ಸಾಲ, ಸಹಾಯಧನ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

January 06, 2021
Wednesday, January 6, 2021

 


ಹಾಸನ: ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ವತಿಯಿಂದ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಯುವತಿಯರ ಹಾಗೂ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಜನರ ಆರ್ಥಿಕ ಅಭಿವೃದ್ದಿಗಾಗಿ ನಿಗಮವು ಸಾಲ ಸೌಲಭ್ಯ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಕೃತ ಬ್ಯಾಂಕುಗಳ ಯೋಜನೆಗಳ ವಿವರ

ಉದ್ಯಮಶೀಲತಾ ಅಬಿsವೃದ್ದಿ ಯೋಜನೆ:

ಈ ಯೋಜನೆಯಡಿ ನಿರುದ್ಯೋಗಿ ಪರಿಶಿಷ್ಟ ಜಾತಿಯವರು ನಡೆಸಲಿಚ್ಚಿಸುವ ವಿವಿಧ ಉದ್ಯಮಶೀಲತಾ ಚಟುವಟಿಕೆಗಳಾದ ಸಣ್ಣ ಕೈಗಾರಿಕೆ, ಕಾರು/ಟ್ಯಾಕ್ಸಿ, ಆಟೋರಿಕ್ಷಾ, ಟ್ರಾಕ್ಟರ್, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಚರ್ಮಗಾರಿಕೆ, ವಕೀಲರ ಕಚೇರಿ, ಬ್ಯೂಟಿಪಾರ್ಲರ್, ರೆಡಿಮೇಡ್‍ಗಾರ್ಮೆಂಟ್ಸ್, ಡಿಟಿಪಿ ಸೆಂಟರ್, ಇತರೆ ವಿವಿಧ ಉದ್ದೇಶಗಳಿಗೆ ಸಹಾಯಧನ 1 ಲಕ್ಷ ರೂ.

ನಿಗದಿಪಡಿಸಲಾಗಿದೆ.

ಈ ಯೋಜನೆಯಡಿ ಸೌಲಭ್ಯ ಪಡೆಯಲು ಗ್ರಾಮಾಂತರ ಪ್ರದೇಶದ ವಾರ್ಷಿಕ ಆದಾಯ 1.5 ಲಕ್ಷ ರೂ. ಮತ್ತು ನಗರ ಪ್ರದೇಶದಲ್ಲಿ 2 ಲಕ್ಷ ರೂ. ಮೀರಬಾರದು. ಘಟಕ ವೆಚ್ಚದಲ್ಲಿ ನಿಗಮದ ಸಹಾಯಧನ, ಬ್ಯಾಂಕ್‍ಸಾಲ ಹಾಗೂ ಶೇ.5 ರಷ್ಟು ಪ್ರವರ್ತಕರ ಪಾಲು ಸೇರಿರುತ್ತದೆ.

ಮೇಲ್ಕಂಡ ಯೋಜನೆಗಳಡಿ ಪ್ರತಿ ವರ್ಷ ಅರ್ಜಿಗಳನ್ನು ಆಹ್ವಾನಿಸಿ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಆಯ್ಕೆ ಸಮಿತಿಯಲ್ಲಿ ಫಲಾಪೇಕ್ಷಿಗಳನ್ನು ಆಯ್ಕೆ ಮಾಡಲಾಗುವುದು. ನಿಗಮದ ಕೇಂದ್ರ ಕಚೇರಿಯಿಂದ ನಿಗದಿಪಡಿಸುವ ಕ್ಷೇತ್ರವಾರು ಗುರಿಗನುಗುಣವಾಗಿ ಲೀಡ್ ಬ್ಯಾಂಕ್ ಮುಖಾಂತರ ಬ್ಯಾಂಕ್ ಶಾಖೆಗಳಿಗೆ ಗುರಿ ನಿಗದಿಪಡಿಸಲಾಗುವುದು. ಆಯ್ಕೆಯಾದ ಫಲಾಪೇಕ್ಷಿಗಳ ಅರ್ಜಿಗಳನ್ನು ಪರಿಶೀಲಿಸಿ, ಅರ್ಹತೆ ಹೊಂದಿದ ಅರ್ಜಿದಾರರ ಅರ್ಜಿಗಳನ್ನು ಸಂಬಂಧಿಸಿದ ಸೇವಾ ವ್ಯಾಪ್ತಿ ಬ್ಯಾಂಕ್ ಶಾಖೆಗಳಿಗೆ ಮಂಜೂರಾತಿಗಾಗಿ ಕಳುಹಿಸಿ ಕೊಡಲಾಗುವುದು. ಬ್ಯಾಂಕ್‍ಶಾಖೆಗಳಿಂದ ಮಂಜೂರಾತಿ ದೊರೆತ ನಂತರ ನಿಗಮದ ಸಹಾಯಧನವನ್ನು ಬ್ಯಾಂಕ್‍ಶಾಖೆಗಳಿಗೆ ಬಿಡುಗಡೆ ಮಾಡಲಾಗುವುದು.

