ಹೋಟೆಲ್ ನಲ್ಲಿ ಕುಳಿತಿದ್ದ ಯುವತಿಗೆ ಹಳೆಯ ಗೆಳೆಯನ ಗ್ಯಾಂಗ್ ನ ದಾಳಿ: ಚೂರಿ ಇರಿತ

January 31, 2021

 


ಮಂಗಳೂರು: ತನ್ನ ಗೆಳೆಯರೊಂದಿಗೆ ಯುವತಿಯೊಬ್ಬರು ಹೋಟೆಲ್ ನಲ್ಲಿ ಕುಳಿತಿದ್ದಾಗ ಆಕೆಯ ಹಳೆ ಪರಿಚಯದ ಸ್ನೇಹಿತ ಮತ್ತು ಆತನ ಗೆಳೆಯರು ಏಕಾಏಕಿ ದಾಳಿ ನಡೆಸಿದ ಘಟನೆ ಮಂಗಳೂರಿನ ಕದ್ರಿಯಲ್ಲಿ ನಡೆದಿದೆ.

ಜ.30ರಂದು ಮಧ್ಯಾಹ್ನ ಕದ್ರಿಯ ಬಾರ್ ಆಯಂಡ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ಯುವತಿಯು ತನ್ನ ಮೂವರು ಗೆಳೆಯರೊಂದಿಗೆ ಕುಳಿತಿದ್ದಾಗ ಏಕಾಏಕಿ ನುಗ್ಗಿದ ನಾಲ್ವರು ಯುವಕರು ದಾಳಿ ನಡೆಸಿದ್ದಾರೆ. ಹೋಟೆಲ್ ನಲ್ಲಿ ಸಿಕ್ಕ ವಸ್ತುಗಳಿಂದ ಹೊಡೆದಾಟ ನಡೆಸಿದ್ದು, ಈ ವೇಳೆ ಓರ್ವ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ.

ಯುವತಿಯೊಂದಿಗೆ ಇದ್ದ ಯುವಕ ಚೂರಿ ಇರಿತದಿಂದ ಗಾಯಗೊಂಡಿದ್ದಾನೆ.


ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ʼವರ್ಕ್‌ ಫ್ರಂ ಹೋಂʼ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

January 31, 2021

 


ನವದೆಹಲಿ: ಕೊರೊನಾ ಲಾಕ್ ಡೌನ್ ಹಲವು ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡುವಂತೆ ಮಾಡಿದೆ. ಮೊದಮೊದಲು ಕಠಿಣವೆನಿಸಿದ್ದ ವರ್ಕ್ ಫ್ರಂ ಹೋಂ ಪದ್ಧತಿಗೆ ಈ ಉದ್ಯೋಗಿಗಳು ಒಗ್ಗಿಕೊಂಡುಬಿಟ್ಟಿದ್ದಾರೆ. ಭಾರತದ ಹೆಚ್ಚಿನ ಉದ್ಯೋಗಿಗಳು ಈಗ ಮನೆಯಲ್ಲೇ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಇತ್ತೀಚಿನ ಡೆಲ್ ಕಂಪನಿಯ ಅಧ್ಯಯನವೊಂದು ಹೇಳಿದೆ.

ಡೆಲ್ ಕಂಪನಿ ವಿಶ್ವದೆಲ್ಲೆಡೆ ಇರುವ ತನ್ನ 7 ಸಾವಿರ ಉದ್ಯೋಗಿಗಳಿಂದ ಈ ಸಂಬಂಧ ಅಭಿಪ್ರಾಯ ಪಡೆದಿದೆ. ಅದರಲ್ಲಿ 1027 ಜನ ಭಾರತೀಯರಿದ್ದಾರೆ. 10 ರಲ್ಲಿ 9 ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದಿದ್ದಾರೆ. ಆದರೆ, ಸಮಸ್ಯೆ ಹೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಲವು ದಿನಗಳಿಂದ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿರುವುದರಿಂದ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದ ನಡುವೆ ನಮಗೆ ವ್ಯತ್ಯಾಸವೇ ಇಲ್ಲದಂತಾಗಿದೆ.

ಅಲ್ಲದೆ, ಕೆಲವು ತಂತ್ರಜ್ಞಾನಗಳೂ, ಮೂಲ ಸೌಕರ್ಯಗಳೂ ನಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂಬುದು ಉದ್ಯೋಗಿಗಳ ಗೋಳು.

"ವರ್ಕ್ ಫ್ರಂ ಹೋಂ ಪದ್ಧತಿಯಿಂದ ಕಂಪನಿಗೆ ತನ್ನ ಉದ್ಯೋಗಿಗಳಿಂದ ಗುಣಮಟ್ಟದ ಕೆಲಸ ಪಡೆಯಲು ತೊಡಕುಂಟಾಗುತ್ತಿದೆ. ಆದರೂ ನಾವು ಉದ್ಯೋಗಿಗಳನ್ನು ಬೆಂಬಲಿಸಲು ಸಿದ್ಧರಿದ್ದೇವೆ" ಎಂದು ಡೆಲ್ ಟೆಕ್ನಾಲಜಿಯ ಹಿರಿಯ ಹಿರಿಯ ನಿರ್ದೇಶಕ ಹಾಗೂ ಜಿಎಂ ಇಂದ್ರಜಿತ್ ಬೆಳಗುಂಡಿ ಹೇಳಿದ್ದಾರೆ‌.


'ಆದಾಯ ತೆರಿಗೆ' ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು.? ಇಲ್ಲಿದೆ ಬಹು ಮುಖ್ಯ ಮಾಹಿತಿ

January 31, 2021

 


ನೀವು ಕಾನೂನು ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವವರಾಗಿದ್ದರೆ, ಪ್ರತಿ ವರ್ಷ ಒಂದಿಷ್ಟು ದಾಖಲೆಗಳು, ಕಡತಗಳ ಬಂಡಲ್ ಈ ರಿಟರ್ನ್ಸ್‌ನ ಸಾಕ್ಷಿಯಾಗಿ ನಿಮ್ಮ ಬಳಿ ಉಳಿದುಬಿಡುತ್ತದೆ. ಎಷ್ಟು ವರ್ಷ ಈ ಕಡತಗಳನ್ನೆಲ್ಲಾ ಕಾಪಿಡಬೇಕು ಎಂಬುದು ಪ್ರತಿಯೊಬ್ಬ ತೆರಿಗೆದಾರರ ಮನಸ್ಸಿನಲ್ಲಿರುವ ಪ್ರಶ್ನೆಯಾಗಿರುತ್ತದೆ.

ಐಟಿಆರ್ ಸಲ್ಲಿಸುವ ವೇಳೆ ಇದೆಲ್ಲಾ ಸಾಕ್ಷ್ಯಗಳನ್ನು ಸಲ್ಲಿಸಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುವುದಿಲ್ಲ. ಆದರೆ ನೋಟಿಸ್ ಕಳುಹಿಸುವ ಮೂಲಕ ಐಟಿಆರ್‌ನಲ್ಲಿ ಕ್ಲೈಮ್ ಮಾಡಿರುವುದನ್ನು ಸಾಬೀತುಪಡಿಸುವಂತೆ ಕೇಳುವ ಹಕ್ಕು ಆದಾಯ ತೆರಿಗೆ ಇಲಾಖೆಗಿದೆ. ಹಾಗಾಗಿ ಬಾಡಿಗೆ ರಸೀದಿ ಅಥವಾ ಬಾಡಿಗೆ ಒಪ್ಪಂದ, ಸೆಕ್ಷನ್ 80 ಸಿ ಅಡಿ ಉಳಿತಾಯದ ದಾಖಲೆಗಳು ಇತ್ಯಾದಿ ರಿಟರ್ನ್ಸ್‌ನಲ್ಲಿ ನೀವು ಮಾಡುವ ಕ್ಲೈಮ್‌ ಗಳನ್ನು ಸಾಬೀತುಪಡಿಸುತ್ತವೆ, ಹಾಗಾಗಿ ಐಟಿಆರ್ ಫೈಲ್ ಮಾಡಿದ ಮೇಲೂ ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಲಹೆ ನೀಡಲಾಗುತ್ತದೆ.

ಎಷ್ಟು ಅವಧಿ ಕಾಲ ಈ ದಾಖಲೆಗಳನ್ನು ತೆರಿಗೆದಾರ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಆದಾಯ ತೆರಿಗೆ ಕಾಯ್ದೆಯ ಯಾವ ನಿಯಮಗಳೂ ನೇರವಾಗಿ ಹೇಳುವುದಿಲ್ಲ. ಆದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 149ರಲ್ಲಿ ತೆರಿಗೆದಾರನಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುವ ಸಂಬಂಧ ಸಮಯದ ಮಿತಿಯನ್ನು ಉಲ್ಲೇಖಿಸಲಾಗಿದೆ. ಹಣಕಾಸು ವರ್ಷವೊಂದು ಮುಕ್ತಾಯವಾದಲ್ಲಿಂದ 7 ವರ್ಷಗಳ ಕಾಲ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದಾಗಿದೆ. ಹಾಗಾಗಿ 7 ವರ್ಷಗಳ ಕಾಲ ತೆರಿಗೆದಾರ ಈ ದಾಖಲೆಗಳನ್ನೆಲ್ಲ ಕಾಪಿಡಬೇಕಾಗುತ್ತದೆ. ಆದರೆ ವಿದೇಶಿ ಆಸ್ತಿಗಳಿಂದ ಆದಾಯವನ್ನು ನೀವು ಹೊಂದಿದ್ದರೆ 17 ವರ್ಷಗಳ ಕಾಲ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.

2017ರ ಬಜೆಟ್‌ನಲ್ಲಿ ಸರ್ಕಾರ ಮಾಡಿದ ತಿದ್ದುಪಡಿ ಪ್ರಕಾರ, 2017-18ರಿಂದ ದೊಡ್ಡ ಮೊತ್ತದ ಆದಾಯವನ್ನು ತೆರಿಗೆಯಿಂದ ತಪ್ಪಿಸಿದ ಆರೋಪವಿದ್ದರೆ 10 ವರ್ಷಗಳ ತನಕದ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಕೇಳಬಹುದಾಗಿದೆ.ಶುಲ್ಕ ಕಡಿತ ಬೆನ್ನಲ್ಲೇ ಸರ್ಕಾರಕ್ಕೆ ಮತ್ತೊಂದು ಟೆನ್ಶನ್ :4500 ಶಾಲೆಗಳು ಬಂದ್ ಆಗುವ ಸಾಧ್ಯತೆ

January 31, 2021

 


ರಾಯಚೂರು (ಜ.31): ಶಾಲಾ ಶುಲ್ಕ ಕಡಿತ ಬೆನ್ನಲ್ಲೇ ಶುರುವಾಯ್ತು ಸರ್ಕಾರಕ್ಕೆ ಮತ್ತೊಂದು ಟೆನ್ಷನ್. ಕಲ್ಯಾಣ ಕರ್ನಾಟಕ ಭಾಗದ 4500 ಶಾಲೆಗಳು ಬಂದ್ ಆಗುವ ಸಾಧ್ಯತೆ ಇದೆ.

ಶಾಲೆ ಬಂದ್ ಆದ್ರೆ 4 .5 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತವಾಗುವ ಸಾಧ್ಯತೆ ಹೆಚ್ಚಾಗಿದೆ.

ಸುಮಾರು 7 ವರ್ಷಗಳಿಂದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಸಿಕೊಳ್ಳದೆ ಹಣ ವಾಪಸ್ ಆಗಿದ್ದು, ಅನುದಾನ ನಂಬಿದ್ದ 4500 ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗಿದ್ದು, ಕಲಬರುಗಿ, ರಾಯಚೂರು, ಬೀದರ್, ಯಾದಗಿರಿ ಹಾಗೂ ಬಳ್ಳಾರಿ ಭಾಗದ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ.

9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ ...

ಈಗಾಗ್ಲೇ ಈ ಭಾಗದ ಸಾಕಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿ ಇದ್ದು, ಶಿಕ್ಷಣ ಇಲಾಖೆ ಬಳಿ ಇರೋ‌ ಮಾಹಿತಿ ಪ್ರಕಾರ ಬಾಲ ಕಾರ್ಮಿಕರಯ ಬಾಲ್ಯ ವಿವಾಹ ಹೆಚ್ಚಾಗುತ್ತಿವೆ, ದುಶ್ಚಟಗಳಿಗೂ ಮಕ್ಕಳು ಒಳಾಗುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ರುಪ್ಸಾ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.

ಕನ್ನಡ ಮಾಧ್ಯಮದಲ್ಲಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು. 371 ಜೆ ಅಡಿಯಲ್ಲಿರುವ ಶೈಕ್ಷಣಿಕ ಅಭಿವೃದ್ಧಿ ಗೆ ಅನುದಾನ ಬಳಕೆ ಮಾಡಿಕೊಳ್ಳುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಮಿತಿಯ ಬೋರ್ಡ್ ಗೆ ಅಧ್ಯಕ್ಷ ನೇಮಕ ಮಾಡುವುದು. ಬೋರ್ಡ್ ಗೆ ಸದಸ್ಯರನ್ನ ನೇಮಕ‌ ಮಾಡುವುದು.

ಆದ್ರೆ ಇದುವರೆಗೂ ಬೋರ್ಡ್ ಗೆ ಸದಸ್ಯರನ್ನು ನೇಮಕ ಮಾಡಿಲ್ಲ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ತಾರತಮ್ಯ ಮಾಡಬಾರದು. ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 10 ದಿನಗಳ ಗಡವು
ರುಪ್ಸಾ ಅಡಿಯಲ್ಲಿ ಬರುವ ಕಲ್ಯಾಣ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಬೇಡಿಕೆ ಈಡೇರದಿದ್ದಲ್ಲಿ ಶಾಲೆಗಳು ಸಂಪೂರ್ಣ ಬಂದ್ ಆಗಲಿವೆ ಎಂದು ಹೇಳಿದ್ದು ಶಾಲೆಗಳನ್ನ ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ.


ಹೆಚ್ಚಿನ ವೇತನ ಪಡೆಯುವವರಿಗೆ 'ಶಾಕಿಂಗ್ ನ್ಯೂಸ್'

January 31, 2021

 


ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಬಜೆಟ್ ಮಂಡಿಸಲಿದ್ದು, ದೇಶದ ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ವ್ಯಕ್ತಿಗಳು ಹೆಚ್ಚಿನ ಕುತೂಹಲ ಹೊಂದಿದ್ದಾರೆ. 2019 ರ ವೇತನ ಸಂಹಿತೆ ಕುರಿತು ಸರ್ಕಾರದ ಅಧಿಸೂಚನೆ ಪ್ರಕಾರ, ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ 2021 ರ ನೌಕರರ ಟೇಕ್ ಹೋಮ್ ವೇತನ ಕಡಿಮೆಯಾಗಬಹುದು. ಆದರೆ, ಪಿಎಫ್ ಮತ್ತು ಗ್ರಾಚುಟಿ ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಕೆಲವು ತಿಂಗಳ ಹಿಂದೆ ಸರ್ಕಾರ 2019 ರ ವೇತನ ಸಮಿತಿ ಅಡಿಯಲ್ಲಿ ಕರಡು ನಿಯಮಗಳ ಅಧಿಸೂಚನೆ ನೀಡಿದ್ದು, ನೌಕರರ ವೇತನವನ್ನು ಮುಂದಿನ ಹಣಕಾಸು ವರ್ಷದಿಂದ ಅಂದರೆ, ಏಪ್ರಿಲ್ 2021 ರಿಂದ ಕಡಿತಗೊಳಿಸಬಹುದು.

