ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದ ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಜಾರಿಗೊಳಿಸಿರುವ ಜನಸೇವಕ ಹಾಗೂ ಗ್ರಾಮೀಣಾ ಪ್ರದೇಶದಲ್ಲಿ ಗ್ರಾಮ ಒನ್ ಸೇವೆ ಸದ್ಯದಲ್ಲೇ ಇನ್ನಷ್ಟು ವಿಸ್ತರಣೆಯಾಗಲಿದೆ.
ಬೆಂಗಳೂರಿನ ರಾಜಾಜಿನಗರ, ದಾಸರಹಳ್ಳಿ, ಬೊಮ್ಮನಹಳ್ಳಿ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವಕ ಜಾರಿಯಲ್ಲಿದ್ದು, ಇಂದಿನಿಂದ ಆಧಾರ್ ತಿದ್ದುಪಡಿ, ಎಪಿಎಲ್ ಕಾರ್ಡ್, ಇ-ಸ್ಟಾಂಪ್ ಸೇವೆ ಹೊಸದಾಗಿ ಸೇರ್ಪಡೆಯಾಗಲಿವೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ 3 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯಲ್ಲಿ 100 ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಗ್ರಾಮ ಒನ್ ಸೇವೆ ಜಾರಿಯಾಗಿದೆ.
ಶೀಘ್ರದಲ್ಲೇ ಬೆಳಗಾವಿ ವಿಭಾಗದ ವಿಜಯಪುರ, ಕಲಬುರಗಿ ವಿಭಾಗದ ಬೀದರ್ ಹಾಗೂ ಮೈಸೂರು ವಿಭಾಗದ ಚಿಕ್ಕಮಗಳೂರಿನಲ್ಲಿ ಸೇವೆ ಆರಂಭವಾಗಲಿದೆ.
ಇನ್ನು ಈ ಯೋಜನೆ ಮೂಲಕ ಗ್ರಾಮದಲ್ಲೇ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಿಂಚಣಿ, ಆರೋಗ್ಯ ಕಾರ್ಡ್, ಹಿರಿಯ ನಾಗರಿಕ ಗುರುತಿನ ಚೀಟಿ ಸೇರಿದಂತೆ ಪ್ರಮುಖ ಸೇವೆಗಳನ್ನು ಪಡೆಯಬಹುದಾಗಿದೆ. ಹೊಸದಾಗಿ ಮೈಕ್ರೋ ಬ್ಯಾಂಕಿಂಗ್ ಸೇವೆ ಆರಂಭವಾಗಲಿದೆ. ಇದರಿಂದ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಯೋಜನೆಗಳ ನೆರವನ್ನು ಸ್ಥಳೀಯವಾಗಿಯೇ ಪಡೆಯಬಹುದಾಗಿದೆ.
1 komentar:
Write komentarSuper
ReplyEmoticonEmoticon