ನಿಗಮದಿಂದ ನೇರವಾಗಿ ಅನುಷ್ಟಾನಗೊಳಿಸುವ ಯೋಜನೆಗಳ ವಿವರ

ಸ್ವಯಂ ಉದ್ಯೋಗ ನೇರ ಸಾಲ ಹೈನುಗಾರಿಕೆ ಯೋಜನೆ:

ಈ ಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಅರ್ಹ ನಿರುದ್ಯೋಗಿ ಫಲಾಪೇಕ್ಷಿಗಳಿಗೆ ಫಲಾನುಭವಿಗೆ ಹಸು/ಕುರಿ/ಮೇಕೆ/ಇತರೆ ವ್ಯಾಪಾರ ಉದ್ದೇಶಗಳಿಗೆ ಸಾಲಸೌಲಭ್ಯ ಒದಗಿಸಲಾಗುವುದು. ಘಟಕವೆಚ್ಚ 0.50 ಲಕ್ಷ ರೂ. ಆಗಿದ್ದು, ಇದರಲ್ಲಿ ಶೇ.50 ಭಾಗ ಸಹಾಯಧನ, ಶೇ.50 ಭಾಗ ನಿಗಮದ ಅಂಚಿನಹಣ ಸಾಲವಾಗಿರುತ್ತದೆ. ಶಾಸಕರ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಫಲಾಪೇಕ್ಷಿಗೆ ಮೇಲ್ಕಂಡ ಉದ್ದೇಶಗಳಿಗೆ ಸಹಾಯಧನ 25,000 ರೂ. ಹಾಗೂ ಅಂಚಿನ ಹಣ 25,000 ರೂ. ಬಿಡುಗಡೆ ಮಾಡಲಾಗುವುದು.

ಮೈಕ್ರೋಕ್ರೆಡಿಟ್ ಪ್ರೇರಣಾ ಯೋಜನೆ:

ಗ್ರಾಮೀಣ ಅರೆನಗರ ಮತ್ತು ನಗರಪ್ರದೇಶಗಳಿಗೆ ಸೇರಿದ ಬಡ ಪರಿಶಿಷ್ಟ ಜಾತಿ ಕುಶಲಿ ಅಥವಾ ಕುಶಲಿಯಲ್ಲದ ಸದಸ್ಯರ ಅಭಿವೃದ್ಧಿಗಾಗಿ ಸಣ್ಣ ವ್ಯಾಪಾರವನ್ನು ಕೈಗೊಳ್ಳಲು ನೋಂದಣಿಯಾಗಿರುವ ಸ್ವ ಸಹಾಯ ಸಂಘಗಳ ಮೂಲಕ ಸಾಲಸೌಲಭ್ಯ ನೀಡಲಾಗುತ್ತಿದೆ. ಪ್ರತಿ ಸದಸ್ಯರಿಗೆ 25,000 ರೂ. ರವರೆಗೆ ಸೌಲಭ್ಯ ನೀಡುತ್ತಿದ್ದು, ಸಹಾಯಧನ 15,000 ರೂ. ಹಾಗೂ 10,000 ರೂ ಅಂಚಿನ ಹಣ ಸಾಲ ಆಗಿರುತ್ತದೆ. ಸಾಲದ ಮೊತ್ತವನ್ನು ಶೇ.4 ರಷ್ಟು ಬಡ್ಡಿಯೊಂದಿಗೆ 25 ಸಮ ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿಸಬೇಕು. ಸಾಲದ ಮರುಪಾವತಿಯ ಜವಾಬ್ದಾರಿಯು ಸ್ವ ಸಹಾಯ ಸಂಘಗಳದ್ದಾಗಿರುತ್ತದೆ. ಸದರಿ ಮೊತ್ತವನ್ನು ಸಂಘದ ಹೆಸರಿಗೆ ಚೆಕ್ ಮುಖಾಂತರ ನೀಡಲಾಗುವುದು.

ವೈಯಕ್ತಿಕ ಗಂಗಾಕಲ್ಯಾಣ ಕೊಳವೆಬಾವಿ ಯೋಜನೆ:

ಈ ಯೋಜನೆ ಕನಿಷ್ಟ 1 ಎಕರೆಯಿಂದ 5 ಎಕರೆ ಖುಷ್ಕಿ ಜಮೀನು ಹೊಂದಿರುವ ಪ.ಜಾತಿಯ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೊಳವೆ ಬಾವಿ ಸೌಲಭ್ಯ ಒದಗಿಸಲಾಗುವುದು. ಘಟಕದ ವೆಚ್ಚ ರೂ.3 ಲಕ್ಷಗಳಾಗಿದ್ದು, ಈ ಪೈಕಿ ಗರಿಷ್ಟ ರೂ.2.50 ಲಕ್ಷ ಸಹಾಯಧನವಾಗಿದ್ದು, ಉಳಿದ ಅವಧಿ ಸಾಲದ ಮೊತ್ತ 50,000 ರೂ. ಗಳಿಗೆ ಫಲಾನುಭವಿಯು ಶೇ.6 ರ ಬಡ್ಡಿದರದಲ್ಲಿ ನಿಗಮಕ್ಕೆ ಮರುಪಾವತಿಸಬೇಕಾಗಿರುತ್ತದೆ.