ಕರಡು ನಿಯಮ ಅನುಸರಿಸಿ ಕಂಪನಿಗಳು ತಮ್ಮ ವೇತನ ಪುನರ್ ರಚಿಸುವ ಅಗತ್ಯವಿತ್ತು.

ನೌಕರರ ಭತ್ಯೆ ಘಟಕ ಒಟ್ಟು ವೇತನದ ಪ್ಯಾಕೇಜ್ ನ ಶೇಕಡ 50 ರಷ್ಟು ಮೀರಬಾರದು. ಇದರ ಪರಿಣಾಮ ಕಂಪನಿಗಳು ಅಥವಾ ಉದ್ಯೋಗದಾತರು 50 ಪ್ರತಿಶತದಷ್ಟು ವೇತನವನ್ನು ಮೂಲವೇತನ ಘಟಕಕ್ಕೆ ವಿನಿಯೋಗಿಸಬೇಕಿದೆ.

ಇದರ ಅರ್ಥ ನೌಕರರ ಗ್ರಾಚುಟಿ ಮತ್ತು ಪಿಎಫ್ ಕೊಡುಗೆ ಹೆಚ್ಚಾಗುತ್ತದೆ. ಹಾಗಾಗಿ ನೌಕರರ ವೇತನ ಕಡಿಮೆಗೊಳಿಸಬಹುದು. ಗ್ರಾಚುಟಿ ಮತ್ತು ಪಿಎಫ್ ಏರಿಕೆಯಾಗಬಹುದು ಎಂದು ಹೇಳಲಾಗಿದೆ.


ಗ್ರೀನ್ ಟೀ ಮತ್ತು ಗ್ರೀನ್ ಕಾಫಿಯಲ್ಲಿ ತೂಕ ಇಳಿಸಲು ಯಾವುದು ಬೆಸ್ಟ್. ?

January 30, 2021

 


ತೂಕ ನಷ್ಟಕ್ಕೆ ಕೆಲವರು ಗ್ರೀನ್ ಟೀಯನ್ನು ಸೇವಿಸುತ್ತಾರೆ. ಇದು ಉರಿಯೂತದ ಗುಣಗಳನ್ನು ಹೊಂದಿದ್ದು, ಇದು ತೂಕವನ್ನು ಬಹಳ ಬೇಗ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ತೂಕ ಕಳೆದುಕೊಳ್ಳಲು ಗ್ರೀನ್ ಕಾಫಿ ಕೂಡ ಸಹಕಾರಿ ಎನ್ನಲಾಗಿದೆ.

ಹಾಗಾದ್ರೆ ತೂಕ ನಷ್ಟಕ್ಕೆ ಗ್ರೀನ್ ಟೀ ಮತ್ತು ಗ್ರೀನ್ ಕಾಫಿಯಲ್ಲಿ ಯಾವುದು ಬೆಸ್ಟ್ ಎಂಬುದನ್ನುತಿಳಿದುಕೊಳ್ಳಿ.

ಗ್ರೀನ್ ಕಾಫಿ ಇದು ದೇಹದ ಚಯಾಪಚಯ ಕ್ರಿಯೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದು ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ.

ಫಿಟ್ನೆಸ್‌ ಕಾಪಾಡಿಕೊಳ್ಳಲು ಇಲ್ಲಿವೆ ಒಂದಷ್ಟು ಸಲಹೆ

ಹಾಗೇ ಗ್ರೀನ್ ಟೀ ಇದರಲ್ಲಿ ಕಡಿಮೆ ಪ್ರಮಾಣದ ಕೆಫೀನ್ ಇದೆ. ಇದು ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದೇಹದಲ್ಲಿನ ಕೊಬ್ಬನ್ನು ಕರಗಿಸಲು ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಮತ್ತು ಗ್ರೀನ್ ಕಾಫಿ ಎರಡೂ ಕೂಡ ಸಹಕಾರಿ. ಇವೆರಡೂ ಕೂಡ ದೇಹದಲ್ಲಿನ ವಿಷವನ್ನು ಹೊರಹಾಕಿ ಕೊಬ್ಬನ್ನು ಸುಡಲು ಸಹಕಾರಿಯಾಗಿದೆ. ಆದ ಕಾರಣ ಗ್ರೀನ್ ಟೀ ಮತ್ತು ಗ್ರೀನ್ ಕಾಫಿಯನ್ನು ಸರಿಯಾದ ಆಹಾರ ಮತ್ತು ವ್ಯಾಯಾಮದ ಜೊತೆ ಸೇವಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.


ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ ವಿಸ್ತರಣೆ

January 30, 2021

 


ಬೆಂಗಳೂರು : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2021 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಫೆಬ್ರವರಿ 6 ರವರೆಗೆ ದಂಡ ಶುಲ್ಕದೊಂದಿಗೆ ವಿಸ್ತರಿಸಿದೆ.

ಈ ಅಭ್ಯರ್ಥಿಗಳು ಫೆಬ್ರವರಿ 6ರೊಳಗೆ ಪರೀಕ್ಷಾ ಶುಲ್ಕದ ಜೊತೆಗೆ 500 ರೂ. ದಂಡ ಶುಲ್ಕ 2020 ರೂ. ವಿಶೇಷ ದಂಡ ಶುಲ್ಕ ಪಾವತಿಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಕಾಲೇಜಿನವರು ಇಲಾಖೆಯ ಖಜಾನೆಗೆ ಸಲ್ಲಿಸಲು ಫೆಬ್ರವರಿ 8 ಮತ್ತು ಮೂಲ ಚಲನ್ ಸಹಿತ ಕಚೇರಿಗೆ ಸಲ್ಲಿಸಲು ಫೆ. 9 ಒನೆಯ ದಿನವಾಗಿದೆ.


9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

January 30, 2021

 


ಬೆಂಗಳೂರು, (ಜ.30): ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶೈಕ್ಷಣಿಕ ಕ್ಷೇತ್ರ ಇದೀಗ ಹಂತ-ಹಂತವಾಗಿ ಶುರುವಾಗುತ್ತಿದೆ. ಮೊದಲ ಹಂತದಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪದವಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ.


ಇದೀಗ ಫೆಬ್ರವರಿ 1ರಿಂದ 9-12ನೇ ತರಗತಿಗಳಿ​ಗೆ ಫುಲ್​ ಡೇ ಕ್ಲಾಸ್​ಗಳು ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ ಸರ್ಕಾರ...!

ಸೋಮವಾರದಿಂದ ಶನಿವಾರದವರೆಗೆ ಪೂರ್ಣ ತರಗತಿಗಳು ಇರುತ್ತವೆ. ಬೆಳಗ್ಗೆ 10 ರಿಂದ ಸಂಜೆ 4.30ರವರೆಗೆ ಪೂರ್ಣ ತರಗತಿ ಇರಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಮೊದಲ ಆಫ್‌ ಡೇ ತರಗತಿಗಳು ನಡೆಯುತ್ತಿದ್ದವು.

ಸುತ್ತೋಲೆಯ ಮುಖ್ಯಾಂಶಗಳು
* ಬೆಳಗ್ಗೆ 10 ರಿಂದ ಸಂಜೆ 4.30ರವರೆಗೆ ಪೂರ್ಣ ತರಗತಿ
* 6 ರಿಂದ 8ನೇ ಕ್ಲಾಸ್​​ವರೆಗೆ ವಿದ್ಯಾಗಮ ತರಗತಿ
* ಬೆಳಗ್ಗೆ 10 ರಿಂದ 12ಗಂಟೆವರೆಗೆ ವಿದ್ಯಾಗಮ ತರಗತಿ
* ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ
* ಅನುಮತಿ ಪತ್ರದಲ್ಲಿ ಕೊರೊನಾ ನೆಗೆಟಿವ್ ದೃಢೀಕರಿಸಬೇಕು
* ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ


BREAKING : 'ಕೊರೊನಾ ಬುಲೆಟಿನ್' : ರಾಜ್ಯದಲ್ಲಿ ಇಂದು 464 ಜನರಿಗೆ ಸೋಂಕು ಧೃಡ, ಇಬ್ಬರು ಬಲಿ

January 30, 2021

 


ಬೆಂಗಳೂರು : ರಾಜ್ಯದಲ್ಲಿ ಇಂದು 464 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,38, 865 ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇಂದು ರಾಜ್ಯದಲ್ಲಿ 547 ಸೋಂಕಿತರು ಕೊರೊನಾ ಸೋಂಕಿನಿಂದ ಗುಣಮುಖರಾದರೆ, ಇದುವರೆಗೆ 9,20, 657 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು ಇಬ್ಬರು ಬಲಿಯಾಗಿದ್ದು, ಇದುವರೆಗೆ 12,213 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 5976 ಪಾಸಿಟಿವ್ ಕೇಸ್ ಗಳಿದ್ದು, ಈ ಪೈಕಿ 147 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.


ಗುಡ್ ನ್ಯೂಸ್: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

January 29, 2021

 


ಚಿತ್ರದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಫೆಬ್ರುವರಿ 26 ಕೊನೆಯ ದಿನವಾಗಿದೆ. ಭರಮಸಾಗರ, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಹಾಗೂ ಮೊಳಕಾಲ್ಮೂರು ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಒಟ್ಟು 7 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 19 ಅಂಗನವಾಡಿ ಕಾರ್ಯಕರ್ತೆ ಹಾಗೂ 110 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಜನವರಿ 27 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರುವರಿ 26 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, www.anganwadirecruit.kar.nic.in ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಆನ್‍ಲೈನ್‍ನಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

ಜನನ ಪ್ರಮಾಣ ಪತ್ರ ಅಥವಾ ಜನ್ಮ ದಿನಾಂಕವಿರುವ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ, ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ, ಮೀಸಲಾತಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಲಗತ್ತಿಸುವುದು, ವಿಧವೆಯಾದಲ್ಲಿ ಪತಿಯ ಮರಣ ಪ್ರಮಾಣ ಪತ್ರ ಸಲ್ಲಿಸುವುದು.

ಆನ್‍ಲೈನ್ ಅರ್ಜಿಯೊಂದಿಗೆ ಯಾವುದೇ ಅಗತ್ಯ ದಾಖಲೆ ಸಲ್ಲಿಸದೇ ಇದ್ದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು, ಅಂಗನಾವಾಡಿ ಕಾರ್ಯಕರ್ತೆ ಅಥವಾ ಸಹಾಯಕಿಯರ ಹುದ್ದೆಯು ಸಂಪೂರ್ಣವಾಗಿ ಗೌರವ ಸೇವೆಯಾಗಿದ್ದು, ಖಾಯಂ ಹುದ್ದೆಯಾಗಿರುವುದಿಲ್ಲ, ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದಲ್ಲಿ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08194-231626, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ-08194-235958, ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ-08195-250291, ಹಿರಿಯೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ-08193-263512, ಹೊಳಲ್ಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ-08191-275250, ಹೊಸದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ-08199-230212, ಮೊಳಕಾಲ್ಮೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ 08198-229535ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.


ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಸಿಹಿಸುದ್ದಿ : ಅರ್ಹ ರೈತರಿಗೆ ಸಾಲಮನ್ನಾ

January 29, 2021

 


ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ತಾಂತ್ರಿಕ ಕಾರಣಗಳಿಂದ 2018-19 ನೇ ಸಾಲ ಮನ್ನಾ ಯೋಜನೆ ತಲುಪದ ರೈತರಿಗೆ ಕೂಡಲೇ ಸಾಲ ಮನ್ನಾ ಪ್ರಯೋಜನ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಬೆಳಗಾವಿ ರೈತರಿಗೆ ಸಾಲಮನ್ನಾ ಸಂಪೂರ್ಣ ತಲುಪದ ಬಗ್ಗೆ ಬಿಜೆಪಿ ಸದಸ್ಯ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಎಸ್.ಟಿ. ಸೋಮಶೇಖರ್, ಬೆಳಗಾವಿ 2,033 ಮಂದಿ ಸೇರಿ ರಾಜ್ಯಾದ್ಯಯಂತ ತಾಂತ್ರಿಕ ಕಾರಣಗಳಿಂದ ಯೋಜನೆ ಫಲಾನುಭವ ಪಡೆಯದ ರೈತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲಾಗುವುದು ಎಂದು ಹೇಳಿದರು.ಖಾಸಗಿ ಶಾಲೆಗಳು ಡೊನೇಷನ್, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ: ಶುಲ್ಕ ನಿಗದಿ ಮಾಡಿದ ಸರ್ಕಾರ

January 29, 2021

 


ಬೆಂಗಳೂರು: ಖಾಸಗಿ ಶಾಲೆಯ ಶುಲ್ಕ ನಿಗದಿಪಡಿಸಿದ ಸರ್ಕಾರ, ಪ್ರಸಕ್ತ ಸಾಲಿಗೆ ಸೀಮಿತಗೊಳಿಸಿ ರಾಜ್ಯದ ಯಾವುದೇ ಮಾದರಿ ಪಠ್ಯಕ್ರಮದ ಖಾಸಗಿ ಶಾಲೆಗಳು 2019ರಲ್ಲಿ ಪಡೆದ ಬೋಧನ ಶುಲ್ಕದ ಶೇ.75ರಷ್ಟು ಮಾತ್ರ ಪಡೆಯಬೇಕು. ಬೋಧನ ಶುಲ್ಕ ಹೊರತುಪಡಿಸಿ ಅಭಿವೃದ್ಧಿ ಶುಲ್ಕ ವಸೂಲಿ ಮಾಡುವಂತಿಲ್ಲ. ಟ್ರಸ್ಟ್ ಗೆ ಡೊನೇಷನ್ ತೆಗೆದುಕೊಳ್ಳಬಾರದು ಎಂದು ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಶುಕ್ರವಾರ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಈಗ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಎರಡು ಅಥವಾ ಮೂರು ಕಂತಿನಲ್ಲಿ ಪಾವತಿಸಲು ಅವಕಾಶ ನೀಡಬೇಕು. ಈ ಬಗ್ಗೆ ಶಾಲೆ ಹಾಗೂ ಪಾಲಕರಿಂದ ಬರುವ ದೂರು ನಿರ್ವಹಣೆಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಮಿತಿ ರಚನೆ ಮಾಡಲಿದ್ದೇವೆ ಎಂದರು.

