ತಾಜಾ ಸುದ್ದಿ

`PM-ಕಿಸಾನ್ ಸಮ್ಮಾನ್ ನಿಧಿ ಯೋಜನೆ’ : ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

 

ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 7 ನೇ ಕಂತಿನ ಹಣ ಬಿಡುಗಡೆಯಾಗಿದ್ದು, ದೇಶದ ಸುಮಾರು 10 ಕೋಟಿ ರೈತ ಬಾಂಧವರಿಗೆ ಈ ಯೋಜನೆಯ ಹಣ ಜಮೆಯಾಗಲಿದೆ.

ಕೇಂದ್ರ ಸರ್ಕಾರ ವಾರ್ಷಿಕವಾಗಿ ಘೋಷಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ 6,000 ರೂಪಾಯಿ ಸಹಾಯ ಧನ ನಿಮ್ಮ ಖಾತೆಯಲ್ಲಿ ಜಮಾವಾಗಿದೆಯೇ ಎಂಬುದನ್ನು ನೋಡಿಕೊಳ್ಳಲು ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ನೋಂದಣಿ ಮಾಡಿಸಿಕೊಂಡ ರೈತರು ಇನ್ನುಮುಂದೆ ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಬಹುದು. ಅಕೌಂಟಿಗೆ ಹಣ ಜಮೆಯಾಗದಿದ್ದರೆ ಅಕೌಂಟ್ ಜಮೆಯಾಗಲು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪರಿಶೀಲಿಸಬಹುದು.

ಈ ಕೆಳಗಿನ ಲಿಂಕ್ ಈಗಲೇ ನಿಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದು. https://pmkisan.gov.in/beneficiarystatus.aspx ಅಥವಾ ಗೂಗಲ್ ನಲ್ಲಿ pm kisan samman status ಅಂತ ಟೈಪ್ ಮಾಡಿ, know Beneficiary status-pm kisan ಮೇಲೆ ನಿಮ್ಮ ಆಧಾರ್, ಅಕೌಂಟ್ ಅಥವಾ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಬಹುದು.

ನಿಮ್ಮ ಖಾತೆಗೆ ಹಣ ಇನ್ನೂ ಜಮೆಯಾಗಿಲ್ಲದಿದ್ದರೆ ಮತ್ತು ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದವರಲ್ಲಿ ನೀವೂ ಕೂಡ ಇದ್ದರೆ, ನೀವು 

ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಅದರ ಸ್ಥಿತಿಯನ್ನು ಪರಿಶೀಲಿಸಬಹುದು-

ನೀವು ‘ಎಫ್ ಟಿಎ(ಹಣ ವರ್ಗಾವಣೆ ಆದೇಶ) ಜನರೇಟ್ ಆಗಿದೆ ಮತ್ತು ಪಾವತಿ ದೃಢೀಕರಣ ಬಾಕಿ ಇದೆ’ ಎಂದು ನೀವು ಕಂಡುಕೊಂಡರೆ, ಫಲಾನುಭವಿಯು ನೀಡಿದ ಎಲ್ಲಾ ಮಾಹಿತಿಯನ್ನು ಸರ್ಕಾರ ದೃಢೀಕರಿಸಿದೆ ಮತ್ತು ಅದನ್ನು ವರ್ಗಾಯಿಸುವ ಪ್ರಕ್ರಿಯೆ ಯು ಪ್ರಾರಂಭವಾಗಿದೆ, ಮತ್ತು ಶೀಘ್ರದಲ್ಲೇ ಅದನ್ನು ಕ್ರೆಡಿಟ್ ಮಾಡಲಾಗುತ್ತದೆ.

ಪಿಎಂ ಕಿಸಾನ್ ಸಮನ್ ನಿಧಿ ಯೋಜನೆ ಕೇಂದ್ರ ಸರ್ಕಾರದ ಶೇ.100ರಷ್ಟು ಅನುದಾನದೊಂದಿಗೆ ಕೇಂದ್ರ ಯೋಜನೆಯಾಗಿದೆ. ಈ ಯೋಜನೆಯಡಿ, ಎರಡು ಹೆಕ್ಟೇರ್ ವರೆಗಿನ ಭೂ ಹಿಡುವಳಿ/ಮಾಲೀಕತ್ವಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6,000 ಆದಾಯ ಬೆಂಬಲವನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಯು.ಟಿ ಆಡಳಿತವು ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಬೆಂಬಲಪಡೆಯಲು ಅರ್ಹವಾಗಿರುವ ರೈತ ಕುಟುಂಬಗಳನ್ನು ಗುರುತಿಸಿ, ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ.

Leave a Reply

Your email address will not be published.