ಈ ಕಾರಣಕ್ಕೆ ʼ2 ನಿಮಿಷʼಗಳ ಕಾಲ ಸ್ತಬ್ಧವಾಗಲಿದೆ ಭಾರತ: ʼಕೇಂದ್ರ ಸರ್ಕಾರʼದಿಂದ ಹೊಸ ಆದೇಶ

January 20, 2021


 ನವದೆಹಲಿ: ಜನವರಿ 30ಕ್ಕೆ ಮಹಾತ್ಮ ಗಾಂಧಿಯವರ ಪುಣ್ಯತಿಥಿ.. ಈ ದಿನವನ್ನ ಪ್ರತಿ ಬಾರಿಯೂ ಹುತಾತ್ಮರ ದಿನ ಅಂತಾನೇ ಆಚರಿಸಲಾಗ್ತಿದೆ. ಈ ದಿನಕ್ಕೆ ಸಂಬಂಧಿಸಿದಂತೆ ದೇಶದ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರ ನೆನಪಿಗಾಗಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವಂತೆ ಸೂಚಿಸಲಾಗಿದೆ. ಅದ್ರಂತೆ, ಈ ಅವಧಿಯಲ್ಲಿ ಭಾರತ ಸ್ತಬ್ಧವಾಗಲಿದೆ.

ಗೃಹ ಸಚಿವಾಲಯ (ಹುತಾತ್ಮರ ದಿನ) ಹೊರಡಿಸಿರುವ ಹುತಾತ್ಮರ ದಿನಾಚರಣೆಯ ಈ ಆದೇಶದಂತೆ, ಪ್ರತಿವರ್ಷ ಜನವರಿ 30ರಂದು ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಬೇಕು

ಇದರೊಂದಿಗೆ, ಆ ಎರಡು ನಿಮಿಷಗಳ ಕಾಲ ಇಡೀ ದೇಶದಲ್ಲಿ ಯಾವುದೇ ಕೆಲಸ ಅಥವಾ ಚಲನೆ ಇರುವುದಿಲ್ಲ. ಸೈರನ್ ವ್ಯವಸ್ಥೆ ಇರುವ ಸ್ಥಳಗಳಲ್ಲಿ, ಮೌನವನ್ನ ನೆನಪಿಸಲು ಸೈರನ್ ನುಡಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಸೈನ್ಯದ ಬಂದೂಕಿನಿಂದ ಗುಂಡು ಹಾರಿಸುವುದರ ಮೂಲಕವೂ ನೆನಪಿಸಲಾಗುತ್ತೆ. ಅಂದ್ಹಾಗೆ, ಬೆಳಿಗ್ಗೆ 10.59 ರಂದು ಅಲರ್ಟ್‌ ನೀಡಲಾಗುತ್ತೆ. ನಂತರ, ಎಲ್ಲರೂ 2 ನಿಮಿಷಗಳ ಕಾಲ ಮೌನಾಚರಣೆ ಆಚರೀಸ್ಬೇಕು. ಇದನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶ ಹೊರಡಿಸಲಾಗಿದೆ.Related Articles

Advertisement
Previous
Next Post »