ಈ ಬಗ್ಗೆ ವಿಧಾನ ಪರಿಷತ್ ಸದಸ್ಯರು, ವಿವಿಧ ವಿಭಾಗದ ಶಾಲಾಡಳಿತ ಮಂಡಳಿಗಳು, ಕ್ಯಾಮ್ಸ್, ರುಪ್ಸಾ, ಐಸಿಎಸ್‌ಇ, ಸಿಬಿಎಸ್‌ಇ ಮಂಡಳಿಗಳ ಜತೆ ಚರ್ಚೆ ನಡೆಸಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ನೂರಕ್ಕೆ ನೂರು ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಡಿ ಶುಲ್ಕ ನಿಯಂತ್ರಣಕ್ಕೆ ಸರ್ಕಾರಕ್ಕೆ ಹಕ್ಕಿದೆ. ಈ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ಸಾರ್ವಜನಿಕ ಇಲಾಖೆ ಖಾಸಗಿ ಶಾಲೆ ಶುಲ್ಕ ನಿರ್ಧಾರ ವಿಚಾರವಾಗಿ ಪಾಲಕರು ಹಾಗೂ ಆಡಳಿತ ಮಂಡಳಿಯ ಆಕ್ಷೇಪಣೆಗಳನ್ನು ಕ್ರೋಡೀಕರಿಸಿದ್ದೇವೆ. ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಒಂದು ಕಂತಿನ ಹಣ ಕಟ್ಟಲು ಹೇಳಿದ್ದೇವೆ. ಆನ್ ಲೈನ್ ಶಿಕ್ಷಣ ಸ್ಥಗಿತ, ಎರಡನೇ ಕಂತಿನ ಹಣ ಇತ್ಯಾದಿ ವಿಚಾರವಾಗಿ ದೂರು ಬರುತ್ತಿವೆ. ಶಿಕ್ಷಣ ಇಲಾಖೆ ಯಾರ ಕತ್ತು ಹಿಸುಕುವುದಿಲ್ಲ. ಯಾರ ಲಾಬಿಗೂ ಶರಣಾಗುವುದಿಲ್ಲ. ಕೋವಿಡ್ ನಿಂದ ಶಾಲೆ ಮತ್ತು ಪಾಲಕರ ನಡುವಿನ ಸಂಬಂಧ ಹಾಳಾಗಿದೆ. ಸೀಟಿಗಾಗಿ ಪರದಾಡುತ್ತಿದ್ದ ಪಾಲಕರು ಇಂದು ಅದೇ ಶಾಲೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ಶಾಲಾ ಮೇಲುಸ್ತುವಾರಿ ಸಮಿತಿಯನ್ನು ಖಾಸಗಿ ಶಾಲೆಗಳು ಸಮರ್ಥವಾಗಿ ಮಾಡಿಲ್ಲ ಎಂದು ಹೇಳಿದರು.

2020-21ನೇ ಶೈಕ್ಷಣಿಕ ಸಾಲಿನಲ್ಲಿ ಶೇ.75 ಕ್ಕಿಂತ ಹೆಚ್ಚಿನ ಶುಲ್ಕ ಪಡೆದಿದ್ದಲ್ಲಿ 2021-22ನೇ ಸಾಲಿನಲ್ಲಿ ಪಾವತಿಸಬೇಕಾದ ಶುಲ್ಕಕ್ಕೆ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದು. ಯಾವುದೇ ಶಿಕ್ಷಣ ಸಂಸ್ಥೆ ಶೇ.75 ಕ್ಕಿಂತ ಕಡಿಮೆ ಶುಲ್ಕವನ್ನು ವಿಧಿಸಲು ಇಚ್ಛಿಸಿದಲ್ಲಿ, ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಎಂದು ಹೇಳಿದರು.


ಕುಟುಂಬಗಳು ಬದುಕುವ ಕ್ರಮವೇ ನಾಗರಿಕತೆ

January 29, 2021

 


ಮಕ್ಕಳಿಗೆ ಶಿಸ್ತನ್ನು ಕಲಿಸುವುದು ಹೇಗೆ ಎಂಬುದು ಎಲ್ಲ ಮನೆಗಳಲ್ಲಿ ಸಾಮಾನ್ಯ ವಾದ ಒಂದು ಪ್ರಶ್ನೆ.

ಮಕ್ಕಳಿರಲಿ, ಯಾರೇ ಇರಲಿ; ಕೆಲವು ಕೆಲಸಗಳನ್ನು ನಾವು ಹೇಳಿ ಮಾಡಿಸ ಬಹುದು. ಒತ್ತಾಯಪೂರ್ವಕವಾಗಿ ಮಾಡಿಸಬಹುದು.

ಆದರೆ ಕಲಿಕೆಯನ್ನು ಹಾಗೆ ಮಾಡಲು ಬರುವುದಿಲ್ಲ. ಅದೂ ಅಲ್ಲದೆ, ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸುವುದು ದೀರ್ಘ‌ ಕಾಲ ಬಾಳು ವಂಥದ್ದಲ್ಲ. ದೀರ್ಘ‌ಕಾಲ ಒತ್ತಡ ಹೇರು ತ್ತಿದ್ದರೆ ನಮ್ಮ ಬದುಕು, ಅವರ ಬದುಕು – ಎರಡೂ ಸರ್ವನಾಶ ವಾಗುತ್ತದೆ. ನಮ್ಮ ಜೀವನ ಒತ್ತಡ ಹೇರು ವುದರಲ್ಲಿ ಕಳೆದು ಹೋದರೆ, ಅವರ ಬದುಕು ಅದರಿಂದ ತಪ್ಪಿಸಿಕೊಳ್ಳುವುದರಲ್ಲಿ ಮುಗಿಯುತ್ತದೆ.

ಮನೆಗಳಲ್ಲಿ ಮಕ್ಕಳ ವಿಚಾರವೂ ಹೀಗೆಯೇ. ಯಾವುದೇ ವಿಚಾರವನ್ನು ನಾವು ಮಕ್ಕಳಿಗೆ ಒತ್ತಾಯ ಪೂರ್ವಕ ಹೇರಿ ಕಲಿಸಲು ಸಾಧ್ಯವಿಲ್ಲ. ಶಿಸ್ತು ಒಂದು ಸಂಸ್ಕೃತಿಯಾಗಿ ಅವರಲ್ಲಿ ಮೂಡಬೇಕು.

ಮನೆಯಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನವನ್ನು ಎಲ್ಲರೂ ಜತೆಗೂಡಿ ಸೇವಿಸುವುದು ಅಂತಹ ಒಂದು ಸಂಸ್ಕೃತಿ. ಊಟದ ಹೊತ್ತಿಗೆ ಮನೆಯ ಸದಸ್ಯರಲ್ಲಿ ಯಾರಾದ ರೊಬ್ಬರು ಬರುವುದು ತಡವಾದರೆ ಇಡೀ ಕುಟುಂಬ ಅವರಿಗಾಗಿ ಕಾಯುತ್ತದೆ. ಇಡೀ ಕುಟುಂಬ ಜತೆಗೂಡುವುದು, ಎಲ್ಲರೂ ಜತೆಯಾಗಿ ಊಟ ಮಾಡು ವುದು, ತಾನು ಉಂಡ ಬಟ್ಟಲನ್ನು ತಾನೇ ತೊಳೆಯುವುದು, ಅನ್ನವನ್ನು ವ್ಯರ್ಥ ಮಾಡದಿರುವುದು, ಸರಿಯಾಗಿ ಉಣ್ಣುವ ಕ್ರಮ – ಹೀಗೆ ಹಲವು ಬಗೆಯ ಶಿಸ್ತುಗಳು ಒಂದು ಸಂಸ್ಕೃತಿಯಾಗಿ ಆ ಊಟದ ಸಮಯದಲ್ಲಿ ಆ ಮನೆಯ ಮಕ್ಕಳಲ್ಲಿ ರಕ್ತಗತವಾಗುತ್ತ ಹೋಗುತ್ತದೆ. ಇದ್ಯಾ ವುದೂ ಒತ್ತಡದಿಂದಾಗುವ ಕಲಿಕೆಯಲ್ಲ, ಯಾರೂ ಹೇಳಿ ಮೂಡಿಸುವ ಶಿಸ್ತು ಅಲ್ಲ. ತಾನಾಗಿ ಮೈ ಮತ್ತು ಮನಸ್ಸಿಗೆ ಸೇರಿಕೊಳ್ಳುವಂಥದ್ದು.

ಇವೆಲ್ಲ ಯಾವುದೇ ಒಂದು ಕೆಲಸ ವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಮಾಡುವುದಕ್ಕೆ ಸಂಬಂಧಿಸಿದ ವಿಚಾರ ಗಳು. ಅದನ್ನು ಹಾಗೆಯೇ ಮಾಡಬೇಕು ಎಂಬ ಮನಸ್ಸು ಬರಬೇಕಾದರೆ ಸುತ್ತ ಮುತ್ತ ಶುಭ್ರವಾದ ಪೂರಕ ವಾತಾವರಣ ಇರಬೇಕು. ಪರಿಸರವನ್ನು ಶುಚಿಯಾಗಿ ಇರಿಸುವುದಕ್ಕೆ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಮನೆಯ ಎಲ್ಲರೂ ಉಂಡ ಬಟ್ಟಲುಗಳು ಸಿಂಕಿನಲ್ಲಿ ರಾಶಿ ಬಿದ್ದರೆ ಒಬ್ಬರು – ಪ್ರಾಯಃ ಅಮ್ಮ – ಅದನ್ನು ಮಾಡಬೇಕಾಗುತ್ತದೆ. ಅದರ ಬದಲು ಎಲ್ಲರೂ ಅವರವರ ತಟ್ಟೆ ಬಟ್ಟಲು ತೊಳೆದರೆ ಒಬ್ಬರ ಮೇಲೆ ಹೊರೆ ಬೀಳುವುದಿಲ್ಲ. ಈ ಕೆಲಸ ಹಂಚಿಕೊಳ್ಳುವ ಸಂಸ್ಕೃತಿ ಮಕ್ಕಳಲ್ಲೂ ಮೈಗೂಡುತ್ತದೆ.
ಗುಡಿಸಿ – ಒರೆಸು ವುದೂ ಹಾಗೆಯೇ. ಮನೆಯಲ್ಲಿ ಅಮ್ಮ ಮನೆ ಗುಡಿಸಿ, ಒರೆಸಿಯೇ ಉಪಾಹಾರ ಅಥವಾ ಊಟ ಮಾಡುತ್ತಾರೆ ಎಂದಾದರೆ ಎಲ್ಲರೂ ಅದಕ್ಕೆ ಕೈಜೋಡಿ ಸುತ್ತಾರೆ. ಆಗ ಮಕ್ಕಳೂ ಆ ಶಿಸ್ತನ್ನು ಕಲಿಯುತ್ತಾರೆ.

ಶಿಸ್ತನ್ನು ಮಕ್ಕಳಿಗೆ ಕಲಿಸುವುದು ಎಂದರೆ ಕ್ರಿಯೆಗಳ ಮೂಲಕ ಅರ್ಥ ಮಾಡಿಸುತ್ತ ಹೋಗುವುದು. ಮಕ್ಕಳು ಬಹಳ ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ. ಇಡೀ ಮನೆ ಹೀಗೆ ಶಿಸ್ತುಬದ್ಧವಾಗಿ, ಸುಸಂಸ್ಕೃತವಾಗಿ ಇದ್ದರೆ ಅದು ತಾನಾಗಿ ಅವರಲ್ಲಿ ಮೈಗೂಡುತ್ತ ಹೋಗುತ್ತದೆ.

ಸಣ್ಣ ಸಣ್ಣ ಸಂಗತಿಗಳು ಕೂಡ ಬಹಳ ಮುಖ್ಯ. ಬೆಳಗ್ಗೆ ಎದ್ದು ಹಾಸಿಗೆ, ಬೆಡ್‌ಶೀಟ್‌ಗಳನ್ನು ಚೊಕ್ಕಟವಾಗಿ ಮಡಚಿ ಇರಿಸುವುದು, ಕುಡಿದ ಕಾಫಿ ಕಪ್ಪನ್ನು ಆ ಕೂಡಲೇ ತೊಳೆದು ಬೋರಲು ಹಾಕಿ ಡುವುದು- ಪ್ರತಿಯೊಂದರಲ್ಲೂ ನಮ್ಮನ್ನು ನಾವು ಮಾದರಿಯಾಗಿ ಇರಿಸಿ ಕೊಳ್ಳ ಬೇಕು. ಅದು ಮಕ್ಕಳು ನಮ್ಮನ್ನು ಅನು ಸರಿಸುವಂತೆ ಪ್ರೇರೇಪಿಸುತ್ತದೆ.

ನಾಗರಿಕತೆಯು ಪುಸ್ತಕ, ಕಾನೂನು, ಏಟು, ಉಪನ್ಯಾಸಕಾರರಿಂದ ವಿಕಾಸ ಗೊಂಡದ್ದು ಅಲ್ಲ. ಕುಟುಂಬಗಳು ಹೇಗೆ ಬದುಕುತ್ತವೆ ಅನ್ನುವುದೇ ನಾಗರಿಕತೆ. ಊಟದ ಮೇಜಿನಿಂದ ತೊಡಗಿ ಬಚ್ಚಲು ಮನೆಯ ವರೆಗೆ ಮನೆಯೊಳಗೆ ಪ್ರತೀ ಇಂಚು ಅವಕಾಶದಲ್ಲಿ ನಮ್ಮ ಬದುಕು ಹೇಗಿರುತ್ತದೆ ಎಂಬುದನ್ನು ಗಮನಿಸುತ್ತ ಮಕ್ಕಳು ಕಲಿಯುತ್ತಾರೆ. ನಾವು ಎಷ್ಟು ನಾಗರಿಕರಾಗಿರುತ್ತೇವೆಯೋ ಆ ಮಟ್ಟದ ನಾಗರಿಕತೆಯನ್ನು ಮೈಗೂಡಿಸಿಕೊಂಡು ಬೆಳೆಯುತ್ತಾರೆ.

– (ಸಾರ ಸಂಗ್ರಹ)


Big News ‌: ರಾಜ್ಯ ಪೊಲೀಸರಿಗೆ ಸಿಹಿ ಸುದ್ದಿ- ವಾರದ ರಜೆ ಕಡ್ಡಾಯವಾಗಿ ನೀಡುವಂತೆ ಸುತ್ತೋಲೆ ಹೊರಡಿಸಿದ DG & IGP ಪ್ರವೀಣ್ ಸೂದ್

January 28, 2021

 


ಬೆಂಗಳೂರು: ರಾಜ್ಯ ಪೊಲೀಸರಿಗೆ ಸಿಹಿ ಸಿಕ್ಕಿದ್ದು,ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸುವಂತೆ DG & IGP ಪ್ರವೀಣ್ ಸೂದ್​ ಸುತ್ತೋಲೆ ಹೊರಡಿಸಿದ್ದಾರೆ. ಅದ್ರಂತೆ, ನಗರ ಪೊಲೀಸ್ ಆಯುಕ್ತರು, ಎಲ್ಲಾ ವಲಯಗಳ IGP ಮತ್ತು ಎಲ್ಲಾ SPಗಳಿಗೆ ಸೂಚನೆ ನೀಡಿದ್ದಾರೆ.

ತುರ್ತು ಪರಿಸ್ಥಿತಿ ಬಿಟ್ಟು ಎಲ್ಲ ಸಂದರ್ಭದಲ್ಲಿ ವಾರದ ರಜೆ‌ ಕಡ್ಡಾಯವಾಗಿ ನೀಡಬೇಕು ಎಂದಿರುವ ಅವ್ರು, ಈ ಹಿಂದೆಯೂ ವಾರದ ರಜೆ ಕಡ್ಡಾಯಗೊಳಿಸುವಂತೆ ಆದೇಶ ನೀಡಲಾಗಿತ್ತು. ಆದ್ರೆ, ಕೆಲ ಸಿಬ್ಬಂದಿಗಳು ತಮಗೆ ಠಾಣಾಧಿಕಾರಿಗಳು ವಾರದ ರಜೆಯನ್ನ ನೀಡುತ್ತಿಲ್ಲ ​ಎಂದು DG & IGP ಪ್ರವೀಣ್ ಸೂದ್ ಅವ್ರಿಗೆ ಕೆಲ ನೊಂದ ಪೊಲೀಸರು ಪತ್ರ ಬರೆದಿದ್ದರು. ಹಾಗಾಗಿ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಪ್ರವೀಣ್‌ ಸೂದ್‌ ಅವರು ತಮ್ಮ ಠಾಣೆಯಲ್ಲಿ ಕೆಲಸ ಮಾಡುವ ಪೊಲೀಸ್‌ ಅಧಿಕಾರಿಗಳಿಗೆ ಕಡ್ಡಾಯವಾಗಿ ರಜೆ ನೀಡುವಂತೆ ವಲಯ IGP ಮತ್ತು ಜಿಲ್ಲಾ SPಗಳಿಗೆ ಕಟ್ಟುನಿಟ್ಟಾಗಿ ಸೂಚನೆ ಕೊಟ್ಟಿದ್ದಾರೆ.


ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿಸುದ್ದಿ!

January 28, 2021

 


ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ಪ್ರಸಕ್ತ ಹಣದುಬ್ಬರ ದರ ಶೇ.28ರ ಪ್ರಕಾರ ತುಟ್ಟಿ ಭತ್ಯೆ (ಡಿಎ) ಮತ್ತು ತುಟ್ಟಿ ಭತ್ಯೆ (ಡಿಆರ್ ) ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.

ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಲು ಸರಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಜನವರಿಯಿಂದ ಈ ಭತ್ಯೆಯ ಪ್ರಯೋಜನ ದೊರೆಯಲಿದೆಯಾದರೂ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಯಾಗಿಲ್ಲ. ಕೊರೊನಾ ಬಿಕ್ಕಟ್ಟಿನಿಂದಾಗಿ 2021ರ ಜುಲೈವರೆಗೆ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ತಡೆಹಿಡಿಯಲು ಹಣಕಾಸು ಸಚಿವಾಲಯ 2020ರ ಏಪ್ರಿಲ್ ನಲ್ಲಿ ನಿರ್ಧರಿಸಿತ್ತು.

7ನೇ ವೇತನ ಆಯೋಗದ ಸೂಚನೆಯ ಪ್ರಕಾರ, ಕೇಂದ್ರ ನೌಕರರಿಗೆ ತುಟ್ಟಿಭತ್ಯೆಯ ಜೊತೆಗೆ ಪ್ರಯಾಣ ಭತ್ಯೆ-ಟಿಎ ಕೂಡ ಹೆಚ್ಚಾಗಲಿದೆ ಎಂದು ವರದಿಗಳು ಹೇಳಿವೆ. ಕೇಂದ್ರ ನೌಕರರಿಗೆ ಟಿಎ ಶೇ.8ರಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ.

ಈ ಮಧ್ಯೆ, ವೇತನ ನೀತಿ 2019ರ ಕರಡು ನಿಯಮಗಳನ್ನು ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ, ಈ ಹಿನ್ನೆಲೆಯಲ್ಲಿ ನೌಕರರ ವೇತನ ಕಡಿತವನ್ನು ಮುಂದಿನ ಆರ್ಥಿಕ ವರ್ಷದಿಂದ ಅಂದರೆ ಏಪ್ರಿಲ್ 2021ರಿಂದ ಕಡಿತ ಮಾಡುವ ಸಾಧ್ಯತೆ ಇದೆ.


Big Breaking News: ಜೂನ್ 14 ರಿಂದ SSLC ಪರೀಕ್ಷೆ ಶುರು, ಇಲ್ಲಿದೆ ತಾತ್ಕಾಲಿಕ ವೇಳಾಪಟ್ಟಿ

January 28, 2021


 ಬೆಂಗಳೂರು : ರಾಜ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾತ್ಕಾಲಿಕವಾಗಿ ದಿನಾಂಕ ನಿಗದಿ ಪಡಿಸಲಾಗಿದೆ. ಜೂನ್ 14 - 06-2021ರಿಂದ 25-06-2021ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಅವರು ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಅವರು, ಜೂನ್.14ರಂದು ಪ್ರಥಮ ಭಾಷೆ, ಜೂನ್ 16 ಗಣಿತ ಪರೀಕ್ಷೆ, ಜೂನ್ 18ರಂದು ಇಂಗ್ಲೀಷ್ ಹಾಗೂ ಕನ್ನಡ, ಜೂನ್ 21ರಂದು ವಿಜ್ಞಾನ, ಜೂನ್ 23ರಂದು ಹಿಂದಿ ಹಾಗೂ ಜೂನ್ 25ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ಇದು ತಾತ್ಕಾಲಿಕ ಪರೀಕ್ಷಾ ವೇಳಾ ಪಟ್ಟಿಯಾಗಿದ್ದು, ಯಾವುದೇ ವಿದ್ಯಾರ್ಥಿ, ಪೋಷಕರಿಗೆ ಆಕ್ಷೇಪಗಳಿದ್ದರೇ ತಿಳಿಸುವಂತೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂಬುದಾಗಿ ತಿಳಿಸಿದರು.ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ವಿವಿಧ ಹುದ್ದೆಗಳಿಗೆ BEL ನಿಂದ ಅರ್ಜಿ ಆಹ್ವಾನ

January 28, 2021

 


ಭಾರತ್​ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಬಿಇಎಲ್ ​ನ ಅಧಿಕೃತ ವೆಬ್​ಸೈಟ್​​ನಿಂದ ಅರ್ಜಿ ಸಲ್ಲಿಸಬಹುದಾಗಿದೆ.‌

2021ರಲ್ಲಿ ಬಿಇಎಲ್​ ಅರ್ಜಿ ಆಹ್ವಾನಿಸಿರುವ ಹುದ್ದೆಗಳು.
1. ಪ್ರಾಜೆಕ್ಟ್ ಇಂಜಿನಿಯರ್​ : 22 ಹುದ್ದೆಗಳು ( ಎಲೆಕ್ಟ್ರಾನಿಕ್ಸ್)

2. ಪ್ರಾಜೆಕ್ಟ್ ಇಂಜಿನಿಯರ್​ : 22 ಹುದ್ದೆಗಳು (ಎಲೆಕ್ಟ್ರಾನಿಕ್ಸ್)

3. ಪ್ರಾಜೆಕ್ಟ್ ಇಂಜಿನಿಯರ್​ : 2 ಹುದ್ದೆಗಳು ( ಮೆಕಾನಿಕಲ್​)

4. ಪ್ರಾಜೆಕ್ಟ್ ಇಂಜಿನಿಯರ್​ : 2 ಹುದ್ದೆಗಳು (ಕಂಪ್ಯೂಟರ್​ ಸೈನ್ಸ್)

5. ಸೆಕ್ಯೂರಿಟಿ(ಪುರುಷ) ಅಥವಾ ಅಸಿಸ್ಟೆಂಟ್​ ಸೆಕ್ಯೂರಿಟಿ (ಪುರುಷ) : 1 ಹುದ್ದೆ

6. ಜ್ಯೂನಿಯರ್​ ಸೂಪರ್ ವೈಸರ್​ ಸೆಕ್ಯೂರಿಟಿ (ಪುರುಷ) : 1 ಹುದ್ದೆ

7. ಹವಾಲ್ದಾರ್​ (ಪುರುಷ) : 20 ಹುದ್ದೆ

ಪ್ರಾಜೆಕ್ಟ್ ಇಂಜಿನಿಯರ್​ಗಳನ್ನ 2 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತೆ.

ಈ ಅವಧಿಯು ಗರಿಷ್ಟ 4 ವರ್ಷಗಳವರೆಗೆ ಮುಂದುವರಿಯುವ ಸಾಧ್ಯತೆ ಕೂಡ ಇದೆ.

ಅಭ್ಯರ್ಥಿಗಳಿಗೆ ಕ್ರಮವಾಗಿ 1,2,3 ಹಾಗೂ 4ನೇ ವರ್ಷದ ಗುತ್ತಿಗೆಗೆ 35000 ರೂ., 40000 ರೂ., 45000 ರೂ. ಹಾಗೂ 50000 ರೂಪಾಯಿ ಸಂಬಳ ಸಿಗಲಿದೆ.

ಬಿಇ, ಬಿ ಟೆಕ್​ ಹಾಗೂ ಬಿಎಸ್​ಸಿ ಇಂಜಿನಿಯರಿಂಗ್​ ಪದವಿ ಪಡೆದಿರುವ ಅಭ್ಯರ್ಥಿಗಳು ಪ್ರಾಜೆಕ್ಟ್ ಇಂಜಿನಿಯರ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೆಕ್ಯೂರಿಟಿ ಆಫೀಸರ್​ ಹಾಗೂ ಅಸಿಸ್ಟಂಟ್​ ಸೆಕ್ಯೂರಿಟಿ ಆಫೀಸರ್​ ಹುದ್ದೆಗೆ ಯಾವುದೇ ಪದವೀಧರರು ಅರ್ಹರಾಗಿರುತ್ತಾರೆ. ಉಳಿದ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಪಾಸ್​ ಆಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ.


ರಾಜ್ಯದ 'ಸರ್ಕಾರಿ ನೌಕರ'ರಿಗೆ ಭರ್ಜರಿ ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ 2021ನೇ ಸಾಲಿನ 'ಗಳಿಕೆ ರಜೆ ಅಧ್ಯರ್ಪಿಸಿ ನಗಧೀಕರಣ'ಕ್ಕೆ ಅನುಮತಿ

January 28, 2021

 


ಬೆಂಗಳೂರು : 2021ನೇ ಸಾಲಿನ ಬ್ಲಾಕ್ ಅವಧಿಗೆ ಗರಿಷ್ಟ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಆಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯ ಪಡೆಯುವ ಯೋಜನೆಯನ್ನು ತಕ್ಷಣದಿಂದ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ 2021ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನೀಡುವ ಮೂಲಕ, ಭರ್ಜರಿ ಸಿಹಿ ಸುದ್ದಿ ನೀಡಿದೆ.

ಈ ಕುರಿತಂತೆ ಆರ್ಥಿಕ ಇಲಾಖೆ(ಸೇವೆಗಳು-1 &3) ಸರ್ಕಾರದ ಅಧೀನ ಕಾರ್ಯದರ್ಶಿಯಾದ ಹೆಚ್.ಆರ್.ಲಲಿತ ಅವರು ನಡಾವಳಿ ಹೊರಡಿಸಿದ್ದು, ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 118(2)ರ ಸೌಲಭ್ಯ ಪಡೆಯುವ ಸಲುವಾಗಿ, ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ( ಆಯಾ ವರ್ಷದ ಜನವರಿ 1ರಿಂದ ಡಿಸೆಂಬರ್ 31ರೊಳಗೆ) 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅಧ್ಯರ್ಪಿಸಿ, ರಜಾ ವೇತನಕ್ಕೆ ಸಮನಾದ ನಗದೀಕರಣ ಪಡೆಯಬಹುದಾದ ಸೌಲಭ್ಯವನ್ನು ದಿನಾಂಕ 01-01-2013ರಿಂದ ಜಾರಿಗೊಳಿಸಲಾಗಿದೆ.

ಕೋವಿಡ್-19ರ ಹಿನ್ನಲೆಯಲ್ಲಿ ಸರ್ಕಾರವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನಲೆಯಲ್ಲಿ 2021ನೇ ಸಾಲಿನ ಕ್ಯಾಲೆಂಡರ್ ವರ್ಷ ದಿನಾಂಕ 01-01-2021 ರಿಂದ ದಿನಾಂಕ 31-12-2021ರವರೆಗಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಿ, ಆದೇಶಿಸಿತ್ತು.

ಪ್ರಸಕ್ತ ಸರ್ಕಾರವು 2021ನೇ ಸಾಲಿನ ಅವಧಿಯ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಅವಕಾಶವನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಿದ್ದು, ಈ ಹಿನ್ನಲೆಯಲ್ಲಿ ದಿನಾಂಕ 04-01-2021ರಂದು ಹೊರಡಿಸಿದ್ದಂತ ಆದೇಶವನ್ನು ಹಿಂಪಡೆಯಲಾಗಿದೆ. ಅಲ್ಲದೇ ಈ ಕೆಳಗಿನಂತೆ ಆದೇಶಿಸಲಾಗಿದೆ.

2021ನೇ ಸಾಲಿನ ಬ್ಲಾಕ್ ಅವಧಿಗೆ ಗರಿಷ್ಟ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯ ಪಡೆಯುವ ಯೋಜನೆಯನ್ನು ತಕ್ಷಣದಿಂದ ಜಾರಿಗೊಳಿಸಿ ಆದೇಶಿಸಿದೆ.

ಎಲ್ಲಾ ವೃಂದದ ಅರ್ಹ ಅಧಿಕಾರಿ, ನೌಕರರು ಒಂದು ತಿಂಗಳ ಮುಂಚಿತ ನೋಟಿಸ್ ನೀಡಿ ಜನವರಿ 2021ರಿಂದ ಡಿಸೆಂಬರ್ 2021ರವರೆಗಿನ ಅವಧಿಯಲ್ಲಿ ಅವರ ಇಚ್ಚೆಯಂತೆ ಯಾವುದೇ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನೆ ಪಡೆಯಲು ಅರ್ಹರಾಗಿರುತ್ತಾರೆ.

ಗೆಜೆಟೆಡ್ ಅಧಿಕಾರಿಗಳ ಸಂಬಂಧದಲ್ಲಿ 2021ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ಉದ್ದೇಶಕ್ಕಾಗಿ ಮಾತ್ರ ಹೆಚ್ ಆರ್ ಎಂ ಎಸ್ ನಲ್ಲಿ ಲಭ್ಯವಿರುವ ಅಧಿಕಾರಿಗಳ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ನಗದೀಕರಣವನ್ನು ಮಂಜೂರು ಮಾಡಲು ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮ ವಹಿಸತಕ್ಕದ್ದು ಎಂಬುದಾಗಿ ಆದೇಶದಲ್ಲಿ ತಿಳಿಸಿದೆ.

ವರದಿ : ವಸಂತ ಬಿ ಈಶ್ವರಗೆರೆ

ಇವುಗಳಲ್ಲಿ ನೀವು ಒಂದನ್ನು ಸೇವಿಸಿದರೆ ಸಾಕು ಗ್ಯಾಸ್ಟ್ರಿಕ್ ಸಮಸ್ಯೆ ಬರುವುದೇ ಇಲ್ಲ..!?

January 28, 2021

 


ಗ್ಯಾಸ್ಟ್ರಿಕ್ ಸಾಮಾನ್ಯ ಸಮಸ್ಯೆಯಾಗಿದ್ದು ಅದು ಜೀವನದ ಗುಣಮಟ್ಟವನ್ನು ತೀವ್ರವಾಗಿ ಪರಿಣಾಮ ಬೀರುತ್ತದೆ. ಆಮ್ಲೀಯತೆಯು (ಗ್ಯಾಸ್ಟ್ರಿಕ್) ಎದೆಯಲ್ಲಿ ಸುಡುವ ಸಂವೇದನೆ ಮತ್ತು ಹೊಟ್ಟೆಯಲ್ಲಿ ಭಾರವಾದ ಭಾವನೆಯನ್ನು ಉಂಟುಮಾಡುತ್ತದೆ. ಅತಿಯಾಗಿ ತಿನ್ನುವುದು, ಒತ್ತಡ, ಬೊಜ್ಜು, ಮಸಾಲೆಯುಕ್ತ ಆಹಾರ, ಆಲ್ಕೋಹಾಲ್, ಕೆಫೀನ್, ಧೂಮಪಾನ ಮತ್ತು ಕೊಬ್ಬಿನ ಆಹಾರಗಳ ಸೇವನೆಯಂತಹ ವಿವಿಧ ಕಾರಣಗಳಿಂದ ಇದು ಉಂಟಾಗುತ್ತದೆ.

