Recruitment 2020: SSLC ಪಾಸಾದವರಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 2,443 ಹುದ್ದೆಗಳ ಭರ್ತಿಗೆ ಅರ್ಜಿ!

December 22, 2020
Tuesday, December 22, 2020

 


ಬೆಂಗಳೂರು: ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವಂತ ಗ್ರಾಮೀಣ ದಕ್ ಸೇವಕ್ ನ 2,443 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ.

ಈ ಕುರಿತಂತೆ ಅಂಚೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವಂತ 2,443 ಗ್ರಾಮೀಣ ದಕ್ ಸೇವಕ್ ಹುದ್ದೆ(JOB)ಗಳಿಗೆ ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ 21-12-2020ರಿಂದ ಆರಂಭಗೊಳ್ಳಲಿದ್ದು, ಕೊನೆಯ ದಿನಾಂಕ 20-01-2021 ಆಗಿರುತ್ತದೆ ಎಂಬುದಾಗಿ ತಿಳಿಸಿದೆ.

ಹುದ್ದೆಯ ಹೆಸರು : ಗ್ರಾಮೀಣ ದಕ್ ಸೇವಕ್

ಒಟ್ಟು ಹುದ್ದೆಗಳು : 2443

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ.

ಇದಲ್ಲದೆ ಸೈಕ್ಲಿಂಗ್‌ನ ಜ್ಞಾನ ಅವಶ್ಯಕತೆಯಾಗಿದೆ. ಒಂದು ವೇಳೆ ಅಭ್ಯರ್ಥಿಗೆ ಸ್ಕೂಟರ್ ಅಥವಾ ಮೋಟಾರ್ ಸೈಕಲ್ ಸವಾರಿ ಮಾಡುವ ಜ್ಞಾನವಿದ್ದರೆ ಅದನ್ನೂ ಪರಿಗಣಿಸಲಾಗುತ್ತದೆ.

ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 100 ಮತ್ತು ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ ಶುಲ್ಕದ ವಿನಾಯಿತಿ ಇದೆ .

ವಯೋಮಿತಿ : ದಿನಾಂಕ 21.12.202 ಕ್ಕೆ ಅನ್ವಯವಾಗುವಂತೆ ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಟ ವಯೋಮಿತಿ ಗರಿಷ್ಠ ವಯೋಮಿತಿ 40 ವರ್ಷ ( ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ)

ವೇತನ ಶ್ರೇಣಿ : 12,000 ರಿಂದ 14,000/-

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 21-12-2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-01-2021

ಅರ್ಜಿ ಸಲ್ಲಿಸುವುದು ಹೇಗೆ..? ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸತಕ್ಕದ್ದು, ಅರ್ಜಿಯನ್ನು ಸಲ್ಲಿಸುವ ವಿಧಾನ ಬೇಕಾದ ದಾಖಲೆಗಳ ವಿವರ, ಅರ್ಜಿ ಶುಲ್ಕ ಪಾವತಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಸೂಚನೆಯನ್ನು ನೋಡಿ, ಹಾಗೂ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಕೊನೆಯಲ್ಲಿ ನೀಡಲಾಗಿರುವ ಲಿಂಕ್ ಗೆ ಭೇಟಿನೀಡಿ.

ಅರ್ಜಿ ಸಲ್ಲಿಸಲು ಅಧಿಕ್ರತ ವೆಬ್ಸೈಟ್ ವಿಳಾಸ: https://www.indiapost.gov.in/VAS/Pages/Content/Recruitments.aspx?Category=Recruitmen

Thanks for reading Recruitment 2020: SSLC ಪಾಸಾದವರಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 2,443 ಹುದ್ದೆಗಳ ಭರ್ತಿಗೆ ಅರ್ಜಿ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on Recruitment 2020: SSLC ಪಾಸಾದವರಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 2,443 ಹುದ್ದೆಗಳ ಭರ್ತಿಗೆ ಅರ್ಜಿ!

Post a Comment