ಬೆಂಗಳೂರು: ಯಾರದ್ದೇ ಮದುವೆ ಆಗಲಿ, ಅಲ್ಲಿ ಅರ್ಚಕರು ಇದ್ದೇ ಇರುತ್ತಾರೆ. ಅವರ ಮಂತ್ರಘೋಷ ಇಲ್ಲದೆಯೇ ಮದುವೆ ನಡೆಯುವುದೇ ಇಲ್ಲ. ಆದರೆ, ಈಗ ಮದುವೆ ಮಾಡಿಸುವ ಅರ್ಚಕರಿಗೆ ಹೆಣ್ಣು ಸಿಗುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ, ಅರ್ಚಕರನ್ನು ಮದುವೆ ಆಗುವ ಮಹಿಳೆಗೆ ಮೂರು ಲಕ್ಷ ನೀಡಲು ಮುಂದಾಗಿದೆ.
ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಮೈತ್ರಿ ಹೆಸರಿನ ಹೊಸ ಯೋಜನೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಬ್ರಾಹ್ಮಣ ಅರ್ಚಕರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ 3 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ನೀಡಲಾಗುತ್ತಿದೆ. ಈ ಯೋಜನೆಗೆ ಈಗ ಕಾಂಗ್ರೆಸ್ ಅಪಸ್ವರ ಎತ್ತಿದೆ.
ಎಲ್ಲಾ ಸಮುದಾಯದಲ್ಲೂ ಅರ್ಚಕರು ಇರುತ್ತಾರೆ. ಹಾಗಾದರೆ, ನೀವು ಅವರಿಗೂ ಈ ಯೋಜನೆ ಅಡಿಯಲ್ಲಿ ಹಣ ನೀಡುತ್ತೀರಾ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಕದ ತೆಲಂಗಾಣದಲ್ಲಿ ಕೂಡ ಇದೇ ಮಾದರಿಯ ಯೋಜನೆ ಇದೆ. ವಿವಿಧ ಸಮುದಾಯಗಳಿಗೆ ಅವರದ್ದೇ ಆದ ಮಂಡಳಿಗಳಿವೆ. ಅವರು ಬೇಕಾದರೆ ಇದೇ ರೀತಿ ಮಾಡಲಿ. ಈ ಯೋಜನೆಯನ್ನ ಸಾರ್ವಜನಿಕರು ಬಳಸಿಕೊಳ್ಳಲಿ. ಕೆಲವರು ಅನಗತ್ಯವಾಗಿ ವಿವಾದ ಮಾಡುತ್ತಾ ಇದ್ದಾರೆ ಎಂದು ಸಚ್ಚಿದಾನಂದಮೂರ್ತಿ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
EmoticonEmoticon