ಮನೆಮದ್ದುಗಳೊಂದಿಗೆ ಸಾಮಾನ್ಯ ಆಮ್ಲೀಯತೆಯ ಲಕ್ಷಣಗಳನ್ನು ಸರಾಗಗೊಳಿಸಬಹುದು. ಕಂಡುಹಿಡಿಯಲು ಈ ಲೇಖನವನ್ನು ಪೂರ್ತಿ ಓದಿ; ಉರಿಯೂತದ ಪರಿಣಾಮಗಳಿಂದಾಗಿ ಎದೆಯುರಿಗಾಗಿ ಹಳೆಯ ಪರಿಹಾರವೆಂದರೆ ಶುಂಠಿ. ಹೈಪರ್‌ಸಿಡಿಟಿಯಿಂದ ತ್ವರಿತ ಪರಿಹಾರ ಪಡೆಯಲು ಇದನ್ನು ಬೇಯಿಸಬಹುದು, ಕಚ್ಚಾ ತಿನ್ನಬಹುದು ಅಥವಾ ಶುಂಠಿ ಚಹಾದ ರೂಪದಲ್ಲಿ ಸೇವಿಸಬಹುದು.

ಜೀರಿಗೆ ಬೀಜಗಳು ನೈಸರ್ಗಿಕ ನ್ಯೂಟ್ರಾಲೈಜರ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆದ್ದರಿಂದ ಆಮ್ಲೀಯತೆಯನ್ನು ನಿವಾರಿಸಲು ಕಚ್ಚಿ ಅಗಿಯಬಹುದು. ಜೀರಿಗೆ ಬೀಜದ ನೀರನ್ನು ಕುಡಿಯಿರಿ (ಒಂದು ಟೀಸ್ಪೂನ್ ಜೀರಿಗೆಯನ್ನು 4 ಕಪ್ ನೀರಿನಲ್ಲಿ 10 ನಿಮಿಷಗಳ ಕಾಲ ಕುದಿಸಿ ತಯಾರಿಸಲಾಗುತ್ತದೆ) ಅಥವಾ ಆಮ್ಲೀಯತೆಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರತಿ ಊಟದ ನಂತರ ಪುಡಿಮಾಡಿದ ಅಥವಾ ಹುರಿದ ರೂಪದಲ್ಲಿ ಸೇವಿಸಿ.

ಲವಂಗವು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಹೆಚ್ಚಿಸುವ ಕಾರ್ಮಿನೇಟಿವ್ ಪರಿಣಾಮದಿಂದಾಗಿ ಆಮ್ಲೀಯತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನೀವು ಎದೆಯುರಿ ಮತ್ತು ಇತರ ಆಸಿಡ್ ರಿಫ್ಲಕ್ಸ್ ರೋಗಲಕ್ಷಣಗಳನ್ನು ಅನುಭವಿಸಿದಾಗಲೆಲ್ಲಾ, ನಿಮ್ಮ ಜೀರ್ಣಾಂಗವ್ಯೂಹದೊಳಗೆ ರಸವನ್ನು ಬಿಡುಗಡೆ ಮಾಡುವವರೆಗೆ ಮೂರು ಅಥವಾ ಐದು ಲವಂಗವನ್ನು ಅಗಿಯಿರಿ.

ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ಹೊಟ್ಟೆಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಒಂದು ಲೋಟ ಮಜ್ಜಿಗೆ ಒಂದು ಚಿಟಿಕೆ ಕರಿಮೆಣಸು ಅಥವಾ ಒಂದು ಚಮಚ ಕೊತ್ತಂಬರಿ ಸೊಪ್ಪು ಸೇರಿಸಿ. ಆಮ್ಲೀಯತೆಯಿಂದ ಪರಿಹಾರ ಪಡೆಯಲು ದಿನಕ್ಕೆ 2-3 ಬಾರಿ ಇದನ್ನು ಕುಡಿಯಿರಿ.

ತಣ್ಣನೆಯ ಹಾಲು ಗ್ಯಾಸ್ಟ್ರಿಕ್ ಆಮ್ಲಗಳನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಆಸಿಡ್ ರಿಫ್ಲಕ್ಸ್‌ನಿಂದ ಉಂಟಾಗುವ ಎದೆಯುರಿಯನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಒಂದು ಲೋಟ ತಣ್ಣನೆಯ ಹಾಲು ಆಸಿಡ್ ರಿಫ್ಲಕ್ಸ್‌ನಿಂದ ತ್ವರಿತ ಪರಿಹಾರ ನೀಡುತ್ತದೆ. ತುಳಸಿ ಎಲೆಗಳು ಹಿತವಾದ ಮತ್ತು ಕಾರ್ಮಿನೇಟಿವ್ ಗುಣಗಳನ್ನು ಹೊಂದಿದ್ದು ಅದು ಆಮ್ಲೀಯತೆ, ಅನಿಲ ಮತ್ತು ವಾಕರಿಕೆಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಆಮ್ಲೀಯತೆಯ ಲಕ್ಷಣಗಳನ್ನು ನಿವಾರಿಸಲು, ಒಂದು ಕಪ್ ತುಳಸಿ ಎಲೆಗಳನ್ನು ಕಪ್ ನೀರಿನಲ್ಲಿ ಕುದಿಸಿ ಮತ್ತು ಬೆಚ್ಚಗೆ ಕುಡಿಯಿರಿ.


ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

January 27, 2021


 ನವದೆಹಲಿ: ಕೊಬ್ಬರಿ ಮೇಲಿನ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದ್ದು, ಈ ಮೂಲಕ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಕನಿಷ್ಠ ಬೆಂಬಲ ಬೆಲೆಯನ್ನು 375 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಬಲ ಬೆಲೆ ಹೆಚ್ಚಳದಿಂದಾಗಿ ಪ್ರತಿ ಕ್ವಿಂಟಲ್ ಕೊಬ್ಬರಿ ದರ 10,335 ರೂಪಾಯಿಗೆ ಏರಿಕೆಯಾಗಿದೆ. 2020 ನೇ ಸಾಲಿನಲ್ಲಿ ಕೊಬ್ಬರಿ ಬೆಲೆ 9960 ರೂಪಾಯಿ ಇತ್ತು. ಅದನ್ನು 375 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. ದುಂಡು ಕೊಬ್ಬರಿ ಮೇಲಿನ ಎಂ.ಎಸ್.ಪಿ.ಯನ್ನು 300 ರೂ., ತುಂಡರಿಸಿದ ಕೊಬ್ಬರಿ ಮೇಲಿನ ಎಂ.ಎಸ್.ಪಿ.ಯನ್ನು 375 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ 12 ರಾಜ್ಯಗಳ ತೆಂಗು ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.BIG BREAKING : ಬೆಳಗಾವಿಯಲ್ಲಿ ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

January 27, 2021

 


ಬೆಳಗಾವಿ : ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರಾಯಬಾಗ ರೈಲ್ವೆ ನಿಲ್ದಾಣದ ಬಳಿ ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮೃತರನ್ನು ತಂದೆ ಬೀರಡಿ ಸಾತಪ್ಪ ಸುತಾರ್( 60) ತಾಯಿ ಮಹಾದೇವಿ (50), ಮಕ್ಕಳಾದ ದತ್ತಾತ್ರೇಯ (28) ಮತ್ತು ಸಂತೋಷ್ (25) ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ

January 27, 2021

 


ನವದೆಹಲಿ : ಕೇಂದ್ರ ಸರ್ಕಾರವು ರಾಜ್ಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದ ಗ್ರಾಮೀಣಾ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ 2020-21 ನೇ ಹಣಕಾಸು ವರ್ಷದ ಎರಡನೇ ಕಂತಿನ ಅನುದಾನ 2412 ಕೋಟಿ ರೂ. ಬಿಡುಗಡೆ ಮಾಡಿದೆ.

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಶಿಫಾರಸಿನ ಮೇಲೆ ಕೇಂದ್ರ ಹಣಕಾಸು ಸಚಿವಾಲಯ 18 ರಾಜ್ಯಗಳಿಗೆ ಒಟ್ಟು 12,351 ಕೋಟಿ ರೂ. ಬಿಡುಗಡೆ ಮಾಡಿದೆ. ಒಟ್ಟಾರೆ ಈ ಹಣ ಬಿಡುಗಡೆಯಾದ 10 ದಿನದೊಳಗೆ ರಾಝ್ಯ ಸರ್ಕಾರವು ಗ್ರಾಮೀಣಾ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಬೇಕು. ಇಲ್ಲದಿದ್ದರೆ ಅನುದಾನ ಬಡ್ಡಿ ಸಮೇತ ನೀಡಬೇಕು ಎಂದು ಕೇಂದ್ರ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಈ ಅನುದಾನವು ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ, ಜಲ್ಲಾಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಹಂಚಲ್ಪಡಲಿದೆ.

ಬಿಜೆಪಿ -ಜೆಡಿಎಸ್ ದೋಸ್ತಿ : ಪಟ್ಟ ಬಿಟ್ಟುಕೊಡಲು ಕಮಲ ಪಾಳಯ ಒಪ್ಪಿಗೆ?

January 27, 2021

 


ಬೆಂಗಳೂರು (ಜ.27): ವಿಧಾನಪರಿಷತ್ತಿನ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ತಾತ್ವಿಕವಾಗಿ ಒಪ್ಪಿಕೊಂಡಿದ್ದು, ಈ ಬಗ್ಗೆ ಬುಧವಾರ ಸ್ಪಷ್ಟಚಿತ್ರಣ ಹೊರಬೀಳಲಿದೆ.

ಈಗಾಗಲೇ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಈ ಸಂಬಂಧ ಬಿಜೆಪಿ ನಾಯಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಬುಧವಾರ ಪರಿಷತ್ತಿನ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.

ಪದೇ ಪದೇ ಖಾತೆ ಬದಲಾವಣೆ; ಇಬ್ಬರು ಪ್ರಮುಖ ಸಚಿವರ ರಾಜೀನಾಮೆ?

ಇದೇ ವೇಳೆ ಗುರುವಾರದಿಂದ ಜಂಟಿ ಅಧಿವೇಶನ ಪ್ರಾರಂಭವಾಗಲಿದ್ದು, ಶುಕ್ರವಾರ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತದೆ. ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದ ಬಳಿಕ ಸಭಾಪತಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಹೀಗಾಗಿ, ಬುಧವಾರ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಹೊಂದಾಣಿಕೆ ರೂಪುರೇಷೆ ಅಂತಿಮಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಧಾನಪರಿಷತ್‌ನ ಸಭಾಪತಿ ಸ್ಥಾನಕ್ಕೆ ಪ್ರತಾಪ್‌ಚಂದ್ರಶೆಟ್ಟಿರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಹಿರಿಯ ನಾಯಕ ಬಸವರಾಜ ಹೊರಟ್ಟಿಅವರಿಗೆ ಆ ಹುದ್ದೆ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.

ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಮುಂದಾಗಿರುವ ಬಿಜೆಪಿಯು ಉಪಸಭಾಪತಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಸಂಜೆ ತಮ್ಮ ನಿವಾಸದಲ್ಲಿ ಪರಿಷತ್ತಿನ ಬಿಜೆಪಿ ಸದಸ್ಯರ ಸಭೆ ಕರೆದಿದ್ದಾರೆ.

ಆಯನೂರು ಮಂಜುನಾಥ್‌, ಶಶಿಲ್‌ ನಮೋಶಿ, ಅರುಣ್‌ ಶಹಾಪುರ, ಮಹಾಂತೇಶ್‌ ಕವಟಗಿಮಠ ಮೊದಲಾದವರು ಉಪಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮುಖ್ಯಮಂತ್ರಿ ಸಭೆಯ ಬಳಿಕ ಯಾರು ಅಭ್ಯರ್ಥಿಯಾಗಬೇಕು ಎಂಬುದು ಅಂತಿಮಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಗೌಡರ ನಿವಾಸದಲ್ಲಿ ಸಭೆ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮಂಗಳವಾರ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಪಕ್ಷದ ವಿಧಾನಪರಿಷತ್‌ ಸದಸ್ಯರೊಂದಿಗೆ ಸಭೆ ನಡೆಸಿದರು.

ಮೂರು ಗಂಟೆಗಿಂತ ಹೆಚ್ಚು ಕಾಲ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮೇಲ್ಮನೆ ಸದಸ್ಯರಾದ ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಬೋಜೇಗೌಡ, ರಮೇಶ್‌ಗೌಡ, ತಿಪ್ಪೇಸ್ವಾಮಿ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು. ವಿಧಾನಪರಿಷತ್‌ನಲ್ಲಿ ಅಧಿಕ ಸಂಖ್ಯಾಬಲ ಹೊಂದಿದ್ದರೂ ಸಭಾಪತಿ ಸ್ಥಾನಕ್ಕೆ ಅಗತ್ಯ ಇರುವ ಸಂಖ್ಯಾಬಲ ಇಲ್ಲದ ಕಾರಣ ಆಡಳಿತಾರೂಢ ಬಿಜೆಪಿಗೆ ಜೆಡಿಎಸ್‌ ಬೆಂಬಲ ಅನಿವಾರ್ಯ. ಹೀಗಾಗಿ ಮುಂದಿನ ಒಂದೂವರೆ ವರ್ಷಕಾಲ ಜೆಡಿಎಸ್‌ ಸಭಾಪತಿ ಸ್ಥಾನವನ್ನು ಪಡೆದುಕೊಳ್ಳುವ ಸಂಬಂಧ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಯಿತು. ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿರುವ ಹಿರಿಯ ನಾಯಕ ಬಸವರಾಜ ಹೊರಟ್ಟಿಅವರಿಗೆ ಹುದ್ದೆ ನೀಡುವ ಸಂಬಂಧ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ಸಹಮತ ವ್ಯಕ್ತಪಡಿಸಿದರು ಎನ್ನಲಾಗಿದೆ.


ಖಾಸಗಿ ಶಾಲಾ ಮಕ್ಕಳ ಪೋಷಕರೇ ಗಮನಿಸಿ : ಸಿದ್ಧವಾಗಿದೆ ಹೊಸ ಸೂತ್ರ

January 24, 2021

 


ಬಾಗಲಕೋಟೆ (ಜ.24): ಖಾಸಗಿ ಶಾಲೆಗಳ ಶುಲ್ಕ ಕಟ್ಟುವ ವಿಷಯದಲ್ಲಿ ಸರ್ಕಾರದ ಮುಂದೆ ಮೂರು ವಿಧಗಳ ಸೂತ್ರವಿದ್ದು, ಶೀಘ್ರದಲ್ಲಿಯೇ ಅಂತಿಮ ನಿರ್ಧಾರದೊಂದಿಗೆ ಒಂದು ಸೂತ್ರವನ್ನು ಜಾರಿಗೊಳಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ಜಿಲ್ಲೆಯ ಜಮಖಂಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಲ್ಕ ಕಟ್ಟಿಲ್ಲವೆಂದು ಆನ್‌ಲೈನ್‌ ಶಿಕ್ಷಣದಲ್ಲಿ ಪಾಸ್‌ವರ್ಡ್‌ ನೀಡದೇ ಇರುವುದನ್ನು ಸಹ ಗಮನಿಸಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಈ ಕುರಿತು ದೂರು ಬಂದರೆ ಖಂಡಿತ ಕ್ರಮಕೈಗೊಳ್ಳುತ್ತೇನೆ. ಶುಲ್ಕ ಕಟ್ಟಿಸಿಕೊಳ್ಳುವ ಒತ್ತಡ ಹಾಕುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಇವೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ..

