ಯದ ಪೃಥ್ವಿರಾಜ್ ಚಾಟಿಂಗ್ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡು ಜಾಮೀನು ಪಡೆದು ಹೊರಬಂದು ಕಳೆದ ವರ್ಷ ಚಿಕ್ಕಬಳ್ಳಾಪುರ ಬಾಗೇಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ಸಲೀಂ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು‌. ಬಳಿಕ ಆರು ತಿಂಗಳ ಬಳಿಕ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದರು. ಸಲೀಂ ವಿರುದ್ದ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿ ಇದ್ದುಕೊಂಡೇ ಮನೆಗಳ್ಳತನ ಮಾಡಿಸುವುದು, ಮನೆಗಳ್ಳರ ಗ್ಯಾಂಗ್‌ ಕಟ್ಟುವುದರಲ್ಲಿ ಪಳಗಿರುವ ಈತನ ವಿರುದ್ಧ ಹೈದರಾಬಾದ್‌, ಮುಂಬಯಿ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲೂ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ!

February 23, 2021


 ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯ ಎಸ್ ಬಿಐ ಎಟಿಎಂ ಮಷಿನ್‌ನಲ್ಲಿ ಹಣ ತೆಗೆಯುತ್ತಿರುವಾಗ ಸಹಾಯದ ನೆಪವೊಡ್ಡಿ ಅಪರಿಚಿತ ವ್ಯಕ್ತಿಯೋರ್ವ 70 ಸಾವಿರಕ್ಕೂ ಅಧಿಕ ಹಣವನ್ನು ಲಪಟಾಯಿಸಿ, ಪರಾರಿಯಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಕುಮಟಾ ನ್ಯಾಯಾಲಯದಲ್ಲಿ ಕೊರ್ಟ್ ಬೀಲಿಫ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ಬೋರಕರ್‌ ಅವರು ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಇವರು ಎಸ್ ಬಿಐ ಎಟಿಎಂ ಕೌಂಟರ್‌ಗೆ ಹಣ ಡ್ರಾ ಮಾಡಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

 

ಎಟಿಎಂ ಮಷಿನ್‌ನಲ್ಲಿ ಕಾರ್ಡ್ ಹಾಕಿ ಹಣ ತೆಗೆಯುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವನು ಮಂಜುನಾಥ ಬೋರಕರ್‌ ಅವರಿಗೆ ಸಹಾಯ ಮಾಡುವ ನೆಪವೊಡ್ಡಿ ಎಟಿಎಂ ಕಾರ್ಡ್ ಅನ್ನು ತೆಗೆದುಕೊಂಡು, ಮಂಜುನಾಥ ಬೋರಕರ್‌ ಅವರಿಗೆ ತಿಳಿಯದಂತೆ ಎಟಿಎಂ ಯಂತ್ರದಲ್ಲಿ ಬೇರೊಂದು ಕಾರ್ಡ್ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.

ನಂತರ ಮಂಜುನಾಥ ಅವರ ಎಟಿಎಂ ಕಾರ್ಡ್ ಬಳಸಿಕೊಂಡು 70,905 ರೂ. ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಇದು ತಿಳಿದ ತಕ್ಷಣವೇ ಮಂಜುನಾಥ ಬೋರಕರ್ ಕುಮಟಾ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತನ ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ. ಈ ಅಪರಿಚಿತ ವ್ಯಕ್ತಿಯನ್ನು ಕಂಡಲ್ಲಿ ಕುಮಟಾ ಪೊಲೀಸ್ ಠಾಣೆಗೆ ಅಥವಾ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಕುಮಟಾ ಪಿಎಸ್‌ಐ ಆನಂದ ಮೂರ್ತಿ ತಿಳಿಸಿದ್ದಾರೆ.


