ಜನವರಿಯಿಂದ ಶಾಲಾಗಳು ಪುನಾರಂಭ ಹಿನ್ನೆಲೆ :ಸಚಿವ ಸುರೇಶ್ ಕುಮಾರ್ ಹೇಳಿದ್ದೇನು..?

December 30, 2020
Wednesday, December 30, 2020

 


ಬೆಂಗಳೂರು ಜನವರಿಯಿಂದ ಶಾಲಾಗಳು ಪುನಾರಂಭ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ-ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದಾರೆ. ಮೊದಲನೆಯದಾಗಿ ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಚಿವರು, ಶಾಲೆ ಪುನಾರಂಭದ ಕುರಿತಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ವೀಕ್ಷಿಸಿದರು. ಬಳಿಕ ಅಮ್ಮಣಿ ಮಹಿಳಾ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರಿಂದ ಮಾಹಿತಿ ಪಡೆದರು. ಜೊತೆಗೆ ಸ್ಯಾನಿಟೈಸ್​ ವ್ಯವಸ್ಥೆ, ಸಾಮಾಜಿಕ ಅಂತರದ ಬಾಕ್ಸ್‌ಗಳು ಇರುವುದನ್ನ ಖಚಿತ ಪಡಿಸಿಕೊಂಡರು.

ನಂತರ ಮಾತಾನಾಡಿದ ಸಚಿವರು​​, ಪೋಷಕರಿಂದ ಬಂದ ಅಭಿಪ್ರಾಯದ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ‌. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 700 ವಿದ್ಯಾರ್ಥಿಗಳು ಹಾಗೂ ಮಹಾರಾಣಿ ಅಮ್ಮಣಿ ಕಾಲೇಜಿನಲ್ಲಿ 600 ಪಿಯು ವಿದ್ಯಾರ್ಥಿನಿಗಳಿದ್ದಾರೆ.

ಈಗಾಗಲೇ ಸೆಕ್ಷನ್ ಮಾಡಿ ಟೈಂ ಟೇಬಲ್ ರಚನೆ ಮಾಡಿದ್ದಾರೆ. ಜ್ವರ-ನೆಗಡಿ ಇದ್ದರೆ ಐಸೋಲೇಷನ್ ರೂಂ ಮಾಡಿದ್ದು, ನರ್ಸ್ ಸೌಲಭ್ಯ ಕೂಡ ಇದೆ ಎಂದರು. ಮೊದಲ ದಿನ ಶೇ. 50 ರಿಂದ 60 ರಷ್ಟು ಮಕ್ಕಳು ಬರುವ ನಿರೀಕ್ಷೆ ಇದೆ.‌ ಆರ್​ಪಿಸಿಆರ್ ಪರೀಕ್ಷೆ ಸರ್ಟಿಫಿಕೇಟ್ ಪ್ರಾಂಶುಪಾಲರಿಗೆ ಕೊಡಬೇಕು. ಕಾಲೇಜಿಗೆ ಕರೆಸಿ ಕೋವಿಡ್ ಪರೀಕ್ಷೆ ಮಾಡುವ ವ್ಯವಸ್ಥೆ ಇದೆ ಎಂದರು.

Thanks for reading ಜನವರಿಯಿಂದ ಶಾಲಾಗಳು ಪುನಾರಂಭ ಹಿನ್ನೆಲೆ :ಸಚಿವ ಸುರೇಶ್ ಕುಮಾರ್ ಹೇಳಿದ್ದೇನು..? | Tags:

Next Article
« Prev Post
Previous Article
Next Post »

Related Posts

Show comments
Hide comments

1 komentar on ಜನವರಿಯಿಂದ ಶಾಲಾಗಳು ಪುನಾರಂಭ ಹಿನ್ನೆಲೆ :ಸಚಿವ ಸುರೇಶ್ ಕುಮಾರ್ ಹೇಳಿದ್ದೇನು..?

  1. Sir All'the pilmanary precotion mesers taken as for SOS is concern sir and all are eagerly waiting for children back to school it's very pleasant and pleasure full welcome of New year with school opening ceremony sir let's hope for best of our children academic activities...sir

    ReplyDelete