ನವದೆಹಲಿ: ಕಳೆದ ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ ಹೊಸ ಹಗರಣವೊಂದು ಹೆಚ್ಚುತ್ತಿದ್ದು, ಕೆಲವುಜ ಕಳ್ಳರು ಬ್ಯಾಂಕ್ ಅಧಿಕಾರಿಗಳಂತೆ ಪೋಸ್ ನೀಡುವ ಕಿಡಿಗೇಡಿಗಳು ಜನರಿಗೆ ಮೋಸ ಮಾಡಲು ಮುಂದಾಗುತ್ತಿದ್ದಾರೆ. ಬ್ಯಾಂಕ್ ಗ್ರಾಹಕರಿಗೆ ಕರೆ ಮಾಡಿ ಅವರು ಕೆವೈಸಿಯನ್ನು ದೃಢೀಕರಿಸಬೇಕು ಎಂದು ಹೇಳುತ್ತಾರೆ, ಆನ್ ಲೈನ್ ನಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡಲು ಮತ್ತು ನಂತರ ಆತನ ಬ್ಯಾಂಕ್ ಖಾತೆಗೆ ಹ್ಯಾಕ್ ಮಾಡಲು ಸಹಾಯ ಮಾಡಲು ಮುಂದಾಗುತ್ತಾರೆ ಎನ್ನುವ ಮಾಹಿತಿಯನ್ನು ಹೊರಬಿದಿದ್ದೆ.
ಈ ನಡುವೆ ದೇಶದ ಪ್ರಮುಖ ಹಾಗೂ ದೊಡ್ಡದಾದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಕೆವೈಸಿ ವೆರಿಫಿಕೇಶನ್ ಗೆ ಕರೆ ಮಾಡುವ ವಂಚಕ ಕರೆಗಳ ವಿರುದ್ಧ ಎಚ್ಚರಿಕೆ ನೀಡಿದೆ. 'ಕೆವೈಸಿ ವೆರಿಫಿಕೇಶನ್ ವಿನಂತಿಸುವ ವಂಚಕ ಕರೆಗಳು ಅಥವಾ ಸಂದೇಶಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ
ಎಸ್ ಬಿಐ ಟ್ವೀಟ್ ನಲ್ಲಿ ತಿಳಿಸಿದ್ದು, ಇದೇ ವೇಳೆ ಎಸ್ ಬಿಐ ಸುರಕ್ಷತಾ ಸಲಹೆಗಳನ್ನು 1 ನಿಮಿಷಹಂಚಿಕೊಂಡಿದೆ.
KYC ಪರಿಶೀಲನೆ ಎಂದರೇನು?
KYC ಎಂದರೆ KyYour Customer. ಗ್ರಾಹಕರು ನೈಜವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ಅನುಸರಿಸುವ ಒಂದು ಪ್ರಮುಖ ಹೆಜ್ಜೆಯಾಗಿದೆ. ಅಂದರೆ ಫೋನ್, ಟೆಕ್ಸ್ಟ್ ಅಥವಾ ಇಮೇಲ್ ಮೂಲಕ ವೆರಿಫಿಕೇಶನ್ ಮಾಡುವುದು ಸರಿಯಲ್ಲ. ಹಾಗಾಗಿ, ನೀವು KYC ವೆರಿಫಿಕೇಶನ್ ಗಾಗಿ ಕರೆ ಅಥವಾ ಸಂದೇಶ ವನ್ನು ಪಡೆದಲ್ಲಿ, ಅದು ಒಂದು ಮೋಸದ ಕರೆ ಎಂಬುದನ್ನು ನೆನಪಿಡಿ.
ಈ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಎಸ್ ಬಿಐ ಏಳು ಸಲಹೆಗಳನ್ನು ಹಂಚಿಕೊಂಡಿದೆ.
1) OTP ಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
2) ರಿಮೋಟ್ ಆಕ್ಸೆಸ್ ಅಪ್ಲಿಕೇಶನ್ ಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಿ.
3) ಅಪರಿಚಿತರೊಂದಿಗೆ ಆಧಾರ್ ಪ್ರತಿಯನ್ನು ಹಂಚಿಕೊಳ್ಳಬೇಡಿ
4) ನಿಮ್ಮ ಇತ್ತೀಚಿನ ಸಂಪರ್ಕ ವಿವರಗಳನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಪ್ ಡೇಟ್ ಮಾಡಿ.
5) ನಿಮ್ಮ ಪಾಸ್ ವರ್ಡ್ ಅನ್ನು ಮಧ್ಯಂತರಗಳಲ್ಲಿ (ಅಗ್ಗಾಗ್ಗೆ) ಬದಲಿಸಿ.
6) ನಿಮ್ಮ ಮೊಬೈಲ್ ಮತ್ತು ಗೌಪ್ಯ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
7) ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುನ್ನ ಯೋಚಿಸಿ.
ಬ್ಯಾಂಕ್ ಖಾತೆಗಳಲ್ಲಿ ಯಾವುದೇ ಅನಧಿಕೃತ ವಹಿವಾಟು ನಡೆದಲ್ಲಿ ಕೂಡಲೇ ವರದಿ ನೀಡುವಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
'ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ಅನಧಿಕೃತ ವಹಿವಾಟು ಕಂಡುಬಂದರೆ ಕೂಡಲೇ ಟೋಲ್ ಫ್ರೀ ಕಸ್ಟಮರ್ ಕೇರ್ ನಂಬರ್ ಗಳಿಗೆ - 18004253800, 1800112211 ಗೆ ವರದಿ ಮಾಡಿ. https://cybercrime.gov.in/ ಸೈಬರ್ ಅಪರಾಧಗಳ ಬಗ್ಗೆಯೂ ವರದಿ ಮಾಡಿ' ಎಂದು ಎಸ್ ಬಿಐ ಹೇಳಿದೆ.
SBI KYC ಗೆ ಅಗತ್ಯವಿರುವ ದಾಖಲೆಗಳು
EmoticonEmoticon