Crime News: ಮಹಿಳೆಯರ ಡ್ರೆಸ್ಸಿಂಗ್ ರೂಂನಲ್ಲಿ ವಿಡಿಯೋ ಮಾಡಿ ಸಿಕ್ಕಿ ಬಿದ್ದ ಅಸಾಮಿ
ಬೆಂಗಳೂರು: ಅದು ಪ್ರತಿಷ್ಠಿತ ಸರ್ಕಾರಿ ಅಸ್ಪತ್ರೆ. ಅಲ್ಲಿ ನೂರಾರು ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದು ದಿನನಿತ್ಯ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಹಾರೈಕೆ ಮಾಡ್ತಿರ್ತಾರೆ. ಅದ್ರೆ ಇಂತಹ ಅಸ್ಪತ್ರೆಯಲ್ಲಿ ಅವನೊಬ್ಬ ಪೋಲಿ ಹುಡುಗ ಒಳ ಹೊಕ್ಕಿದ್ದು ಅಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ದುಸ್ವಪ್ನವಾಗಿದ್ದ. ಆಸ್ಪತ್ರೆಯ ಮಹಿಳಾ ಡ್ರೆಸ್ಸಿಂಗ್ ರೂಂನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ಕಾಮುಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಗರದ ಸಂಜಯ್ ಗಾಂಧಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಮಾಲತೇಶ್ 29, ಬಂಧಿತ ವ್ಯಕ್ತಿ.

ಆರೋಪಿ ಮಾಲತೇಶ್ ಕಳೆದ ಆರು ವರ್ಷಗಳಿಂದ ಸಂಜಯಗಾಂಧಿ ಅಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದನಂತೆ. ಆರೋಪಿ ಹೆಚ್ಚಾಗಿ ಆಪರೇಷನ್ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಈ ವೇಳೆ ಆರೋಪಿ ಪಕ್ಕದಲ್ಲೆ ಇದ್ದ ಮಹಿಳಾ ಸಿಬ್ಬಂದಿ ಡ್ರೆಸ್ಸಿಂಗ್ ಕೊಠಡಿಗೆ ಮೊಬೈಲ್ ಚಾರ್ಜ್ ಹಾಕುವ ನೆಪದಲ್ಲಿ ಪದೇ ಪದೇ ಹೋಗಿ ಬರುತ್ತಿದ್ದನಂತೆ. ಮೊಬೈಲ್ ಚಾರ್ಜ್ ಹಾಕುತ್ತಿದ್ದ ಆರೋಪಿ ನಂತರ ಯಾರಿಗೂ ತಿಳಿಯದಂತೆ ಮೊಬೈಲ್ ಕ್ಯಾಮೆರಾ ರೆಕಾರ್ಡಿಂಗ್ ಆನ್ ಮಾಡಿ ಇಟ್ಟು ಹೊರ ಬರ್ತಿದ್ದನಂತೆ. ಇದ್ರಿಂದ ಮಹಿಳಾ ಸಿಬ್ಬಂದಿ ಡ್ರೆಸ್ ಚೇಂಜ್‌ ಮಾಡುವ ದೃಶ್ಯಗಳು ಸಹ ಮೊಬೈಲ್ ನಲ್ಲಿ ಸೆರೆಯಾಗುತ್ತಿದ್ದು ಕೆಲ ಸಮಯದ ನಂತರ ಮೊಬೈಲ್ ತೆಗೆದುಕೊಳ್ತಿದ್ದನಂತೆ. ಹಲವಾರು ದಿನ ಇದೇ ರೀತಿ ಮಾಡ್ತಿದ್ದ ಮಾಲತೇಶ್ ಕಳೆದ ವಾರ ಡ್ರೆಸ್ಸಿಂಗ್ ರೂಂಗೆ ತೆರಳಿ ಮೊಬೈಲ್ ರೆಕಾರ್ಡಿಂಗ್ ಇಟ್ಟು ಬಳಿಕ ತನ್ನ ಲ್ಯಾಬ್ ಗೆ ಬಂದಿದ್ದಾನೆ.

