60 ಸಾವಿರ ರೂ.ಗೆ ನವಜಾತ ಮಕ್ಕಳ ಮಾರಾಟ : ದಂಧೆಯನ್ನು ಭೇದಿಸಿ 9 ಜನರನ್ನು ಬಂದಿಸಿದ ಮುಂಬೈ ಪೊಲೀಸ್

January 18, 2021

 


ಮುಂಬೈ : ಬಾಂದ್ರಾ ರೈಲು ನಿಲ್ದಾಣ ಸಮೀಪದ ಖೇರ್ವಾಡಿ ಬಡಾವಣೆಯಲ್ಲಿ ನವಜಾತ ಶಿಶುಗಳ ಮಾರಾಟ ದಂಧೆಗೆ ಸಂಬಂಧಿಸಿದಂತೆ ವೈದ್ಯ ಸೇರಿದಂತೆ ಒಂಬತ್ತು ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

'ಮಾಹಿತಿ ಸಂಗ್ರಹಿಸಿ, ಮುಂಬೈ ಮತ್ತು ಪುಣೆಯಲ್ಲಿ ಮಹಿಳಾ ಏಜೆಂಟ್ ಮೂಲಕ ತನ್ನ ಎರಡು ನವಜಾತ ಶಿಶುಗಳನ್ನು ಮಾರಾಟ ಮಾಡಿದ್ದ ಮಹಿಳೆಯನ್ನು ವಿಚಾರಣೆ ಮಾಡಲಾಯಿತು. ಈ ಏಜೆಂಟ್ ನ ವಿಚಾರಣೆಯಿಂದಾದ ನಂತರ, ತನ್ನ ನವಜಾತ ಶಿಶುವನ್ನು ಧಾರಾವಿಯ ಕುಟುಂಬವೊಂದಕ್ಕೆ ಮಾರಿದ ಇನ್ನೊಬ್ಬ ಮಹಿಳೆಗೆ ನಾವು ದಾರಿ ಮಾಡಿಕೊಟ್ಟೆವು' ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿ ಯೋಗೇಶ್ ಸಾವಂತ್ ಹೇಳಿದ್ದಾರೆ.

'ಈ ಕುಟುಂಬಗಳಿಗೆ ಏಜೆಂಟ್ ಮತ್ತು ಎನ್ ಜಿಒ ಸದಸ್ಯರು ಆಮಿಷ ಒಡ್ಡಿದ್ದರು. ಇದರ ಬೆಲೆ 60 ಸಾವಿರ ದಿಂದ 1.5 ಲಕ್ಷ ರೂಪಾಯಿವರೆಗೆ ಇದೆ' ಎಂದು ಸಾವಂತ್ ಹೇಳಿದ್ದಾರೆ. ವರದಿಗಳ ಪ್ರಕಾರ, ಹೆಣ್ಣು ಮಕ್ಕಳನ್ನು 60 ಸಾವಿರ ರೂ.ಗೆ ಮತ್ತು ಬಾಲಕರು 1.50 ಲಕ್ಷ ರೂ.ಗೆ ಮಾರಾಟಮಾಡಿದ್ದಾರೆ. ಮುಂಬಯಿಯ ಪಶ್ಚಿಮ ಉಪನಗರಗಳಲ್ಲಿ ಸಕ್ರಿಯವಾಗಿರುವ ಎನ್ ಜಿಒ ಸದಸ್ಯರನ್ನು ಬಂಧಿಸಲು ಶೋಧ ನಡೆಯುತ್ತಿದೆ.

ಆರೋಪಿಗಳು ಶಿಶುಗಳನ್ನು ಖರೀದಿಸಿದ ಕುಟುಂಬಗಳಿಗೆ ಹೆರಿಗೆ ಪ್ರಮಾಣ ಪತ್ರವನ್ನೂ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಅಂತಹ ಕುಟುಂಬಗಳ ಸದಸ್ಯರೂ ಸೇರಿದ್ದಾರೆ.

ಈ ರಾಕೆಟ್ ಮೂಲಕ ಮಾರಾಟವಾದ ಏಳು ಶಿಶುಗಳ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ. ತಮ್ಮ ಶಿಶುಗಳನ್ನು ಮಾರಿದ ಮಹಿಳೆಯರು ಕಡಿಮೆ ಆದಾಯವರ್ಗದಿಂದ ಬಂದವರಾಗಿರುತ್ತಾರೆ.


Related Articles

Advertisement
Previous
Next Post »