ಪೋಷಕರ ಅಭಿಪ್ರಾಯ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಅಭಿಪ್ರಾಯ, ತಜ್ಞರ ಅಭಿಪ್ರಾಯ ಸಂಗ್ರಹಿಸಿ 2 ವಿಧದ ಸೂತ್ರ ಹೆಣೆಯಲಾಗಿದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳ ಮಕ್ಕಳ ಪಾಲಕರಿಗೆ ಕೋವಿಡ್‌ನಿಂದ ಆರ್ಥಿಕ ಹಿಂಜರಿತವಾಗಿ ಶುಲ್ಕ ಕಟ್ಟುವುದಕ್ಕೆ ಆಗುತ್ತಿಲ್ಲ. ಪಾಲಕರು ಶುಲ್ಕ ಕಡಿತಕ್ಕೆ ಮನವಿ ಮಾಡಿದ್ದಾರೆ. ಆದರೆ, ಖಾಸಗಿ ಸಂಸ್ಥೆಗಳು ಶುಲ್ಕ ಇಲ್ಲದೆ ಶಾಲೆ ನಡೆಸುವುದು ಕಷ್ಟಎನ್ನುತ್ತಿವೆ. 6 ತಿಂಗಳಿನಿಂದ ಖಾಸಗಿ ಶಾಲೆಗಳಲ್ಲಿ ಕೆಲಸವೂ ಇಲ್ಲ. ಸಂಬಳವೂ ಇಲ್ಲದೆ ಅನೇಕ ಶಿಕ್ಷಕರು ತರಕಾರಿ ಮಾರಾಟ ಮಾಡಿದ್ದನ್ನು ಸಹ ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದೆ ಮುಖ್ಯ ವಿಷಯ ಫೀ ಸ್ಟ್ರಕ್ಚರ್‌ (ಶುಲ್ಕ ನಿಗದಿ) ಆಗಿದೆ ಎಂದರು.'ವೃತ್ತಿ ಶಿಕ್ಷಕರ ಸಮಸ್ಯೆಗೆ ಶೀಘ್ರ ಪರಿಹಾರ'

January 22, 2021

 


ಬೆಂಗಳೂರು: 'ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡಿರುವ ವೃತ್ತಿ ಶಿಕ್ಷಕರು (ಕ್ರಾಫ್ಟ್‌ ಟೀಚರ್ಸ್‌) ಮತ್ತು ಜೆಒಸಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದರು.

ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಜೊತೆ ಶುಕ್ರವಾರ ಸಭೆ ನಡೆಸಿದ ಅವರು, 'ವಿಲೀನಗೊಳಿಸದೇ ಬಾಕಿ ಉಳಿದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 11 ಮಂದಿ ಭಾಷಾ ಉಪನ್ಯಾಸಕರು ಮತ್ತು 28 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವಾ ವಿಲೀನಗೊಳಿಸುವ ಬಗ್ಗೆ ಕೂಡಲೇ ಪ್ರಸ್ತಾವ ಸಲ್ಲಿಸಬೇಕು' ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದರು.

'ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವೃತ್ತಿಶಿಕ್ಷಣ ಇಲಾಖೆಯಿಂದ ನೀಡಬೇಕಾಗಿದ್ದ ಬಾಕಿ ವೇತನ ಮಂಜೂರು ಮಾಡುವುದಕ್ಕೆ ಅಗತ್ಯ ಪ್ರಸ್ತಾವದೊಂದಿಗೆ ಅನುಮೋದನೆಗೆ ಕಡತ ಮಂಡಿಸಬೇಕು' ಎಂದೂ ಸೂಚಿಸಿದರು.

'ಇಲಾಖೆಯಲ್ಲಿ ವಿಲೀನಗೊಂಡು ನಿವೃತ್ತಿ ಅಂಚಿನಲ್ಲಿರುವ 95 ಜೆಒಸಿ ಉಪನ್ಯಾಸಕರಿಗೆ ಒಂದು ಬಾರಿ ವಿಶೇಷ ಪ್ರಕರಣವಾಗಿ ಬಿ.ಇಡಿ ಪದವಿ ವಿನಾಯಿತಿ ನೀಡಲಾಗುತ್ತದೆ. ಈ ಅವಧಿಯನ್ನು ಪ್ರೊಬೇಷನರಿ ಅವಧಿ ಎಂದು ಘೋಷಿಸಲೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ' ಎಂದೂ ತಿಳಿಸಿದರು.


BIG NEWS: ನೇಮಕಾತಿ ನಿಯಮ ಬದಲು, ಪ್ರೌಢಶಾಲೆ ಶಿಕ್ಷಕರಾಗಲು ಪಿಜಿ ಕಡ್ಡಾಯ -ಬಿಎಡ್, ಸಿಇಟಿ, ಪದವಿ ಅಂಕಗಳೂ ಪರಿಗಣನೆ

January 22, 2021

 


ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಮಾನದಂಡಗಳ ಅನ್ವಯ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಅನುಕೂಲವಾಗುವಂತೆ ಪ್ರೌಢಶಾಲೆ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿದ್ಯಾರ್ಹತೆಯನ್ನು ಪದವಿಯಿಂದ ಸ್ನಾತಕೋತ್ತರ ಪದವಿಗೆ ಪರಿಷ್ಕರಿಸಲು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಸಮಗ್ರ ಅಧ್ಯಯನ ನಡೆಸಿ ಕರಡು ರಚನೆಗೆ ನಾಲ್ಕು ವಿಭಾಗವಾರು ತಂಡಗಳನ್ನು ನೇಮಕ ಮಾಡಲಾಗಿದೆ.

ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶಿಸಲಾಗಿದೆ. ಪ್ರಸ್ತುತ ಪ್ರೌಢಶಾಲೆ ಶಿಕ್ಷಕರಾಗಲು ಬಿಎಡ್ ಜೊತೆಗೆ ಯಾವುದಾದರೂ ಪದವಿ ಕಡ್ಡಾಯವಾಗಿದೆ.

ಇನ್ನು ಮುಂದೆ, ಸ್ನಾತಕೋತ್ತರ ಪದವಿ ಕಡ್ಡಾಯವಾಗಲಿದೆ.

ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ನಲ್ಲಿ ಕಡ್ಡಾಯವಾಗಿ ತಲಾ ಶೇಕಡ 50 ರಷ್ಟು ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಸಿಇಟಿಯಲ್ಲಿ ಪಡೆದ ಶೇಕಡ 60 ರಷ್ಟು ಅಂಕ, ಪದವಿಯ ಶೇಕಡ 20 ರಷ್ಟು, ಹಾಗೂ ತಲಾ ಶೇಕಡ 10 ರಷ್ಟು ಸ್ನಾತಕೋತ್ತರ ಪದವಿ ಮತ್ತು ಬಿಎಡ್ ನಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.


ಕೇಂದ್ರ ಸರ್ಕಾರದಿಂದ 'ದೇಶದ ಜನತೆಗೆ' ಗುಡ್‌ ನ್ಯೂಸ್‌: 2022ರ ಆಗಸ್ಟ್ 15ರ ವೇಳೆಗೆ 'ಎಲ್ಲರಿಗೂ ಮನೆ' ಅಮಿತ್ ಶಾ ಘೋಷಣೆ

January 22, 2021

 


ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ 2022ರ ಆಗಸ್ಟ್ 15ರೊಳಗೆ ದೇಶದ ಪ್ರತಿಯೊಬ್ಬ ಪ್ರಜೆಗೂ ಮನೆ ಒದಗಿಸಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. ಅಹಮದಾಬಾದ್ ನ ಶೀಲಾಜ್ ನಲ್ಲಿ ಒಂದು ಕಿ.ಮೀ ಉದ್ದದ ಮೇಲ್ಸೇತುವೆಯ ಉದ್ಘಾಟನೆ ಯಲ್ಲಿ ಅವರು ಮಾತನಾಡಿಡುತ್ತ ಈ ಬಗ್ಗೆ ತಿಳಿಸಿದೆ.

ಅಹಮದಾಬಾದ್ ನ ತಲ್ತೇಜ್ ಶಿಲಾಜ್ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಯನ್ನು ಗುರುವಾರ ಉದ್ಘಾಟಿಸಿ ಅಮಿತ್‌ ಶಾ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ, 'ನಮ್ಮ ಬಿಜೆಪಿ ಸರಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಪ್ರಕಾರ, 2022ರ ಆಗಸ್ಟ್ 15ರೊಳಗೆ ದೇಶದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂಬ ಸಂಪೂರ್ಣ ಭರವಸೆ ನನ್ನಗಿದೆ ಅಂತ ಹೇಳಿದರು.

ಇನ್ನೂ ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸುತ್ತ ಉಜ್ವಲ ಯೋಜನೆಯಡಿ 13 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಸ್ ಸಿಲಿಂಡರ್ ನೀಡಿದ್ದಾರೆ. ನಮ್ಮ ಸರ್ಕಾರ ದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, 2022ರ ವೇಳೆಗೆ ದೇಶದ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುತ್ತದೆ ಹೀಗಾಗಿ ದೇಶದಲ್ಲಿ ನೀರಿನ ಸಂಪರ್ಕ ವೇಇಲ್ಲದ ಒಂದು ಮನೆಯೂ ಇರುವುದಿಲ್ಲ ಎಂಬ ಸಂಪೂರ್ಣ ನಂಬಿಕೆ ಇದೆ' ಎಂದು ಶಾ ಹೇಳಿದರು.

ಇನ್ನೂ ಇದೇ ವೇಳೆ ಅವರು ಸಮಾರಂಭದಲ್ಲಿ ದೇಶದಲ್ಲಿ ಸುಮಾರು ಒಂದು ಲಕ್ಷ ರೈಲ್ವೆ ಕ್ರಾಸಿಂಗ್ ಗಳನ್ನು ಮುಕ್ತಗೊಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆಗಳನ್ನು ನಿರ್ಮಾಣ ಮಾಡುವ ಕಾಮಗಾರಿಗಳನ್ನು ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ದ್ದೇವೆ. ದೇಶದಲ್ಲಿ ಮಾನವರಹಿತ ರೈಲ್ವೆ ಕ್ರಾಸಿಂಗ್ ಗಳನ್ನು ತೆಗೆದುಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, 2022ರ ವೇಳೆಗೆ ದೇಶದಲ್ಲಿ ಒಂದೇ ಒಂದು ಮಾನವರಹಿತ ರೈಲ್ವೆ ಕ್ರಾಸಿಂಗ್ ಇಲ್ಲ' ಎಂದು ಹೇಳಿದರು.


BIG NEWS : 'ವಿವಾಹಿತ ಹೆಣ್ಮಕ್ಕಳಿಗೆ' ಅನುಕಂಪದ ಮೇಲೆ ನೌಕರಿ ಕೊಡಲು ನಿಯಮ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಅಸ್ತು

January 22, 2021

 


ಬೆಂಗಳೂರು : ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಏನೆಲ್ಲಾ ತೀರ್ಮಾನ ಕೈಗೊಳ್ಳಲಾಯಿತು ಎಂಬುದರ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

1) 5.5 ಲಕ್ಷ ಮನೆಗಳಿಗೆ ಗೃಹ ಶೌಚಾಲಯ ನಿರ್ಮಾಣಕ್ಕೆ ಶೇ.70 ರಷ್ಟು ಅನುದಾನ

2) ಸರ್ಕಾರಿ ನೌಕರರ ಅನುಕಂಪ ಆಧಾರಿತ ನೌಕರಿ ನೀಡಲು ನಿಯಮಾವಳಿ ತಿದ್ದುಪಡಿ

3) ವಿವಾಹಿತ ಹೆಣ್ಣು ಮಕ್ಕಳಿಗೂ ಅನುಕಂಪ ಆಧಾರಿತ ನೌಕರಿ ನೀಡಲು ನಿಯಮ ತಿದ್ದುಪಡಿ

4) ಅಂಗನವಾಡಿ ಸಹಾಯಕಿಯರಿಗೆ ಸಮವಸ್ತ್ರ ನೀಡಲು ಕೆ ಹೆಚ್ ಡಿ ಸಿ ಯಿಂದ ಸೀರೆ ನೀಡಲು 10 ಕೋಟಿ 27 ಲಕ್ಷದಲ್ಲಿ ಖರೀದಿಸಲು ಅನುಮೋದನೆ.

5) ವಿಕಲಚೇತನರಿಗೆ ತ್ರಿಚಕ್ರ ವಾಹಕ ಖರೀದಿಗೆ ಟೆಂಡರ್

6) ಕೈಮಗ್ಗ ಅಭಿವೃದ್ದಿ ನಿಗಮಕ್ಕೆ 31ಕೋಟಿ ದುಡಿಮೆ ಬಂಡವಾಳ ಸಾಲ ಪಡೆಯಲು ಬ್ಯಾಂಕ್ ಗ್ಯಾರಂಟಿ ಒಂದು ವರ್ಷ ಮುಂದುವರಿಕೆಗೆ ಅಸ್ತು

7) ಆರ್ ಡಿ ಪಿ ಆರ್ ಇಲಾಖೆಯ ಸ್ವಚ್ಚ ಭಾರಯ ಮಿಷನ್ ಯೋಜನೆ 2 ಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ

8) ಸ್ಥಳೀಯ ಸಂಸ್ಥೆಗಳಿಗೆ ಬೆಲೆ ನಿಗದಿ ಮಾಡಿಕೊಳ್ಳಲು ಅಧಿಕಾರ


ಈ ಕಾರಣಕ್ಕೆ ʼ2 ನಿಮಿಷʼಗಳ ಕಾಲ ಸ್ತಬ್ಧವಾಗಲಿದೆ ಭಾರತ: ʼಕೇಂದ್ರ ಸರ್ಕಾರʼದಿಂದ ಹೊಸ ಆದೇಶ

January 20, 2021


 ನವದೆಹಲಿ: ಜನವರಿ 30ಕ್ಕೆ ಮಹಾತ್ಮ ಗಾಂಧಿಯವರ ಪುಣ್ಯತಿಥಿ.. ಈ ದಿನವನ್ನ ಪ್ರತಿ ಬಾರಿಯೂ ಹುತಾತ್ಮರ ದಿನ ಅಂತಾನೇ ಆಚರಿಸಲಾಗ್ತಿದೆ. ಈ ದಿನಕ್ಕೆ ಸಂಬಂಧಿಸಿದಂತೆ ದೇಶದ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರ ನೆನಪಿಗಾಗಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವಂತೆ ಸೂಚಿಸಲಾಗಿದೆ. ಅದ್ರಂತೆ, ಈ ಅವಧಿಯಲ್ಲಿ ಭಾರತ ಸ್ತಬ್ಧವಾಗಲಿದೆ.