ಈ ವೇಳೆ ಮಹಿಳಾ ಸಿಬ್ಬಂದಿ ಡ್ರೆಸ್ಸಿಂಗ್ ರೂಂಗೆ ಬಂದಿದ್ದು ಅಲ್ಲಿದ್ದ ಮೊಬೈಲ್ ಗಮನಿಸಿದ್ದಾರೆ. ಯಾರ ಮೊಬೈಲ್ ಇದು ಎಂದು ನೋಡಿದಾಗ ಅದರಲ್ಲಿ ಕ್ಯಾಮೆರಾ ಮೋಡ್ ಆನ್ ಅಗಿ ಎಲ್ಲವೂ ರೆಕಾರ್ಡ್ ಅಗ್ತಿತ್ತಂತ್ತೆ. ಕೂಡಲೇ ಆರೋಪಿ ಮಾಲತೇಶ್ ಅಲ್ಲಿಗೆ ದೌಡಾಯಿಸಿ ಮೊಬೈಲ್ ನನ್ನದು ಎಂದು ತೆಗೆದುಕೊಂಡಿದ್ದಾನೆ.

: ಕೆಂಪುಕೋಟೆ ಗಲಭೆ ಪ್ರಕರಣ; ಪ್ರಮುಖ ಆರೋಪಿ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಈ ವೇಳೆ ಮೊಬೈಲ್ ತೆಗೆದುಕೊಂಡ ಮಹಿಳಾ ಸಿಬ್ಬಂದಿ ಗ್ಯಾಲರಿ ನೋಡಲು ಮುಂದಾಗಿದ್ದು ಆರೋಪಿ ಮಾಲತೇಶ್ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವಿಡಿಯೋಗಳನ್ನ ಡಿಲೀಟ್ ಮಾಡಿದ್ದಾನೆ. ಪುನಃ ಮಹಿಳಾ ಸಿಬ್ಬಂದಿ ಮೊಬೈಲ್ ಪಡೆದು ಡಿಲೀಟ್ ಆದ ವಿಡಿಯೋಗಳಿರುವ ತ್ರ್ಯಾಷ್ ಚೆಕ್ ಮಾಡ್ದಾಗ ಅದರಲ್ಲಿ ಕೆಲವು ವಿಡಿಯೋಗಳು ಕಂಡು ಬಂದಿವೆ. ಕೂಡಲೇ ಅಸ್ಪತ್ರೆ ಆಡಳಿತ ಮಂಡಳಿಯವರಿಗೆ ಮೊಬೈಲ್ ಸಮೇತ ದೂರು ನೀಡಿದ್ದಾರೆ. ಆಡಳಿತ ಮಂಡಳಿಯವರು ಮೊಬೈಲ್ ಪರಿಶೀಲನೆ ನಡೆಸಿ ಮಾಲತೇಶ್ ವಿರುದ್ಧ ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದು ಪೊಲೀಸರು ಶೋಧ ನಡೆಸಿ ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ. ಪೊಲೀಸರು ಆರೋಪಿ ಮೊಬೈಲ್ ಪರಿಶೀಲನೆ ನಡೆಸಿದಾಗ ಹಲವು ವಿಡಿಯೋಗಳು ಪತ್ತೆಯಾಗಿವೆ. ಆರೋಪಿಯನ್ನ ಬಂಧಿಸಿ ಸದ್ಯ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ. ಆರೋಪಿ ಮಾಲತೇಶ್ ಗುತ್ತಿಗೆ ಆಧಾರದ ಮೇಲೆ ಸಂಜಯಗಾಂಧಿ ಅಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದು ಆರು ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ ಎಂದು ಅಸ್ಪತ್ರೆ ಮೂಲಗಳು ತಿಳಿಸಿವೆ.

