2 ನಿಮಿಷದಲ್ಲಿ 2 ಲಕ್ಷ ರೂಪಾಯಿ ಲೋನ್​ ನೀಡುತ್ತೆ Paytm.. ಅಪ್ಲೈ ಮಾಡೋದು ಹೇಗೆ?

January 07, 2021
Thursday, January 7, 2021

 


ಆಯಪ್​ ಮೂಲಕ ಇನ್​ಸ್ಟಂಟ್​ ಸಾಲ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ. ಡಿಜಿಟಲ್​ ಪೇಮೆಂಟ್​ ಆಯಪ್​ Paytm ಈಗ ತನ್ನ ಗ್ರಾಹಕರಿಗೆ 2 ಲಕ್ಷ ರೂಪಾಯಿವರೆಗೆ ಸಾಲ ನೀಡಲು ಮುಂದಾಗಿದೆ. ಎರಡೇ ನಿಮಿಷಗಳಲ್ಲಿ ಸಾಲ ಸಿಗಲಿದೆ ಅನ್ನೋದು ವಿಶೇಷ.

Paytm ಈ ಬಗ್ಗೆ ಇಂದು ಘೋಷಣೆ ಮಾಡಿದೆ. ವಿಶೇಷ ಎಂದರೆ ವರ್ಷದ 365 ದಿನ, 24 x 7 ಸಾಲದ ವ್ಯವಸ್ಥೆ ಇರಲಿದೆ. ಅಂದರೆ, ನೀವು ಮಧ್ಯರಾತ್ರಿ ಅಥವಾ ಸರ್ಕಾರಿ ರಜೆ ದಿನಗಳಲ್ಲೂ ಸಾಲ ಪಡೆಯಬಹುದು. ಕೇವಲ ಎರಡು ನಿಮಿಷಗಳ ಒಳಗಾಗಿ ಸಾಲದ ಹಣ ನಿಮ್ಮ ಖಾತೆಗೆ ಬೀಳುತ್ತೆ ಎಂದು ತಿಳಿಸಿರುವ ಪೇಟಿಎಂ, ಉದ್ಯೋಗಿಗಳು, ಸಣ್ಣ ಉದ್ದಿಮೆದಾರರು ಮತ್ತು ವೃತ್ತಿಪರರು ಸಾಲ ಪಡೆಯಲು ಅರ್ಹರು ಎಂದು ಹೇಳಿದೆ.

ಇನ್ನು, ಸಾಲಕ್ಕಾಗಿ ನೀಡುವ ದಾಖಲೆಯನ್ನು ಯಾವುದೇ ಬ್ಯಾಂಕ್​ಗೆ ಹೋಗಿ ನೀಡುವ ಅವಶ್ಯಕತೆ ಇಲ್ಲ.

ಮನೆಯಲ್ಲೇ ಕೂತು, ಮೊಬೈಲ್​ ಮೂಲಕ ಆನ್​ಲೈನ್​ನಲ್ಲೇ ಲೋನ್​ ಫಾರ್ಮ್​ ತುಂಬಬಹುದು. ಸಾಲ ಪಡೆಯಲು ನೀವು ಸೂಕ್ತ ದಾಖಲೆ ನೀಡುವುದು ಕಡ್ಡಾಯ.

ಈ ಸೇವೆ ನೀಡಲು ಸಾಕಷ್ಟು ಬ್ಯಾಂಕ್​ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು Paytm ಜತೆ ಒಪ್ಪಂದ ಮಾಡಿಕೊಂಡಿವೆ. ಬೀಟಾ ಹಂತದಲ್ಲಿ Paytm ಸುಮಾರು 400 ಗ್ರಾಹಕರಿಗೆ ಸಾಲ ನೀಡುತ್ತಿದೆ. ಮಾರ್ಚ್​ ವೇಳೆಗೆ 10 ಲಕ್ಷ ಜನರಿಗೆ ಸಾಲ ನೀಡುವ ಗುರಿಯನ್ನು Paytm ಹೊಂದಿದೆ.

18-36 ತಿಂಗಳ ಒಳಗಾಗಿ ನೀವು ಸಾಲವನ್ನು ಹಿಂದಿರುಗಿಸಬೇಕು. ಅವಧಿಯನ್ನು ಆಧರಿಸಿ ಇಎಂಐ ನಿರ್ಧಾರವಾಗುತ್ತದೆ. ಸಾಲ ಪಡೆಯಲು ಪೇಟಿಎಂನಲ್ಲಿ ಫೈನಾನ್ಶಿಯಲ್​ ಸರ್ವಿಸ್​ ಸೆಕ್ಷನ್​ಗೆ ತೆರಳಿ, ಪರ್ಸನಲ್​ ಲೋನ್​ ಟ್ಯಾಬ್​ ಕ್ಲಿಕ್​ ಮಾಡಿ ಮುಂದುವರೆಯಿರಿ.Thanks for reading 2 ನಿಮಿಷದಲ್ಲಿ 2 ಲಕ್ಷ ರೂಪಾಯಿ ಲೋನ್​ ನೀಡುತ್ತೆ Paytm.. ಅಪ್ಲೈ ಮಾಡೋದು ಹೇಗೆ? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 2 ನಿಮಿಷದಲ್ಲಿ 2 ಲಕ್ಷ ರೂಪಾಯಿ ಲೋನ್​ ನೀಡುತ್ತೆ Paytm.. ಅಪ್ಲೈ ಮಾಡೋದು ಹೇಗೆ?

Post a Comment