ಸುಕನ್ಯಾ ಸಮೃದ್ಧಿ ಯೋಜನೆಗೆ ಪೋಸ್ಟ್ ಆಫೀಸ್ ನಲ್ಲಿ ಆನ್ ಲೈನ್ ಹಣ ಜಮೆ ಹೇಗೆ?

January 09, 2021


 ಹೆಣ್ಣುಮಕ್ಕಳ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆದು, ಉಳಿತಾಯ ಆರಂಭಿಸುವುದಕ್ಕೆ ಹಲವರು ಆದ್ಯತೆ ನೀಡುತ್ತಾರೆ. ಏಕೆಂದರೆ ಇದರಿಂದ ತೆರಿಗೆ ಉಳಿತಾಯ ಮಾಡುವುದಕ್ಕೆ ಸಾಧ್ಯ ಮತ್ತು ಉತ್ತಮ ಬಡ್ಡಿ ದರ ಕೂಡ ನಡೆಯುತ್ತದೆ. ಅಂದ ಹಾಗೆ ಈ ವರ್ಷದ ಜನವರಿಯಿಂದ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸುಕನ್ಯಾ ಸಮೃದ್ಧಿ ಸೇರಿದಂತೆ ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆ ಆಗುತ್ತದೆ. ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಿದ ಮೇಲೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಅಪ್ಲಿಕೇಷನ್ ಮೂಲಕ ಆನ್ ಲೈನ್ ನಲ್ಲೇ ಎಲ್ಲವನ್ನೂ ನಿರ್ವಹಿಸಬಹುದು.

ಪೋಸ್ಟ್ ಆಫೀಸ್ ನಲ್ಲಿನ ಸುಕನ್ಯಾ ಸಮೃದ್ಧಿ ಖಾತೆಗೆ ಐಪಿಪಿಬಿ ಮೂಲಕ ಆನ್ ಲೈನ್ ಹಣ ವರ್ಗಾವಣೆ ಮಾಡುವ ವಿವಿಧ ಹಂತಗಳ ವಿವರ ಹೀಗಿದೆ:

1. ಬ್ಯಾಂಕ್ ಖಾತೆಯಿಂದ ಐಪಿಪಿಬಿ ಖಾತೆಗೆ ಹಣ ಸೇರ್ಪಡೆ ಮಾಡಬೇಕು.

2. ಡಿಒಪಿ ಪ್ರಾಡಕ್ಟ್ಸ್ ಗೆ ತೆರಳಬೇಕು. ಅದರಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಆರಿಸಿಕೊಳ್ಳಬೇಕು.

3. SSY ಖಾತೆ ಸಂಖ್ಯೆ ಮತ್ತು ನಂತರ DOP ಗ್ರಾಹಕರ ಐ.ಡಿ. ನಮೂದಿಸಬೇಕು.

4. ಕಂತಿನ ಅವಧಿ ಮತ್ತು ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬೇಕು.

5. IPPB ಮೊಬೈಲ್ ಅಪ್ಲಿಕೇಷನ್ ಮೂಲಕ ಯಶಸ್ವಿಯಾಗಿ ಹಣ ವರ್ಗಾವಣೆ ಆದ ಮೇಲೆ ನೋಟಿಫಿಕೇಷನ್ ಬರುತ್ತದೆ.

6. ಪೋಸ್ಟ್ ಆಫೀಸ್ ವಿವಿಧ ಹೂಡಿಕೆಗಳನ್ನು IPPB ಬೇಸಿಕ್ ಉಳಿತಾಯ ಖಾತೆಯಿಂದ ನಿಯಮಿತವಾಗಿ ಪಾವತಿ ಮಾಡಬಹುದು.

ಸುಕನ್ಯಾ ಸಮೃದ್ಧಿ ಯೋಜನೆ ಈಚಿನ ಬಡ್ಡಿ ದರ

ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರವನ್ನು ನಿರ್ಧಾರ ಮಾಡುತ್ತದೆ. ಮತ್ತು ಅದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರುಪಾಯಿ ಮತ್ತು ಗರಿಷ್ಠ 1.5 ಲಕ್ಷ ರುಪಾಯಿ ಹೂಡಿಕೆ ಮಾಡಬಹುದು. ಖಾತೆ ತೆರೆದ 21 ವರ್ಷಗಳಿಗೆ ಅಥವಾ ಹೆಣ್ಣುಮಗುವಿನ ಮದುವೆ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಮೆಚ್ಯೂರ್ ಆಗುತ್ತದೆ. ಸದ್ಯಕ್ಕೆ ಈ ಯೋಜನೆ ಬಡ್ಡಿ ದರ 7.6% ಆಗುತ್ತದೆ.

DakPay ಡಿಜಿಟಲ್ ಪೇಮೆಂಟ್ಸ್ ಆಪ್

ಕಳೆದ ತಿಂಗಳು DakPay ಡಿಜಿಟಲ್ ಪೇಮೆಂಟ್ಸ್ ಅಪ್ಲಿಕೇಷನ್ ಶುರು ಮಾಡಲಾಗಿದೆ. ಪೋಸ್ಟ್ ಆಫೀಸ್ ಮತ್ತು ಐಪಿಪಿಬಿ ಗ್ರಾಹಕರು ಇದನ್ನು ಬಳಕೆ ಮಾಡಬಹುದು. ಇಂಡಿಯಾ ಪೋಸ್ಟ್ ಮತ್ತು ಐಪಿಪಿಬಿ ಮೂಲಕ ದೊರೆಯುವ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಯನ್ನು ಪಡೆಯಬಹುದು.

ಹಣ ಕಳುಹಿಸುವುದು, ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮತ್ತು ಸೇವೆಗಳಿಗೆ ಹಣ ಪಾವತಿ ಹಾಗೂ ವರ್ತಕರಿಗೆ ಡಿಜಿಟಲ್ ಪಾವತಿಯನ್ನು ಮಾಡಬಹುದು. ಜತೆಗೆ ದೇಶದ ಯಾವುದೇ ಬ್ಯಾಂಕ್ ಜತೆಗೆ ಗ್ರಾಹಕರು ವ್ಯವಹಾರ ನಡೆಸಬಹುದು.Related Articles

Advertisement
Previous
Next Post »