ಜಾರಕಿಹೊಳಿಯನ್ನು ನಾವೆ ಮಂತ್ರಿ ಮಾಡಿದ್ದು, ಮಂದಿರ ನಿರ್ಮಾಣಕ್ಕೆ 2 ಲಕ್ಷ ರು. ನೀಡಿದ್ದೇನೆ: ಲಕ್ಷ್ಮಿ ಹೆಬ್ಬಾಳ್ಕರ್

February 23, 2021


 ಬೆಳಗಾವಿ: ರಮೇಶ್ ಜಾರಕಿಹೊಳಿಯನ್ನು ನಾವೇ ಮಂತ್ರಿ ಮಾಡಿದ್ದೇವೆ. ಮಂತ್ರಿ ಮಾಡುವಂತೆ ನಾವೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದೇವೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ

ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲಿಸಿದ್ದು ನಾನೇ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದ್ವೇಷದ ರಾಜಕಾರಣ ಯಾರಿಗೂ ಶೋಭೆ ತರುವುದಿಲ್ಲ. ಅಭಿವೃದ್ಧಿ ಪರ ರಾಜಕಾರಣ ಬೆಂಬಲಿಸಬೇಕು. ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ ಎಂದು ಹೇಳಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್​ನ ಬಸ್ ನಿಲ್ದಾಣದಲ್ಲಿ ಹುಡುಕಬೇಕಾಗುತ್ತೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ತಿರುಗೇಟು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ನಾನು ರಾಮನ ಭಕ್ತೆ, ರಾಮಮಂದಿರಕ್ಕೆ 2 ಲಕ್ಷ ಕೊಟ್ಟಿದ್ದೇನೆ. ರಾಮನ ಪಕ್ಷದಲ್ಲಿ ಒಬ್ಬ ಮಹಿಳೆ ಬಗ್ಗೆ ಆಡುತ್ತಿರುವ ಮಾತುಗಳನ್ನು ಜನ ನೋಡುತ್ತಿದ್ದಾರೆ. ಆಕೆ, ಈಕೆ ಎನ್ನುವುದು, ಬಸ್ ನಿಲ್ದಾಣದಲ್ಲಿ ಹುಡುಕಬೇಕು, ಹಾಸ್ಪಿಟಲ್‌ಗೆ ಅಡ್ಮಿಟ್ ಮಾಡಬೇಕು ಎನ್ನುವುದು ಶೋಭೆ ತರುವ ವಿಚಾರವಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಪಶ್ಚಿಮ ಬಂಗಾಳದಲ್ಲಿ ಬಾಂಬ್ ದಾಳಿ; ಟಿಎಂಸಿ ಕಾರ್ಯಕರ್ತ ಸಾವು
ಕೋಲ್ಕತ್ತಾ, ಫೆಬ್ರವರಿ 24: ಪಶ್ಚಿಮ ಬಂಗಾಳದಲ್ಲಿ ಬಾಂಬ್ ದಾಳಿ ನಡೆದಿದ್ದು, ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಮೂವರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ಸಂಭವಿಸಿದೆ. ಬಾಂಬ್ ದಾಳಿಯಲ್ಲಿ ಮೃತಪಟ್ಟವರನ್ನು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತ ಸೌವಿಕ್ ದೊಲೈ ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರನ್ನು ಮಿಡ್ನಾಪುರದ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ.

ಸ್ವಂತ ಮಗಳನ್ನು ಬಂಗಾಳ ಬಯಸುತ್ತದೆ; ತೃಣಮೂಲ ಕಾಂಗ್ರೆಸ್‌ ಹೊಸ ಘೋಷಣೆ

ನಾಲ್ವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮಕ್ರಾಂಪುರದಲ್ಲಿ ರಾತ್ರಿ ರಸ್ತೆ ಬದಿ ಮಾತನಾಡುತ್ತಾ ನಿಂತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಬಾಂಬ್‌ ಎಸೆದಿದ್ದಾರೆ. ಅಲ್ಲಿಂದ ಓಡಲು ನೋಡಿದ ದೊಲೈ ಮೇಲೆ ಗುಂಡು ಹಾರಿಸಿದ್ದಾರೆ. ದೊಲೈ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಘಟನೆಗೆ ಬಿಜೆಪಿಯವರೇ ಕಾರಣ ಎಂದು ಸ್ಥಳೀಯ ಟಿಎಂಸಿ ನಾಯಕರು ಆಕ್ಷೇಪಿಸಿದ್ದು, ತೃಣಮೂಲ ಕಾಂಗ್ರೆಸ್ ಒಳಜಗಳದಿಂದ ಈ ಘಟನೆ ನಡೆದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಮಿತ್ ದಾಸ್ ಆರೋಪಿಸಿದ್ದಾರೆ.

