BREAKING : 'ಕೊರೊನಾ' ಇಲ್ಲದ ತಾಲೂಕುಗಳಲ್ಲಿ 'ಶಾಲೆ' ಆರಂಭಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

December 21, 2020
Monday, December 21, 2020

 


ಬೆಂಗಳೂರು : ಕೊರೊನಾ ಇಲ್ಲದ ತಾಲೂಕುಗಳಲ್ಲಿ ಶಾಲೆ ಆರಂಭಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.

ಇಂದು ನಡೆದ ವಿಚಾರಣೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜನವರಿ 1 ರಿಂದ ವಿದ್ಯಾಗಮ ಆರಂಭವಾಗಲಿದೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲೂ 6 ರಿಂದ 9 ನೇ ತರಗತಿಗಳಿಗೆ ವಿದ್ಯಾಗಮ ಜಾರಿ ಮಾಡಲಾಗುತ್ತದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ ಗೆ ಹೇಳಿದ್ದಾರೆ. ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ಈ ನಿರ್ಧಾರಕ್ಕೆ ಬದ್ದವಾಗಿರುವಂತೆ ಸೂಚನೆ ನೀಡಿದೆ. ಶಾಲೆ ಸ್ಥಗಿತಕ್ಕಿಂತ ಪರಿಸ್ಥಿತಿ ಆಧರಿಸಿ ಕೊರೊನಾ ಇಲ್ಲದ ತಾಲೂಕುಗಳಲ್ಲಿ ಶಾಲೆ ಆರಂಭಿಸಬಹುದು ಎಂದು ಕೋರ್ಟ್ ಹೇಳಿದೆ.

ನ್ಯಾ. ಬಿ ಬಿ ನಾಗರತ್ನ ಹಾಗೂ ಆರ್ ನಟರಾಜ್ ವವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇನ್ನೂ. ವಿದ್ಯಾರ್ಥಿಗಳು ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗದಂತೆ ಕ್ರಮ ವಹಿಸಬೇಕು.

ಶಾಲೆಯಿಂದ ಹೊರಗುಳಿದ ಮಕ್ಕಳ ಶಿಕ್ಷಣದ ಬಗ್ಗೆ ಕೂಡ ಗಮನ ವರಿಸಬೇಕು ಎಂದು ಸೂಚನೆ ನೀಡಿದೆ.

Thanks for reading BREAKING : 'ಕೊರೊನಾ' ಇಲ್ಲದ ತಾಲೂಕುಗಳಲ್ಲಿ 'ಶಾಲೆ' ಆರಂಭಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BREAKING : 'ಕೊರೊನಾ' ಇಲ್ಲದ ತಾಲೂಕುಗಳಲ್ಲಿ 'ಶಾಲೆ' ಆರಂಭಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Post a Comment