ರಾಜ್ಯ ಸರ್ಕಾರದಿಂದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ : 3 ತಿಂಗಳ ಗೌರವ ಧನ ಬಿಡುಗಡೆ

January 02, 2021
Saturday, January 2, 2021

 


ಬೆಂಗಳೂರು : ರಾಜ್ಯದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ಯೋಜನೆಯಡಿಯ ಅಡುಗೆ ಸಿಬ್ಬಂದಿಗಳ ಮೂರು ತಿಂಗಳ ಬಾಕಿ ವೇತನವನ್ನು ಬಿಡುಗಡೆ ಮಾಡಿ, ರಾಜ್ಯ ಸರ್ಕಾರ ಆದೇಶಿದೆ.

ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಮತ್ತು ಪದನಿಮಿತ್ತ ಸರ್ಕಾರ ಅಧೀನ ಕಾರ್ಯದರ್ಶಿ ಎಸ್ ಆರ್ ಎಸ್ ನಾಧನ್ ನಡಾವಳಿ ಹೊರಡಿಸಿದ್ದು, 2020-21ನೇ ಸಾಲಿಗೆ ರಾಷ್ಟ್ರೀಯ ಕಾರ್ಯಕ್ರಮದಡಿ ಪ್ರಾಥಮಿಕ ಶಿಕ್ಷಣಕ್ಕೆ ಪೌಷ್ಠಿಕ ಆಹಾರ ಬೆಂಬಲ ಕಾರ್ಯಕ್ರಮದಡಿ ಮಧ್ಯಾಹ್ನದ ಉಪಹಾರ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ 1,17,999 ಅಡುಗೆ ಸಿಬ್ಬಂದಿಗಳಿಗೆ ಸೆಪ್ಟೆಂಬರ್-2020 ರಿಂದ ನವೆಂಬರ್ -2020ರವರೆಗೆ 3 ತಿಂಗಳ ಗೌರವ ಸಂಭಾವನೆಯನ್ನು ಪಾವತಿಸಲು ರೂ.9,345.76 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ರಾಜ್ಯ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.Thanks for reading ರಾಜ್ಯ ಸರ್ಕಾರದಿಂದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ : 3 ತಿಂಗಳ ಗೌರವ ಧನ ಬಿಡುಗಡೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾಜ್ಯ ಸರ್ಕಾರದಿಂದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ : 3 ತಿಂಗಳ ಗೌರವ ಧನ ಬಿಡುಗಡೆ

Post a Comment