ಶಾಲಾ,ಕಾಲೇಜು ಆರಂಭದ ಬೆನ್ನಲ್ಲೇ ಬಿಗ್ ಶಾಕ್ : ನಿನ್ನೆ ಒಂದೇ ದಿನ 25 ಶಿಕ್ಷಕರಿಗೆ ಕೊರೊನಾ ಸೋಂಕು!

January 04, 2021

 


ಬೆಂಗಳೂರು : ಶಾಲೆ ಆರಂಭದ ಬೆನ್ನಲ್ಲೇ ಕೊರೊನಾದ ಆತಂಕ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ ರಾಜ್ಯದ 25 ಶಿಕ್ಷಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಶಾಲಾ, ಕಾಲೇಜು ಆರಂಭವಾಗಿ ಮೂರನೇ ದಿನವಾದ ಸೋಮವಾರ ಒಂದೇ ರಾಜ್ಯದಲ್ಲಿ 23 ಶಿಕ್ಷಕರು, ಇಬ್ಬರು ಉಪನ್ಯಾಸಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಶಾಲೆ ಆರಂಭವಾದ ಬಳಿಕ ಈವರೆಗೆ ಒಟ್ಟಾರೆ 35 ಬೋಧಕ ಸಿಬ್ಬಂದಿ ಹಾಗೂ ನಾಲ್ವರು ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 7, ಶಿವಮೊಗ್ಗ 4, ಚಿಕ್ಕಮಗಳೂರು 5, ಉತ್ತರ ಕನ್ನಡ, ಹಾವೇರಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 2, ಕೊಪ್ಪಳ, ಬಳ್ಳಾರಿಯಲ್ಲಿ ತಲಾ ಒಬ್ಬರು ಶಿಕ್ಷಕರಲ್ಲಿ ಹಾಗೂ ಯಾದಗಿರಿಯ ಇಬ್ಬರು ಉಪನ್ಯಾಸಕರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.


Related Articles

Advertisement
Previous
Next Post »