ರಾಜ್ಯ 'ಪಂಚಾಯತ್ ರಾಜ್ ಇಲಾಖೆ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

January 01, 2021
Friday, January 1, 2021

 


ಬೆಂಗಳೂರು : ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವಂತ ವಿವಿಧ 30 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಪೋಸ್ಟ್ ಮೂಲಕ ನಿಗಧಿತ ನಮೂನೆಯಲ್ಲಿ ಸೂಕ್ತ ಮಾಹಿತಿಯನ್ನು ಭರ್ತಿ ಮಾಡಿ, ಸಲ್ಲಿಸಲು ಕೊನೆಯ ದಿನಾಂಕ 11-01-2021ರ ಸಂಜೆ 5.30 ಆಗಿರುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು 30 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂತಹ ವಿವಿಧ ಹುದ್ದೆಗಳ ವಿವರ ಈ ಕೆಳಗಿನಂತಿದೆ.

ಹುದ್ದೆಗಳ ವಿವರ

  1. ರಾಜ್ಯ ಹ್ಯೂಮನ್ ರಿಸೋರ್ಸ್ ಡೆವೆಲ್ಮಂಟ್ ಕನ್ಸಲ್ಟ್ - 01
  2. ರಾಜ್ಯ WQMS ಕನ್ಸಲ್ಟೆಂಟ್ - 01
  3. ಸಪೋರ್ಟ್ ಇಂಜಿನಿಯರ್ - 20
  4. ಸಿಸ್ಟಂ ಅಡ್ಮಿನ್ - 01
  5. ಜಿಲ್ಲಾ ಪ್ರೋಜೆಕ್ಟ್ ಮ್ಯಾನೇಜರ್ - 01
  6. ಜಿಲ್ಲಾ IEC ಕನ್ಸಲ್ಟೆಂಟ್ - 01
  7. ಜಿಲ್ಲಾ ಸ್ಯಾನಿಟೇಷನ್ ಮತ್ತು ಹೈಜಿನ್ ಪ್ರಮೋಷನ್ ಕನ್ಸಲ್ಟೆಂಟ್ - 01
  8. ಜಿಲ್ಲಾ SLWM ಕನ್ಸಲ್ಟೆಂಟ್ - 01
  9. ಜಿಲ್ಲಾ MIS/M&E ಕನ್ಸಲ್ಟೆಂಟ್ - 01
  10. ಜಿಲ್ಲಾ ಹ್ಯೂಮನ್ ರಿಸೋರ್ಸ್ ಡೆವೆಲ್ಮೆಂಟ್ ಕನ್ಸಲ್ಟೆಂಟ್ - 01

ಈ ಮೇಲ್ಕಂಡ ಹುದ್ದೆಗಳಿಗೆ ಒಂದು ವರ್ಷಕ್ಕೆ ಸೀಮಿತವಾಗುವಂತೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳ ವೃತ್ತಿ ಚಾಕಚಕ್ಯತೆಯ ಅನುಸಾರವಾಗಿ ಗುತ್ತಿಗೆಯ ಅವಧಿಯನ್ನು ಹೆಚ್ಚಿಸಲು ಬಹುದಾಗಿದೆ.

ಈ ಹುದ್ದೆಗಳಿಗೆ ಸೂಕ್ತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, The Commissioner, Rural Drinking Water and Sanitation Deparment, 2nd Floor, KHB Complex, Cauvery Bhavan, KG Road, Bengaluru-56009 ವಿಳಾಸಕ್ಕೆ ದಿನಾಂಕ 11-01-2021ರ ಒಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ, ಅರ್ಜಿ ನಮೂನೆಗಾಗಿ ಈ ಕೆಳಗಿನ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿಕೊಟ್ಟು ಪಡೆಯಬಹುದಾಗಿದೆ. https://rdpr.karnataka.gov.in/page/Recruitment/Notifications/kn

Thanks for reading ರಾಜ್ಯ 'ಪಂಚಾಯತ್ ರಾಜ್ ಇಲಾಖೆ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾಜ್ಯ 'ಪಂಚಾಯತ್ ರಾಜ್ ಇಲಾಖೆ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Post a Comment