ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಸಿಹಿಸುದ್ದಿ : ಅರ್ಹ ರೈತರಿಗೆ ಸಾಲಮನ್ನಾ

January 29, 2021

 


ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ತಾಂತ್ರಿಕ ಕಾರಣಗಳಿಂದ 2018-19 ನೇ ಸಾಲ ಮನ್ನಾ ಯೋಜನೆ ತಲುಪದ ರೈತರಿಗೆ ಕೂಡಲೇ ಸಾಲ ಮನ್ನಾ ಪ್ರಯೋಜನ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಬೆಳಗಾವಿ ರೈತರಿಗೆ ಸಾಲಮನ್ನಾ ಸಂಪೂರ್ಣ ತಲುಪದ ಬಗ್ಗೆ ಬಿಜೆಪಿ ಸದಸ್ಯ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಎಸ್.ಟಿ. ಸೋಮಶೇಖರ್, ಬೆಳಗಾವಿ 2,033 ಮಂದಿ ಸೇರಿ ರಾಜ್ಯಾದ್ಯಯಂತ ತಾಂತ್ರಿಕ ಕಾರಣಗಳಿಂದ ಯೋಜನೆ ಫಲಾನುಭವ ಪಡೆಯದ ರೈತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲಾಗುವುದು ಎಂದು ಹೇಳಿದರು.Related Articles

Advertisement
Previous
Next Post »