ಶಿಕ್ಷಣ ಸುದ್ದಿ

BREAKING : ಜ.1 ರಿಂದ ‘ಶಾಲೆ’ ಆರಂಭಿಸಲು ರಾಜ್ಯ ಸರ್ಕಾರದಿಂದ ‘ಮಾರ್ಗಸೂಚಿ’ ಪ್ರಕಟ

 

ಬೆಂಗಳೂರು : ರಾಜ್ಯದಲ್ಲಿ ಕಾಲೇಜುಗಳ ಆರಂಭದ ನಂತ್ರ, ಶಾಲಾ-ಕಾಲೇಜು ಯಾವಾಗ ಆರಂಭಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿತ್ತು. ಇಂತಹ ಕುತೂಹಲಕ್ಕೆ ತೆರೆ ಬಿದ್ದಿದ್ದು, ಕೊನೆಗೂ ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಮುಹೂರ್ತ ಫಿಕ್ಸ್ ಮಾಡಲಿದ್ದಾರೆ. ಜನವರಿ 1 ರಿಂದ 10 ನೇ ತರಗತಿ ಹಾಗೂ 12 ನೇ ತರಗತಿ ಆರಂಭಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿರುವುದಾಗಿ ಘೋಷಿಸಿದ್ದಾರೆ.

ಈ ಹಿನ್ನೆಲೆ ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಏನಿದೆ ಮಾರ್ಗಸೂಚಿಯಲ್ಲಿ..?

1) ಕೊರೊನಾ ಮುಂಜಾಗೃತಾ ಕ್ರಮದೊಂದಿಗೆ ಶಾಲೆ ಆರಂಭ

2) ಶಾಲೆ ಆವರಣದಲ್ಲೇ ಮತ್ತೆ ವಿದ್ಯಾಗಮ ಆರಂಭ

3) ಖಾಸಗಿ ಶಾಲೆಗಳಲ್ಲೂ ವಿದ್ಯಾಗಮ ಆರಂಭ

4) ಶಾಲೆಗೆ ಬರುವ ಮಕ್ಕಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು

5) ಮಕ್ಕಳು ಕೊರೊನಾ ಟೆಸ್ಟ್ ಕಡ್ಡಾಯವಾಗಿ ಮಾಡಿಸಿಕೊಂಡು ಬರಬೇಕು

6) ಹಾಸ್ಟೆಲ್ ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಕಡ್ಡಾಯ

7) ಮಕ್ಕಳು ಪುಸ್ತಕವನ್ನು ಹಂಚಿಕೊಳ್ಳುವ ಹಾಗಿಲ್ಲ

8) ಒಂದು ಕೊಠಡಿಯಲ್ಲಿ 15 ವಿದ್ಯಾರ್ಥಿಗಳಿಗೆ ಕೂರಲು ಮಾತ್ರ ಅವಕಾಶ

ಶಾಲೆಗೆ ಮುಖ್ಯ ಸೂಚನೆಗಳು


1) ಶಾಲೆ ಆರಂಭಕ್ಕೂ ಮುನ್ನ ಕೊಠಡಿಯನ್ನು ಸ್ಯಾನಿಟೈಸರ್ ಮಾಡಬೇಕು.

2) ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು

3) ಎಲ್ಲಾ ಶಾಲೆಗಳು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು

4) ಮಕ್ಕಳು ಬಿಸಿನೀರು. ಸೋಪು, ಸ್ಯಾನಿಟೈಸರ್ ಬಳಸಬೇಕು

5) ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸುವುದು ಕಡ್ಡಾಯ

6) ಮಕ್ಕಳಿಗೆ ಶಾಲಾ ಹಾಜರಾತಿ ಕಡ್ಡಾಯ

7) ಪುಸ್ತಕಗಳನ್ನು ಬೇರೆ ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳುವ ಹಾಗಿಲ್ಲ

8) ಪ್ರತಿ ಕೊಠಡಿಯಲ್ಲಿ ಐಸೋಲೇಷನ್ ಕೊಠಡಿ ಸ್ಥಾಪಿಸಲು ಸೂಚನೆ

9) ಯೋಗ, ಪ್ರಾಣಾಯಾಮ, ವ್ಯಾಯಾಮಕ್ಕೆ ಪ್ರೇರೇಪಣೆ

10) ಪ್ರತಿ ಶಾಲೆಯಲ್ಲಿ ಐಸೋಲೇಷನ್ ಕೊಠಡಿ ಸ್ಥಾಪಿಸಲು ಸೂಚನೆ

ಈ ಕುರಿತಂತೆ ಸಿಎಂ ಯಡಿಯೂರಪ್ಪ ಸಭೆಯ ನಂತ್ರ ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡಲಿದ್ದು, ಜನವರಿ 1ರಿಂದ 10 ಮತ್ತು 12ನೇ ತರಗತಿ ಆರಂಭಿಸಲಾಗುತ್ತಿದೆ. ಜನವರಿ 1ರಿಂದ 6 ರಿಂದ 9ನೇ ತರಗತಿ ವಿದ್ಯಾರ್ಥಿಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಚಟುವಟಿಕೆ ಮುಂದುವರೆಸಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಜನವರಿ 1ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

Leave a Reply

Your email address will not be published.