ಕೇಂದ್ರ ಸರ್ಕಾರದಿಂದ 'ದೇಶದ ಜನತೆಗೆ' ಗುಡ್‌ ನ್ಯೂಸ್‌: 2022ರ ಆಗಸ್ಟ್ 15ರ ವೇಳೆಗೆ 'ಎಲ್ಲರಿಗೂ ಮನೆ' ಅಮಿತ್ ಶಾ ಘೋಷಣೆ

January 22, 2021

 


ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ 2022ರ ಆಗಸ್ಟ್ 15ರೊಳಗೆ ದೇಶದ ಪ್ರತಿಯೊಬ್ಬ ಪ್ರಜೆಗೂ ಮನೆ ಒದಗಿಸಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. ಅಹಮದಾಬಾದ್ ನ ಶೀಲಾಜ್ ನಲ್ಲಿ ಒಂದು ಕಿ.ಮೀ ಉದ್ದದ ಮೇಲ್ಸೇತುವೆಯ ಉದ್ಘಾಟನೆ ಯಲ್ಲಿ ಅವರು ಮಾತನಾಡಿಡುತ್ತ ಈ ಬಗ್ಗೆ ತಿಳಿಸಿದೆ.

ಅಹಮದಾಬಾದ್ ನ ತಲ್ತೇಜ್ ಶಿಲಾಜ್ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಯನ್ನು ಗುರುವಾರ ಉದ್ಘಾಟಿಸಿ ಅಮಿತ್‌ ಶಾ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ, 'ನಮ್ಮ ಬಿಜೆಪಿ ಸರಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಪ್ರಕಾರ, 2022ರ ಆಗಸ್ಟ್ 15ರೊಳಗೆ ದೇಶದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂಬ ಸಂಪೂರ್ಣ ಭರವಸೆ ನನ್ನಗಿದೆ ಅಂತ ಹೇಳಿದರು.

ಇನ್ನೂ ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸುತ್ತ ಉಜ್ವಲ ಯೋಜನೆಯಡಿ 13 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಸ್ ಸಿಲಿಂಡರ್ ನೀಡಿದ್ದಾರೆ. ನಮ್ಮ ಸರ್ಕಾರ ದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, 2022ರ ವೇಳೆಗೆ ದೇಶದ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುತ್ತದೆ ಹೀಗಾಗಿ ದೇಶದಲ್ಲಿ ನೀರಿನ ಸಂಪರ್ಕ ವೇಇಲ್ಲದ ಒಂದು ಮನೆಯೂ ಇರುವುದಿಲ್ಲ ಎಂಬ ಸಂಪೂರ್ಣ ನಂಬಿಕೆ ಇದೆ' ಎಂದು ಶಾ ಹೇಳಿದರು.

ಇನ್ನೂ ಇದೇ ವೇಳೆ ಅವರು ಸಮಾರಂಭದಲ್ಲಿ ದೇಶದಲ್ಲಿ ಸುಮಾರು ಒಂದು ಲಕ್ಷ ರೈಲ್ವೆ ಕ್ರಾಸಿಂಗ್ ಗಳನ್ನು ಮುಕ್ತಗೊಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆಗಳನ್ನು ನಿರ್ಮಾಣ ಮಾಡುವ ಕಾಮಗಾರಿಗಳನ್ನು ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ದ್ದೇವೆ. ದೇಶದಲ್ಲಿ ಮಾನವರಹಿತ ರೈಲ್ವೆ ಕ್ರಾಸಿಂಗ್ ಗಳನ್ನು ತೆಗೆದುಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, 2022ರ ವೇಳೆಗೆ ದೇಶದಲ್ಲಿ ಒಂದೇ ಒಂದು ಮಾನವರಹಿತ ರೈಲ್ವೆ ಕ್ರಾಸಿಂಗ್ ಇಲ್ಲ' ಎಂದು ಹೇಳಿದರು.


Related Articles

Advertisement
Previous
Next Post »