ಪರೀಕ್ಷೆ ಟೈಮಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಹೇಗೆ?

January 06, 2021


 ಮಾರ್ಚ್, ಏಪ್ರಿಲ್ ಬಂತು ಅಂದ್ರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಆತಂಕ ಶುರುವಾಗುತ್ತೆ. ವರ್ಷವಿಡೀ ಓದಿದ್ರೂ ಈ ಎರಡು ತಿಂಗಳಲ್ಲಿ ಅಗ್ನಿಪರೀಕ್ಷೆ ಎದುರಿಸಲು ಸಿದ್ಧತೆ ನಡೆಸ್ತಾರೆ. ಹಗಲು-ರಾತ್ರಿ ಕಷ್ಟಪಟ್ಟು ಅಂತಿಮ ಪರೀಕ್ಷೆ ಬರೆಯಲು ಅಭ್ಯಾಸ ಮಾಡುತ್ತಾರೆ. ಅಭ್ಯಾಸ, ಸಿದ್ಧತೆ ಎಷ್ಟೇ ನಡೆಸಿದ್ರೂ ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದಂತೆ ಅವರಲ್ಲಿ ಟೆನ್ಷನ್ ಜಾಸ್ತಿ ಆಗುತ್ತದೆ. ಇದ್ರಿಂದಾಗಿ ಅವರ ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ಸದ್ಯ ಎಲ್ಲೆಡೆ ಕೊರೊನಾ ಮಾರಿಯ ಅಟ್ಟಹಾಸದಿಂದ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಅದೇನೆಯಿರಲಿ, ಸಾಂಕ್ರಾಮಿಕ ರೋಗ ಇರಲಿ, ಇಲ್ಲದಿರಲಿ ಪರೀಕ್ಷೆಗಳು ಆತಂಕವನ್ನು ಸೃಷ್ಟಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಯಂತಹ ಕ್ಲಿಷ್ಟಕರ ಸಂದರ್ಭವನ್ನು ಎದುರಿಸಲು ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು.

ಮೊದಲಿಗೆ ಆತಂಕ ಹಾಗೂ ಚಿಂತೆ ಕಾರಣವಾಗುವಂಥವುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಹೀಗೆ ತಮಗೆ ತಾವೇ ಜಾಗೃತಿ ಮೂಡಿಸಿಕೊಳ್ಳುವುದು ಪರೀಕ್ಷೆ ಸಂಬಂಧಿತ ಆತಂಕವನ್ನ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್

ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಈ ಭಯ ಮತ್ತು ಅಭದ್ರತೆಗಳನ್ನು ಹೇಗೆ ನಿರ್ವಹಿಸಬಹುದು. ಮತ್ತು ಶಾಂತವಾಗಿ ಪರೀಕ್ಷೆ ಎದುರಿಸುವುದು ಹೇಗೆ?

-ಆತಂಕಕ್ಕೆ ಕಾರಣ ಏನು?
ಯಾವಾಗಲೂ ಬಾಹ್ಯ ಅಂಶಗಳು ಹೆಚ್ಚಾಗಿ ಒಬ್ಬರ ನಿಯಂತ್ರಣವನ್ನು ಮೀರಿರುತ್ತವೆ ಎಂಬುದನ್ನ ಅರ್ಥಮಾಡಿಕೊಳ್ಳಿ. ಅಂತಹ ಸಂದರ್ಭಗಳಲ್ಲಿ ನಾವು ಏನು ಹೇಳುತ್ತೇವೆ ಎಂಬುದರ ಬಗ್ಗೆ ಜಾಗೃತರಾಗಿರುವುದು ಬಹಳ ಮುಖ್ಯ. ಬಾಹ್ಯ ಅಂಶಗಳು ನಮ್ಮ ಶಕ್ತಿಯನ್ನು ಮಾತ್ರ ಕುಂದಿಸುತ್ತವೆ. ಜೊತೆಗೆ ನಾವು ನಿಸ್ಸಾಹಾಯಕರು ಎಂಬ ಭಾವನೆ ಮೂಡಿಸುತ್ತವೆ. ನಮ್ಮ ಬಗ್ಗೆ ಬೇರೆಯವರ ಉದ್ದೇಶಗಳು/ಅಭಿಪ್ರಾಯಗಳೇ ಇದಕ್ಕೆ ಸ್ಪಷ್ಟ ಉದಾಹರಣೆ.
ಆದ್ದರಿಂದ, ನಮ್ಮ ನಿಯಂತ್ರಣದಲ್ಲಿರುವುದರ ಮೇಲೆ ಕೇಂದ್ರೀಕರಿಸುವುದು ಉತ್ತಮ.