ಭೂ ಒಡೆತನ ಯೋಜನೆ:

ಈ ಯೋಜನೆಯಡಿ ಭೂ ರಹಿತ ಕೃಷಿಕಾರ್ಮಿಕ ಕುಟುಂಬದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ 2 ಎಕರೆ ಖುಷ್ಕಿ ಅಥವಾ 1 ಎಕರೆ ತರಿ ಅಥವಾ 1\2 ಎಕರೆ ಬಾಗಾಯ್ತು ಜಮೀನಿನ ಸೌಲಭ್ಯ ಒದಗಿಸಲಾಗುವುದು. ಜಮೀನಿನ ಬೆಲೆಯನ್ನು ಜಿಲ್ಲಾದಿsಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಅನುಷ್ಟಾನ ಸಮಿತಿಯು ನಿಗದಿಪಡಿಸುತ್ತದೆ. ಒಟ್ಟು ಘಟಕವೆಚ್ಚದ ಮೊತ್ತ ಗರಿಷ್ಟ 15 ಲಕ್ಷ ರೂ.ಗಳಾಗಿದ್ದು ಮೊತ್ತ ಶೇ: 50 ರಷ್ಟು 7.50 ಲಕ್ಷ ರೂ. ಅವಧಿ ಸಾಲವಾಗಿರುತ್ತದೆ ಹಾಗೂ ಉಳಿದ ಶೇ: 50 ರಷ್ಟು 7.50 ಲಕ್ಷ ರೂ. ಸಹಾಯಧನವಾಗಿರುತ್ತದೆ. ಅವಧಿ ಸಾಲದ ಮೊತ್ತವನ್ನು ಬಡ್ಡಿಯೊಂದಿಗೆ 10 ವರ್ಷಗಳ ಅವದಿsಯಲ್ಲಿ ಶೇ.6 ರ ಬಡ್ಡಿ ದರದಲ್ಲಿ ನಿಗಮಕ್ಕೆ ಮರುಪಾವತಿಸಬೇಕಾಗಿರುತ್ತದೆ.

ನಿಗಮದಿಂದ ಬ್ಯಾಂಕ್ ಸಹಯೋಗಯೊಂದಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು, ಕಳೆದ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಅರೆಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿಬಾರದು, ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು, ಅರ್ಜಿದಾರರು ಸೌಲಭ್ಯ ಪಡೆಯಲಿಚ್ಚಿಸುವ ಉದ್ದೇಶ ಕಸುಬುಗಳಲ್ಲಿ ಸಾಕಷ್ಟು ಜ್ಞಾನ ಮತ್ತು ಅನುಭವ ಹೊಂದಿದವರಾಗಿರಬೇಕು. ಅರ್ಜಿದಾರರು 18 ವರ್ಷದಿಂದ 50 ವರ್ಷದ ವಯೋಮಾನದವರಾಗಿರಬೇಕು. ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶಕ್ಕೆ 1,50,000 ರೂ. ನಗರ ಪ್ರದೇಶದವರಿಗೆ 2,00,000 ರೂ. ಮೀರಿರಬಾರದು. ಭೂ ಒಡೆತನ ಯೋಜನೆಯಡಿ ಜಮೀನಿನ ಸೌಲಭ್ಯ ಪಡೆಯಲು ಭೂ ರಹಿತ ಕೃಷಿ ಕಾರ್ಮಿಕರಾಗಿರಬೇಕು. ಕೊಳವೆಬಾವಿ ಸೌಲಭ್ಯ ಪಡೆಯಲು ಕನಿಷ್ಟ 1 ರಿಂದ 5 ಎಕರೆ ಖುಷ್ಕಿ ಜಮೀನು ಹೊಂದಿದ್ದು, ಸಣ್ಣ ಹಿಡುವಳಿದಾರರಾಗಿರಬೇಕು. ನಿಗಮದಿಂದ ಸಾಲಸೌಲಭ್ಯ ಪಡೆಯುವವರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಜನಧನ್ ಬ್ಯಾಂಕ್ ಖಾತೆ / ವೈಯುಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.


Thanks for reading ಸಾಲ, ಸಹಾಯಧನ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಸಾಲ, ಸಹಾಯಧನ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Post a Comment