ಗೃಹ ಸಚಿವಾಲಯ (ಹುತಾತ್ಮರ ದಿನ) ಹೊರಡಿಸಿರುವ ಹುತಾತ್ಮರ ದಿನಾಚರಣೆಯ ಈ ಆದೇಶದಂತೆ, ಪ್ರತಿವರ್ಷ ಜನವರಿ 30ರಂದು ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಬೇಕು

ಇದರೊಂದಿಗೆ, ಆ ಎರಡು ನಿಮಿಷಗಳ ಕಾಲ ಇಡೀ ದೇಶದಲ್ಲಿ ಯಾವುದೇ ಕೆಲಸ ಅಥವಾ ಚಲನೆ ಇರುವುದಿಲ್ಲ. ಸೈರನ್ ವ್ಯವಸ್ಥೆ ಇರುವ ಸ್ಥಳಗಳಲ್ಲಿ, ಮೌನವನ್ನ ನೆನಪಿಸಲು ಸೈರನ್ ನುಡಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಸೈನ್ಯದ ಬಂದೂಕಿನಿಂದ ಗುಂಡು ಹಾರಿಸುವುದರ ಮೂಲಕವೂ ನೆನಪಿಸಲಾಗುತ್ತೆ. ಅಂದ್ಹಾಗೆ, ಬೆಳಿಗ್ಗೆ 10.59 ರಂದು ಅಲರ್ಟ್‌ ನೀಡಲಾಗುತ್ತೆ. ನಂತರ, ಎಲ್ಲರೂ 2 ನಿಮಿಷಗಳ ಕಾಲ ಮೌನಾಚರಣೆ ಆಚರೀಸ್ಬೇಕು. ಇದನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶ ಹೊರಡಿಸಲಾಗಿದೆ.ಶಾಲಾ ಶುಲ್ಕ ಕಡಿತ: ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರಿಗೆ ಇಲ್ಲಿದೆ ಗುಡ್ ನ್ಯೂಸ್

January 20, 2021

 


ಬೆಂಗಳೂರು: ಖಾಸಗಿ ಶಾಲೆ ಶುಲ್ಕದಲ್ಲಿ ಶೇಕಡ 35 ರಷ್ಟು ಕಡಿತ ಮಾಡಲು ಶೀಘ್ರದಲ್ಲೇ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ಸರ್ಕಾರಕ್ಕೆ ಶಿಕ್ಷಣ ಇಲಾಖೆಯಿಂದ ವರದಿ ಸಲ್ಲಿಸಲಾಗಿದೆ. ಕೊರೋನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಗೆ ಅನುಕೂಲವಾಗುವಂತೆ ಈ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ಶುಲ್ಕ ಕಡಿತಕ್ಕೆ ಸರ್ಕಾರ ತೀರ್ಮಾನಿಸಿದೆ. ಶೇಕಡ 35 ರಷ್ಟು ಶುಲ್ಕ ಕಡಿತಗೊಳಿಸುವ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


ರಾಜ್ಯದ ಜನತೆಗೆ ಸಿಹಿಸುದ್ದಿ : ಇಂದಿನಿಂದ ಮನೆ ಬಾಗಿಲಿಗೆ `ಜನಸೇವಕ' ಯೋಜನೆ ಆರಂಭ

January 18, 2021

 ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದ ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಜಾರಿಗೊಳಿಸಿರುವ ಜನಸೇವಕ ಹಾಗೂ ಗ್ರಾಮೀಣಾ ಪ್ರದೇಶದಲ್ಲಿ ಗ್ರಾಮ ಒನ್ ಸೇವೆ ಸದ್ಯದಲ್ಲೇ ಇನ್ನಷ್ಟು ವಿಸ್ತರಣೆಯಾಗಲಿದೆ.ಬೆಂಗಳೂರಿನ ರಾಜಾಜಿನಗರ, ದಾಸರಹಳ್ಳಿ, ಬೊಮ್ಮನಹಳ್ಳಿ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವಕ ಜಾರಿಯಲ್ಲಿದ್ದು, ಇಂದಿನಿಂದ ಆಧಾರ್ ತಿದ್ದುಪಡಿ, ಎಪಿಎಲ್ ಕಾರ್ಡ್, ಇ-ಸ್ಟಾಂಪ್ ಸೇವೆ ಹೊಸದಾಗಿ ಸೇರ್ಪಡೆಯಾಗಲಿವೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ 3 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯಲ್ಲಿ 100 ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಗ್ರಾಮ ಒನ್ ಸೇವೆ ಜಾರಿಯಾಗಿದೆ.

ಶೀಘ್ರದಲ್ಲೇ ಬೆಳಗಾವಿ ವಿಭಾಗದ ವಿಜಯಪುರ, ಕಲಬುರಗಿ ವಿಭಾಗದ ಬೀದರ್ ಹಾಗೂ ಮೈಸೂರು ವಿಭಾಗದ ಚಿಕ್ಕಮಗಳೂರಿನಲ್ಲಿ ಸೇವೆ ಆರಂಭವಾಗಲಿದೆ.

ಇನ್ನು ಈ ಯೋಜನೆ ಮೂಲಕ ಗ್ರಾಮದಲ್ಲೇ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಿಂಚಣಿ, ಆರೋಗ್ಯ ಕಾರ್ಡ್, ಹಿರಿಯ ನಾಗರಿಕ ಗುರುತಿನ ಚೀಟಿ ಸೇರಿದಂತೆ ಪ್ರಮುಖ ಸೇವೆಗಳನ್ನು ಪಡೆಯಬಹುದಾಗಿದೆ. ಹೊಸದಾಗಿ ಮೈಕ್ರೋ ಬ್ಯಾಂಕಿಂಗ್ ಸೇವೆ ಆರಂಭವಾಗಲಿದೆ. ಇದರಿಂದ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಯೋಜನೆಗಳ ನೆರವನ್ನು ಸ್ಥಳೀಯವಾಗಿಯೇ ಪಡೆಯಬಹುದಾಗಿದೆ.


60 ಸಾವಿರ ರೂ.ಗೆ ನವಜಾತ ಮಕ್ಕಳ ಮಾರಾಟ : ದಂಧೆಯನ್ನು ಭೇದಿಸಿ 9 ಜನರನ್ನು ಬಂದಿಸಿದ ಮುಂಬೈ ಪೊಲೀಸ್

January 18, 2021

 


ಮುಂಬೈ : ಬಾಂದ್ರಾ ರೈಲು ನಿಲ್ದಾಣ ಸಮೀಪದ ಖೇರ್ವಾಡಿ ಬಡಾವಣೆಯಲ್ಲಿ ನವಜಾತ ಶಿಶುಗಳ ಮಾರಾಟ ದಂಧೆಗೆ ಸಂಬಂಧಿಸಿದಂತೆ ವೈದ್ಯ ಸೇರಿದಂತೆ ಒಂಬತ್ತು ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

'ಮಾಹಿತಿ ಸಂಗ್ರಹಿಸಿ, ಮುಂಬೈ ಮತ್ತು ಪುಣೆಯಲ್ಲಿ ಮಹಿಳಾ ಏಜೆಂಟ್ ಮೂಲಕ ತನ್ನ ಎರಡು ನವಜಾತ ಶಿಶುಗಳನ್ನು ಮಾರಾಟ ಮಾಡಿದ್ದ ಮಹಿಳೆಯನ್ನು ವಿಚಾರಣೆ ಮಾಡಲಾಯಿತು. ಈ ಏಜೆಂಟ್ ನ ವಿಚಾರಣೆಯಿಂದಾದ ನಂತರ, ತನ್ನ ನವಜಾತ ಶಿಶುವನ್ನು ಧಾರಾವಿಯ ಕುಟುಂಬವೊಂದಕ್ಕೆ ಮಾರಿದ ಇನ್ನೊಬ್ಬ ಮಹಿಳೆಗೆ ನಾವು ದಾರಿ ಮಾಡಿಕೊಟ್ಟೆವು' ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿ ಯೋಗೇಶ್ ಸಾವಂತ್ ಹೇಳಿದ್ದಾರೆ.

'ಈ ಕುಟುಂಬಗಳಿಗೆ ಏಜೆಂಟ್ ಮತ್ತು ಎನ್ ಜಿಒ ಸದಸ್ಯರು ಆಮಿಷ ಒಡ್ಡಿದ್ದರು. ಇದರ ಬೆಲೆ 60 ಸಾವಿರ ದಿಂದ 1.5 ಲಕ್ಷ ರೂಪಾಯಿವರೆಗೆ ಇದೆ' ಎಂದು ಸಾವಂತ್ ಹೇಳಿದ್ದಾರೆ. ವರದಿಗಳ ಪ್ರಕಾರ, ಹೆಣ್ಣು ಮಕ್ಕಳನ್ನು 60 ಸಾವಿರ ರೂ.ಗೆ ಮತ್ತು ಬಾಲಕರು 1.50 ಲಕ್ಷ ರೂ.ಗೆ ಮಾರಾಟಮಾಡಿದ್ದಾರೆ. ಮುಂಬಯಿಯ ಪಶ್ಚಿಮ ಉಪನಗರಗಳಲ್ಲಿ ಸಕ್ರಿಯವಾಗಿರುವ ಎನ್ ಜಿಒ ಸದಸ್ಯರನ್ನು ಬಂಧಿಸಲು ಶೋಧ ನಡೆಯುತ್ತಿದೆ.

ಆರೋಪಿಗಳು ಶಿಶುಗಳನ್ನು ಖರೀದಿಸಿದ ಕುಟುಂಬಗಳಿಗೆ ಹೆರಿಗೆ ಪ್ರಮಾಣ ಪತ್ರವನ್ನೂ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಅಂತಹ ಕುಟುಂಬಗಳ ಸದಸ್ಯರೂ ಸೇರಿದ್ದಾರೆ.

ಈ ರಾಕೆಟ್ ಮೂಲಕ ಮಾರಾಟವಾದ ಏಳು ಶಿಶುಗಳ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ. ತಮ್ಮ ಶಿಶುಗಳನ್ನು ಮಾರಿದ ಮಹಿಳೆಯರು ಕಡಿಮೆ ಆದಾಯವರ್ಗದಿಂದ ಬಂದವರಾಗಿರುತ್ತಾರೆ.


ಯುವಕರಿಗೆ ಗುಡ್ ನ್ಯೂಸ್: ಬೈಕ್ ಖರೀದಿಗೆ 25 ಸಾವಿರ ರೂ. ಸಹಾಯಧನ

January 16, 2021

 


ಯಾದಗಿರಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನ ಬೈಕ್ ಖರೀದಿಗೆ ಸಹಾಯ ಧನ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜನವರಿ.23 ರವರೆಗೆ ವಿಸ್ತರಿಸಲಾಗಿದೆ.

ಇ- ವಾಣಿಜ್ಯ ಸಂಸ್ಥೆಗಳಾದ ಜಿಮ್ಯಾಟೋ, ಸ್ವಿಗ್ಗಿ ಸೇರಿದಂತೆ ಮೊದಲಾದ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು, ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ-2ಎ, 3ಎ ಮತ್ತು 3ಬಿ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ/ಅರೆ ಅಲೆಮಾರಿಜನಾಂಗದವರು ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತು ಪಡಿಸಿ) ಯುವಕರಿಗೆ ಬೈಕ್ ಕೊಂಡುಕೊಳ್ಳಲು ನಿಗಮದಿಂದ 25,000 ರೂ. ಸಹಾಯ ಧನವನ್ನು ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಪಡೆಯುವುದು.

ಈ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಜ.23 ರ ಸಂಜೆ 5.00 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಿ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.


ಸುಕನ್ಯಾ ಸಮೃದ್ಧಿ ಯೋಜನೆಗೆ ಪೋಸ್ಟ್ ಆಫೀಸ್ ನಲ್ಲಿ ಆನ್ ಲೈನ್ ಹಣ ಜಮೆ ಹೇಗೆ?

January 09, 2021


 ಹೆಣ್ಣುಮಕ್ಕಳ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆದು, ಉಳಿತಾಯ ಆರಂಭಿಸುವುದಕ್ಕೆ ಹಲವರು ಆದ್ಯತೆ ನೀಡುತ್ತಾರೆ. ಏಕೆಂದರೆ ಇದರಿಂದ ತೆರಿಗೆ ಉಳಿತಾಯ ಮಾಡುವುದಕ್ಕೆ ಸಾಧ್ಯ ಮತ್ತು ಉತ್ತಮ ಬಡ್ಡಿ ದರ ಕೂಡ ನಡೆಯುತ್ತದೆ. ಅಂದ ಹಾಗೆ ಈ ವರ್ಷದ ಜನವರಿಯಿಂದ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸುಕನ್ಯಾ ಸಮೃದ್ಧಿ ಸೇರಿದಂತೆ ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆ ಆಗುತ್ತದೆ. ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಿದ ಮೇಲೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಅಪ್ಲಿಕೇಷನ್ ಮೂಲಕ ಆನ್ ಲೈನ್ ನಲ್ಲೇ ಎಲ್ಲವನ್ನೂ ನಿರ್ವಹಿಸಬಹುದು.

ಪೋಸ್ಟ್ ಆಫೀಸ್ ನಲ್ಲಿನ ಸುಕನ್ಯಾ ಸಮೃದ್ಧಿ ಖಾತೆಗೆ ಐಪಿಪಿಬಿ ಮೂಲಕ ಆನ್ ಲೈನ್ ಹಣ ವರ್ಗಾವಣೆ ಮಾಡುವ ವಿವಿಧ ಹಂತಗಳ ವಿವರ ಹೀಗಿದೆ:

1. ಬ್ಯಾಂಕ್ ಖಾತೆಯಿಂದ ಐಪಿಪಿಬಿ ಖಾತೆಗೆ ಹಣ ಸೇರ್ಪಡೆ ಮಾಡಬೇಕು.

2. ಡಿಒಪಿ ಪ್ರಾಡಕ್ಟ್ಸ್ ಗೆ ತೆರಳಬೇಕು. ಅದರಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಆರಿಸಿಕೊಳ್ಳಬೇಕು.

3. SSY ಖಾತೆ ಸಂಖ್ಯೆ ಮತ್ತು ನಂತರ DOP ಗ್ರಾಹಕರ ಐ.ಡಿ. ನಮೂದಿಸಬೇಕು.

4. ಕಂತಿನ ಅವಧಿ ಮತ್ತು ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬೇಕು.

5. IPPB ಮೊಬೈಲ್ ಅಪ್ಲಿಕೇಷನ್ ಮೂಲಕ ಯಶಸ್ವಿಯಾಗಿ ಹಣ ವರ್ಗಾವಣೆ ಆದ ಮೇಲೆ ನೋಟಿಫಿಕೇಷನ್ ಬರುತ್ತದೆ.

6. ಪೋಸ್ಟ್ ಆಫೀಸ್ ವಿವಿಧ ಹೂಡಿಕೆಗಳನ್ನು IPPB ಬೇಸಿಕ್ ಉಳಿತಾಯ ಖಾತೆಯಿಂದ ನಿಯಮಿತವಾಗಿ ಪಾವತಿ ಮಾಡಬಹುದು.

ಸುಕನ್ಯಾ ಸಮೃದ್ಧಿ ಯೋಜನೆ ಈಚಿನ ಬಡ್ಡಿ ದರ

ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರವನ್ನು ನಿರ್ಧಾರ ಮಾಡುತ್ತದೆ. ಮತ್ತು ಅದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರುಪಾಯಿ ಮತ್ತು ಗರಿಷ್ಠ 1.5 ಲಕ್ಷ ರುಪಾಯಿ ಹೂಡಿಕೆ ಮಾಡಬಹುದು. ಖಾತೆ ತೆರೆದ 21 ವರ್ಷಗಳಿಗೆ ಅಥವಾ ಹೆಣ್ಣುಮಗುವಿನ ಮದುವೆ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಮೆಚ್ಯೂರ್ ಆಗುತ್ತದೆ. ಸದ್ಯಕ್ಕೆ ಈ ಯೋಜನೆ ಬಡ್ಡಿ ದರ 7.6% ಆಗುತ್ತದೆ.

DakPay ಡಿಜಿಟಲ್ ಪೇಮೆಂಟ್ಸ್ ಆಪ್

ಕಳೆದ ತಿಂಗಳು DakPay ಡಿಜಿಟಲ್ ಪೇಮೆಂಟ್ಸ್ ಅಪ್ಲಿಕೇಷನ್ ಶುರು ಮಾಡಲಾಗಿದೆ. ಪೋಸ್ಟ್ ಆಫೀಸ್ ಮತ್ತು ಐಪಿಪಿಬಿ ಗ್ರಾಹಕರು ಇದನ್ನು ಬಳಕೆ ಮಾಡಬಹುದು. ಇಂಡಿಯಾ ಪೋಸ್ಟ್ ಮತ್ತು ಐಪಿಪಿಬಿ ಮೂಲಕ ದೊರೆಯುವ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಯನ್ನು ಪಡೆಯಬಹುದು.