ನಾವು ಹಿಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಮತಗಳನ್ನು ಪಡೆದಿದ್ದೆವು. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನಮ್ಮನ್ನು ಗೆಲುವಿನಿಂದ ತಡೆಯಲು ಈ ರೀತಿ ಮಾಡಲಾಗಿದೆ. ಇದು ಬಿಜೆಪಿಯದ್ದೇ ಕೆಲಸ ಎಂದು ಟಿಎಂಸಿ ಜಿಲ್ಲಾ ಅಧ್ಯಕ್ಷ ಅಜಿತ್ ಮೈಟಿ ಆರೋಪಿಸಿದ್ದಾರೆ.

ಇದೇ ಏಪ್ರಿಲ್- ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ತೃಣಮೂಲ ಹಾಗೂ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

LPG ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಸಬ್ಸಿಡಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ..?

February 23, 2021

 


ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಎಲ್ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನುಂಗಲಾರದ ತುತ್ತಾಗಿದೆ.

ಅಂದಹಾಗೆ, ಎಲ್ಪಿಜಿ ಗ್ರಾಹಕರಿಗೆ ಕಳೆದ ಮೇ ತಿಂಗಳಿನಿಂದಲೂ ಸಬ್ಸಿಡಿ ನೀಡಿಲ್ಲ. ಸಬ್ಸಿಡಿ ನಿಲ್ಲಿಸಿದ ಬಗ್ಗೆ ಅಧಿಕೃತವಾಗಿ ಹೇಳದಿದ್ದರೂ ಗ್ರಾಹಕರಿಗೆ ಸಿಲಿಂಡರ್ ಸಬ್ಸಿಡಿ ಹಣ ಬಂದೇ ಇಲ್ಲ. ಕೇಂದ್ರ ಸರ್ಕಾರ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದೆ.

ಇದನ್ನು ಪರೋಕ್ಷವಾಗಿ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಹೇಳಿದ್ದಾರೆ. ಎಲ್ಪಿಜಿ ಸಬ್ಸಿಡಿ ನಿಲ್ಲಿಸಿದ್ದೇವೆ ಎಂಬುದು ತಪ್ಪು. ಅದನ್ನು ನಾನು ಒಪ್ಪಲ್ಲ, ನಿರಾಕರಿಸುತ್ತೇನೆ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 8 ಕೋಟಿ ಬಡವರಿಗಾಗಿ 14 ಕೋಟಿ ಎಲ್ಪಿಜಿ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹೀಗೆ ಬಡವರಿಗೆ ಉಚಿತವಾಗಿ ಸಿಲಿಂಡರ್ ನೀಡುವ ಮೂಲಕ ಸರ್ಕಾರ ಬಡವರ ಪರ ನಿಂತಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದು, ಈ ಮೂಲಕ ಬಡವರಿಗೆ ಮಾತ್ರ ಸಬ್ಸಿಡಿ ನೀಡುತ್ತಿರುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಕಳೆದ ಮೇ ತಿಂಗಳಿಂದಲೂ ಎಲ್ಪಿಜಿ ಗ್ರಾಹಕರಿಗೆ ಸಬ್ಸಿಡಿ ನೀಡಿಲ್ಲ. ಸಬ್ಸಿಡಿಯನ್ನು ರದ್ದು ಮಾಡಲಾಗಿದ್ದರೂ, ಈ ಬಗ್ಗೆ ಎಲ್ಲಿಯೂ ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿಲ್ಲ ಎಂದು ಹೇಳಲಾಗಿದೆ.

