ದೇಶದ ಬಹುದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಎಸ್ಬಿಐನಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶ ಸಿಕ್ಕಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
489 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಜಾಹೀರಾತು ನೀಡಿದ್ದು, ಕೇಡರ್ ಆಫೀಸರ್ಸ್ (ಎಂಜಿನಿಯರ್ ಫೈರ್, ನೆಟ್ವರ್ಕ್ ಸ್ಪೆಷಲಿಸ್ಟ್, ಸೆಕ್ಯುರಿಟಿ ಅನಾಲಿಸ್ಟ್, ಕ್ರೆಡಿಟ್ ಪ್ರೊಸೀಜರ್ಸ್, ಮಾರ್ಕೆಟಿಂಗ್, ಮ್ಯಾನೇಜರ್-ಕ್ರೆಡಿಟ್ ಪ್ರೊಸೀಜರ್) ಉಪ ವ್ಯವಸ್ಥಾಪಕರು (ಆಂತರಿಕ ಲೆಕ್ಕಪರಿಶೋಧನೆ) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ.
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ವಿವಿಧ ಹುದ್ದೆಗಳಿಗೆ ವಿಭಿನ್ನ ಶೈಕ್ಷಣಿಕ ಅರ್ಹತೆಗಳು ಮತ್ತು ವಯಸ್ಸಿನ ಮಿತಿಗಳನ್ನು ನಿಗದಿಪಡಿಸಲಾಗಿದೆ.
ಎಸ್ಬಿಐ ವೆಬ್ಸೈಟ್ sbi.co.in ಗೆ ಭೇಟಿ ನೀಡಿ ನೀವು ಸಂಬಂಧಿತ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಪೇಜ್ನಲ್ಲಿ ಇತ್ತೀಚಿನ ಪ್ರಕಟಣೆಗಳ ಟ್ಯಾಬ್ ಕ್ಲಿಕ್ ಮಾಡಿ, ಎಲ್ಲಾ ಪೋಸ್ಟ್ಗಳ ಅಧಿಸೂಚನೆ ಮತ್ತು ಅಪ್ಲಿಕೇಶನ್ ಲಿಂಕ್ ಕಂಡುಬರುತ್ತದೆ.
ಅರ್ಜಿ ಸಲ್ಲಿಸುವ ವಿವರ:
ಆನ್ಲೈನ್ ಅರ್ಜಿಯ ಪ್ರಾರಂಭ - 22 ಡಿಸೆಂಬರ್ 2020,
ಅರ್ಜಿಯ ಕೊನೆಯ ದಿನಾಂಕ - 11 ಜನವರಿ 2021
ಅಪ್ಲಿಕೇಶನ್ನಲ್ಲಿ ಅಪ್ಡೇಟ್ ಕೊನೆಯ ದಿನಾಂಕ - 11 ಜನವರಿ 2021
ಅರ್ಜಿ ನಮೂನೆ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ - 31 ಜನವರಿ 2021
1 komentar:
Write komentarGood
ReplyEmoticonEmoticon