ಹಣ ಕಳುಹಿಸುವುದು, ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮತ್ತು ಸೇವೆಗಳಿಗೆ ಹಣ ಪಾವತಿ ಹಾಗೂ ವರ್ತಕರಿಗೆ ಡಿಜಿಟಲ್ ಪಾವತಿಯನ್ನು ಮಾಡಬಹುದು. ಜತೆಗೆ ದೇಶದ ಯಾವುದೇ ಬ್ಯಾಂಕ್ ಜತೆಗೆ ಗ್ರಾಹಕರು ವ್ಯವಹಾರ ನಡೆಸಬಹುದು.BIG NEWS : ಕೊರೊನಾ ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಲು ಈ 'ID CARD' ಕಡ್ಡಾಯ

January 09, 2021

 


ನವದೆಹಲಿ : ಕೇಂದ್ರ ಸರ್ಕಾರ ಕೊರೊನಾ ಕೋವ್ಯಾಕ್ಸಿನ್ ಹಂಚಿಕೆಗೆ ಸಕಲ ಸಿದ್ದತೆ ನಡೆಸುತ್ತಿದೆ. ಜನವರಿ 16 ರಿಂದ ಲಸಿಕೆ ಲಭ್ಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಹಾಗೂ ಫ್ರಂಟ್ ಲೈನ್ ವರ್ಕಸ್ ಗೆ ನೀಡಲಾಗುತ್ತೆ, ಜೊತೆಗೆ 50 ವರ್ಷಕ್ಕಿಂತ ಮೇಲ್ಪಟ್ಟವರಿಗೂ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ.

ಇನ್ನೂ, ಲಸಿಕೆ ನೀಡುವ ಸಂದರ್ಭದಲ್ಲಿ ಐಡಿ ಕಾರ್ಡ್ ಕಡ್ಡಾಯವಾಗಿರಲಿದೆ ಎನ್ನಲಾಗಿದ್ದು, ಆರ್ ಕ್ಯೂ ಕೋಡ್ ಹೊಂದಿರುವ ಸರ್ಟಿಫಿಕೇಟ್ ಕೊರೊನಾ ಲಸಿಕೆ ಪಡೆದುಕೊಳ್ಳಲು ಕಡ್ಡಾಯವಾಗಿದೆ.,

ಲಸಿಕೆ ಹಾಕಿಸಿಕೊಳ್ಳಲು ಯಾವ ಗುರುತಿನ ಚೀಟಿ ಇರಬೇಕು..?

1) ಡಿ ಎಲ್

2) ಪಾಸ್ ಪೋರ್ಟ್

3) ಹೆಲ್ತ್ ಇನ್ಯುರೆನ್ಸ್

4) ಬ್ಯಾಂಕ್ ಪಾಸ್ ಬುಕ್

5) ಸರ್ವಿಸ್ ಐಡಿ

6) ಫೋಸ್ಟ್ ಆಫೀಸ್ ಪಾಸ್ ಬುಕ್

7) ಪೆನ್ಶನ್ ಡಾಕ್ಯುಮೆಂಟ್

2021ರ ಜನವರಿ 16ರಂದ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಲಿದೆ. ಮೊದಲ ಹಂತದಲ್ಲಿ ಸುಮಾರು 3 ಕೋಟಿ ಕೊರೊನಾ ವಾರಿಯಾರ್ಸ್‌ʼಗೆ ನೀಡಲಾಗುತ್ತೆ. ನಂತ್ರ 50 ವರ್ಷ ಮೇಲ್ಪಟ್ಟವರು ಮತ್ತು 50 ಕ್ಕಿಂತ ಕಡಿಮೆ ವಯಸ್ಸಿನ ರೋಗ ಲಕ್ಷಣಗಳನ್ನ ಹೊಂದಿರುವ ಗುಂಪುಗಳು 27 ಕೋಟಿ ಜನಸಂಖ್ಯೆಗೆ ಆದ್ಯತೆ ನೀಡಲಾಗುತ್ತೆ ಎಂದು ಸರ್ಕಾರ ಘೋಷಿಸಿದೆ


ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲು ಆಗ್ರಹ

January 09, 2021

 


ಬೆಳಗಾವಿ: 'ರಾಜ್ಯ ಸರ್ಕಾರವು ಈ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸದಿರುವುದು ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ' ಎಂದು ಎಐಡಿಎಸ್‌ಒ ಜಿಲ್ಲಾ ಸಂಘಟನಾಕಾರ ಮಹಾಂತೇಶ ಬಿಳೂರ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 'ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕವನ್ನು ಸರ್ಕಾರ ಘೋಷಿಸಿದೆ. ಮತ್ತು ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪದವಿ ಪರೀಕ್ಷೆಗಳು ಕೂಡ ನಿಗದಿಯಾಗಿವೆ. ಇದು ಕೂಡ ವಿದ್ಯಾರ್ಥಿಗಳ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಕೊರೊನಾದಿಂದಾಗಿ ಹೇರಲಾದ ಲಾಕ್‌ಡೌನ್‌ ಪ್ರಭಾವದಿಂದ ವಿದ್ಯಾರ್ಥಿಗಳ ಕುಟುಂಬಗಳು ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ತಮ್ಮ ಕುಟುಂಬಗಳಿಗೆ ಸಹಾಯ ಮಾಡಲು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ದುಡಿಮೆಯಲ್ಲಿ ತೊಡಗಿದ್ದಾರೆ.

ಪರಿಸ್ಥಿತಿಯು ಹೀಗಿರುವಾಗ, ವಿದ್ಯಾರ್ಥಿವೇತನ ಕೂಡ ಸಿಗದೇ ಹೋದರೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಸರ್ಕಾರವು ವಿದ್ಯಾರ್ಥಿಗಳ ಸಂಕಷ್ಟ ನಿವಾರಣೆಗೆ ಕೂಡಲೇ ಸ್ಪಂದಿಸಬೇಕು. ವಿದ್ಯಾರ್ಥಿವೇತನಗಳಿಗೆ ಕೂಡಲೇ ಅರ್ಜಿಗಳನ್ನು ಆಹ್ವಾನಿಸಿ ಆತಂಕ ದೂರ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.


BREAKING : ಇಂಡೋನೇಷ್ಯಾದಲ್ಲಿ ವಿಮಾನ ಪತನ : 62 ಪ್ರಯಾಣಿಕರು, ಸಿಬ್ಬಂದಿ ಸಾವು

January 09, 2021


 ಇಂಡೋನೇಷ್ಯಾ : ರಾಜಧಾನಿ ಜಕಾರ್ತ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ 62 ಜನರಿದ್ದ ಶ್ರೀವಿಜಯ ಏರ್ ವಿಮಾನಸಂಪರ್ಕ ಕಳೆದುಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಪಶ್ಚಿಮ ಕಾಲಿಮಂಟನ್ ನ ಪೊಂಡಿಯಾನಕ್ ಗೆ ಹೋಗುವ ಮಾರ್ಗದಲ್ಲಿ ಬೋಯಿಂಗ್ 737-500 ವಿಮಾನವು 2.30 p.m. (0730 GMT) ಟೇಕ್ ಆಫ್ ಆದ ನಂತರ ರಾಡಾರ್ ಪರದೆಗಳಿಂದ ಕಣ್ಮರೆಯಾಗಿದೆ. ಇಂತಹ ವಿಮಾನದಲ್ಲಿ 12 ಸಿಬ್ಬಂದಿ ಸೇರಿದಂತೆ 62 ಮಂದಿ ವಿಮಾನದಲ್ಲಿದ್ದರು ಎಂದು ಇಂಡೋನೇಷ್ಯಾದ ಸಾರಿಗೆ ಸಚಿವ ಬುಡಿ ಕಾರ ಯಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಮೊದಲು 56 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದರು.

ಜಕಾರ್ತದ ಉತ್ತರ ಭಾಗದಲ್ಲಿ ಶೋಧಕ್ಕಾಗಿ ತಂಡಗಳನ್ನು ಕಳುಹಿಸಲಾಗಿದೆ ಎಂದು ದೇಶದ ಶೋಧ ಮತ್ತು ರಕ್ಷಣಾ ಏಜೆನ್ಸಿ ಬಸರ್ನಾಸ್ ಮುಖ್ಯಸ್ಥ ಬಾಗುಸ್ ಪುರುಹಿಟೊ ಹೇಳಿದ್ದಾರೆ

ಯಾವುದೇ ರೇಡಿಯೋ ಬೀಕನ್ ಸಿಗ್ನಲ್ ಪತ್ತೆಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.


ಲಡಾಖ್ ನಲ್ಲಿ ಗಡಿ ದಾಟಿ ಬಂದಿದ್ದ ಚೀನಾ ಸೈನಿಕನನ್ನು ವಶಕ್ಕೆ ಪಡೆದ ಭಾರತೀಯ ಸೇನೆ

January 09, 2021


ಲಡಾಖ್ : ಭಾರತದ ಗಡಿ ದಾಟಿ ಬಂದಿದ್ದ ಚೀನಾ ಸೈನಿಕನೋರ್ವನನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿದೆ.

ಲಡಾಖ್ ನ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿರುವ ಎಲ್ ಒ ಸಿ ಬಳಿ ಸೈನಿಕನನ್ನು ವಶಕ್ಕೆ ಪಡೆಯಲಾಗಿದೆ.

ಈಗಾಗಲೇ ಸೆರೆ ಹಿಡಿಯಿರುವ ಸೈನಿಕನ ಬಗ್ಗೆ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಉದ್ದೇಶಕ್ಕಾಗಿ ಸೈನಿಕ ಆ ಗಡಿ ದಾಟಿ ಬಂದಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಚೀನಾ ಮತ್ತು ಭಾರತ ನಡುವೆ ಸಂಘರ್ಷ ಏರ್ಪಡುತ್ತಿರುವ ನಡುವೆಯೇ ಚೀನಾ ಸೈನಿಕನೋರ್ವನನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿದೆ.


BREAKING: ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಜನ ಸಾವು, ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್

January 09, 2021

 


ನವದೆಹಲಿ: 2019 ರ ಫೆಬ್ರವರಿ 26 ರಂದು ಭಾರತ ಬಾಲಾಕೋಟ್ ನಲ್ಲಿ ನಡೆಸಿದ ಏರ್ ಸ್ಟ್ರೈಕ್ ನಲ್ಲಿ 300 ಮಂದಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿ ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿ ಆಘಾ ಹಿಲಾಲಿ ವಾಹಿನಿಯೊಂದರ ಚರ್ಚೆಯಲ್ಲಿ ಈ ಬಗ್ಗೆ ಮಾತನಾಡುತ್ತಿರುವ ವೇಳೆಯಲ್ಲಿ 300 ಭಯೋತ್ಪಾದಕರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಭಾರತದ ದಾಳಿಯ ನಂತರ ಯಾವುದೇ ಸಾವು ನೋವು ಸಂಭವಿಸಿರಲಿಲ್ಲವೆಂದು ಸುಳ್ಳು ಹೇಳಿದ್ದ ಪಾಕಿಸ್ತಾನ ಬಣ್ಣ ಮತ್ತೊಮ್ಮೆ ಬಯಲಾಗಿದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಾಲಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ಏರ್ ಸ್ಟ್ರೈಕ್ ನಡೆಸಿದಾಗ ಸಾವು-ನೋವಿನ ಬಗ್ಗೆ ಪಾಕಿಸ್ತಾನ ಅಲ್ಲಗಳೆದಿತ್ತು.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಏರ್ ಸ್ಟ್ರೈಕ್ ನಡೆಸಿದ್ದು, ದಾಳಿಯಲ್ಲಿ 300 ಭಯೋತ್ಪಾದಕರು ಸಾವನ್ನಪ್ಪಿದ್ದರು ಎನ್ನುವುದು ಈಗ ಬಯಲಾಗಿದೆ.


ಮದುವೆ ಮಾಡಿಸುವವರಿಗೇ ಈಗ ಹೆಣ್ಣು ಕೊಡುವವರಿಲ್ಲ!; ಸರ್ಕಾರದಿಂದ ಘೋಷಣೆ ಆಯ್ತು ಹೊಸ ಯೋಜನೆ

January 09, 2021

 


ಬೆಂಗಳೂರು: ಯಾರದ್ದೇ ಮದುವೆ ಆಗಲಿ, ಅಲ್ಲಿ ಅರ್ಚಕರು ಇದ್ದೇ ಇರುತ್ತಾರೆ. ಅವರ ಮಂತ್ರಘೋಷ ಇಲ್ಲದೆಯೇ ಮದುವೆ ನಡೆಯುವುದೇ ಇಲ್ಲ. ಆದರೆ, ಈಗ ಮದುವೆ ಮಾಡಿಸುವ ಅರ್ಚಕರಿಗೆ ಹೆಣ್ಣು ಸಿಗುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ, ಅರ್ಚಕರನ್ನು ಮದುವೆ ಆಗುವ ಮಹಿಳೆಗೆ ಮೂರು ಲಕ್ಷ ನೀಡಲು ಮುಂದಾಗಿದೆ.

ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಮೈತ್ರಿ ಹೆಸರಿನ ಹೊಸ ಯೋಜನೆ ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಬ್ರಾಹ್ಮಣ ಅರ್ಚಕರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ 3 ಲಕ್ಷ ರೂಪಾಯಿ ಮೌಲ್ಯದ ಬಾಂಡ್​ ನೀಡಲಾಗುತ್ತಿದೆ. ಈ ಯೋಜನೆಗೆ ಈಗ ಕಾಂಗ್ರೆಸ್​ ಅಪಸ್ವರ ಎತ್ತಿದೆ.

ಎಲ್ಲಾ ಸಮುದಾಯದಲ್ಲೂ ಅರ್ಚಕರು ಇರುತ್ತಾರೆ. ಹಾಗಾದರೆ, ನೀವು ಅವರಿಗೂ ಈ ಯೋಜನೆ ಅಡಿಯಲ್ಲಿ ಹಣ ನೀಡುತ್ತೀರಾ ಎಂದು ಕಾಂಗ್ರೆಸ್​ ಪ್ರಶ್ನೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

ಮೈತ್ರಿ ಯೋಜನೆ ಅಡಿ ಅರ್ಚಕರನ್ನ ಮದುವೆ ಆಗುವವರಿಗೆ ಬಾಂಡ್ ನೀಡುತ್ತಿದ್ದೇವೆ. ಅನೇಕ ಅರ್ಚಕರು ಅವರ ಸಮಸ್ಯೆ ತೋಡಿಕೊಂಡಿದ್ದಾರೆ. ಈ ಕಾರಣಕ್ಕೆ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಪಕ್ಕದ ತೆಲಂಗಾಣದಲ್ಲಿ ಕೂಡ ಇದೇ ಮಾದರಿಯ ಯೋಜನೆ ಇದೆ. ವಿವಿಧ ಸಮುದಾಯಗಳಿಗೆ ಅವರದ್ದೇ ಆದ ಮಂಡಳಿಗಳಿವೆ. ಅವರು ಬೇಕಾದರೆ ಇದೇ ರೀತಿ ಮಾಡಲಿ. ಈ ಯೋಜನೆಯನ್ನ ಸಾರ್ವಜನಿಕರು ಬಳಸಿಕೊಳ್ಳಲಿ. ಕೆಲವರು ಅನಗತ್ಯವಾಗಿ ವಿವಾದ ಮಾಡುತ್ತಾ ಇದ್ದಾರೆ ಎಂದು ಸಚ್ಚಿದಾನಂದಮೂರ್ತಿ ಕಾಂಗ್ರೆಸ್​ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.