ಶಾಲಾರಂಭದ ಬೆನ್ನಲ್ಲೇ ಬಿಗ್ ಶಾಕ್: 10 ಶಿಕ್ಷಕರಿಗೆ ಕೊರೋನಾ ಪಾಸಿಟಿವ್; ಗದಗದ 5 ಸ್ಕೂಲ್ ಬಂದ್

January 04, 2021

 


ಗದಗ: ಒಂಬತ್ತು ತಿಂಗಳ ನಂತರ ರಾಜ್ಯಾದ್ಯಂತ ಶಾಲೆ ಆರಂಭವಾಗಿದ್ದು, ಗದಗ ಜಿಲ್ಲೆಯಲ್ಲಿ ವಿದ್ಯೆ ಕಲಿಸುವ ಗುರುಗಳಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.

ಕೊರೋನಾ ಪಾಸಿಟಿವ್ ಕಡು ಬಂದ ಹಿನ್ನೆಲೆಯಲ್ಲಿ 10 ಶಿಕ್ಷಕರು ಹೋಮ್ ಕ್ವಾರಂಟೈನ್ ಆಗಿದ್ದು,5 ಶಾಲೆಗಳು ಬಂದ್ ಆಗಿದ್ದು ವಿದ್ಯಾರ್ಥಿಗಳು ಅತಂತ್ರವಾಗಿದ್ದಾರೆ.

ಗದಗಿನ ನಾಲ್ಕು ಶಾಲೆಯ 9 ಶಿಕ್ಷಕರಿಗೆ ಮತ್ತು ನರಗುಂದದ ಒಂದು ಶಾಲೆಯ ಓರ್ವ ಶಿಕ್ಷಕನಿಗೆ ಸೋಂಕು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.

ಕೋವಿಡ್ ಪರೀಕ್ಷೆ ವೇಳೆ ಅನೇಕ ಶಿಕ್ಷಕರು ನಿಯಮ ಮೀರಿದ ಕಾರಣ ಹಲವು ಶಿಕ್ಷಕರು ಆತಂಕಕ್ಕೊಳಗಾಗಿದ್ದಾರೆ.

ಶಿಕ್ಷಣ ಇಲಾಖೆ ಐದು ಶಾಲೆಗಳಿಗೆ ಮತ್ತೊಮ್ಮೆ ಸ್ಯಾನಿಟೈಸರ್ ಮಾಡಲಾಗಿದೆ.

ಜಿಲ್ಲೆಯಾದ್ಯಂತ 6,939 ಶಿಕ್ಷಕರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಈ ಪೈಕಿ 10 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಇನ್ನೂ 274 ಶಿಕ್ಷಕರ ಪರೀಕ್ಷಾ ವರದಿ ಬರಬೇಕಿದೆ.

ಶಿಕ್ಷಕರಿಗೆ ಕೊರೋನಾ ಕಂಡು ಬಂದ ಹಿನ್ನೆಲಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವರ್ಷ ಆನ್ ಲೈನ್ ಕ್ಲಾಸ್ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ. ಈ ಐದು ಶಾಲೆಗಳಿಗೆ ಒಂದು ವಾರದ ಕಾಲ ರಜೆ ಘೋಷಿಸಿರುವುದಾಗಿ ಗದಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎನ್ ಬಸಲಿಂಗಪ್ಪ ತಿಳಿಸಿದ್ದಾರೆ.


Related Articles

Advertisement
Previous
Next Post »