ಪ್ರೊಪೋಸ್​ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಜೋಡಿ; ಮುಂದೇನಾಯ್ತ ಗೊತ್ತಾ?

January 01, 2021
Friday, January 1, 2021

 


ವಿಭಿನ್ನವಾಗಿ ಪ್ರಪೋಸ್​ ಮಾಡುವ ಮೂಲಕ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ಅಂದುಕೊಳ್ಳುವವರು ಹಲವರಿದ್ದಾರೆ. ಕೆಲವರು ಸರ್​ಪ್ರೈಸ್​ ಆಗಿ ಪ್ರೇಮನಿವೇದನೆ ಮಾಡುತ್ತಾರೆ. ಅದರಂತೆ ಇಲ್ಲೊಬ್ಬ ಪ್ರಿಯಕರ ತನ್ನ ಪ್ರೇಯಸಿಗಾಗಿ ಎತ್ತರದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಪೋಸ್​​ ಮಾಡಿದ್ದಾನೆ. ಆದರೆ ಪ್ರಪೋಸ್​ ಮಾಡುತ್ತಿದ್ದಂತೆ ಈ ಜೋಡಿ ಪೇಚಿಗೆ ಸಿಲುಕಿದ್ದಾರೆ. ಅದೃಷ್ಟಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಆಸ್ಟ್ರಿಯಾದಲ್ಲಿ ಈ ಘಟನೆ ನಡೆದಿದ್ದು, 27 ವರ್ಷದ ಯುವಕ 32 ವರ್ಷದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಆಕೆಯ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಅಂದುಕೊಂಡಿದ್ದನು. ಸಮಯ ಕೂಡಿ ಬಂದಾಗ ಹೇಳಬೇಕು ಎಂದು ಅಲೋಚಿಸಿದ್ದನು. ಒಂದು ದಿನ ಎತ್ತರದಲ್ಲಿರುವ ಬಂಡೆಕಲ್ಲಿನ ಪ್ರದೇಶಕ್ಕೆ ಹುಡುಗಿಯನ್ನು ಕರೆದುಕೊಂಡು ಹೋಗಿ ಪ್ರಪೋಸ್​ ಮಾಡುತ್ತಾನೆ.
ಆತನ ಪ್ರಪೋಸ್​ ಅನ್ನು ಆಕೆ ಖುಷಿಯಲ್ಲಿ ಒಪ್ಪಿಕೊಳ್ಳುತ್ತಾಳೆ. ಹೀಗೆ ಖುಷಿಯಲ್ಲಿದ್ದ ಹುಡುಗಿ ಕಾಲು ಜಾರಿ ಬಂಡೆಕಲ್ಲಿನಿಂದ ಕೆಳಗೆ ಬಿದ್ದಿದ್ದಾಳೆ.

ಯುವತಿ ಸುಮಾರು 650ಮೀಟರ್​ ಕೆಳಗೆ ಬಿದ್ದಿದ್ದಾಳೆ. ಆಕೆ ಬಿದ್ದದ್ದನ್ನು ಕಂಡು ಹುಡುಗಿಯನ್ನು ರಕ್ಷಿಸಲು ಯವಕನು ಹಾರಿದ್ದಾನೆ. ಆದರೆ ಹಾರಿದ ರಭಸದಲ್ಲಿ ಕೊಂಬೆಯಲ್ಲಿ ಸಿಲುಕಿಕೊಂಡಿದ್ದಾನೆ.

ಪ್ರಪಾತಕ್ಕೆ ಬಿದ್ದ ಯುವತಿ ಪ್ರಪಾತದಲ್ಲಿದ್ದ ಹಿಮದ ರಾಶಿ ಮೇಲೆ ಬಿದ್ದಿದ್ದಾಳೆ. ಈ ಸಮಯದಲ್ಲಿ ಅಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಯುವತಿಯನ್ನು ಕಂಡು ರಕ್ಷಿಸಿದ್ದಾರೆ. ಅತ್ತ ಕೊಂಬೆಯಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಈ ಪ್ರೇಮಿಗಳು ಯಾವುದೇ ತೊಂದರೆ ಇಲ್ಲದೆ ಬಚಾವಾಗಿದ್ದಾರೆ.

Thanks for reading ಪ್ರೊಪೋಸ್​ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಜೋಡಿ; ಮುಂದೇನಾಯ್ತ ಗೊತ್ತಾ? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಪ್ರೊಪೋಸ್​ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಜೋಡಿ; ಮುಂದೇನಾಯ್ತ ಗೊತ್ತಾ?

Post a Comment