ವಿಶ್ವದ ಅತ್ಯಂತ ಹಿರಿಯ ಮೀನಿನ ಜೀವಿತಾವಧಿ ಎಷ್ಟು ಗೊತ್ತಾ..?

February 23, 2021

 


ಹನಕೊ ಎಂಬ ಹೆಸರಿನ ಜಪಾನಿ ಮೀನು ಇದುವರೆಗೆ ಅತಿ ಹೆಚ್ಚು ವರ್ಷಗಳ ಜೀವಂತ ಇದ್ದ ಬಣ್ಣದ ಮೀನು ಎಂದು ನಂಬಲಾಗಿದೆ. ಈ ಮೀನು 1977ರಲ್ಲಿ ಸಾಯುವ ಮುನ್ನ 226 ವರ್ಷಗಳ ಕಾಲ ಬದುಕಿತ್ತು ಎನ್ನಲಾಗಿದೆ.

ಕಡುಗೆಂಪು ಬಣ್ಣದ ಈ ಹೆಣ್ಣು ಮೀನು 1751ರಲ್ಲಿ ಜಪಾನ್​​ನಲ್ಲಿ ಜನಿಸಿತ್ತು. ಇಂತಹ ಮೀನಿನ ಸಾಮಾನ್ಯ ಜೀವಿತಾವಧಿ 40 ವರ್ಷ. ಆದರೆ ಈ ಮೀನು ಮಾತ್ರ 1977ರವರೆಗೂ ಬದುಕಿತ್ತು ಹಾಗೂ ಸಾಯುವ ಹೊತ್ತಿಗೆ ಅದಕ್ಕೆ 226 ವರ್ಷ ವಯಸ್ಸಾಗಿತ್ತು.

 

226 ವರ್ಷ ವಯಸ್ಸಿನ ಈ ಮೀನು 70 ಸೆಂಟಿ ಮೀಟರ್​ ಉದ್ದ ಹಾಗೂ 7.5 ಕೆಜಿ ತೂಕವನ್ನ ಹೊಂದಿತ್ತು ಎನ್ನಲಾಗಿದೆ.


ಈ ಮೀನಿನ ವಯಸ್ಸು ಬರೋಬ್ಬರಿ 81...! : 2ನೇ ಮಹಾಯುದ್ಧದ ಸಂದರ್ಭದಲ್ಲೂ ಬದುಕಿತ್ತು ಈ ಮತ್ಸ್ಯ!ಮೀನುಗಳು ಎಷ್ಟು ವರ್ಷ ಬದುಕುತ್ತವೆ...? ಹೀಗೆಂದು ಕೇಳಿದರೆ ಮತ್ಸ್ಯ ಪ್ರಿಯರು ನಗುತ್ತಾ ತಮಾಷೆಗಾದರೂ `ನಮ್ಮ ಕೈಗೆ ಸಿಕ್ಕಿ ಬೀಳುವ ತನಕ' ಎಂದು ಹೇಳಬಹುದು. ಆದರೆ, ಮೀನೊಂದು ಬರೋಬ್ಬರಿ 81 ವರ್ಷದಿಂದ ಬದುಕುತ್ತಿದೆ ಎಂದರೆ ನಂಬುತ್ತೀರಾ...? ನಂಬಲೇಬೇಕು. ಹಾಗಂತ, ಇದೇನು ಕಾಲ್ಪನಿಕ ಕತೆಯಲ್ಲ, ಪ್ರತ್ಯಕ್ಷಸಾಕ್ಷಿ.

