ವಿಶ್ವದಾಖಲೆ ಬರೆದ ಯಶ್ 'ಕೆಜಿಎಫ್ ಚಾಪ್ಟರ್-2' ಟೀಸರ್

January 08, 2021
Friday, January 8, 2021

 


ಕನ್ನಡದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಿತ್ರದ ಟೀಸರ್ ಗುರುವಾರ ರಾತ್ರಿ ಬಿಡುಗಡೆಯಾಗಿದೆ. ನಟ ಯಶ್ ಹುಟ್ಟಿದ ದಿನವಾದ ಇಂದು (ಜ.8) ಬಿಡುಗಡೆಯಾಗಬೇಕಿದ್ದ ಟೀಸರ್ ಹಲವು ಕಾರಣಗಳಿಂದ ನಿನ್ನೆ ರಾತ್ರಿಯೇ ಬಿಡುಗಡೆಯಾಗಿದೆ. ಇದೀಗ ಹಲವು ದಾಖಲೆಗಳನ್ನು ಈ ಟೀಸರ್ ಬರೆದಿದೆ.

ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿ ಕೇವಲ 10 ಗಂಟೆ 30 ನಿಮಿಷದಲ್ಲಿ ಎರಡು ಮಿಲಿಯನ್ ಯೂಟ್ಯೂಬ್ ಲೈಕ್ಸ್ ಪಡೆದಿದೆ. ಅತೀ ವೇಗವಾಗಿ ಯೂಟ್ಯೂಬ್ ನಲ್ಲಿ ಎರಡು ಮಿಲಿಯನ್ ಲೈಕ್ ಪಡೆದ ಭಾರತದ ಮೊದಲ ಟೀಸರ್ ಎಂಬ ದಾಖಲೆಗೆ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಪಾತ್ರವಾಗಿದೆ.

ಕೆಜಿಎಫ್ ಚಾಪ್ಟರ್ 2 ಟೀಸರ್ ಮಾಸ್ಟರ್, ಸರ್ಕಾರ್, ಆರ್ ಆರ್ ಆರ್ ನ ರಾಮರಾಜು ಫಾರ್ ಭೀಮ್ ಮತ್ತು ಮರ್ಸಲ್ ದಾಖಲೆಗಳನ್ನು ಪುಡಿಗಟ್ಟಿದೆ.

ಚಿತ್ರದ ಟೀಸರ್ ಗುರುವಾರ ರಾತ್ರಿ 9.29ಕ್ಕೆ ಬಿಡುಗಡೆಯಾಗಿದ್ದು, ಕೇವಲ 14 ಗಂಟೆಯಲ್ಲಿ 20 ಮಿಲಿಯನ್ ವೀಕ್ಷಣೆಯಾಗಿದೆ. 24 ಗಂಟೆಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಟೀಸರ್ ಎಂಬ ದಾಖಲೆಯತ್ತ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಮುನ್ನುಗ್ಗುತ್ತಿದೆ.


Thanks for reading ವಿಶ್ವದಾಖಲೆ ಬರೆದ ಯಶ್ 'ಕೆಜಿಎಫ್ ಚಾಪ್ಟರ್-2' ಟೀಸರ್ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ವಿಶ್ವದಾಖಲೆ ಬರೆದ ಯಶ್ 'ಕೆಜಿಎಫ್ ಚಾಪ್ಟರ್-2' ಟೀಸರ್

Post a Comment