ನವದೆಹಲಿ : ಕೇಂದ್ರ ಸರ್ಕಾರ ಕೊರೊನಾ ಕೋವ್ಯಾಕ್ಸಿನ್ ಹಂಚಿಕೆಗೆ ಸಕಲ ಸಿದ್ದತೆ ನಡೆಸುತ್ತಿದೆ. ಜನವರಿ 16 ರಿಂದ ಲಸಿಕೆ ಲಭ್ಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಹಾಗೂ ಫ್ರಂಟ್ ಲೈನ್ ವರ್ಕಸ್ ಗೆ ನೀಡಲಾಗುತ್ತೆ, ಜೊತೆಗೆ 50 ವರ್ಷಕ್ಕಿಂತ ಮೇಲ್ಪಟ್ಟವರಿಗೂ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ.
ಇನ್ನೂ, ಲಸಿಕೆ ನೀಡುವ ಸಂದರ್ಭದಲ್ಲಿ ಐಡಿ ಕಾರ್ಡ್ ಕಡ್ಡಾಯವಾಗಿರಲಿದೆ ಎನ್ನಲಾಗಿದ್ದು, ಆರ್ ಕ್ಯೂ ಕೋಡ್ ಹೊಂದಿರುವ ಸರ್ಟಿಫಿಕೇಟ್ ಕೊರೊನಾ ಲಸಿಕೆ ಪಡೆದುಕೊಳ್ಳಲು ಕಡ್ಡಾಯವಾಗಿದೆ.,
ಲಸಿಕೆ ಹಾಕಿಸಿಕೊಳ್ಳಲು ಯಾವ ಗುರುತಿನ ಚೀಟಿ ಇರಬೇಕು..?
1) ಡಿ ಎಲ್
2) ಪಾಸ್ ಪೋರ್ಟ್
3) ಹೆಲ್ತ್ ಇನ್ಯುರೆನ್ಸ್
4) ಬ್ಯಾಂಕ್ ಪಾಸ್ ಬುಕ್
5) ಸರ್ವಿಸ್ ಐಡಿ
6) ಫೋಸ್ಟ್ ಆಫೀಸ್ ಪಾಸ್ ಬುಕ್
7) ಪೆನ್ಶನ್ ಡಾಕ್ಯುಮೆಂಟ್
2021ರ ಜನವರಿ 16ರಂದ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಲಿದೆ. ಮೊದಲ ಹಂತದಲ್ಲಿ ಸುಮಾರು 3 ಕೋಟಿ ಕೊರೊನಾ ವಾರಿಯಾರ್ಸ್ʼಗೆ ನೀಡಲಾಗುತ್ತೆ. ನಂತ್ರ 50 ವರ್ಷ ಮೇಲ್ಪಟ್ಟವರು ಮತ್ತು 50 ಕ್ಕಿಂತ ಕಡಿಮೆ ವಯಸ್ಸಿನ ರೋಗ ಲಕ್ಷಣಗಳನ್ನ ಹೊಂದಿರುವ ಗುಂಪುಗಳು 27 ಕೋಟಿ ಜನಸಂಖ್ಯೆಗೆ ಆದ್ಯತೆ ನೀಡಲಾಗುತ್ತೆ ಎಂದು ಸರ್ಕಾರ ಘೋಷಿಸಿದೆ
EmoticonEmoticon