- ತಂಡದೊಂದಿಗಿರಿ
ಅಧ್ಯಯನ ಮಾಡಲು ತಮ್ಮ ಸಮಾನ ಮನಸ್ಕ ಸ್ನೇಹಿತರೊಂದಿಗೆ ಗುಂಪೊಂದನ್ನ ರಚಿಸುವುದು ಕೂಡ ಪರೀಕ್ಷೆಗಳನ್ನ ಎದುರಿಸುವ ಸಿದ್ಧತೆ ನಡೆಸಲು ಉತ್ತಮ ಮಾರ್ಗವಾಗಿದೆ! ಗುಂಪು ಅಧ್ಯಯನವು ವ್ಯಾಕುಲತೆಗೆ ಕಾರಣವಾಗಬಹುದು ಎಂದು ಸಾಮಾನ್ಯವಾಗಿ ಪೋಷಕರು / ಶಿಕ್ಷಕರು ಕಳವಳ ವ್ಯಕ್ತಪಡಿಸುತ್ತಾರೆ. ಆದಾಗ್ಯೂ, ಇದರಿಂದ ಹಲವು ಅನುಕೂಲಗಳನ್ನು ಪಡೆಯಬಹುದು, ಗುಂಪಿನಲ್ಲಿರುವವರು ಪರಸ್ಪರ ಆಸಕ್ತಿ ಹೊಂದಿದ್ದರೆ, ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಗುಂಪು ತಮ್ಮ ಗುರಿಗಳನ್ನು ತಲುಪಲು ಒಬ್ಬರಿಗೊಬ್ಬರು ಪ್ರೇರೇಪಿಸಬಹುದು. ಇತರರೊಂದಿಗೆ ಕೆಲಸ ಮಾಡುವಾಗ ನಮ್ಮ ಚಿಂತೆಗಳಲ್ಲಿ ನಾವು ಕಳೆದುಹೋಗುವ ಸಾಧ್ಯತೆ ಕಡಿಮೆ ಇರುವುದರಿಂದ ಒತ್ತಡವನ್ನು ದೂರ ಮಾಡಿಕೊಳ್ಳಬಹುದು.

ಎಎಐನಲ್ಲಿ 368 ಮ್ಯಾನೇಜರ್, ಜ್ಯೂ. ಎಕ್ಸಿಕ್ಯುಟಿವ್ ‌ಹುದ್ದೆಗಳಿಗ ಅರ್ಜಿ ಆಹ್ವಾನ

- ಸಮಯ ಮೀಸಲಿಡಿ
ನಿಮಗೆ ಶಾಂತಿ ಮತ್ತು ಸಂತೋಷವನ್ನು ನೀಡುವ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಮೆದುಳನ್ನು ಮತ್ತಷ್ಟು ಸಕ್ರಿಯಗೊಳಿಸಬಹುದು. ಇದು ನಿಮ್ಮ ಒತ್ತಡದ ಮಟ್ಟವನ್ನು ಸಹ ಕಡಿಮೆ ಮಾಡಬಹುದು.

- ಹಂಚಿಕೊಳ್ಳಿ
ಯಾವಾಗಲೂ ಉತ್ತಮವಾದ ಸರ್ಪೋರ್ಟಿಂಗ್ ವ್ಯವಸ್ಥೆಯನ್ನು ಹೊಂದಿರುವುದು ಅತ್ಯಂತ ಸಹಾಯಕಾರಿ. ನಮ್ಮ ಸ್ನೇಹಿತನೊಂದಿಗೆ ನಮ್ಮ ಮನಸ್ಸಿನ ದುಗುಡ, ಆತಂಕ ಅಥವಾ ಅಭದ್ರತೆ ಬಗ್ಗೆ ಹಂಚಿಕೊಂಡಾಗ ಅವರು ನಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತೇವೆ. ಅಲ್ಲದೇ, ಕಷ್ಟದ ಸಮಯದಲ್ಲಿ ನಾವು ಒಬ್ಬಂಟಿಯಾಗಿಲ್ಲ ಅನ್ನಿಸುತ್ತದೆ. ಜೊತೆಗೆ ಹೋರಾಟದ ಮನೋಭಾವವನ್ನು ಹೆಚ್ಚಾಗುತ್ತದೆ.

- ಮುಕ್ತವಾಗಿ ಮಾತನಾಡಿ
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದದ್ದನ್ನೇ ಬಯಸುತ್ತಾರೆ. ಆದರೆ ಕೆಲವೊಮ್ಮೆ, ಅವರು ಅದನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದು ಮಕ್ಕಳಿಗೆ ಒತ್ತಡದಂತೆ ತೋರುತ್ತದೆ. ಹೀಗಾಗಿ, ಪೋಷಕರು ಹಾಗೂ ಮಕ್ಕಳು ಮುಕ್ತ ಸಂಭಾಷಣೆ ನಡೆಸುವುದರಿಂದ ಅವರವರ ನಿರೀಕ್ಷೆಗಳನ್ನ ತಿಳಿಯಲು ಸಹಕಾರಿಯಾಗಲಿದೆ.

ಪರೀಕ್ಷೆಯನ್ನು ಹೊರೆಯೆಂದು ಭಾವಿಸಲು ಹೋಗಬೇಡಿ. ಹಾಗೇನಾದರೂ ನೀವು ಭಾವಿಸಿಕೊಂಡರೆ ನಿಮ್ಮ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ, ಪರೀಕ್ಷೆ ಕೂಡ ನಿಮ್ಮ ಅಧ್ಯಯನದ ಭಾಗವೆಂದು ತಿಳಿದೊಂಡು, ಮನಸ್ಸನ್ನು ನಿಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಪರೀಕ್ಷೆಯನ್ನು ಎದುರಿಸಿ. ಆಗ ನಿಮಗೆ ಯಶಸ್ಸು ದೊರೆಯುತ್ತದೆ. ಮನಸ್ಸಿನ ಮೇಲೂ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಪರೀಕ್ಷೆ ಎಂದರೆ ಭಯಬೀಳಬೇಡಿ. ಧೈರ್ಯದಿಂದ ಎದುರಿಸಿ.

ಪಿಯುಸಿ ಕಾಮರ್ಸ್ ಆದ ಮೇಲೆ ಯಾವುದೆಲ್ಲ ಕಲಿಯಬಹುದು ಗೊತ್ತಾ?


Related Articles

Advertisement
Previous
Next Post »