ಸ್ಪೆಷಲ್ ಡೆಸ್ಕ್ : ಈಗ ಚಳಿಗಾಲ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಮಳೆಯೂ ಆಗುತ್ತಿದೆ. ಇಂತಹ ಸಮಯದಲ್ಲಿ ಒಂದಲ್ಲ ಒಂದುಸಮಸ್ಯೆಗಳು ಉಂಟಾಗುತ್ತದೆ. ಇದಕ್ಕೆ ಕಾರಣ ಇಮ್ಯೂನ್ ಸಿಸ್ಟಮ್ ಮೇಲೆ ವಾತಾವರಣದ ಪರಿಣಾಮ. ಇದರಿಂದಾಗಿ ಶೀತ, ಕೆಮ್ಮು, ನೆಗಡಿ, ಕಫ ಮೊದಲಾದ ಸಮಸ್ಯೆ ಉಂಟಾಗುತ್ತದೆ.
ಇದೀಗ ಕೊರೋನಾ ವೈರಸ್ ಕೂಡ ಹೆಚ್ಚುತ್ತಿದೆ. ಈ ಸಮಯದಲ್ಲಿ ನಮ್ಮ ಇಮ್ಯೂನ್ ಸಿಸ್ಟಮ್ ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಶೀತ, ಕೆಮ್ಮು, ನೆಗಡಿ, ಕಫ ಮೊದಲಾದ ಸಮಸ್ಯೆಗೆ ಪದೇ ಪದೇ ಔಷಧ ಸೇವಿಸುವುದು ಪರಿಹಾರ ಅಲ್ಲ. ಅದರ ಬದಲು ಈ ಕಷಾಯ ಮಾಡಿ ಸೇವಿಸಿ. ಇದರಿಂದ ಸಮಸ್ಯೆ ದೂರವಾಗುತ್ತದೆ.
ದಾಲ್ಚಿನ್ನಿ ಮತ್ತು ಲವಂಗದ ಕಷಾಯ :
ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಕುದಿಸಿ, ಅದಕ್ಕೆ ಒಂದು ತುಂಡು ದಾಲ್ಚಿನ್ನಿ, ೩-೪ ಲವಂಗ ಮತ್ತು ಒಂದು ಏಲಕ್ಕಿ ಹಾಕಿ ಕುದಿಸಿ.
ಶುಂಠಿ ಮತ್ತು ಬೆಲ್ಲದ ಕಷಾಯ :
ಕುದಿಯುವ ನೀರಿಗೆ ಶುಂಠಿ, ಕರಿಮೆಣಸು, ಏಲಕ್ಕಿ, ಲವಂಗ, ಮತ್ತು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಕೊನೆಗೆ ತುಳಸಿ ಹಾಕಿ. ಚೆನ್ನಾಗಿ ಕುದಿ ಬಂದು ನೀರು ಅರ್ಧ ಆದ ಬಳಿಕ ಅದನು ಇಳಿಸಿ ಸೋಸಿ ಕುಡಿಯಿರಿ.
ಕರಿಮೆಣಸು ಮತ್ತು ನಿಂಬೆಯ ಕಷಾಯ :
ಒಂದು ಚಮಚ ಕರಿಮೆಣಸು ಮತ್ತು ನಿಂಬೆ ರಸವನ್ನು ಒಂದು ಕಪ್ ನೀರಿಗೆ ಹಾಕಿ ಕುದಿಸಿ. ಇದನ್ನು ಪ್ರತಿದಿನ ಬೆಳಗ್ಗೆ ಸೇವಿಸಿ. ಇದು ತಣ್ಣಗಾದರೆ ಜೇನು ಬೆರೆಸಿ ಸಹ ಸೇವಿಸಬಹುದು. ಇದರಿಂದ ಶೀತ ಕೆಮ್ಮಿನಿಂದ ಸುಲಭವಾಗಿ ಆರಾಮ ಸಿಗುತ್ತದೆ.
ಅಜ್ವೈನ್ ಮತ್ತು ಬೆಲ್ಲದ ಕಷಾಯ : ಒಂದು ಗ್ಲಾಸ್ ನೀರನ್ನು ಚೆನ್ನಾಗಿ ಕುದಿಸಿ. ಇದಕ್ಕೆ ಅರ್ಧ ಚಮಚ ಅಜ್ವೈನ್ ಮತ್ತು ಬೆಲ್ಲ ಹಾಕಿ ಅರ್ಧ ಆಗುವವರೆಗೆ ಕುದಿಸಿ. ನಂತರ ಇದನ್ನು ಸೇವಿಸಿ. ಅಜ್ವೈನ್ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಜೊತೆಗೆ ಶೀತ ಮೊದಲಾದ ಸಮಸ್ಯೆಗಳು ಸಹ ದೂರವಾಗುತ್ತದೆ.
EmoticonEmoticon