B.S.Yediyurappa: ಸಿಎಂ ಬಿಎಸ್‌ವೈಗೆ 'ಬಿಗ್‌ ಶಾಕ್'‌ ನೀಡಿದ ಹೈಕೋರ್ಟ್..!

January 05, 2021
Tuesday, January 5, 2021

 


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ವಿರುದ್ದ ಡಿನೋಟಿಫಿಕೇಷನ್ ಆರೋಪ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ಲೋಕಾಯುಕ್ತ ಪೊಲೀಸರ ತನಿಖೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಇದೇ ವೇಳೆ ತಮ್ಮ ವಿರುದ್ದ ಕೇಳಿ ಬಂದಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ, ಎಫ್‌ಐಆರ್ ಅನ್ನು ಕೂಡ ರಾಜ್ಯ ಹೈಕೋರ್ಟ್‌ ನಿರಾಕರಿಸಿದ್ದು, ತನಿಖೆಯನ್ನು ಮುಂದುವರೆಸುವಂಥೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದೆ.

ನ್ಯಾಯಾಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ನ್ಯಾಯಾಪೀಠ ಆದೇಶವನ್ನು ಹೊರಡಿಸಿದ್ದು, ಇದೇ ವೇಳೆ ನ್ಯಾಯಪೀಠ ಅರ್ಜಿದಾರ ಸಿಎಂ ಬಿಎಸ್‌ವೈ( B S Yediyurappa) ಅವರಿಗೆ 25 ಸಾವಿರ ದಂಡವನ್ನು ಹಾಕಿದೆ ಎನ್ನಲಾಗಿದೆ.

ಆರ್‌.ಟಿ.ನಗರದ ಗಂಗೇನಹಳ್ಳಿ ವ್ಯಾಪ್ತಿಯ ಮಠದಹಳ್ಳಿ ಬಡಾವಣೆ ಪ್ರದೇಶದಲ್ಲಿ 1 ಎಕರೆ 11 ಗುಂಟೆ ಜಮೀನು ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಹಾಲಿ ಯಡಿಯೂರಪ್ಪ ವಿರುದ್ಧ ಎಫ್ ಐಆರ್‌ ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿದ್ದರು. ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐರ್‌ ರದ್ದುಗೊಳಿಸುವಂತೆ ಕೋರಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದರು.

Thanks for reading B.S.Yediyurappa: ಸಿಎಂ ಬಿಎಸ್‌ವೈಗೆ 'ಬಿಗ್‌ ಶಾಕ್'‌ ನೀಡಿದ ಹೈಕೋರ್ಟ್..! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on B.S.Yediyurappa: ಸಿಎಂ ಬಿಎಸ್‌ವೈಗೆ 'ಬಿಗ್‌ ಶಾಕ್'‌ ನೀಡಿದ ಹೈಕೋರ್ಟ್..!

Post a Comment