ಬೆಂಗಳೂರು: ರಾಜ್ಯ ಪೊಲೀಸರಿಗೆ ಸಿಹಿ ಸಿಕ್ಕಿದ್ದು,ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸುವಂತೆ DG & IGP ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ಅದ್ರಂತೆ, ನಗರ ಪೊಲೀಸ್ ಆಯುಕ್ತರು, ಎಲ್ಲಾ ವಲಯಗಳ IGP ಮತ್ತು ಎಲ್ಲಾ SPಗಳಿಗೆ ಸೂಚನೆ ನೀಡಿದ್ದಾರೆ.
ತುರ್ತು ಪರಿಸ್ಥಿತಿ ಬಿಟ್ಟು ಎಲ್ಲ ಸಂದರ್ಭದಲ್ಲಿ ವಾರದ ರಜೆ ಕಡ್ಡಾಯವಾಗಿ ನೀಡಬೇಕು ಎಂದಿರುವ ಅವ್ರು, ಈ ಹಿಂದೆಯೂ ವಾರದ ರಜೆ ಕಡ್ಡಾಯಗೊಳಿಸುವಂತೆ ಆದೇಶ ನೀಡಲಾಗಿತ್ತು. ಆದ್ರೆ, ಕೆಲ ಸಿಬ್ಬಂದಿಗಳು ತಮಗೆ ಠಾಣಾಧಿಕಾರಿಗಳು ವಾರದ ರಜೆಯನ್ನ ನೀಡುತ್ತಿಲ್ಲ ಎಂದು DG & IGP ಪ್ರವೀಣ್ ಸೂದ್ ಅವ್ರಿಗೆ ಕೆಲ ನೊಂದ ಪೊಲೀಸರು ಪತ್ರ ಬರೆದಿದ್ದರು. ಹಾಗಾಗಿ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಪ್ರವೀಣ್ ಸೂದ್ ಅವರು ತಮ್ಮ ಠಾಣೆಯಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯವಾಗಿ ರಜೆ ನೀಡುವಂತೆ ವಲಯ IGP ಮತ್ತು ಜಿಲ್ಲಾ SPಗಳಿಗೆ ಕಟ್ಟುನಿಟ್ಟಾಗಿ ಸೂಚನೆ ಕೊಟ್ಟಿದ್ದಾರೆ.
EmoticonEmoticon