ಶಿಕ್ಷಕರು-ಮಕ್ಕಳನ್ನು ಸಂಕಷ್ಟಕ್ಕೆ ತಳ್ಳಿ ಏನು ಸಾಧಿಸಲು ಹೊರಟಿದ್ದೀರಿ..? : ಕಾಂಗ್ರೆಸ್ ಪ್ರಶ್ನೆ

January 03, 2021
Sunday, January 3, 2021

 


ಬೆಂಗಳೂರು,ಜ.3-ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರನ್ನೂ ಸಂಕಷ್ಟಕ್ಕೆ ತಳ್ಳಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಯಾವ ಸಾಧನೆ ಮಾಡಲು ಹೊರಟ್ಟಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಳೆದ ಮಾರ್ಚ್‍ನ ಲಾಕ್‍ಡೌನ್ ನಂತರ ಮುಚ್ಚಲ್ಪಟ್ಟಿದ್ದ ಶಾಲೆಗಳು ಜ.1ರಿಂದ ಪುನರಾಂಭಗೊಂಡಿದ್ದವು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶಾಲಾ ತರಗತಿಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರ ಬೆನ್ನಲ್ಲೇ ಗದಗದಲ್ಲಿ 10 ಮಂದಿ ಶಿಕ್ಷಕರಿಗೆ, ಉ.ಕನ್ನಡ ಜಿಲ್ಲೆಯಲ್ಲಿ ಮೂರು ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಹಾಗೂ ಸಚಿವ ಸುರೇಶ್‍ಕುಮಾರ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರಕ್ಕೆ ಸ್ಪಷ್ಟ ವೈಜ್ಞಾನಿಕ ರೂಪುರೇಷೆಗಳೇ ಇಲ್ಲ ಎಂದು ಕಿಡಿಕಾರಿದೆ.

ಶಾಲೆಗಳಲ್ಲಿ ಕೇವಲ ಮಾಸ್ಕ್, ಸ್ಯಾನಿಟೈಸರ್‍ಗಳಂತಹ ಕೊರೊನಾ ನಿಯಂತ್ರಿಸಲು ಸಾಧ್ಯವೇ. ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ತಳ್ಳಿ ಸಚಿವ ಸುರೇಶ್‍ಕುಮಾರ್ ಅವರು ಯಾವ ಸಾಧನೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Thanks for reading ಶಿಕ್ಷಕರು-ಮಕ್ಕಳನ್ನು ಸಂಕಷ್ಟಕ್ಕೆ ತಳ್ಳಿ ಏನು ಸಾಧಿಸಲು ಹೊರಟಿದ್ದೀರಿ..? : ಕಾಂಗ್ರೆಸ್ ಪ್ರಶ್ನೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಶಿಕ್ಷಕರು-ಮಕ್ಕಳನ್ನು ಸಂಕಷ್ಟಕ್ಕೆ ತಳ್ಳಿ ಏನು ಸಾಧಿಸಲು ಹೊರಟಿದ್ದೀರಿ..? : ಕಾಂಗ್ರೆಸ್ ಪ್ರಶ್ನೆ

Post a Comment