ವಿದ್ಯಾರ್ಥಿಗಳಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ: ಡಿಜಿ ಲಾಕರ್ ಸೌಲಭ್ಯ

January 06, 2021


 ಬೆಂಗಳೂರು: ಎಸ್​ಎಸ್​​ಎಲ್​ಸಿಯಿಂದ ಉನ್ನತ ಶಿಕ್ಷಣದವರೆಗೂ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನ ಇನ್ಮುಂದೆ ಡಿಜಿಟಲ್​ ರೂಪದಲ್ಲಿ ಸಂಗ್ರಹಿಸಿ ಇಡುವ ಡಿಜಿ ಲಾಕರ್​​ ವ್ಯವಸ್ಥೆ ಕಲ್ಲಿಸಲಾಗುವುದು ಎಂದು ಡಿಸಿಎಂ ಡಾ. ಸಿ. ಎನ್​ ಅಶ್ವತ್ಥ ನಾರಾಯಣ ಮಾಹಿತಿ ನೀಡಿದ್ದಾರೆ.

ಡಿಜಿ ಲಾಕರ್​ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳು ಇನ್ಮುಂದೆ ಹೆಚ್ಚು ಸುರಕ್ಷಿತವಾಗಿ ಇರಲಿದೆ. ಈ ವ್ಯವಸ್ಥೆ ಅನುಷ್ಠಾನದ ಬಳಿಕ ರಾಜ್ಯದಲ್ಲಿ ಯಾವುದೇ ಮಾದರಿಯ ಕಾಗದ ರೂಪದ ಶೈಕ್ಷಣಿಕ ದಾಖಲೆಗೆ ಅವಕಾಶ ಇರೋದಿಲ್ಲ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.

ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರದ ಕೇಂದ್ರ ಮಟ್ಟದ ಅಧಿಕಾರಿಗಳು ಹಾಗೂ ರಾಜ್ಯ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಈ ಮಹತ್ವದ ಮಾಹಿತಿಯನ್ನ ಹೇಳಲಾಯ್ತು.

ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನ ಭದ್ರವಾಗಿ ಇಡಲು ಈ ವ್ಯವಸ್ಥೆಯನ್ನ ಮಾಡಲಾಗುತ್ತೆ. ಇದಕ್ಕೆ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ ಎಂದು ಕರೆಯಲಾಗುತ್ತೆ. ಅಲ್ಲದೇ ಪ್ರತಿ ವಿದ್ಯಾರ್ಥಿಯೂ ತನ್ನ ದಾಖಲೆಗಳನ್ನ ಪರಿಶೀಲನೆ ಮಾಡಬಹುದಾಗಿದೆ.

2003 ರಿಂದ ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಮಾರ್ಕ್ಸ್​ ಕಾರ್ಡ್​ ಗಳನ್ನ ಡಿಜಿಲಿಕರಣ ಮಾಡಲಾಗುತ್ತೆ. ವಿದ್ಯಾರ್ಥಿ ಆಧಾರ್​ ಕಾರ್ಡ್​ ಹಾಗೂ ಇ ಕೆವೈಸಿ ಸಹಾಯದಿಂದ ಡಿಜಿ ಲಾಕರ್​ ನಲ್ಲಿ ತನ್ನ ದಾಖಲೆಯನ್ನ ಪಡೆಯಬಹುದಾಗಿದೆ.Related Articles

Advertisement
Previous
Next Post »