ಆಧಾರ್ ಕಾರ್ಡ್ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

December 13, 2020
Sunday, December 13, 2020

 


ನವದೆಹಲಿ: ಆಧಾರ್‌ ಕಾರ್ಡ್ ಅತ್ಯಂತ ಮಹತ್ವದ ದಾಖಲೆಯಾಗಿದ್ದು, ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ವಿತರಿಸಿದೆ. ಇದರಲ್ಲಿ ಕಾರ್ಡ್ ದಾರರ ಬಗ್ಗೆ ಎಲ್ಲಾ ಮಾಹಿತಿಇರುತ್ತದೆ. ಆಧಾರ್ ಗೆ ಸಂಬಂಧಿಸಿದ ಯಾವುದೇ ದೂರುಗಳು ಅಥವಾ ಮಾರ್ಪಾಡುಗಳುಬೇಕಾದ್ರೆ ನೀವು ಅಧಾರ್‌ ಸೇವಾ ಕೇಂದ್ರಕ್ಕೆ ಹೋಗೋ ಅವಶ್ಯಕತೆ ಇರೋದಿಲ್ಲ.

ಹೌದು, ಯುಐಡಿಎಐ ಆಧಾರ್ ಕಾರ್ಡ್ ಹೊಂದಿರುವವರು ಡಿಜಿಟಲ್ ವಿಧಾನದ ಮೂಲಕ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಆಧಾರ್ ಮೊಬೈಲ್ ಅಪ್ಲಿಕೇಶನ್ (mAadhaar App) ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.

mAadhaar App ಅನ್ನು iOS ನ ಆಪ್ ಸ್ಟೋರ್ ಮೂಲಕ ಆಂಡ್ರಾಯ್ಡ್ ನ ಗೂಗಲ್ ಪ್ಲೇ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆಪ್ ನಲ್ಲಿ ಬಹು ಭಾಷೆಗಳ ಆಯ್ಕೆಇದ್ದು, ಇದರರ್ಥ ನೀವು ಆಪ್ ಅನ್ನು ಬೇರೆ ಬೇರೆ ಭಾಷೆಗಳಲ್ಲಿ ಬಳಕೆ ಮಾಡಬಹುದು.

ಈ ಆಯಪ್ ಅನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ವು ಬಿಡುಗಡೆ ಮಾಡಿದೆ. ನಿಮ್ಮ ಮೊಬೈಲ್ ನಂಬರ್ ಅನ್ನು ಕುಟುಂಬದ ಮತ್ತೊಬ್ಬ ಸದಸ್ಯರ ಆಧಾರ್ ಕಾರ್ಡ್ ಗೆ ಜೋಡಿಸಿದ್ದರೆ, ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ 3 ಆಧಾರ್ ಪ್ರೊಫೈಲ್ ಗಳನ್ನು ಒಟ್ಟಿಗೆ ಇಡಬಹುದು. ಆಯಪ್ ಡೌನ್ ಲೋಡ್ ಮಾಡುವ ಮುನ್ನ, ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ನಂಬರ್ ನಂತೆಯೇ ಫೋನ್ ನಲ್ಲಿ ಸಿಮ್ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.mAdhaar App ವೈಶಿಷ್ಟ್ಯಗಳು

1. MAadhaar ಡೌನ್ ಲೋಡ್ ಮಾಡಿಕೊಳ್ಳಬಹುದು.
2. ಆಧಾರ್ ಸ್ಟೇಟಸ್ ಅನ್ನು ಪರಿಶೀಲಿಸ ಬಹುದಾಗಿದೆ
3. ಆಧಾರ್ ಮರುಮುದ್ರಣಕ್ಕೆ ಆರ್ಡರ್ ಗಳನ್ನು ಮಾಡಬಹುದು
4. ಬೇಸ್ ಸೆಂಟರ್ ಅನ್ನು ಪತ್ತೆ ಹಚ್ಚಬಹುದು.
5. ವಿಳಾಸ ನವೀಕರಣ ಮಾಡಬಹುದು
6. ಆಫ್ ಲೈನ್ ಇ-ಕೆವೈಸಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ
7. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ ಬಹುದಾಗಿದೆ
8. ವೆರಿಫಿ ಬೇಸ್ .
9. ಆಧಾರ್ ಲಾಕಿಂಗ್, ಬಯೋಮೆಟ್ರಿಕ್ ಲಾಕಿಂಗ್/ಅನ್ ಲಾಕಿಂಗ್.
10. OTP ಜನರೇಷನ್.
11. ಪ್ರೊಫೈಲ್ ನವೀಕರಣ ಮಾಡಬಹುದು
12. QR ಕೋಡ್ ಹಂಚಿಕೆ.Thanks for reading ಆಧಾರ್ ಕಾರ್ಡ್ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಆಧಾರ್ ಕಾರ್ಡ್ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

Post a Comment