ಗುಡ್ ನ್ಯೂಸ್: ವಸತಿ, ನಿವೇಶನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

January 07, 2021

 


ಹಾಸನ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2019-20 ಸಾಲಿನ ವಸತಿ ಮತ್ತು ನಿವೇಶನ ಯೋಜನೆಗಳಡಿ ವಸತಿ ಮತ್ತು ನಿವೇಶನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 60 ವರ್ಷಗಳ ವಯೋಮಾನದ ಪರಿಶಿಷ್ಟ ವರ್ಗದ ಅಲೆಮಾರಿ ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅರ್ಹ ಫಲಾಪೇಕ್ಷಿಗಳು ನಿಗಮದ ಜಿಲ್ಲಾ ಕಚೇರಿಯಿಂದ ಉಚಿತವಾಗಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜ.25 ರೊಳಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, 11 ಕ್ರಾಸ್, 1ನೇ ಮಹಡಿ, ಜನನಿ ಕಾಂಪ್ಲೆಕ್ಸ್ ಕೆ.ಆರ್.ಪುರಂ, ಹಾಸನ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ 9008500474 ಗೆ ಸಂಪರ್ಕಿಸಬಹುದಾಗಿದೆ.


Related Articles

Advertisement
Previous
Next Post »