ವಿಜ್ಞಾನಿಗಳು ಈಗ ವಿಶ್ವದ ಅತೀ ಹಿರಿಯ ಮೀನೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಮೀನಿನ ವಯಸ್ಸು ಬರೋಬ್ಬರಿ 81. ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿ ಈ ಮಿಡ್‌ನೈಟ್ ಸ್ನ್ಯಾಪರ್ ಮೀನನ್ನು ಹಿಡಿಯಲಾಗಿತ್ತು. ಎರಡನೇ ಮಹಾಯುದ್ಧದ ಸಂದರ್ಭದಲ್ಲೂ ಈ ಮೀನು ಬದುಕಿತ್ತು ಎಂದು ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದ ಬ್ರೂಮ್‌ನಿಂದ 300 ಕಿಲೋ ಮೀಟರ್ ದೂರದಲ್ಲಿರುವ ರೌಲಿ ಶೋಲ್ಸ್‌ನಲ್ಲಿ ಈ ಮೀನನ್ನು ಹಿಡಿಯಲಾಗಿತ್ತು. 81 ವರ್ಷದ ಈ ಮಿಡ್‌ನೈಟ್ ಸ್ನ್ಯಾಪರ್ ಅನ್ನು 60 ವರ್ಷಕ್ಕಿಂತ ಮೇಲ್ಪಟ್ಟ ಇತರ 10 ಮೀನುಗಳೊಂದಿಗೆ ಗುರುತಿಸಲಾಗಿತ್ತು. ಈ ಮೀನುಗಳಲ್ಲಿ 79 ವರ್ಷದ ರೆಡ್ ಬಾಸ್ ಕೂಡಾ ಸೇರಿದೆ.

ಸಾಮಾನ್ಯವಾಗಿ ಪಶ್ಚಿಮ ಆಸ್ಟ್ರೇಲಿಯಾ ಹಾಗೂ ಚಾಗೋಸ್ ದ್ವೀಪಸಮೂಹದಲ್ಲಿ ಮೂರು ರೀತಿಯ ಮೀನುಗಳನ್ನು ಮತ್ಸ್ಯಗಾರರು ಹಿಡಿಯುವುದಿಲ್ಲ. ರೆಡ್ ಬಾಸ್, ಮಿಡ್‌ನೈಟ್ ಸ್ನ್ಯಾಪರ್‌ ಹಾಗೂ ಬಿಳಿ ಮತ್ತು ಕಪ್ಪು ಸ್ನ್ಯಾಪರ್‌ಗಳನ್ನು ಮೀನುಗಾರರು ಅಷ್ಟಾಗಿ ಹಿಡಿಯುವುದಿಲ್ಲ ಎಂಬುದು ಸಂಶೋಧಕರ ಮಾತು. ಸದ್ಯ ಸಂಶೋಧಕರು ಈ ಮೀನುಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುತ್ತಿದ್ದಾರೆ.

`ಇದುವರೆಗೆ ಉಷ್ಣವಲಯದ ನೀರಿನಲ್ಲಿ ಕಂಡುಕೊಂಡ ಅತ್ಯಂತ ಹಿರಿಯ ಮೀನುಗಳಲ್ಲಿ 60 ವರ್ಷದ ಮೀನು ದಾಖಲೆ ಬರೆದಿತ್ತು. ಈ ದಾಖಲೆಯನ್ನು ಈ ಮಿಡ್‌ನೈಟ್ ಸ್ನ್ಯಾಪರ್ ಮುರಿದಿದೆ' ಎಂದು ಈ ಅಧ್ಯಯನದ ನೇತೃತ್ವ ವಹಿಸಿದ್ದ ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆರೈನ್ ಸೈನ್ಸ್ (ಎಐಎಂಎಸ್)ನ ಮತ್ಸ್ಯ ಜೀವಶಾಸ್ತ್ರಜ್ಞ ಡಾ. ಬ್ರೆಟ್ ಟೇಲರ್ ಹೇಳಿದ್ದಾರೆ.

ಇನ್ನು, ಈ ಅಪರೂಪದ ಮತ್ತು ಹಿರಿಯ ಮೀನಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ಮೀನನ್ನು ನೋಡಿ ಅಚ್ಚರಿಪಟ್ಟಿದ್ದಾರೆ.