ಅರಿಶಿಣ ಬೆರೆಸಿದ ಹಾಲನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?

December 16, 2020

 


ನಮ್ಮ ಹಿರಿಯರು ಹಾಲಿನಲ್ಲಿ ಅರಶಿನವನ್ನು ಮಿಕ್ಸ್ ಮಾಡಿ ಕುಡಿಯುತ್ತಿದ್ದರು. ಇದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದೆಂದು ಹೇಳುತ್ತಾರೆ. ಆದರೆ ಈಗಿನವರು ಹಾಲಿಗೆ ಮಾರುಕಟ್ಟೆಯಲ್ಲಿ ಸಿಗುವಂತಹ ರುಚಿಕರವಾದ ಕೆಮಿಕಲ್ ಯುಕ್ತ ಪದಾರ್ಥಗಳನ್ನು ಬಳಸಿ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಹಾಗಾಗಿ ಅಂತವರು ಅರಶಿನ ಮಿಶ್ರಿತ ಹಾಲಿನ ಪ್ರಯೋಜನವೇನೆಂದು ತಿಳಿದು ಬಳಸಿ.

*ಅರಶಿನದಲ್ಲಿ ಉರಿಯೂತ ನಿವಾರಿಸುವ ಗುಣಗಳಿವೆ. ಅರಶಿನ ಮಿಶ್ರಿತ ಹಾಲನ್ನು ಸೇವಿಸಿದರೆ ಮೈ ಕೈ ನೋವಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.

*ಅರಶಿನದಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಇದು ಶೀತ, ಕೆಮ್ಮು, ಕಫದಂತಹ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಹಾಗೇ ಇದು ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

*ಅರಶಿನ ಹಾಲು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಮತ್ತು ಇದು ಕೊಬ್ಬನ್ನು ಕರಗಿಸುವುದರ ಮೂಲಕ ತೂಕವನ್ನು ನಿಯಂತ್ರಿಸುತ್ತದೆ.

*ಅರಶಿನ ಹಾಲು ಸೇವಿಸಿದರೆ ಅರಶಿನ ದಲ್ಲಿರುವ ಅಮೈನೋ ಆಮ್ಲ ನಿದ್ರೆ ಚೆನ್ನಾಗಿ ಬರುವಂತೆ ಮಾಡುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.

*ಅರಶಿನ ಹಾಲು ಮೂಳೆಗಳ ಬೆಳವಣಿಗೆಗೆ ಸಹಕಾರಿ. ಹಾಗಾಗಿ ಮೂಳೆ ಸಮಸ್ಯೆ , ಮೂಳೆ ಮುರಿತ ಉಂಟಾದರೆ ಅರಶಿನ ಮಿಶ್ರಿತ ಹಾಲು ಸೇವಿಸಿ.Related Articles

Advertisement
Previous
Next Post »