ಬಹುದಿನಗಳ ಬಳಿಕ ಮತ್ತೆ ಸೀಲ್ ಡೌನ್ - ಕ್ವಾರಂಟೈನ್ ಶುರು.!

December 29, 2020

 


ಮಾರಣಾಂತಿಕ ಕೊರೊನಾ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದೇಶದಾದ್ಯಂತ ಜಾರಿಗೊಳಿಸಿದ್ದು, ಜೊತೆಗೆ ಕೊರೊನೊ ಸೋಂಕಿತರು ಪತ್ತೆಯಾದ ಸ್ಥಳಗಳನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಜೊತೆಗೆ ಶಂಕಿತ ಸೋಂಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿತ್ತು.

ಆದರೆ ಆ ಬಳಿಕ ಲಾಕ್ ಡೌನ್ ಹಂತಹಂತವಾಗಿ ಸಡಿಲಿಕೆಯಾಗಿದ್ದು, ಇದರ ಜೊತೆಗೆ ಸೀಲ್ ಡೌನ್, ಕ್ವಾರಂಟೈನ್ ನಿಯಮಗಳನ್ನು ಸಹ ಸಡಿಲಿಕೆ ಮಾಡಲಾಗಿತ್ತು. ಹೀಗಾಗಿ ಸಾರ್ವಜನಿಕರು ಈ ಪದಗಳ ಬಳಕೆಯನ್ನೇ ಮರೆತುಬಿಟ್ಟಿದ್ದರು.

ಇದೀಗ ರಾಜ್ಯಕ್ಕೆ ಕೊರೊನಾ ರೂಪಾಂತರ ಬ್ರಿಟನ್ ವೈರಸ್ ಕಾಲಿಟ್ಟಿದ್ದು, ಇದು ಹಿಂದಿನ ವೈರಸ್ ಗಿಂತ ಶೇಕಡ 70ರಷ್ಟು ವೇಗದಲ್ಲಿ ಹರಡುತ್ತದೆ ಎನ್ನಲಾಗಿದೆ. ಹೀಗಾಗಿ ಮತ್ತೆ ಸೀಲ್ ಡೌನ್, ಕ್ವಾರಂಟೈನ್ ಪದಗಳು ಚಾಲ್ತಿಗೆ ಬಂದಿವೆ.

ಬೆಂಗಳೂರಿನ ವಸಂತಪುರ ವಾರ್ಡ್ನ ವಿಠ್ಠಲ ನಗರದಲ್ಲಿನ ಅಪಾರ್ಟ್ಮೆಂಟ್ ನಿವಾಸಿ ಮಹಿಳೆ ಮತ್ತು ಅವರ ಮಗುವಿಗೆ ಬ್ರಿಟನ್ ವೈರಸ್ ತಗುಲಿದೆ ಎನ್ನಲಾಗಿದ್ದು, ಹೀಗಾಗಿ ಅವರಿದ್ದ ಅಪಾರ್ಟ್ಮೆಂಟ್ ಸೀಲ್ ಡೌನ್ ಮಾಡಲಾಗಿದೆ.

ಬ್ರಿಟನ್ ನಿಂದ ತಾಯಿ - ಮಗು ಬೆಂಗಳೂರಿಗೆ ಬಂದಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ.

Related Articles

Advertisement
Previous
Next Post »